ಹಾಸ್ಟೆಲ್ಗಳಲ್ಲಿ ಚಿಕನ್ ಲಿವರ್ ಪೀಸ್ ಕೊಟ್ಟಿಲ್ಲ ಎಂದು ವಾರ್ಡನ್ ವಿರುದ್ಧ ಕೇಸ್ ಕೊಟ್ಟ ವಿದ್ಯಾರ್ಥಿಗಳು!

ಪಿಜಿ, ಹಾಸ್ಟೆಲ್ಗಳಲ್ಲಿ ವಾರದಲ್ಲಿ ಒಂದು ದಿನ ದಿನ ಅಥವಾ ಎರಡು ದಿನ ನಾನ್ವೆಜ್ ನೀಡಲಾಗುತ್ತೆ. ನಾನ್ ವೆಜ್ ಇಷ್ಟಪಡುವ ಮಕ್ಕಳು ಯಾವಾಗ ಕೊಡ್ತಾರೆ ಅಂತ ಕಾಯುತ್ತಿರುತ್ತಾರೆ. ನಾನ್ವೆಜ್ ಕೊಟ್ಟಿಲ್ಲ ಅಂದ್ರೆ ಬೇಜಾರು ಮಾಡಿಕೊಳ್ಳುತ್ತಾರೆ. ಆದ್ರೀಗ ಇಲ್ಲೊಂದು ಹಾಸ್ಟೆಲ್ನ ವಿದ್ಯಾರ್ಥಿಗಳು ಚಿಕನ್ ಲಿವರ್ ಪೀಸ್ ಹಾಕಲಿಲ್ಲ ಎಂದು ವಾರ್ಡನ್ ಹಾಗೂ ಅಡುಗೆಯವರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಟಿಪ್ಸ್ ಕೊಟ್ರೆ ಡ್ಯಾನ್ಸ್ ಮಾಡ್ತೀವಿ! – ಬೆಂಗಳೂರಿನ ಈ ಕೆಫೆ ಸಿಬ್ಬಂದಿ ಮಸ್ತ್ ಡ್ಯಾನ್ಸ್!
ಹೌದು , ಹಾಸ್ಟೆಲ್ ನ ವಿದ್ಯಾರ್ಥಿಗಳು ಚಿಕನ್ ಲಿವರ್ ಪೀಸ್ ಹಾಕಲಿಲ್ಲ ಎಂದು ವಾರ್ಡನ್ ಹಾಗೂ ಅಡುಗೆಯವರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಿತ್ರ ಘಟನೆಯೂ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ವಾರಂಗಲ್ ಇನುಗುರ್ಥಿಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?
ಇನುಗುರ್ತಿ ಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ದೈನಂದಿನ ಮೆನು ಪ್ರಕಾರ, ವಿದ್ಯಾರ್ಥಿಗಳಿಗೆ ಭಾನುವಾರ ನಾನ್ ವೆಜ್ ಊಟ ನೀಡಬೇಕು. ಹೀಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ವಾರ್ಡನ್ ಅವರನ್ನು ಕೇಳಿದಾಗ ಎರಡು ಕಿಲೋ ಚಿಕನ್ ಲಿವರ್ ಖರೀದಿಸಿಕೊಂಡು ಬರಲು ಹೇಳಿದ್ದಾರೆ.
ಚಿಕನ್ ಲಿವರ್ ಖರೀದಿಸಿ ತಂದು ಅಡುಗೆಯವರಿಗೆ ನೀಡಿದ್ದು, ಆದರೆ ಊಟಕ್ಕೆ ಒಂದೇ ಒಂದು ಚಿಕನ್ ಲಿವರ್ ಪೀಸ್ ವಿದ್ಯಾರ್ಥಿಗಳಿಗೆ ಹಾಕಿಲ್ಲ. ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಎಂಪಿಡಿಒ ಬಂಡಾರು ಪಾರ್ಥಸಾರಥಿ ಅವರಿಗೆ ದೂರು ನೀಡಿದ್ದು, ಹಾಸ್ಟೆಲ್ ವಾರ್ಡನ್ ಹಾಗೂ ಅಡುಗೆಯವರು ನಮಗೆ ತಂದ ಚಿಕನ್ ಲಿವರ್ ತಿಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಊಟದ ಮೆನು ಜಾರಿಗೆ ಬರುವಂತೆ ಮನವಿ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ.

ನೋಡಿರಿ

