ಮೊಸಳೆ ನೀರಿನಿಂದ ದಡಕ್ಕೆ ಬಂದಿದ್ದೇ ತಪ್ಪಾಯ್ತು.. – ಬಡಪಾಯಿ ಜೀವಕ್ಕೆ ಗತಿ ಕಾಣಿಸಿದ ಬೇಟೆಗಾರರು!

ಮೊಸಳೆ ನೀರಿನಿಂದ ದಡಕ್ಕೆ ಬಂದಿದ್ದೇ ತಪ್ಪಾಯ್ತು.. – ಬಡಪಾಯಿ ಜೀವಕ್ಕೆ ಗತಿ ಕಾಣಿಸಿದ ಬೇಟೆಗಾರರು!

ಹೈದರಾಬಾದ್: ನಾವಿರುವ ಪ್ರದೇಶಕ್ಕೆ ಮೊಸಳೆ ಬಂದಿದೆ ಎಂದು ಗೊತ್ತಾದರೆ, ಮೊಸಳೆ ಇದೆ ಎಂದ ಪ್ರದೇಶಕ್ಕೆ ಯಾರೂ ಹೋಗುವುದಿಲ್ಲ. ನದಿ ಬಳಿ ಮೊಸಳೆ ಇದೆ ಯಾರು ಹೋಗಬೇಡಿ.. ನಮ್ಮ ಮೇಲೆ ದಾಳಿ ಮಾಡುತ್ತವೆ.. ನಮ್ಮನ್ನು ತಿಂದು ಬಿಡುತ್ತೆ ಅಂತಾ ಏನೇನೋ ಹೇಳಿ ಭಯಪಡಿಸುತ್ತಾರೆ. ಆದರೆ ಇಲ್ಲೊಂದು ಕಡೆ ದಡಕ್ಕೆ ಬಂದ ಮೊಸಳೆಯನ್ನು ಹಿಡಿದು ಅದರ ಮಾಂಸ ಮಾರಾಟ ಮಾಡಿದ್ದಾರೆ!

ಮೊಸಳೆ ಇದೆ ಎಂದು ಗೊತ್ತಾದಾಗ ಎಲ್ಲರೂ ಭಯಪಡುತ್ತಾರೆ. ಆದರೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಮೊಸಳೆಯನ್ನೇ ಬೇಟೆಯಾಡಿ, ಅದರ ಮಾಂಸ ಮಾರಾಟ ಮಾಡಿದ್ದಾರೆ. ಇದೀಗ ಮೊಸಳೆಯನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಪ್ಪ, ಅಪ್ಪ ಒಪ್ಪಿದರೆ ಮಾತ್ರವೇ ಪ್ರೇಮ ವಿವಾಹಕ್ಕೆ ಅವಕಾಶ – ಸರ್ಕಾರದಿಂದ ಶೀಘ್ರದಲ್ಲೇ ಹೊಸ ಆದೇಶ?

ಇತ್ತೀಚಿನ ಪ್ರವಾಹದಿಂದ ಮುಲುಗು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಗೋದಾವರಿ ನದಿಯ ದಡಕ್ಕೆ ನುಗ್ಗಿದ್ದ ಮೊಸಳೆಯನ್ನು ಕಳ್ಳ ಬೇಟೆಗಾರರು ಹಿಡಿದಿದ್ದಾರೆ. ನಂತರ ಯಾರಿಗೂ ತಿಳಿಯದಂತೆ ಅದನ್ನು ಕೊಂದು ಮಾಂಸವನ್ನು ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಜೇಡು ಮಂಡಲದ ಚಂದ್ರುಪಟ್ಲ ಗ್ರಾಮದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಒಬ್ಬ ಆರೋಪಿ ಸಿಕ್ಕಿಬಿದ್ದಿದ್ದು, ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಯ ವೇಳೆ ಅಧಿಕಾರಿಗಳು ಮೊಸಳೆಯ ಮಾಂಸ ಮತ್ತು ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅರಣ್ಯಾಧಿಕಾರಿ, ಸೆರೆ ಸಿಕ್ಕ ವ್ಯಕ್ತಿ ಬೇಟೆಗಾರರ ಗುಂಪಿನ ಸದಸ್ಯನಾಗಿದ್ದು ಆತನ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇತರ ಕಳ್ಳಬೇಟೆಗಾರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ಮೊಸಳೆಗಳು ಗೋದಾವರಿ ಮತ್ತು ಕೃಷ್ಣಾ ನದಿಗಳ ದಡಗಳ ಕೃಷಿ ಗದ್ದೆಗಳು, ಕೊಳಗಳು ಮತ್ತು ಇತರ ಜಲಮೂಲಗಳಿಗೆ ನುಗ್ಗುತ್ತಿದ್ದು, ಇದು ಸ್ಥಳೀಯ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ. ವನಪರ್ತಿ, ಗದ್ವಾಲ್, ನಾರಾಯಣಪೇಟೆ ಮತ್ತು ಮುಲುಗು ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ನದಿಗೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ.

suddiyaana