ಸರ್ಕಾರದ ಮೊರೆ ಹೋದ ಬೋಳು ತಲೆ ಪುರುಷರ ಸಂಘ – ಡಿಮ್ಯಾಂಡ್ ನಲ್ಲಿ ಏನೇನಿದೆ?

ಸರ್ಕಾರದ ಮೊರೆ ಹೋದ ಬೋಳು ತಲೆ ಪುರುಷರ ಸಂಘ – ಡಿಮ್ಯಾಂಡ್ ನಲ್ಲಿ ಏನೇನಿದೆ?

ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ಎಲ್ಲಾ ವಯಸ್ಸಿನವರಿಗೆ ಕೂದಲು ಉದುರುವುದು ಸಾಮಾನ್ಯವಾಗಿದೆ. ಇದ್ದ ಚೂರು-ಪಾರು ಕೂದಲನ್ನು ಉಳಿಸಿಕೊಳ್ಳಲು ಯುವಕರು ಪಡುವ ಪಾಡು ಅಷ್ಟಿಷ್ಟಲ್ಲ. ಕೆಲವರು ಕೂದಲು ಉದುರಿದ್ದು ಉದುರಲಿ, ಇರೋದನ್ನು ಉಳಿಸಿಕೊಳ್ಳೋಣ ಅನ್ನುತ್ತಾರೆ. ಇನ್ನೂ ಕೆಲವರು ಕೂದಲು ಬೆಳೆಸಲು ಏನೇನೋ ಚಿಕಿತ್ಸೆಗಳ ಮೊರೆಹೋಗುತ್ತಾರೆ. ಆದರೆ ಇಲ್ಲೊಂದು ಬೋಳು ತಲೆ ಪುರುಷರ ಸಂಘ ಹೊಸ ಡಿಮ್ಯಾಂಡ್ ನೊಂದಿಗೆ ಸರ್ಕಾರದ ಮೊರೆಹೋಗಿದೆ.

ಹೌದು, ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳು ತಲೆಯ ಪುರುಷರ ಸಂಘ ಸರ್ಕಾರಕ್ಕೆ ಹೊಸ ಡಿಮ್ಯಾಂಡ್ ಮಾಡಿದೆ. ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಸರ್ಕಾರ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮನ್ನೂ ಪರಿಗಣಿಸಿ ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ತಿಂಗಳಿಗೆ 6000 ರೂ. ಪಿಂಚಣಿಯನ್ನು ಘೋಷಿಸಬೇಕು ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಮದುವೆ ಆಗಿ, ಇಲ್ಲಾ ಅಂದ್ರೆ ಮನೆ ಖಾಲಿ ಮಾಡಿ – ಮನೆ ಮಾಲಕರದ್ದು ಇದೆಂತ ಕಂಡೀಷನ್?  

ತಲೆಯಲ್ಲಿ ಕೂದಲು ಇಲ್ಲದೆ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದೇವೆ. ಕೆಲವರು ನಮ್ಮನ್ನು ನೋಡಿ ಅಪಹಾಸ್ಯ ಮಾಡುತ್ತಿರುವುದರಿಂದ ಸಾಕಷ್ಟು ಕುಗ್ಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಹೀಗಾಗಿ ಸರ್ಕಾರ ನಮ್ಮ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಜನವರಿ 5 ರಂದು ಗ್ರಾಮದಲ್ಲಿ ಬೋಳು ತಲೆ ಪುರುಷರ ಸಂಘ ಅನೌಪಚಾರಿಕ ಸಭೆಯನ್ನು ಕರೆದು ಚರ್ಚಿಸಿದೆ. ಅಲ್ಲದೆ, ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಸಂಘದ ಸದಸ್ಯ 41 ವರ್ಷದ ಪಿ ಅಂಜಿ ಮಾತನಾಡಿ, ಜನರು ನಮ್ಮ ಬೋಳು ತಲೆನೋಡಿ ತಮಾಷೆ ಮಾಡುತ್ತಿದ್ದಾರೆ. ಇದು ನಮಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದೆ. ನಮ್ಮ ಬೋಳುತನದ ಬಗ್ಗೆ ಚಿಂತಿತರಾಗಿರುವಾಗ ನಮ್ಮನ್ನು ಆಗಾಗ ಅಪಹಾಸ್ಯ ಮಾಡಲಾಗುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ಬೋಳು ತಲೆ ಇರುವ ಪುರುಷರಿಗೆ ಪಿಂಚಣಿ ನೀಡಿದರೆ, ಆ ಮೊತ್ತವನ್ನು ಕೂದಲಿನ ಚಿಕಿತ್ಸೆ ಬಳಸುತ್ತೇವೆ.  ಈ ಹಿನ್ನೆಲೆಯಲ್ಲಿ ಪಿಂಚಣಿಯನ್ನು ನಮಗೆ ಚಿಕಿತ್ಸಾ ವೆಚ್ಚವೆಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.

 

suddiyaana