ಆನೆ ಹಿಂದಿಕ್ಕಿ ಸಂಗೀತಾಗೆ ಸೈಡ್ ಹೊಡೆದ ಕಾರ್ತಿಕ್! – ಹಾರದ ಡ್ರೋನ್!
ಬಿಗ್‌ಬಾಸ್ ಸೀಸನ್ 10 ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಕಿಚ್ಚನ ಕೈಯಿಂದ ಟ್ರೋಫಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡ್ರೋನ್ ಪ್ರತಾಪ್ ಸವಾಲಿನ ಎದುರು ಕಾರ್ತಿಕ್ ತನ್ನ ಪ್ರತಾಪ ತೋರಿದ್ದಾರೆ.
ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಾರ್ತಿಕ್ ಮಹೇಶ್ ಅವರು ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ ಮತ್ತು ನಮ್ರತಾ ಗೌಡ ಜೊತೆಗಿನ ಸ್ನೇಹ ವಿಚಾರವಾಗಿ ಕಾರ್ತಿಕ್ ಸಖತ್ ಹೈಲೆಟ್ ಆಗಿದ್ದರು. ಆದ್ರೆ ಫಿನಾಲೆಗಿಂತಲೂ ಮುಂಚಿತವಾಗಿ, ಮೂರು, ನಾಲ್ಕು ವಾರಗಳಿಂದ ಸ್ವಲ್ಪ ಡಲ್ ಆಗಿಯೇ ಇದ್ದ ಕಾರ್ತಿಕ್, ಚಾಂಪಿಯನ್ ಆಗೋದ್ರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. ಸೀಸನ್ ಆರಂಭದಲ್ಲಿ ಕಾರ್ತಿಕ್‌ಗೆ ತುಂಬಾನೆ ಆಪ್ತ ಗೆಳತಿಯಾಗಿದ್ದ ಸಂಗೀತಾ ಸೆಕೆಂಡ್ ರನ್ನರ್ ಅಪ್‌ಗೆ ತೃಪ್ತಿ ಪಡೆದುಕೊಳ್ಳಬೇಕಾಯಿತು. ಆನೆ ವಿನಯ್ ನಾಲ್ಕನೇ ಸ್ಥಾನಕ್ಕೆ ನಿಲ್ಲುವಂತಾದ್ರೆ, ಸಂತು ಪಂತು ಜೋಡಿ ಐದು ಹಾಗೂ ಆರನೇ ಸ್ಥಾನದಲ್ಲಿ ಜೊತೆಯಾದ್ರು.
ಇದನ್ನೂ ಓದಿ: ಸಂಚಾರ ದಟ್ಟಣೆ ಕಂಟ್ರೋಲ್ಗೆ ಟ್ರಾಫಿಕ್ ಪೊಲೀಸರಿಂದ ಹೊಸ ಪ್ಲಾನ್! – ರೋಡ್‌ನಲ್ಲಿ ಹಾರಾಡಲಿವೆ ಡ್ರೋನ್ಗಳು!
ಇನ್ನು ಟ್ರೋಫಿ ಪಡೆದ ಬಳಿಕ ಕಾರ್ತಿಕ್ ಸಂತಸದಿಂದ ಮಾತನಾಡಿದ್ದಾರೆ. ತಾನು ಪಟ್ಟ ಕಷ್ಟ, ತಾಳ್ಮೆ ಇವೆಲ್ಲದರ ಬಗ್ಗೆ ಮಾತನಾಡಿದ್ದಾರೆ. 9 ವರ್ಷದಿಂದ ಕಷ್ಟ ಪಟ್ಟ ನಾನು 10ನೇ ವರ್ಷಕ್ಕೆ 10ನೇ ಸೀಸನ್ನಲ್ಲಿ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಒಂದು ಟ್ರೋಫಿಗೋಸ್ಕರ ಕಷ್ಟಪಟ್ಟಿದ್ದೀನಿ. ಒಂದೇ ಒಂದು ಡಿಸೈಡ್ ಮಾಡಿ ಪ್ರತಿ ವಾರನು ಒಂದೊಂದು ಟಾಸ್ಕ್ ಆಡಬೇಕಾದ್ರೂನು ನಾನು ನನ್ನ ಪರ್ಸನಾಲಿಟಿ ತೋರಿಸಬೇಕು, ನಾನು ಪ್ರತಿ ಟಾಸ್ಕ್ ಗೆಲ್ಲಬೇಕು ಅಂತ ಆಡಿದಿನಿ ಸರ್. ಇದಕ್ಕೊಂದಕೋಸ್ಕರ, ಜನರ ಪ್ರೀತಿಗೋಸ್ಕರ. ದೇವರ ಆಶೀರ್ವಾದ. ಜನರ ಪ್ರೀತಿ ನನ್ನ ಇಲ್ಲಿ ತನಕ ಕರ್ಕೊಂಡು ಬಂದಿದೆ. ಈ ಒಂದು ಟ್ರೋಫಿಗೆ ನಾನೊಬ್ಬನೇ ಕಾರಣ ಅಲ್ಲ. ಅಲ್ಲಿ ಕೂತಿರುವ 17 ಜನರ ಕೂಡ ಕಾರಣ. ಪ್ರತಿಯೊಬ್ಬರ ಕಾನ್ಟ್ರಿಬ್ಯೂಷನ್ ತುಂಬಾ ಇದೆ. ನಾನು ನನ್ನ ಗೆಳೆಯ ವಿನಯ್ ಹೆಸರು ಹೇಳಲೇಬೇಕು. ಥ್ಯಾಂಕ್ಯೂ ಸೋ ಮಚ್ ಮಚ್ಚಾ. ಪಕ್ಕದಲ್ಲಿ ಅಲ್ಲ, ಎದುರು ನಿಂತುಕೊಂಡು ಟಕ್ಕರ್ ಕೊಟ್ಟಿದ್ದಕ್ಕೆ. ನನ್ನ ಸಾಮರ್ಥ್ಯ ಏನಿತ್ತು ಒಬ್ಬ ಕಾರ್ತಿಕ್ ಆಗಿ ಕೋಪ, ತಾಳ್ಮೆ , ನಗು ಎಲ್ಲವನ್ನು ತೋರಿಸೋಕೆ ಸಾಧ್ಯವಾಗಿದ್ದು ನನ್ನ ಫ್ರೆಂಡ್ಸ್. ಸಾಕಷ್ಟು ಕ್ರಿಟಿಸಿಸಂ ಬಂದಿತ್ತು. ನನ್ನ ಎಷ್ಟೇ ತುಳಿಯುವ ಪ್ರಯತ್ನ ಆದ್ರೂ ಐ ವಿಲ್ ರೈಸ್ ಸರ್. ಜನತೆಗೆ ಈ ಒಂದು ಪ್ರೀತಿ ಯಾವತ್ತು ಚಿರರುಣೆಯಾಗಿತ್ತೇನೆ. ಇನ್ಮುಂದೆ ನೀವು ಕೊಟ್ಟಿರುವ ಈ ಭಿಕ್ಷೆನಾ ತಲೆಮೇಲೆ ಇಟ್ಟುಕೊಂಡು, ತಲೆ ಬಗ್ಗಿಸಿಕೊಂಡು ಬಹಳ ಪ್ರೀತಿಯಿಂದ ನಡೆದುಕೊಂಡು ಹೋಗ್ತೀನಿ. ನಾನು ಒಳಗಡೆ ಬಂದಾಗ ನಾನು ನನ್ನ ಅಮ್ಮನಿಗೋಸ್ಕರ, ಅಪ್ಪನಿಗೋಸ್ಕರ ಇದನ್ನು ತೆಗೆದುಕೊಂಡು ಹೋಗಬೇಕು ಅಂತ. ಅಪ್ಪ ಯಾವತ್ತು ಹೇಳ್ತಾ ಇದ್ರು, ಬಿಗ್ ಬಾಸ್ ನೋಡುವಾಗ ಹೇಳ್ತಾ ಇದ್ರು. ನಿನ್ನ ಜೊತೆನೆ ಆ್ಯಕ್ಟ್ ಮಾಡಿದ್ದಾರೆ ಅಲ್ವ ನಿನ್ಯಾಕೆ ಹೋಗಲ್ಲ. 9 ವರ್ಷದಿಂದ ಪರದಾಡಿದ್ದೀನಿ ಈ ಸ್ಥಾನಕೋಸ್ಕರ, ಆ 9 ವರ್ಷದ ಪ್ರತಿಫಲ 10ನೇ ವರ್ಷ 10ನೇ ಸೀಸನ್ನಲ್ಲಿ ಸಿಕ್ಕಿದೆ. ನನ್ನ ಫ್ಯಾಮಿಲಿ ಮತ್ತು ಫ್ರೆಂಡ್ಸ್. ಅವ್ರು ನನ್ ಜೊತೆ ಯಾವಾಗಲು ನಿಂತಿದ್ದಾರೆ. ಥ್ಯಾಂಕ್ಯೂ ಸೋ ಮಚ್ ಎಂದು ಹೇಳಿದ್ದಾರೆ.