ಸುರಂಗದಲ್ಲೇ ಕೆಟ್ಟು ನಿಂತ ಮೆಟ್ರೋ – ಕತ್ತಲಲ್ಲೇ ನಡೆದುಕೊಂಡು ಹೋದ ಪ್ರಯಾಣಿಕರು

ಸುರಂಗದಲ್ಲೇ ಕೆಟ್ಟು ನಿಂತ ಮೆಟ್ರೋ – ಕತ್ತಲಲ್ಲೇ ನಡೆದುಕೊಂಡು ಹೋದ ಪ್ರಯಾಣಿಕರು

ನಮ್ಗೆ ಮೆಟ್ರೋದಲ್ಲಿ ಹೋಗ್ತಾ ಒಮ್ಮೆ ಎಲ್ಲಾದ್ರೂ ನಿಂತ್ರೆ ಜೀವ ಜಗ್ ಅನ್ನುತ್ತೆ. ಅಂತಹದ್ರಲ್ಲಿ ಸುರಂಗದಲ್ಲಿ ಮೆಟ್ರೋ ನಿಂತ್ರೆ ಹೇಗ್ ಆಗಬೇಡ ಹೇಳಿ..  ಎಸಿ ಆಫ್ ಆಗಿರುತ್ತೆ. ಲೈಟ್ ಇರಲ್ಲ.. ಕತ್ತಲೇ ಬೇರೆ.. ಇಂತಹ ಸ್ಥಿತಿ ಚೆನ್ನೈ ಮೆಟ್ರೋ ಪ್ರಯಾಣಿಕರಿಗೆ ಅನುಭವ ಆಗಿದೆ.  ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಸ್ವಲ್ಪ ಹೊತ್ತು ಒಳಗೆ ಸಿಲುಕಿಕೊಂಡ ಇಂದು ಬೆಳ್ಳಂ ಬೆಳಿಗ್ಗೆ ಚೆನ್ನೈನಲ್ಲಿ ನಡೆದಿದೆ. ಎರಡು ಮೆಟ್ರೋ ನಿಲ್ದಾಣಗಳ ನಡುವಿನ ಸುರಂಗದೊಳಗೆ ರೈಲು ಸಿಲುಕಿಕೊಂಡಿದೆ ಎಂದು ವರದಿಯಾಗಿದೆ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಪ್ರಯಾಣಿಕರು ಒಳಗೆ ಸಿಲುಕಿಕೊಂಡಿರುವುದು ವೈರಲ್ ದೃಶ್ಯಗಳಲ್ಲಿ ಕಂಡುಬಂದಿದೆ.

ಇದನ್ನೂ ಓದಿ: 15 ದಿನದಲ್ಲೇ ಕೋಟಿ ಒಡೆಯನಾದ ಅಯ್ಯಪ್ಪ! – ಶಬರಿಮಲೆ ಅಯ್ಯಪ್ಪನ ಹುಂಡಿಗೆ 92 ಕೋಟಿ ರೂ!

ವಿಮ್ಕೊ ನಗರ ಡಿಪೋ ಮತ್ತು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಚಲಿಸುವ ಚೆನ್ನೈ ಮೆಟ್ರೋ ರೈಲಿನ ಬ್ಲೂ ಲೈನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣದ ನಡುವಿನ ಸುರಂಗಮಾರ್ಗದಲ್ಲಿ ರೈಲು ಸಿಲುಕಿತ್ತು. ಸದ್ಯ ವೈರಲ್‌ ಆದ ವಿಡಿಯೋದಲ್ಲಿ ಪ್ರಯಾಣಿಕರು ಹ್ಯಾಂಡ್‌ರೈಲ್ ಅನ್ನು ಹಿಡಿದುಕೊಂಡು ನಿಂತಿರುವುದು ಕಂಡು ಬಂದಿದೆ. ಸುಮಾರು ನಿಮಿಷಗಳ ಬಳಿಕ ಪ್ರಯಾಣಿಕರಿಗೆ ಸುಮಾರು 500 ಮೀಟರ್ ದೂರದಲ್ಲಿರುವ ಹತ್ತಿರದ ಮೆಟ್ರೋ ನಿಲ್ದಾಣವಾದ ಹೈಕೋರ್ಟ್ ನಿಲ್ದಾಣಕ್ಕೆ ನಡೆದು ಹೋಗಲು ಅನುವು ಮಾಡಿ ಕೊಡಲಾಯಿತು. ಪ್ರಯಾಣಿಕರು ಸುರಂಗ ಮಾರ್ಗದಿಂದ ನಡೆದುಕೊಂಡೇ ಹೋದರು ಎನ್ನಲಾಗಿದೆ. ವಿದ್ಯುತ್ ಅಡಚಣೆ ಅಥವಾ ತಾಂತ್ರಿಕ ದೋಷದಿಂದ ಈ ತರ ಆಗಿದೆ ಎನ್ನಲಾಗಿದೆ.

ಕಳೆದ ವಾರ ಮುಂಬೈ ಮೆಟ್ರೋದ 1ನೇ ಮಾರ್ಗದ ಪ್ರಮುಖ ಕಾರಿಡಾರ್‌ನಲ್ಲಿಯೂ ಸಹ ರೈಲು ಸೇವೆಯಲ್ಲಿ ಅಡಚಣೆ ಉಂಟಾಗಿತ್ತು. ವರ್ಸೋವಾ-ಘಾಟ್ಕೋಪರ್ ಮೆಟ್ರೋ ಕಾರಿಡಾರ್‌ನಲ್ಲಿ 30 ನಿಮಿಷಗಳಿಗೂ ಹೆಚ್ಚು ಕಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು

 

Kishor KV