ಅಮೆರಿಕದಲ್ಲಿ ಭಕ್ತಿಯ ಪರ್ವಕಾಲ! – 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ!

ಅಮೆರಿಕದಲ್ಲಿ ಭಕ್ತಿಯ ಪರ್ವಕಾಲ! – 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ!

ಹಿಂದುಗಳೇ ಬಹುಸಂಖ್ಯಾತರಿರುವ ಭಾರತದಲ್ಲೇ ಹಿಂದು ದೇವಾಲಯ ನಿರ್ಮಿಸುವುದು, ಹಳೆಯ ದೇವಸ್ಥಾನಗಳನ್ನು ಉಳಿಸಿಕೊಳ್ಳುವುದು ಸಾಹಸದ ಕೆಲಸವಾಗಿದೆ. ಆದರೆ, ಹಿಂದೂ ಸಂಪ್ರದಾಯದ ಪರಿಚಯವೇ ಇಲ್ಲದ ಅಮೆರಿಕ ನೆಲದಲ್ಲಿ ಭವ್ಯವಾದ ದೇವಾಲಯ ನಿರ್ಮಿಸಿ ಸಾಧನೆ ಮೆರೆಯಲಾಗಿದೆ. ಕೇವಲ 6 ವರ್ಷಗಳಲ್ಲಿ ಬರೋಬ್ಬರಿ 500 ದೇಗುಲಗಳ ನಿರ್ಮಾಣ ಮಾಡಲಾಗಿದೆ.

ಅಚ್ಚರಿಯಾದ್ರೂ ಸತ್ಯ. ವಿದೇಶಿಗರು ಈಗ ಭಾರತೀಯರ ಆಚರಣೆ ಸಂಪ್ರದಾಯಗಳತ್ತ ಮಾರುಹೋಗುತ್ತಿದ್ದಾರೆ. ವಿದೇಶಗರು ಅನೇಕ ಹಿಂದೂ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೀಗ ಅಮೆರಿಕ ಭಕ್ತಿಯ ತಾಣವಾಗುತ್ತಿದೆ. ಅಮೆರಿಕದಲ್ಲಿ ಹಿಂದೂ ದೇಗುಲಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಹಿಂದೂ ಸನಾತನ ಸಂಸ್ಕೃತಿಯ ಆರಾಧನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: ವಿಶ್ವದ ಅತೀ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ – ಅ. 18 ರಿಂದ ಭಕ್ತರ ದರ್ಶನಕ್ಕೆ ಮುಕ್ತ

2006ರಲ್ಲಿ ಇಡೀ ಅಮೆರಿಕದಲ್ಲಿ 53 ಮಂದಿರಗಳಿದ್ದವು. 2016ರಲ್ಲಿ ಈ ಸಂಖ್ಯೆ 250ಕ್ಕೆ ಏರಿಕೆಯಾಯಿತು ಮತ್ತು ಪ್ರಸ್ತುತ (2023ರಲ್ಲಿ) 750 ಮಂದಿರಗಳಿದ್ದು, ಕಳೆದ ಆರು ವರ್ಷಗಳಲ್ಲೇ ಐನೂರು ದೇವಸ್ಥಾನಗಳು ನಿರ್ಮಾಣಗೊಂಡಿದೆ. ಇನ್ನು ಕ್ಯಾಲಿಫೋರ್ನಿಯಾ ಒಂದರಲ್ಲೇ 120 ಮಂದಿರಗಳಿವೆ. ನ್ಯೂಯಾರ್ಕ್​ನಲ್ಲಿ 100, ಫ್ಲೋರಿಡಾದಲ್ಲಿ 60, ಜಾರ್ಜಿಯಾದಲ್ಲಿ 30 ದೇವಸ್ಥಾನಗಳಿವೆ. ಭಾರತೀಯರು ತಮ್ಮ ಸಂಸ್ಕೃತಿಯೊಂದಿಗೆ ಬೆರೆಯಲು ಮತ್ತು ಈ ಸಂಸ್ಕೃತಿಯ ಶಕ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಅಮೆರಿಕದ ಪ್ರತಿ ರಾಜ್ಯದಲ್ಲೂ ಮಂದಿರಗಳನ್ನು ನಿರ್ವಿುಸಿದ್ದಾರೆ. ಉದಾಹರಣೆಗೆ, ಟೆನೆಸಿ ರಾಜ್ಯದ ಚಟ್ನುಗಾ ನಗರದಲ್ಲಿ ಭಾರತೀಯ ಮೂಲದವರ ಸಂಖ್ಯೆ 1 ಸಾವಿರ. ಇವರು ಇತ್ತೀಚೆಗೆ, 56 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ವಿುಸಿದ್ದಾರೆ.

ಅಧ್ಯಾತ್ಮ, ಭಕ್ತಿ ಆಂದೋಲನದತ್ತ ಸ್ಥಳೀಯ ಅಮೆರಿಕನ್ನರು ಆಕರ್ಷಿತರಾಗಿದ್ದು, ವಾರಾಂತ್ಯದ ರಜೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವುದಲ್ಲದೆ ಭಜನೆ, ಇತರ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೇಗುಲಗಳ ನಿರ್ವಣಕ್ಕಾಗಿ ಅನಿವಾಸಿ ಭಾರತೀಯರು ದೊಡ್ಡ ಪ್ರಮಾಣದಲ್ಲಿ ದಾನ ನೀಡುತ್ತಿದ್ದಾರೆ. ಫ್ಲೋರಿಡಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ರಕ್ಷಿತ್ ಶಾ, ಮಂದಿರಗಳ ಜೀಣೋದ್ಧಾರಕ್ಕೆ 8 ಕೋಟಿ ರೂ.ಗಳ ನೆರವು ನೀಡಿದ್ದಾರೆ. ಇದಲ್ಲದೆ, ಓಹಿಯೋ ನಗರದಲ್ಲಿ ಮಂದಿರ ನಿರ್ವಣಕ್ಕೆ 15 ಕೋಟಿ ರೂ. ನೀಡಿದ್ದಾರೆ.

Shwetha M