ಅಬ್ಬಬ್ಬಾ.. ಬಲೆಗೆ ಬಿತ್ತು ಬೃಹತ್‌ ಗಾತ್ರದ ಮೀನು – ಎಷ್ಟು ಕೆ.ಜಿ ಇದೆ ಗೊತ್ತಾ?

ಅಬ್ಬಬ್ಬಾ.. ಬಲೆಗೆ ಬಿತ್ತು ಬೃಹತ್‌ ಗಾತ್ರದ ಮೀನು – ಎಷ್ಟು ಕೆ.ಜಿ ಇದೆ ಗೊತ್ತಾ?

ಕರಾವಳಿ ಪ್ರದೇಶಗಳಲ್ಲಿ ಅದೆಷ್ಟೋ ಮಂದಿ ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೀನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಸಮುದ್ರದಲ್ಲಿ ಸಿಕ್ಕ ಹಾಗೆ ನದಿಯಲ್ಲಿ ಬೃಹತ್‌ ಗಾತ್ರದ ಮೀನು ಸಿಗುವುದು ಬಲು ಅಪರೂಪ. ನದಿಯಲ್ಲಿ ಯಾವಾಗ್ಲೂ ಸಣ್ಣ ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ. ಆದ್ರೆ  ಇಲ್ಲೊಬ್ಬ ಮೀನುಗಾರರಿಗೆ ನದಿಯಲ್ಲಿ ಬರೋಬ್ಬರಿ 32.5 ಕೆ.ಜಿ ತೂಕದ ಕಾಟ್ಲಾ ಮೀನು ಸಿಕ್ಕಿದೆ.

ಇದನ್ನೂ ಓದಿ : 3 ಮ್ಯಾಚ್.. ಕೊಹ್ಲಿ 30 ರನ್ – ಚಿನ್ನಸ್ವಾಮಿಯಲ್ಲೇ ಕೈಕೊಟ್ಟ ಪಾಂಡ್ಯ

ಹೌದು, ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ತಂಗಲ್ಲಪಲ್ಲಿಯ ಮೀನುಗಾರ ನರೇಶ್ ಎಂದಿನಂತೆ ಮೀನು ಹಿಡಿಯಲು ಹೊರಟಿದ್ದರು. ಯಾವಾಗಲೂ ಬೀಳುವ ಹಾಗೆ ಸಣ್ಣಸಣ್ಣ ಮೀನುಗಳೇ ಬೀಳುತ್ತವೆ ಎಂದು ಅವರು ಬೀಸಿದ ಬಲೆಯನ್ನು ನದಿ ನೀರಿನಿಂದ ಮೇಲಕ್ಕೆ ಎತ್ತಿದ್ದರು. ಎಷ್ಟೇ ಎತ್ತಿದರೂ ಬಲೆ ಮೇಲಕ್ಕೆ ಬರಲೇ ಇಲ್ಲ. ಆ ಸಂದರ್ಭದಲ್ಲಿ ನರೇಶ್‌ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಮೆಲ್ಲಗೆ ಬಲೆಯನ್ನು ಮೇಲಕ್ಕೆ ಎತ್ತಿದ್ದು, ಆ ಬಲೆಗೆ ಬಿದ್ದ ದೈತ್ಯಾಕಾರದ ಮೀನನ್ನು ಕಂಡು ನರೇಶ್‌ ಖುಷಿಯಾಗಿದ್ದಾರೆ. ಸಣ್ಣ ಮೀನುಗಳೇ ಬಲೆಗೆ ಬೀಳುತ್ತವೆ ಎಂದುಕೊಂಡಿದ್ದ ನರೇಶ್‌ ಬಲೆಗೆ ಬಿದ್ದ ಬೃಹತ್‌ ಗಾತ್ರದ ಕಾಟ್ಲಾ ಮೀನನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಬಲೆಗೆ ಬಿದ್ದ ಕಾಟ್ಲಾ ಮೀನು ಬರೋಬ್ಬರಿ 32.5 ಕೆಜಿ ತೂಕವನ್ನು ಹೊಂದಿದ್ದು, ಸ್ಥಳೀಯರು ಈ ಬೃಹದಾಕಾರದ ಮೀನನ್ನು ಕಣ್ತುಂಬಿಕೊಳ್ಳಲು ನಾ ಮುಂದು, ತಾ ಮುಂದು ಅಂತ ಧಾವಿಸಿದ್ದಾರೆ. ಈ ಮೀನನ್ನು ಕಂಡು ಸಮುದ್ರ ಪ್ರದೇಶದಲ್ಲಿ ಮಾತ್ರ ಇಂತಹ ದೈತ್ಯ ಮೀನುಗಳು ಕಾಣಿಸುತ್ತವೆ. ಆದರೆ ಮಿಡ್‌ ಮನೇರು ಡ್ಯಾಮ್‌ ಬಳಿ ಇಷ್ಟೊಂದು ದೊಡ್ಡ ಮೀನು ಇಲ್ಲಿ ತನಕ ಕಂಡು ಬಂದೇ ಇಲ್ಲ ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಜನ ಈ ಮೀನಿನ ಫೋಟೋವನ್ನು ಕ್ಲಿಕ್ಕಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

Shwetha M