ಟೆಲಿಗ್ರಾಮ್‌ ನಲ್ಲಿ ಹೊಸ ಫೀಚರ್‌! – ಜುಲೈನಿಂದ ʼಸ್ಟೋರಿಸ್‌ʼ ವೈಶಿಷ್ಟ್ಯ ಆರಂಭ

ಟೆಲಿಗ್ರಾಮ್‌ ನಲ್ಲಿ ಹೊಸ ಫೀಚರ್‌! – ಜುಲೈನಿಂದ ʼಸ್ಟೋರಿಸ್‌ʼ ವೈಶಿಷ್ಟ್ಯ ಆರಂಭ

ನವದೆಹಲಿ: ಟೆಲಿಗ್ರಾಮ್‌ ವಿಶ್ವದಾದ್ಯಂತ ಮಿಲಿಯನ್‌ಗಟ್ಟಲೇ ಬಳಕೆದಾರರನ್ನು ಹೊಂದಿದೆ. ಈ ಅಪ್ಲಿಕೇಷನ್‌ನಲ್ಲಿ ಇಲ್ಲಿವರೆಗೆ ಕೇವಲ ವಾಯ್ಸ್‌ ಕಾಲ್‌ ಹಾಗೂ ಮೆಸೇಜ್ ಮಾಡಲು ಮಾತ್ರ ಅವಕಾಶವಿತ್ತು. ಆದರೆ ಇನ್ನು ಮುಂದೆ ಟೆಲಿಗ್ರಾಮ್‌ ವಾಟ್ಸಾಪ್‌ನಂತೆ ಕಾರ್ಯನಿರ್ವಹಿಸಲಿದೆ. ಈ ಅಪ್ಲಿಕೇಷನ್‌ ನಲ್ಲಿ ಹೊಸ ಫೀಚರ್‌ ವೊಂದನ್ನ ಬಳಕೆದಾರಿಗೆ ಪರಿಚಯಿಸಲಾಗುತ್ತಿದೆ.

ಇದನ್ನೂ ಓದಿ: ಹಸು ಸಾಕಾಣಿಕೆಯಿಂದಲೇ ಅದೆಷ್ಟೋ ಯುವಕರಿಗೆ ಸ್ಪೂರ್ತಿ – ಕೋಟಿ ಬೆಲೆಯ ಬಂಗಲೆ ಕಟ್ಟಿದ ರೈತನಿಗೆ ಶಹಬ್ಬಾಸ್ ಗಿರಿ..!

ಟೆಲಿಗ್ರಾಮ್‌ ಸಂಸ್ಥಾಪಕ ಮತ್ತು ಸಿಇಒ ಪಾವೆಲ್‌ ಡುರೊವ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತ್ವರಿತ ಸಂದೇಶ ಕಳುಹಿಸುವ ಟೆಲಿಗ್ರಾಮ್‌ ಆ್ಯಪ್ ʼಸ್ಟೋರಿಸ್‌ʼ ಎಂಬ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ಟೆಲಿಗ್ರಾಮ್‌ ʼಸ್ಟೋರಿಸ್‌ʼ ಜುಲೈ ಆರಂಭದಿಂದಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಸ್ಟೋರಿಸ್​ಗಳು ನಮ್ಮ ಜೀವನಕ್ಕೆ ಹತ್ತಿರವಾಗಿದ್ದು, ನಮ್ಮ ಜೀವನದ ಸಂಗತಿಗಳ ಬಗ್ಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವುಗಳ ಮೂಲಕ ಸ್ನೇಹಿತರು ಸೇರಿದಂತೆ ಸಂಬಂಧಿಕರು ಕೂಡ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಇನ್​ಸ್ಟಾಗ್ರಾಮ್​​ನಲ್ಲಿ ಸ್ಟೋರಿಸ್​​ಗಳು 24 ಗಂಟೆಗಳ ನಂತರ ಸ್ವಯಂಚಾಲಿತವಾಗಿ ಮುಕ್ತಾಯಗೊಳ್ಳುತ್ತವೆ, ಆದರೆ ಟೆಲಿಗ್ರಾಮ್​ನಲ್ಲಿ ಬಳಕೆದಾರರು ತಮ್ಮ ಸ್ಟೋರಿಸ್​​ ಅಪ್​ಲೋಡ್​ ಮಾಡಿದ ನಂತರ ಯಾವಾಗ ಮುಕ್ತಾಯವಾಗಬೇಕು ನಿರ್ಧರಿಸಲು ನಾಲ್ಕು ಆಯ್ಕೆಗಳನ್ನು ಹೊಂದಿರುತ್ತಾರೆ. ಈ ಸ್ಟೋರಿಸ್​ಗಳು 6, 12, 24, ಹಾಗೂ 48 ಗಂಟೆಗಳ ಮುಕ್ತಾಯ ಅವಧಿಯನ್ನು ಒಳಗೊಂಡಿರುತ್ತದೆ. ಜತೆಗೆ ಬಳಕೆದಾರರು ಟೆಲಿಗ್ರಾಮ್‌ನಲ್ಲಿ ತಮ್ಮ ಪ್ರೊಫೈಲ್ ಪುಟದಲ್ಲಿ ಸ್ಟೋರಿಸ್​​​ಗಳನ್ನು ಶಾಶ್ವತವಾಗಿ ಪ್ರದರ್ಶಿಸಬಹುದಾಗಿದೆ ಎಂದು ಹೇಳಿದ್ದಾರೆ.

suddiyaana