ನಿಮ್ಮ ಫೋನ್ ನಲ್ಲಿ ಚಾರ್ಜ್ ಬೇಗ ಖಾಲಿ ಆಗ್ತಿದ್ಯಾ? – ಚಾರ್ಜ್ ಹೆಚ್ಚು ಹೊತ್ತು ನಿಲ್ಲಲು ಈ ಟಿಪ್ಸ್ ಫಾಲೋ ಮಾಡಿ..
ಇದು ಸ್ಮಾರ್ಟ್ ಫೋನ್ ಯುಗ. ಪ್ರತಿಯೊಬ್ಬರಲ್ಲೂ ಸ್ಮಾರ್ಟ್ ಫೊನ್ ಇದ್ದೇ ಇರುತ್ತೆ. ಇತ್ತೀಚಿನ ಸ್ಮಾರ್ಟ್ಫೋನ್ಗಳು ಫಾಸ್ಟ್ ಚಾರ್ಜರ್ ಟೆಕ್ನಾಲಜಿ ಹೊಂದಿರುತ್ತವೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ ನಿಜ. ಆದರೆ, ಇದನ್ನು ಸರಿಯಾಗಿ ಉಪಚರಿಸಿಲ್ಲ ಎಂದಾದರೆ ಅಷ್ಟೇ ಬೇಗ ಬ್ಯಾಟರಿ ಕೆಟ್ಟು ಹೋಗುತ್ತೆ.
ಹಾಗಾದರೆ ಸ್ಮಾರ್ಟ್ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು ಅನ್ನೋ ಪಶ್ನೆ ಮೂಡೋದು ಸಹಜ. ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ. ಎಲ್ಲ ಮೊಬೈಲ್ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗುತ್ತೆ. ಹಾಗಂತಾ ಅದನ್ನು ಕಂಪ್ಯೂಟರ್ ಸಿಪಿಯುಗೆ ಹಾಕಿ ಅಥವಾ ಕಾರಿನಲ್ಲಿರುವ ಚಾರ್ಜರ್ ಮೂಲಕ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತೆ.
ಇದನ್ನೂ ಓದಿ: ಪ್ರಯಾಣಿಕರು ಲಗೇಜ್‌ನಲ್ಲಿ ಸ್ವೀಟ್ ತರೋಹಾಗಿಲ್ಲ! – ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಹೊಸ ರೂಲ್ಸ್!
ಇನ್ನು ಮೊಬೈಲ್ ಓವರ್ಹೀಟ್ ಅದ್ರೂ ಕೂಡ ಬ್ಯಾಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ರ್ಯಾಮ್ ಕಡಿಮೆ ಇದ್ದಾಗ ಅತಿಯಾಗಿ ಗೇಮ್ ಆಡಿದರೆ ಮೊಬೈಲ್ ಹೀಟ್ ಆಗುತ್ತದೆ. ಕೂಡಲೇ ಗೇಮ್ ಆಡುವುದನ್ನು ನಿಲ್ಲಿಸಿ. ಮೊಬೈಲ್ ಕೂಲ್ ಆಗುವವರೆಗೂ ಬಳಕೆ ಮಾಡಬೇಡಿ. 90% ಬ್ಯಾಟರಿ ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಇನ್ನು ಬ್ಯಾಟರಿ ಫುಲ್ ಚಾರ್ಜ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಬ್ಯಾಟರಿ ಲೋ ಆದಾಗಲೂ ಬ್ಯಾಟರಿ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೊಬೈಲ್ 20 ಪರ್ಸೆಂಟ್ ಚಾರ್ಜ್ಗೆ ಇಟ್ಟುಬಿಡಿ. ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ.