3ನೇ TEST ಗೆಲ್ಲುತ್ತಾ ಗಿಲ್ ಪಡೆ? – 19 ಪಂದ್ಯ.. ಭಾರತ ಗೆದ್ದಿದ್ದೇ 3 ಸಲ!
ಲಾರ್ಡ್ಸ್ ಮೈದಾನ INDಗೆ ಸವಾಲೇನು?

3ನೇ TEST ಗೆಲ್ಲುತ್ತಾ ಗಿಲ್ ಪಡೆ? – 19 ಪಂದ್ಯ.. ಭಾರತ ಗೆದ್ದಿದ್ದೇ 3 ಸಲ!ಲಾರ್ಡ್ಸ್ ಮೈದಾನ INDಗೆ ಸವಾಲೇನು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೀತಾ ಇದೆ. ಜುಲೈ 10ರಿಂದ ಶುರುವಾಗಿರೋ ಈ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 387 ರನ್​ಗಳಿಗೆ ಆಲೌಟ್ ಆಯ್ತು. ಪ್ರಸೆಂಟ್ ಸಿಚುಯೇಷನ್ ನೋಡ್ತಿದ್ರೆ ಪಂದ್ಯವನ್ನ ಯಾರ್ ಬೇಕಿದ್ರೂ ಗೆಲ್ಲಬಹುದು. ಆದ್ರೆ ಅಂಕಿ ಅಂಶಗಳನ್ನ ತೆಗೆದು ನೋಡಿದ್ರೆ ಭಾರತಕ್ಕೆ ಈ ಮೈದಾನ ಕೂಡ ಕಬ್ಬಿಣದ ಕಡಲೆಯೇ ಆಗಿದೆ.

ಇದನ್ನೂ ಓದಿ : ವಿಂಬಲ್ಡನ್ ಅಂಗಳದಲ್ಲಿ ಕಮರಿದ ಜೊಕೋ ಕನಸು – ಸರ್ಬಿಯಾ ಟೆನ್ನಿಸ್ ದೊರೆಯನ್ನ ಸೋಲಿಸಿ ಫೈನಲ್‌ಗೇರಿದ ಯಾನಿಕ್ ಸಿನ್ನರ್

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರೋ ಮೂರನೇ ಪಂದ್ಯ ಉಭಯ ತಂಡಗಳ ಪಾಲಿಗೆ ತುಂಬಾನೇ ಮಹತ್ವದ್ದು. ಯಾಕಂದ್ರೆ ಈ ಮ್ಯಾಚ್ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. ಈಗಾಗ್ಲೇ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಎಡ್ಜ್​ಬಾಸ್ಟನ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಆಂಗ್ಲರನ್ನು 336 ರನ್​ಗಳಿಂದ ಸೋಲಿಸಿ ಟೀಮ್ ಇಂಡಿಯಾ ಆಟಗಾರರು ಹೊಸ ಇತಿಹಾಸ ಬರೆದಿದ್ದರು. ಸೋ ಸರಣಿ ಸಮಬಲ ಆಗಿದ್ದು ಮೂರನೇ ಪಂದ್ಯದ ರಿಸಲ್ಟ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ಈಗಾಗ್ಲೇ ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್ ಬೀಸಿದ್ದ ಆಂಗ್ಲ ಪಡೆ 387 ರನ್​ಗಳಿಗೆ ಆಲೌಟ್ ಆಗಿದೆ. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಅದ್ರಲ್ಲೂ ಲೆಫ್ಟ್ ಹ್ಯಾಂಡ್ ಇಂಜುರಿಯಲ್ಲೂ ರಿಷಭ್ ಪಂತ್ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ದು ವಿಶೇಷವಾಗಿತ್ತು

ಲಾರ್ಡ್ಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಇಂಗ್ಲೆಂಡ್ ತಂಡವೇ ಗೆಲ್ಲುವಂತ ಫೇವರೆಟ್ ಟೀಂ ಎನಿಸಿಕೊಂಡಿದೆ. ಯಾಕಂದ್ರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ ಮೂರು ಬಾರಿ ಮಾತ್ರ. 1932 ರಿಂದ ಟೀಮ್ ಇಂಡಿಯಾ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಪಂದ್ಯವಾಡುತ್ತಿದೆ. ಅಂದಿನಿಂದ ಇಂದಿನವರೆಗೆ 3 ಸಲ ಮಾತ್ರವೇ ಈ ಮೈದಾನದಲ್ಲಿ ಗೆಲ್ಲೋಕೆ ಸಾಧ್ಯವಾಗಿದೆ. ಲಾರ್ಡ್ಸ್ ಮೈದಾನದಲ್ಲಿ ಟೀಮ್ ಇಂಡಿಯಾ ಈವರೆಗೆ 19 ಪಂದ್ಯಗಳನ್ನಾಡಿದೆ. ಈ ವೇಳೆ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 4 ಮ್ಯಾಚ್​ಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ. ಇನ್ನುಳಿದ 12 ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವೇ ಗೆದ್ದು ಬೀಗಿದೆ. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ಲಾರ್ಡ್ಸ್ ಮೈದಾನದಲ್ಲಿ ಆಡಿದ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ 2 ರಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಈ ಸಲವೂ ಭಾರತವೇ ಮೇಲುಗೈ ಸಾಧಿಸೋ ವಿಶ್ವಾಸದಲ್ಲಿದೆ.

2021 ರಲ್ಲಿ ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು 151 ರನ್​ಗಳಿಂದ ಮಣಿಸಿ ಇತಿಹಾಸ ಬರೆದಿತ್ತು. ಅಂದು ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡಿದ್ದು ಕೆಎಲ್ ರಾಹುಲ್ ಹಾಗೂ ಮೊಹಮ್ಮದ್ ಸಿರಾಜ್. ರಾಹುಲ್ 134 ರನ್​ ಬಾರಿಸಿದರೆ, ಮೊಹಮ್ಮದ್ ಸಿರಾಜ್ 8 ವಿಕೆಟ್ ಕಬಳಿಸಿ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದರು. ಈ ಸರಣಿಯಲ್ಲೂ ರಾಹುಲ್ ಹಾಗೂ ಸಿರಾಜ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್ ಶತಕ ಬಾರಿಸಿ ಮಿಂಚಿದರೆ, ಮೊಹಮ್ಮದ್ ಸಿರಾಜ್ ಎಡ್ಜ್​ಬಾಸ್ಟನ್ ಟೆಸ್ಟ್​ನಲ್ಲಿ 7 ವಿಕೆಟ್ ಕಬಳಿಸಿದ್ರು.

ಲಾರ್ಡ್ಸ್ ನಲ್ಲಿ ಭಾರತದ ಗೆಲುವು!

1986ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಚೊಚ್ಚಲ ಗೆಲುವು

2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದಲ್ಲಿ 95 ರನ್ ಗಳ ಜಯ

2021ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ 151 ರನ್ ​ಗಳಿಂದ ಭರ್ಜರಿ ಗೆಲುವು

ಸದ್ಯ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಯಂಗ್ ಇಂಡಿಯಾ ಲಾರ್ಡ್ಸ್​ ಮೈದಾನದಲ್ಲಿ ಕಾನ್ಫಿಡೆನ್ಸ್ ಪ್ರದರ್ಶನ ನೀಡ್ತಿದೆ. ಈ ಪಂದ್ಯವನ್ನ ಗೆದ್ರೆ ಕ್ರಿಕೆಟ್ ಕಾಶಿಯಲ್ಲಿ ಭಾರತ ತಂಡಕ್ಕೆ ಇದು ನಾಲ್ಕನೇ ಗೆಲುವಾಗಲಿದೆ.

Shantha Kumari