‘ರಕ್ಕಸಪುರದೋಳ್’ ಚಿತ್ರದಲ್ಲಿ ಉಗ್ರರೂಪ – ರಕ್ತಸಿಕ್ತ ಅಧ್ಯಾಯದಲ್ಲಿ ರಾಜ್ ಬಿ ಶೆಟ್ಟಿ ಎರಡು ರೂಪ

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೋಳ್’ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ರಾಜ್ ಬಿ. ಶೆಟ್ಟಿ ಅಭಿನಯ ನಿಜಕ್ಕೂ ಭಯಂಕರವಾಗಿದೆ. ರಾಜ್ ಶೆಟ್ಟಿಯ ಉಗ್ರಾವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ:ಕಾವ್ಯಳನ್ನ ಉಳಿಸಲು ಹೋಗಿ ತಾನು ಗೆಲ್ಲೋದನ್ನ ಮರೆತ ಗಿಲ್ಲಿ! – ಹೀಗೆ ಆದ್ರೆ ಟ್ರೋಫಿ ಗೆಲ್ಲಲ್ಲ ಎಂದ ಫ್ಯಾನ್ಸ್!
‘ರಕ್ಕಸಪುರದೋಳ್’ ಸಿನಿಮಾ ಫೆಬ್ರವರಿ 6 ರಂದು ರಿಲೀಸ್ ಆಗಲಿದೆ. ಇದೀಗ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಬೇರೆ ಲೆವೆಲ್‌ನಲ್ಲಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರ ನೋಡಿದ ಅಭಿಮಾನಿಗಳು ಬೆರಗಾಗಿ ಹೋಗಿದ್ದಾರೆ. ನಿರ್ದೇಶಕ ‘ಜೋಗಿ’ ಪ್ರೇಮ್ ಶಿಷ್ಯ ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಆ ಥೀಮ್ನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು.
ಸಿನಿಮಾದಲ್ಲಿ ರಕ್ತಸಿಕ್ತ ಅಧ್ಯಾಯ ಮಾತ್ರವಲ್ಲ ಮನರಂಜನೆಯೂ ಇದೆಯಂತೆ. ‘ರಕ್ಕಸಪುರದೋಳ್’ ಸಿನಿಮಾಗೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ದಟ್ಟ ಕಾನನ, ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್ನಲ್ಲಿ ಹೈಲೈಟ್ ಆಗಿವೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿಲಿಯನ್ ಡೇವಿಡ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ.

ನೋಡಿರಿ

