ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಹೊಣೆ..! ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? – ರೇವಂತ್‌ ರೆಡ್ಡಿ

ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಹೊಣೆ..! ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ? – ರೇವಂತ್‌ ರೆಡ್ಡಿ

ಚುನಾವಣೆಯ ಹೊತ್ತಲ್ಲೇ ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, 2019ರಲ್ಲಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿ ನಡೆಸಿದ್ದ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ದೇಶದ ಆಂತರಿಕ ಸುರಕ್ಷತೆಯ ವಿಚಾರದಲ್ಲಿ ಯಾವುದೇ ಪ್ರಶ್ನೆ ಎತ್ತಿದರೂ ಬಿಜೆಪಿಯವರು ಜೈ ಶ್ರೀರಾಮ್‌ ಅಂತ ಹೇಳಿ ಸುಮ್ಮನಾಗಿಸುತ್ತಾರೆ ಎಂದು  ರೇವಂತ್‌ ರೆಡ್ಡಿ ಟೀಕಿಸಿದ್ದಾರೆ.

ಇದನ್ನೂ ಓದಿ: ಸೂರ್ಯ-ಚಂದ್ರ ಇರೋದು ಎಷ್ಟು ಸತ್ಯವೋ, ಇದು ಅಷ್ಟೇ ಸತ್ಯ – ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಬಿಎಸ್‌ವೈ ಏನಂದ್ರು?  

ರಾಮರಾಜ್ಯ ಹೇಗಿತ್ತು ಎನ್ನುವುದನ್ನು ನಮ್ಮ ತಾತ ಮುತ್ತಾತನ ಕಾಲದಿಂದಲೂ ಹೇಳಿಕೊಡಲಾಗಿದೆ. ಆದರೆ ಬಿಜೆಪಿಯವು ರಾಜಕೀಯಕ್ಕಾಗಿ ಜೈಶ್ರೀರಾಮ್‌ ಅಂತ ಹೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪುಲ್ವಾಮಾ ದಾಳಿಗೆ ಬಿಜೆಪಿಯೇ ನೇರ ಜವಾಬ್ದಾರಿ ಎಂದ ರೇವಂತ ರೆಡ್ಡಿ, ಅದಾದ ನಂತರ ನಿಜಕ್ಕೂ ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆಯೋ ಇಲ್ಲವೋ ಎನ್ನುವುದು ದೇವರಿಗೇ ಗೊತ್ತು ಎಂದು ಹೇಳುವ ಮೂಲಕ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಅನುಮಾನ ವ್ಯಕ್ತಪಡಿಸಿದ್ದಾರೆ.

ನಾನು ಪ್ರಧಾನಿಯವರಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳಲು ಬಯಸುತ್ತೇನೆ. ಪುಲ್ವಾಮಾ ದಾಳಿಗೆ ಏಕೆ ಅವಕಾಶ ನೀಡಿದ್ದೀರಿ? ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸಲು ನೀವು ಏನು ಮಾಡಿದ್ದೀರಿ? IB ಮತ್ತು R&AW ನಂತಹ ಏಜೆನ್ಸಿಗಳ ಸಹಾಯವನ್ನು ನೀವು ಏಕೆ ತೆಗೆದುಕೊಳ್ಳಲಿಲ್ಲ? ಇದು ನಿಮ್ಮ ವೈಫಲ್ಯ  ಎಂದು ರೆಡ್ಡಿ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯುವಂತೆ ತೆಲಂಗಾಣ ಸಿಎಂ ಜನರಿಗೆ ಕರೆ ನೀಡಿದ ರೆಡ್ಡಿ,  ಮೋದಿಗೆ ಎಲ್ಲವೂ ಚುನಾವಣೆ ಗೆಲ್ಲುವುದೇ ಆಗಿದೆ. ಅವರ ಆಲೋಚನಾ ಕ್ರಮ ದೇಶಕ್ಕೆ ಒಳ್ಳೆಯದಲ್ಲ. ಮೋದಿ ಮತ್ತು ಬಿಜೆಪಿಯನ್ನು ದೇಶ ತೊಲಗಿಸುವ ಸಮಯ ಬಂದಿದೆ. ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಅವರು ವಿಫಲರಾಗಿದ್ದಾರೆ. ಗುಪ್ತಚರ ಬ್ಯೂರೋ ಏನು ಮಾಡುತ್ತಿದೆ?  ಪ್ರಶ್ನಿಸಿದ್ದಾರೆ.

Shwetha M