ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್‌ಗೆ ಟೀಮ್ ಆಯ್ಕೆ – ಇವರಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಯಾರಿದ್ದಾರೆ?

ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್‌ಗೆ ಟೀಮ್ ಆಯ್ಕೆ – ಇವರಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಯಾರಿದ್ದಾರೆ?

ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್​​ಗೆ ಈಗಾಗ್ಲೇ ಟೀಂ ಇಂಡಿಯಾದ ಸ್ಕ್ವಾಡ್ ಅನೌನ್ಸ್ ಆಗಿದೆ. ಒಟ್ಟು 15 ಮಂದಿ ಆಟಗಾರರಲ್ಲಿ ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಕಮ್​ಬ್ಯಾಕ್ ಮಾಡಿದ್ದಾರೆ. ಟಿ-20 ವರ್ಲ್ಡ್​​ಕಪ್​ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಏಕೈಕ ಟಿ20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ ಮಾತ್ರ. ವಿಶ್ವಕಪ್​​ಗೆ ಫೈನಲ್​ ಸ್ಕ್ವಾಡ್​ನ್ನ ಬಿಸಿಸಿಐ ಸೆಲೆಕ್ಟ್ ಮಾಡೋದು ಐಪಿಎಲ್​ ಟೂರ್ನಿ ವೇಳೆಯೇ. ಐಪಿಎಲ್​​ನಲ್ಲಿ ಆಟಗಾರರ ಪರ್ಫಾಮೆನ್ಸ್​​ನ್ನ ನೋಡಿಕೊಂಡು ಬಿಸಿಸಿಐ ವಿಶ್ವಕಪ್​ಗೆ ಟೀಮ್ ಸೆಲೆಕ್ಷನ್ ಮಾಡುತ್ತೆ. ಹೀಗಾಗಿ ಈಗ ಆಫ್ಘನ್​ ಸೀರಿಸ್​​ನಲ್ಲಿ ಆಡ್ತಿರೋ ಪ್ಲೇಯರ್ಸ್​ಗಳ ಪೈಕಿ ಯಾರೆಲ್ಲಾ ಐಪಿಎಲ್​​​ನಲ್ಲಿ ಯಾವ ಫ್ರಾಂಚೈಸಿ ಪರ ಆಡ್ತಾ ಇದ್ದಾರೆ. ಸದ್ಯ ಟೀಂ ಇಂಡಿಯಾದಲ್ಲಿರುವವರು ಯಾವ ಫ್ರಾಂಚೈಸಿಯನ್ನ ಹೆಚ್ಚಿನ ಸಂಖ್ಯೆಯಲ್ಲಿ ರೆಪ್ರೆಸೆಂಟ್ ಮಾಡ್ತಾ ಇದ್ದಾರೆ ಅನ್ನೋ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಿ ಎಂಟ್ರಿ – ಕೆ.ಎಲ್ ಔಟ್, ಹಾರ್ದಿಕ್ ಕನಸು ಭಗ್ನ..!

ಜೂನ್​ನಲ್ಲಿ ನಡೆಯೋ ಟಿ-20 ವರ್ಲ್ಡ್​​ಕಪ್​​ಗಾಗಿ ಬಿಸಿಸಿಐ ಒಟ್ಟು 30 ಮಂದಿ ಆಟಗಾರರ ಲಿಸ್ಟ್ ರೆಡಿಮಾಡಿಕೊಂಡಿದೆ. ಈ 30 ಮಂದಿ ಪ್ಲೇಯರ್ಸ್​ಗಳ ಐಪಿಎಲ್​​ ಪರ್ಫಾಮೆನ್ಸ್​​​​ ಮೇಲೆ ಸೆಲೆಕ್ಷನ್​ ಕಮಿಟಿ ನಿಗಾ ವಹಿಸುತ್ತೆ. ಆದ್ರೆ ಈ ಆ 30 ಮಂದಿ ಆಟಗಾರರು ಯಾರೆಲ್ಲಾ ಅನ್ನೋದನ್ನ ಇದುವರೆಗೂ ಬಿಸಿಸಿಐ ರಿವೀಲ್ ಮಾಡಿಲ್ಲ. ಆದ್ರೆ ನಾವಿಲ್ಲಿ ಒಂದು ವಿಚಾರವನ್ನ ಮಾತ್ರ ಅರ್ಥ ಮಾಡಿಕೊಳ್ಳಬಹುದು. ಈಗ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​ಗೆ ಟೀಂ ಇಂಡಿಯಾ ಸ್ಕ್ವಾಡ್​​ಗೆ ಸೆಲೆಕ್ಟ್ ಆಗಿರೋ 15 ಮಂದಿ ಪ್ಲೇಯರ್ಸ್​ಗಳು ಬಿಸಿಸಿಐ ಲಿಸ್ಟ್​​ನಲ್ಲಿರೋದು ಗ್ಯಾರಂಟಿ. ಇದ್ರ ಜೊತೆಗೆ ಇನ್ನೊಂದಷ್ಟು ಮೇನ್ ಪ್ಲೇಯರ್ಸ್​ಗಳು ಈ ಸೀರಿಸ್​ಗೆ ಸೆಲೆಕ್ಟ್ ಆಗಿಲ್ಲ. ಅವರೆಲ್ಲರೂ ಐಪಿಎಲ್​​ನಲ್ಲಿ ಆಡಲಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಈ ಎಲ್ಲಾ ಆಟಗಾರರು ಐಪಿಎಲ್​​​ನಲ್ಲಿ ಯಾವ ರೀತಿ ಆಡ್ತಾರೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಈಗ ಅಫ್ಘಾನಿಸ್ತಾನ ಸೀರಿಸ್​​ಗೆ ಸೆಲೆಕ್ಟ್ ಆಗಿರೋ ಆಟಗಾರರ ಪೈಕಿ ಐಪಿಎಲ್​​ನಲ್ಲಿ ಯಾರೆಲ್ಲಾ ಯಾವ ಫ್ರಾಂಚೈಸಿಯಲ್ಲಿ ಆಡ್ತಾ ಇದ್ದಾರೆ ಅನ್ನೋದನ್ನ ನೋಡ್ತಾ ಹೋಗೋಣ. ನಿಮಗೆ ಗೊತ್ತಿರೋ ಹಾಗೆ ಐಪಿಎಲ್​​ನಲ್ಲಿ ಒಟ್ಟು 10 ಟೀಮ್​​ಗಳಿವೆ. ಈ 10 ಫ್ರಾಂಚೈಸಿಗಳಲ್ಲಿ ಆಡೋ ಪ್ಲೇಯರ್ಸ್​​ಗಳು ಈಗ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸ್ಕ್ವಾಡ್​ಗೆ ಸೆಲೆಕ್ಟ್ ಆಗಿದ್ದಾರೆ.

​​ನಂ.1- ಚೆನ್ನೈ ಸೂಪರ್​​ ಕಿಂಗ್ಸ್

ಚೆನ್ನೈ ಸೂಪರ್​​ ಕಿಂಗ್ಸ್ ಪರ ಆಡ್ತಿರೋ ಆಲ್ರೌಂಡರ್​ ಶಿವಮ್​ ದುಬೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್​ಗೆ ಸೆಲೆಕ್ಟ್ ಆಗಿದ್ದಾರೆ. ಒಂದು ವೇಳೆ ದುಬೆಗೆ ಆಡೋಕೆ ಚಾನ್ಸ್​ ಸಿಕ್ಕಿ, ಉತ್ತಮವಾಗಿ ಪರ್ಫಾಮ್ ಮಾಡಿದ್ರೆ, ನೆಕ್ಸ್ಟ್ ಐಪಿಎಲ್​​ನಲ್ಲೂ ಕ್ಲಿಕ್ ಆದ್ರೆ ಶಿವಮ್​ ದುಬೆ ವರ್ಲ್ಡ್​ಕಪ್​ ಸ್ಕ್ವಾಡ್​​ಗೆ ರೇಸ್​​ನಲ್ಲಿರ್ತಾರೆ. ಇನ್ನು ಸಿಎಸ್​ಕೆ ಪರ ಆಡ್ತಿರೋ ರವೀಂದ್ರ ಜಡೇಜ ಮತ್ತು ರುತುರಾಜ್ ಗಾಯಕ್ವಾಡ್ ಇವರಿಬ್ಬರೂ ಅಫ್ಘಾನಿಸ್ತಾನ ವಿರುದ್ಧ ಆಡ್ತಿಲ್ಲವಾದ್ರೂ ಈ ಪೈಕಿ ರವೀಂದ್ರ ಜಡೇಜ ಅಂತೂ ವಿಶ್ವಕಪ್​​ ಸ್ಕ್ವಾಡ್​ಗೆ ಸೆಲೆಕ್ಟ್ ಆಗೋದು ಗ್ಯಾರಂಟಿ. ಐಪಿಎಲ್​​​ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ರೆ ರುತುರಾಜ್ ಗಾಯಕ್ವಾಡ್​ಗೂ ಚಾನ್ಸ್ ಇದೆ. ಟೋಟಲ್​​ ಸಿಎಸ್​​ಕೆಯ ಮೂವರು ಪ್ಲೇಯರ್ಸ್​ಗಳು ವರ್ಲ್ಡ್​ಕಪ್​ ಸ್ಕ್ವಾಡ್​​ ರೇಸ್​​ನಲ್ಲಿದ್ದಾರೆ.

ನಂ.2-ಮುಂಬೈ ಇಂಡಿಯನ್ಸ್

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಆಡ್ತಿರೋ ಇಬ್ಬರು ಪ್ಲೇಯರ್ಸ್​ ಅಪ್ಘಾನಿಸ್ತಾನ ಸೀರಿಸ್​​ಗೆ ಸೆಲೆಕ್ಟ್ ಆಗಿದ್ದಾರೆ. ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ. ಇವರಿಬ್ಬರಿಗೂ ಆಫ್ಘನ್​ ಸೀರಿಸ್​ ಜೊತೆಗೆ ಈ ಬಾರಿಯ ಐಪಿಎಲ್​​ ಟೂರ್ನಿ ಕೂಡ ಇಂಪಾರ್ಟೆಂಟ್ ಆಗುತ್ತೆ. ಐಪಿಎಲ್​​ನಲ್ಲಿ ರನ್​​ ಗಳಿಸಿದ್ರೆ ಮಾತ್ರ ರೋಹಿತ್​​ ಕೂಡ ವರ್ಲ್ಡ್​ಕಪ್​ಗೆ ಸೆಲೆಕ್ಟ್ ಆಗಬಹುದಷ್ಟೇ. ಸದ್ಯ ಬಿಸಿಸಿಐ ರೋಹಿತ್​ರನ್ನೇ ವರ್ಲ್ಡ್​​ಕಪ್​ಗೆ ಕ್ಯಾಪ್ಟನ್ ಮಾಡಬೇಕು ಅನ್ನೋ ಪ್ಲ್ಯಾನ್​ನಲ್ಲಿದೆ. ಆದ್ರೂ ಐಪಿಎಲ್​ನಲ್ಲಿ ಯಾವ ರೀತಿ ಪರ್ಫಾಮ್ ಮಾಡ್ತಾರೆ ಅನ್ನೋದು ರೋಹಿತ್​ ಶರ್ಮಾಗೂ ಅಪ್ಲೈ ಆಗುತ್ತೆ. ಇನ್ನು ಐಪಿಎಲ್​​ನಲ್ಲಿ ಈ ಬಾರಿ ಹಾರ್ದಿಕ್​ ಪಾಂಡ್ಯಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ದಾರೆ. ಪಾಂಡ್ಯಾ ಕೂಡ ಅಷ್ಟೇ ಪರ್ಫಾಮ್​ ಮಾಡಿದ್ರಷ್ಟೇ ವರ್ಲ್ಡ್​​ಕಪ್​ನಲ್ಲಿ ಸೆಲೆಕ್ಟ್ ಆಗಬಹುದು. ಹಾಗೆಯೇ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಜಸ್ಪ್ರಿತ್ ಬುಮ್ರಾ ಮೂವರೂ ಮುಂಬೈ ಇಂಡಿಯನ್ಸ್ ಆಟಗಾರರು. ಈ ಪೈಕಿ ಬುಮ್ರಾ ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಆಗೋದಂತೂ ಗ್ಯಾರಂಟಿ. ಟೋಟಲ್ ಮುಂಬೈ ಇಂಡಿಯನ್ಸ್​ನ 5 ಮಂದಿ ಪ್ಲೇಯರ್ಸ್​​ ವರ್ಲ್ಡ್​ಕಪ್​ ಸ್ಕ್ವಾಡ್​​ ರೇಸ್​ನಲ್ಲಿದ್ದಾರೆ.

ನಂ.3-ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್​ಸಿಬಿ ಪರ ಆಡ್ತಿರೋ ಏಕೈಕ ಆಟಗಾರ ಈಗ ಅಪ್ಘಾನಿಸ್ತಾನ ವಿರುದ್ಧ ಟಿ-20 ಸ್ಕ್ವಾಡ್​ಗೆ ಸೆಲೆಕ್ಟ್ ಆಗಿದ್ದಾರೆ. ಅದು ವಿರಾಟ್ ಕೊಹ್ಲಿ. ಆರ್​ಸಿಬಿಯ ಇನ್ಯಾವುದೇ ಭಾರತೀಯ ಆಟಗಾರ ಅಫ್ಘಾನ್​ ಸೀರಿಸ್​ನಲ್ಲಿ ಆಡ್ತಾ ಇಲ್ಲ. ಮೋಸ್ಟ್ಲಿ ವರ್ಲ್ಡ್​​ಕಪ್​​ ಟೀಂಗೂ ವಿರಾಟ್​ ಕೊಹ್ಲಿಯನ್ನ ಬಿಟ್ರೆ ಬ್ಯಾಟ್ಸ್​ಮನ್​ಗಳ ಪೈಕಿ ಇನ್ಯಾವುದೇ ಆರ್​ಸಿಬಿ ಪ್ಲೇಯರ್​​ ಟೀಂ ಇಂಡಿಯಾದ ಸ್ಕ್ವಾಡ್​​ಗೆ ಸೆಲೆಕ್ಟ್ ಆಗೋದು ಡೌಟ್ ಅನ್ಸುತ್ತೆ. ಬಟ್ ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್​ರನ್ನ ವರ್ಲ್ಡ್​ಕಪ್​ಗೆ ಪಿಕ್ ಮಾಡಬಹುದು.

ನಂ.4-ಕೊಲ್ಕತ್ತಾ ನೈಟ್ ರೈಡರ್ಸ್

ಕೆಕೆಆರ್​ನಿಂದಲೂ ಅಷ್ಟೇ ದಿ ಫಿನಿಷರ್ ರಿಂಕು ಸಿಂಗ್​ ಬಿಟ್ರೆ ಈ ಫ್ರಾಂಚೈಸಿಯ ಇನ್ಯಾವುದೇ ಪ್ಲೇಯರ್ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​ಗೆ ಸೆಲೆಕ್ಟ್ ಆಗಿಲ್ಲ. ವರ್ಲ್ಡ್​​ಕಪ್​ ಸ್ಕ್ವಾಡ್​​ಗೂ ಅಷ್ಟೇ ಕೆಕೆಆರ್​ ಕಡೆಯಿಂದ ರಿಂಕು ಸಿಂಗ್ ಮಾತ್ರ ಸೆಲೆಕ್ಟ್ ಆಗಬಹುದು ಅನ್ಸುತ್ತೆ. ಶ್ರೇಯಸ್ ಅಯ್ಯರ್ ಕೂಡ ಕೆಕೆಆರ್​​ ಪರವೇ ಆಡ್ತಿರೋದು. ಆದ್ರೆ ಶ್ರೇಯಸ್ ಅಯ್ಯರ್ ಟಿ-20 ವರ್ಲ್ಡ್​ಕಪ್​​ಗೆ ಸೆಲೆಕ್ಟ್ ಆಗೋದು ಯಾಕೋ ಡೌಟ್ ಅನ್ಸುತ್ತೆ. ಬಟ್ ಐಪಿಎಲ್​ ಟಾಪ್​ ಕ್ಲಾಸ್ ಬ್ಯಾಟಿಂಗ್​ ಮಾಡಿದ್ರೆ ಅವರನ್ನೂ ಪಿಕ್ ಮಾಡಬಹುದೋ ಏನೊ.

ನಂ.5-ಗುಜರಾತ್ ಟೈಟಾನ್ಸ್

ಇನ್ನು ಗುಜರಾತ್ ಟೈಟಾನ್ಸ್​ನಲ್ಲಿ ಆಡ್ತಿರೋ ಶುಬ್ಮನ್ ಗಿಲ್ ಮಾತ್ರ ಅಪ್ಘಾನಿಸ್ತಾನ ಸೀರಿಸ್​ಗೆ ಸೆಲೆಕ್ಟ್ ಆಗಿದ್ದಾರೆ. ಟಿ-20 ವರ್ಲ್ಡ್​​ಕಪ್​ನಲ್ಲಿ ಆಡಬೇಕು ಅನ್ನೋದಾದ್ರೆ ಗಿಲ್ ಅಫ್ಘಾನ್ ವಿರುದ್ಧ ಮತ್ತು​ ಐಪಿಎಲ್​ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡ್ಲೇಬೇಕು. ಇನ್ನು ಮೊಹಮ್ಮದ್ ಶಮಿ ಕೂಡ ಗುಜರಾತ್ ಟೈಟಾನ್ಸ್ ಪರವೇ ಆಡ್ತಿರೋದು. ಶಮಿ ಕೂಡ ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಆಗೋ ಚಾನ್ಸ್ ಹೈಯೆಸ್ಟಿದೆ. ​​​

ನಂ.6-ಲಕ್ನೋ ಸೂಪರ್ ಜಯಾಂಟ್ಸ್

ಎಲ್​ಎಸ್​ಜಿನಲ್ಲಿ ಆಡ್ತಾ ಇರೋ ಏಕೈಕ ಪ್ಲೇಯರ್ ಈಗ ಅಫ್ಘಾನಿಸ್ತಾನ ವಿರುದ್ಧ ಆಡ್ತಾ ಇದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯಿ. ಆದ್ರೆ ಲಕ್ನೋ ಸೂಪರ್ ಜಯಾಂಟ್ಸ್ ಕೆಎಲ್ ರಾಹುಲ್​ರನ್ನ ಟಿ20 ಟೀಮ್​ನಿಂದ ಡ್ರಾಪ್ ಮಾಡಲಾಗಿದೆ. ಅದ್ಯಾಕೋ ಕೆಎಲ್ ರಾಹುಲ್​​ ಮುಂದಿನ ವರ್ಲ್ಡ್​ಕಪ್​ ಟೀಮ್​​ಗೂ ಸೆಲೆಕ್ಟ್ ಆಗೋದು ಡೌಟ್ ಅನ್ಸುತ್ತೆ. ಐಪಿಎಲ್​​ನಲ್ಲಿ ಆ ಲೆವೆಲ್​ಗೆ ಪರ್ಫಾಮೆನ್ಸ್​ ಕೊಟ್ರೆ ಸೆಲೆಕ್ಟ್ ಆಗಬಹುದಷ್ಟೇ. ಇಲ್ಲವಾದಕ್ಕೆ ಕೆಎಲ್​ ವರ್ಲ್ಡ್​ಕಪ್ ಟೀಮ್​ನಿಂದಲೂ ಡ್ರಾಪ್ ಆಗೋದು ಪಕ್ಕಾ.

ನಂ.7-ಸನ್​ ರೈಸರ್ಸ್ ಹೈದರಾಬಾದ್

ಇನ್​ ಎಸ್​ಆರ್​​ಎಚ್​​ನಲ್ಲಿ ಆಡ್ತಾ ಇರೋ ಪ್ಲೇಯರ್ಸ್​ಗಳ ಪೈಕಿ ಅಲ್ರೌಂಡರ್​ ವಾಷಿಂಗ್ಟನ್​ ಸುಂದರ್ ಮಾತ್ರ ಅಫ್ಘಾನಿಸ್ತಾನ ವಿರುದ್ಧದ ಟೀಂ ಇಂಡಿಯಾ ಸ್ಕ್ವಾಡ್​ನಲ್ಲಿದ್ದಾರೆ. ಟಿ-20 ವರ್ಲ್ಡ್​ಕಪ್​​ ವಾಷಿಂಗ್ಟನ್ ಸೆಲೆಕ್ಷನ್ ಬಗ್ಗೆ ಹೇಳೋದು ತುಂಬಾನೆ ಕಷ್ಟ. ಸದ್ಯದ ಸ್ವಿಚ್ಯುವೇಶನ್​​ನಲ್ಲಿ ಅವರನ್ನ ಪಿಕ್ ಮಾಡೋದು ಡೌಟೇ.

ನಂ.8- ಕಿಂಗ್ಸ್ 11 ಪಂಜಾಬ್

ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​​ನಲ್ಲಿ ಆಡೋ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ಜಿತೇಶ್ ಶರ್ಮಾ ಮತ್ತು ಪೇಸ್ ಬೌಲರ್​ ಅರ್ಶ್​​ದೀಪ್ ಸಿಂಗ್ ಅಫ್ಘಾನಿಸ್ತಾನ ವಿರುದ್ಧ ಸೀರಿಸ್​​ಗೆ ಸೆಲೆಕ್ಟ್ ಆಗಿದ್ದಾರೆ. ಪಂಜಾಬ್​ ಟೀಮ್​ನಲ್ಲಿರುವವರ ಪೈಕಿ ಇವರಿಬ್ಬರೇ ಸೆಲೆಕ್ಟ್ ಆಗಿರೋದು. ಈ ಪೈಕಿ ಅರ್ಶ್​ದೀಪ್​ ಸಿಂಗ್​ರನ್ನ ಟಿ20 ವರ್ಲ್ಡ್​​ಕಪ್ ಸ್ಕ್ವಾಡ್​ಗೆ ಸೆಲೆಕ್ಟ್ ಮಾಡುವ ಚಾನ್ಸ್ ಹೆಚ್ಚಿದೆ. ಬಟ್..ನೆನಪಿರಲಿ.. ಇನ್ಸ್​ ಅಗೈನ್ ಐಪಿಎಲ್​ ಪರ್ಫಾಮೆನ್ಸ್ ಮ್ಯಾಟರ್ಸ್.

ನಂ.9-ದೆಹಲಿ ಕ್ಯಾಪಿಟಲ್ಸ್

ದೆಹಲಿ ಕ್ಯಾಪಿಟಲ್ಸ್​ ಪರ ಆಡೋ ಮೂವರು ಪ್ಲೇಯರ್ಸ್​ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್​ಗೆ ಸೆಲೆಕ್ಟ್ ಆಗಿದ್ದಾರೆ. ಅಕ್ಸರ್​ ಪಟೇಲ್​, ಕುಲ್​ದೀಪ್ ಯಾದವ್ ಮತ್ತು ಪೇಸ್ ಬೌಲರ್ ಮುಕೇಶ್ ಕುಮಾರ್. ಈ ಮೂವರಿಗೂ ವರ್ಲ್ಡ್​​ಕಪ್​ ಟೀಮ್​ನಲ್ಲಿ ಚಾನ್ಸ್ ಇದೆ. ಐಪಿಎಲ್​ನಲ್ಲಿ ಟಾಪ್​ ಕ್ಲಾಸ್ ಪರ್ಫಾಮೆನ್ಸ್ ಕೊಟ್ರೆ ಮಾತ್ರ. ಬಟ್ ಈ ಮೂವರಿಗೂ ಹೈಯೆಸ್ಟ್ ಚಾನ್ಸ್ ಇದೆ. ಎಸ್ಪೆಷಲಿ, ಕುಲ್​ದೀಪ್ ಯಾದವ್ ಮತ್ತು ಮುಕೇಶ್​ ಕುಮಾರ್​ಗೆ.

ನಂ.10-ರಾಜಸ್ಥಾನ ರಾಯಲ್ಸ್

ಆರ್​ಆರ್​ಆರ್..ರಾಜಸ್ಥಾನ ರಾಯಲ್ಸ್​​ ಪರ ಆಡೋ ಮೂವರು ಪ್ಲೇಯರ್ಸ್​ಗಳು ಅಫ್ಘಾನಿಸ್ತಾನ ವಿರುದ್ಧದ ಸ್ಕ್ವಾಡ್​​ಗೆ ಸೆಲೆಕ್ಟ್ ಆಗಿದ್ದಾರೆ. ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಮೀಡಿಯಮ್ ಪೇಸ್​ ಬೌಲರ್​ ಆವೇಶ್ ಖಾನ್ ಮತ್ತು ಓಪನಿಂಗ್ ಬ್ಯಾಟ್ಸ್​ಮನ್​ ಯಶಸ್ವಿ ಜೈಸ್ವಾಲ್. ಈ ಮೂವರಿಗೂ ಅಷ್ಟೇ, ವರ್ಲ್ಡ್​​ಕಪ್​ ಟೀಂಗೆ ಸೆಲೆಕ್ಟ್ ಆಗೋ ಚಾನ್ಸ್ ಹೈಯೆಸ್ಟಿದೆ. ಬ್ರಾಕೆಟ್​​ನಲ್ಲಿ ಐಪಿಎಲ್​​ನಲ್ಲಿ ನಿರೀಕ್ಷೆಗೆ ತಕ್ಕಂತೆ ಪರ್ಫಾಮ್ ಮಾಡಿದ್ರೆ ಮಾತ್ರ.

Sulekha