ಬಿಸಿಲಿನ ಝಳಕ್ಕೆ ಬೆಂಡಾದ ಬೆಂಗಳೂರಿಗರು – ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಸಿಲಿಕಾನ್ ಸಿಟಿ ಬೆಂಗಳೂರು ಈಗ ಬೆಂದಕಾಳೂರು ಆಗಿದೆ. ಬಿಸಿಲಿನ ಝಳಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಉತ್ತರ ಭಾರತ ಮಾತ್ರವಲ್ಲ ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ಬಿಸಿಲು ಹೆಚ್ಚಾಗಿದ್ದು ತಾಪಮಾನ 38 -40ಕ್ಕೆ ಬಂದು ನಿಂತಿದೆ. ಇದೀಗ ಬಿಸಿಲಿನ ತಾಪಕ್ಕೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಬಿಸಿಲಿನ ಝಳಕ್ಕೆ ರಾಜ್ಯದ ಜನ ತತ್ತರ! – ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು!
ಏರುತ್ತಿರುವ ತಾಪಮಾನದಿಂದಾಗಿ ಶಾಖ ಸಂಬಂಧಿ ಕಾಯಿಲೆ ಹೆಚ್ಚಾಗ್ತಿದೆ. ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜನರಲ್ಲಿ ಜ್ವರ, ವಾಂತಿ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಇದೀಗ ರ್ಕಾರ ಕೂಡ ಬಿರು ಬೇಸಿಗೆಯಲ್ಲಿ ನಿಮ್ಮ ರಕ್ಷಣೆ ಹೇಗಿರಬೇಕೆಂದು ಸಲಹೆ ನೀಡಿದೆ.
ಬೇಸಿಗೆಯಲ್ಲಿ ಸುರಕ್ಷಿತವಾಗಿರಲು ಸರ್ಕಾರ ಸೂಚಿಸಿದ ಸಲಹೆ ಹೀಗಿದೆ..
- ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಾತಾವರಣ ಅತಿ ಬಿಸಿ ಇರುತ್ತದೆ. ಈ ಸಮಯದಲ್ಲಿ ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹಾಗೆ ಈ ಟೈಂನಲ್ಲಿ ಅಡುಗೆ ಮಾಡಬೇಡಿ.
- ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ನೀವು ತಿನ್ನಬೇಕು. ಹಾಗೆಯೇ ಹಳಸಿದ ಆಹಾರವನ್ನು ಈ ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಸೇವಿಸಲು ಹೋಗ್ಬೇಡಿ.
- ಅಡುಗೆ ಮಾಡುವ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಕಾಳಜಿ ವಹಿಸಬೇಕು. ಕಿಟಕಿ, ಬಾಗಿಲುಗಳನ್ನು ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಬೇಕು.
- ಈ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀವು ಸೇವನೆ ಮಾಡಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಆಲ್ಕೋಹಾಲ್, ಕಾಫಿ, ಟೀ, ಬಿಸಿ ಆಹಾರ ಸೇವನೆಯಿಂದ ದೂರ ಇರಿ.
- ಬೇಸಿಗೆಯಲ್ಲಿ ತಂಪು ಪಾನೀಯ ಕುಡಿಯುವ ಆಸೆ ಆಗೋದು ಸಹಜ. ಆದ್ರೆ ಫ್ರಿಜ್ ನೀರು, ತಂಪು ಪಾನೀಯ ಆರೋಗ್ಯ ಹಾಳು ಮಾಡುತ್ತದೆ ಎಂಬುದು ನೆನಪಿರಲಿ.
- ನೀರು ಸೇವನೆ ಮಾತ್ರವಲ್ಲ ನೀರು ಸಮೃದ್ಧವಾಗಿರುವ ಆಹಾರ, ಹಣ್ಣನ್ನು ನೀವು ಡಯಟ್ ನಲ್ಲಿ ಸೇರಿಸಿಕೊಳ್ಳಿ. ಆಹಾರದಲ್ಲಿ ಸಲಾಡ್, ಸ್ಮೂಥಿಯಂತಹ ತಾಜಾ ಆಹಾರವನ್ನು ಸೇರಿಸಿ.
- ಬೇಸಿಗೆಯಲ್ಲಿ ಜನರು ಕರಿದ ಆಹಾರ ಸೇವನೆ ಮಾಡದಿರುವುದು ಒಳ್ಳೆಯದು. ಸೋಡಿಯಂ ಹೊಂದಿರುವ ಸಂಸ್ಕರಿಸಿದ ಆಹಾರದ ಜೊತೆ ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಬೇಡ.