ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಮತ್ತೆ ವಿಘ್ನ! – ವೆಬ್‌ಸೈಟ್‌ ನಲ್ಲಿ ತಾಂತ್ರಿಕ ದೋಷ  

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ ಮತ್ತೆ ವಿಘ್ನ! – ವೆಬ್‌ಸೈಟ್‌ ನಲ್ಲಿ ತಾಂತ್ರಿಕ ದೋಷ  

ಬೆಂಗಳೂರು: ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಭಾನುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಒಮ್ಮೆಲೆ ಸಾವಿರಾರು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದರಿಂದ ಮೊದಲ ದಿನವೇ ವೆಬ್‌ ಸೈಟ್‌ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಭಾನುವಾರ ಅರ್ಜಿ ಸಲ್ಲಿಕೆ ಸಾಧ್ಯವಾಗಿರಲಿಲ್ಲ. ಸೋಮವಾರದಿಂದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಮಾಹಿತಿ ನೀಡಿದ್ದರು. ಆದ್ರೆ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಇವತ್ತು ಸಹ ವಿಳಂಬವಾಗುತ್ತಿದೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ ನ ಊಟ, ತಿಂಡಿ ಮೆನು ಬದಲಾವಣೆ – ಬ್ರೆಡ್‌ ಜಾಮ್‌, ಮಂಗಳೂರು ಬನ್ಸ್‌ ನೀಡಲು ತೀರ್ಮಾನ

ವೆಬ್‌ ಸೈಟ್‌ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಗೃಹ ಜ್ಯೋತಿ ಅರ್ಜಿ ಸಲ್ಲಿಸಲು ಹೋದ್ರೆ ವೆಬ್​ಸೈಟ್​ ಒಪನ್ ಆಗುತ್ತಿಲ್ಲ. ಹೀಗಾಗಿ ಅರ್ಜಿ ಸಲ್ಲಿಕೆ ಸಮಸ್ಯೆ ಎದುರಾಗಿದೆ. ಎಂಜಿ ರಸ್ತೆಯ ಬೆಸ್ಕಾಂ ಪ್ರಾದೇಶಿಕ‌ ಕಚೇರಿಯಲ್ಲಿ ಮತ್ತೆ ದೋಷ ಉಂಟಾಗಿದೆ. ವೆಬ್ ಸೈಟ್ ಸ್ಲೋ ಆಗಿದ್ದರಿಂದ ಅರ್ಜಿ ಸಲ್ಲಿಕೆಗೆ ಸಮಸ್ಯೆ ಉಂಟಾಗಿದೆ.

ಭಾನುವಾರ ವೆಬ್​ಸೈಟ್​ ಓಪನ್ ಆಗುತ್ತಿರಲಿಲ್ಲ. ಸೋಮವಾರ ವೆಬ್​ಸೈಟ್​ ಓಪನ್ ಆಗಿ, ಅರ್ಜಿ ಸಹ ತೆರೆದುಕೊಳ್ಳುತ್ತಿದೆ. ಅರ್ಜಿ ಭರ್ತಿ ಮಾಡಿದ ನಂತರ ಮುಂದಿನ ಆಯ್ಕೆಗಳು ತೆರೆದುಕೊಳ್ಳುತ್ತಿಲ್ಲ. ಕೆಲವರಿಗೆ ಅರ್ಜಿ ಭರ್ತಿ ಮಾಡಲು ಸಹ ಆಗುತ್ತಿಲ್ಲ. ಅರ್ಜಿ ಭರ್ತಿಯ ನಂತರ ವೆಬ್​ಸೈಟ್​ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.

ಅರ್ಜಿ ಸಲ್ಲಿಕೆಗೆ ಏಕಕಾಲದಲ್ಲಿ ಜನರು ಬಂದಿರುವ ಕಾರಣ ಸರ್ವರ್ ಡೌನ್ ಆಗಿದೆ. ತಂತ್ರಜ್ಞರು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಇ, ಎಇಇ, ಸೂಪರಿಂಟೆಂಡೆಂಟ್ ಇಂಜಿನಿಯರ್ ಈಸ್ಟ್ ಸರ್ಕಲ್ (ಎಸ್​​​ಇಇ) ಅವರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ ಎಲ್ಲಾ ಸರಿಯಾಗಲಿದ್ದು, ಜನರು ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

suddiyaana