ಹೊಸ ಹೆಲಿಕಾಪ್ಟರ್‌ ಗೆ ಪೂಜೆ ಮಾಡಿಸಲು ದೇವಾಲಯಕ್ಕೆ ತಂದ ಉದ್ಯಮಿ

ಹೊಸ ಹೆಲಿಕಾಪ್ಟರ್‌ ಗೆ ಪೂಜೆ ಮಾಡಿಸಲು ದೇವಾಲಯಕ್ಕೆ ತಂದ ಉದ್ಯಮಿ

ಹೈದರಾಬಾದ್‌: ಸಾಮಾನ್ಯವಾಗಿ ಹೊಸ ಕಾರು, ಬೈಕ್ ಖರೀದಿಸಿದರೆ ದೇವಾಲಯಗಳಲ್ಲಿ ಪೂಜೆ ಮಾಡಿಸುತ್ತೇವೆ. ಹಾಗೆಯೇ ಇಲ್ಲೊಬ್ಬ ಉದ್ಯಮಿ ತಾನು ಹೊಸ ವಾಹನ ಖರೀದಿಸಿದ್ದೇನೆ, ವಾಹನ ಪೂಜೆ ಮಾಡಿ ಎಂದು ಅರ್ಚಕರ ಬಳಿ ಕೇಳಿದ್ದಾರೆ. ಅರ್ಚಕರು ಕೂಡ ಪೂಜಾ ಸಾಮಾಗ್ರಿಗಳೊಂದಿಗೆ ದೇವಾಲಯದ ಮುಂದೆ ಬಂದು ನೋಡಿದಾಗ ಹೆಲಿಕಾಪ್ಟರ್‌ ನೋಡಿ ಆಶ್ಷರ್ಯಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೊನ್ನಿಪಲ್ಲಿ ಶ್ರೀನಿವಾಸ್ ರಾವ್ ಎಂಬುವವರೇ ಹೆಲಿಕಾಪ್ಟರ್‌ ಅನ್ನು ಮೊದಲ ಪೂಜೆಗಾಗಿ ದೇಗುಲದ ಬಳಿ ಕರೆ ತಂದಿರುವ ಉದ್ಯಮಿ. ಪ್ರತಿಮಾ ಗ್ರೂಪ್ ಎಂಬ ಸಂಸ್ಥೆಯ ಮಾಲೀಕರಾಗಿರುವ ಶ್ರೀನಿವಾಸ್ ರಾವ್  ವಾಹನ ಪೂಜೆಗಾಗಿ ತಮ್ಮ ಹೊಸ ಹೆಲಿಕಾಪ್ಟರ್ ACH-135 ನ್ನು ಯದದ್ರಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದ ಬಳಿ ಕರೆ ತಂದಿದ್ದಾರೆ.

ಇದನ್ನೂ ಓದಿ: ಮನೆಯೊಂದು ಎರಡು ರಾಜ್ಯ… ನಾಲ್ಕು ಕೋಣೆ ಮಹಾರಾಷ್ಟ್ರಕ್ಕೆ, ನಾಲ್ಕು ಕೋಣೆ ತೆಲಂಗಾಣಕ್ಕೆ!

ಹೈದರಾಬಾದ್‌ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಯದದ್ರಿಯ ದೇಗುಲಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಶ್ರೀನಿವಾಸ್ ರಾವ್ ಅವರು ದೇಗುಲದ ಅರ್ಚಕರ ಮೂಲಕ ಹೆಲಿಕಾಪ್ಟರ್‌ಗೆ ವಿಶೇಷ ಪೂಜೆ ಮಾಡಿದ್ದಾರೆ.  ಉದ್ಯಮಿ ಹಾಗೂ ಅವರ ಕುಟುಂಬದವರು ಈ ಪೂಜೆಯಲ್ಲಿ ಭಾಗಿಯಾಗಿದ್ದರು. ಮೂವರು ಅರ್ಚಕರ ಪೌರೋಹಿತ್ಯದಲ್ಲಿ ಈ ಹೊಸ ಹೆಲಿಕಾಪ್ಟರ್‌ಗೆ ಯದದ್ರಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಮೊದಲ ಪೂಜೆ ನಡೆಯಿತು. ಹೆಲಿಕಾಪ್ಟರ್ ಮುಂದೆ ಅರ್ಚಕರು ಎಲ್ಲಾ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದ್ದಾರೆ.

ಪೂಜೆ ಬಳಿಕ ಶ್ರೀನಿವಾಸ್ ರಾವ್ ಕುಟುಂಬಸ್ಥರೆಲ್ಲರೂ ಹೆಲಿಕಾಪ್ಟರ್‌ನಲ್ಲಿ ಯಾದಾದ್ರಿ ಬೆಟ್ಟದ ಸುತ್ತಲೂ ಒಂದು ಸುತ್ತು ಹಾಕಿದರು. ಈ ಹೆಲಿಕಾಪ್ಟರ್‌ನ ಮೌಲ್ಯ 5.7 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದೀಗ ಹೆಲಿಕಾಪ್ಟರ್‌ಗೆ ಪೂಜೆ ಸಲ್ಲಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

suddiyaana