‘ಓಎಂಜಿ 2’ ಚಿತ್ರದ ಟೀಸರ್ ರಿಲೀಸ್ – ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ದರ್ಶನ..!

‘ಓಎಂಜಿ 2’ ಚಿತ್ರದ ಟೀಸರ್ ರಿಲೀಸ್ – ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ದರ್ಶನ..!

ಬಾಲಿವುಡ್‌ನ ಸ್ಟೈಲ್‌ಕಿಂಗ್ ಅಕ್ಷಯ್ ಕುಮಾರ್ ಇತ್ತೀಚೆಗೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದರು. ಅದರಲ್ಲೂ ಬಹುನಿರೀಕ್ಷೆಯ ಚಿತ್ರ ‘ಸೆಲ್ಫಿ’ ಸೋತ ಬಳಿಕ ಅಕ್ಷಯ್ ಕುಮಾರ್ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಬೇಜಾರಾಗಿದ್ದರು. ಇದೀಗ ಅಭಿಮಾನಿಗಳ ನೋವಿಗೆ ಮುಲಾಮು ಎಂಬಂತೆ ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅಕ್ಕಿಭಾಯ್ ಶಿವನ ಅವತಾರದಲ್ಲಿ ದರ್ಶನ ನೀಡಿದ್ದನ್ನು ಕಂಡು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಚಿತ್ರ ಸಕ್ಸಸ್ ಗ್ಯಾರಂಟಿ ಎಂಬ ಸಾಲು ಸಾಲು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಶಿವನ ಅವತಾರದಲ್ಲಿ ಬಾಲಿವುಡ್‌ನ ಸ್ಟೈಲ್‌ಕಿಂಗ್ –  ಅಕ್ಷಯ್ ಕುಮಾರ್‌ಗೆ ಸಕ್ಸಸ್ ತಂದುಕೊಡುತ್ತಾ ‘ಓಎಂಜಿ 2’ ಸಿನಿಮಾ?

ಜುಲೈ 11 ಮಂಗಳವಾರ ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಶಿವನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಅಭಿಮಾನಿಗಳ ನಿರೀಕ್ಷೆಯನ್ನು ಡಬಲ್ ಮಾಡುವ ರೀತಿಯಲ್ಲಿ ‘ಓಎಂಜಿ 2’ ಚಿತ್ರದ ಟೀಸರ್ ಮೂಡಿ ಬಂದಿದೆ. ಪಂಕಜ್ ತ್ರಿಪಾಟಿ ಓರ್ವ ಆಸ್ತಿಕನ ಪಾತ್ರ ಮಾಡಿದ್ದಾರೆ. ದೇವರನ್ನು ನಂಬುವ ವ್ಯಕ್ತಿಯ ಪಾತ್ರದಲ್ಲಿ ಅವರು ಟೀಸರ್‌ನಲ್ಲಿ ಗಮನ ಸೆಳೆದಿದ್ದಾರೆ. ‘ನಂಬಿಕೆ ಇಡು, ನೀನು ಶಿವನ ದಾಸ’ ಎಂದು ಅಕ್ಷಯ್ ಕುಮಾರ್ ಅವರು ಪಂಕಜ್‌ಗೆ ಹೇಳುವ ಡೈಲಾಗ್ ಗಮನ ಸೆಳೆದಿದೆ. ರೈಲ್ವೆ ನಿಲ್ದಾಣದ ಬಳಿ ಶಿವನ ತಲೆಯ ಮೇಲೆ ನೀರು ಬೀಳುತ್ತಿರುತ್ತದೆ. ಹಿಂಭಾಗದಲ್ಲಿ ಚಂದಿರ ಕಾಣುತ್ತಿರುತ್ತಾನೆ.

ಅಕ್ಷಯ್ ಕುಮಾರ್‌ಗೆ 2022ರಲ್ಲಿ ಗೆಲುವು ಸಿಕ್ಕಿದ್ದು ಕಡಿಮೆ. 2023ರಲ್ಲಿ ‘ಸೆಲ್ಫಿ’ ಸೋತ ಬಳಿಕ ಅವರ ನಟನೆಯ ‘ಓಎಂಜಿ 2’ ಚಿತ್ರ ರಿಲೀಸ್ ಆಗುತ್ತಿದೆ. ‘ಓಎಂಜಿ 2’ ಚಿತ್ರವನ್ನು ಅಮಿತ್ ರಾಯ್ ಅವರು ನಿರ್ದೇಶನ ಮಾಡಿದ್ದಾರೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 1987ರಲ್ಲಿ ಪ್ರಸಾರ ಕಂಡ ‘ರಾಮಾಯಣ’ದಲ್ಲಿ ಅರುಣ್ ಅವರು ರಾಮನ ಪಾತ್ರ ಮಾಡಿದ್ದರು. ‘ಓಎಂಜಿ 2’ ಚಿತ್ರದಲ್ಲೂ ರಾಮನ ಪಾತ್ರವನ್ನೇ ನೀಡಲಾಗಿದೆ.

suddiyaana