ಅಭಿಷೇಕ್ ಓಕೆ.. ಗಿಲ್ ಯಾಕೆ? – BCCIಗೆ ವೈಸ್ ಕ್ಯಾಪ್ಟನ್ ತಲೆಬಿಸಿ
ಪ್ಲೇಯಿಂಗ್ 11 ರೆಡಿ.. ಹೇಗಿದೆ ಟೀಂ?

ಅಭಿಷೇಕ್ ಓಕೆ.. ಗಿಲ್ ಯಾಕೆ? – BCCIಗೆ ವೈಸ್ ಕ್ಯಾಪ್ಟನ್ ತಲೆಬಿಸಿಪ್ಲೇಯಿಂಗ್ 11 ರೆಡಿ.. ಹೇಗಿದೆ ಟೀಂ?

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಟಿ-20ಐ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ ಮೊದಲ ಪಂದ್ಯ ನಡೆಯಲಿದೆ. ಏಕದಿನ ಸರಣಿ ಸೋತಿರೋ ಭಾರತಕ್ಕೆ ಟಿ-20ಐ ಫಾರ್ಮೆಟ್​​ನ ಸ್ಟ್ಯಾಂಡರ್ಡ್ ಉಳಿಸಿಕೊಳ್ಳೋ ಜೊತೆಗೆ ಆಸೀಸ್ ವಿರುದ್ಧ ರಿವೇಂಜ್ ಟಾಸ್ಕ್ ಇದೆ. ಬಟ್ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋ ಕನ್ಫ್ಯೂಷನ್ ಇದೆ. ಅದ್ರಲ್ಲೂ ಶುಭ್​ಮನ್ ಗಿಲ್ಲೇ ಈಗ ದೊಡ್ಡ ತಲೆನೋವಾಗಿದ್ದಾರೆ.

ಇದನ್ನೂ ಓದಿ : 2027ರ ವಿಶ್ವಕಪ್ ಗೆದ್ದೇ ಗುಡ್ ಬೈ – 2 ವರ್ಷ HITಮ್ಯಾನ್ ಗಿಲ್ಲ ನಿವೃತ್ತಿ

ಇಂಡೋ-ಆಸಿಸ್​​ ನಡುವೆ ನಾಳೆಯಿಂದ ಚುಟುಕು ಸಮರ ಸ್ಟಾರ್ಟ್ ಆಗುತ್ತೆ. ಕ್ಯಾನ್​ಬೆರಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು ಏಕದಿನ ಸರಣಿ ಕೈ ಚೆಲ್ಲಿರೋ ಟೀಮ್​ ಇಂಡಿಯಾ, ಟಿ20 ಸರಣಿ ಗೆಲ್ಲಲೇಬೇಕಾದ ಪ್ರೆಶರ್​ನಲ್ಲಿದೆ. ಇನ್ನು ಮೊದ್ಲಿಗೆ ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಹೇಗಿರುತ್ತೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ

ಶುಭಮನ್ ಗಿಲ್

ಸೂರ್ಯಕುಮಾರ್ ಯಾದವ್

ತಿಲಕ್ ವರ್ಮಾ

ಶಿವಂ ದುಬೆ

ಸಂಜು ಸ್ಯಾಮ್ಸನ್

ಅಕ್ಷರ್ ಪಟೇಲ್

ಹರ್ಷಿತ್ ರಾಣಾ

ವರುಣ್ ಚಕ್ರವರ್ತಿ

ಜಸ್ಪ್ರೀತ್ ಬುಮ್ರಾ

ಅರ್ಶದೀಪ್ ಸಿಂಗ್

ಇದಿಷ್ಟು ಆಟಗಾರರು ಅಂತಿಮವಾಗಿ ಭಾರತದ ಪರ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡ್ಕೊಳ್ಳಬಹುದು. ಟಿ-20 ತಂಡ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿದ್ರೂ ಕೂಡ ಓಪನರ್ ಕೋಟಾನೇ ಮ್ಯಾನೇಜ್​ಮೆಂಟ್​ಗೆ ತಲೆಬಿಸಿ ತಂದಿಟ್ಟಿದೆ.

ವೈಟ್ ಬಾಲ್ ಫಾರ್ಮೆಟ್ ನಲ್ಲಿ ಡಲ್.. ತಂಡಕ್ಕೆ ಭಾರವಾದ್ರಾ ಗಿಲ್?

ಸದ್ಯ ಟೀಂ ಇಂಡಿಯಾದಲ್ಲಿ ಹುಡ್ಕಿದ್ರೆ ಆಲ್ ಫಾರ್ಮೆಟ್ ಪ್ಲೇಯರ್ಸ್ ಅಂತಾ ಸಿಗೋದು ಇಬ್ರೇ. ಅದ್ರಲ್ಲಿ ಒಬ್ರು ಶುಭ್​ಮನ್ ಗಿಲ್ ಮತ್ತೊಬ್ರು ಹರ್ಷಿತ್ ರಾಣಾ. ರಾಣಾ ಬಿಡಿ ಗೌತಮ್ ಗಂಭೀರ್ ಅವ್ರ ಕೃಪಾಕಟಾಕ್ಷದಿಂದ ಚಾನ್ಸ್ ಪಡ್ಕೊಳ್ತಾನೇ ಇದ್ದಾರೆ. ರಾಣಾ ವಿಚಾರ ಬೇಡ ಇಲ್ಲಿ. ಬಟ್ ಶುಭ್​ಮನ್ ಗಿಲ್ ಭಾರತದ ಪರ ಟಿ20ಐಗೆ ವೈಸ್ ಕ್ಯಾಪ್ಟನ್, ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಪ್ಯೂರ್ ಆಗಿ ಅವ್ರ ಪರ್ಫಾಮೆನ್ಸ್​ನಿಂದಲೇ ಚಾನ್ಸ್ ಗಿಟ್ಟಿಸಿಕೊಂಡ ಆಟಗಾರ. ಬಟ್ ಬ್ಯಾಡ್​ಲಕ್ ಏನಂದ್ರೆ ಇತ್ತೀಚಿನ ದಿನಗಳಲ್ಲಿ ಗಿಲ್​ಗೆ ರೆಡ್ ಬಾಲ್ ಫಾರ್ಮೆಟ್​ನಲ್ಲಿ ಸಿಗ್ತಿರೋ ಸಕ್ಸಸ್ ವೈಟ್ ಬಾಸ್ ಮ್ಯಾಚ್​ಗಳಲ್ಲಿ ಸಿಕ್ತಾ ಇಲ್ಲ. ಆಸ್ಟ್ರೇಲಿಯ ವಿರುದ್ಧದ ಟಿ-20 ಸರಣಿಗೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿದ್ರೆ ಶುಭ್​ಮನ್ ಗಿಲ್ ವೈಸ್ ಕ್ಯಾಪ್ಟನ್. ಇದೇ ಈಗ ಮ್ಯಾನೇಜ್​ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ಅವ್ರ ಫಾರ್ಮ್ ಕಂಪ್ಲೀಟ್ ಫ್ಲ್ಯಾಪ್ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರು ಒಡಿಐ ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 43 ರನ್.. ಅದೇ ರೋಹಿತ್ ಶರ್ಮಾ 202 ರನ್ ಪ್ಲಸ್ ಸರಣಿಯ ಹೈಯೆಸ್ಟ್ ರನ್ ಸ್ಕೋರರ್. ಇನ್ನು ಗಿಲ್ ಏಷ್ಯಾಕಪ್ ಟೂರ್ನಿಯಲ್ಲೂ ಸೌಂಡ್ ಮಾಡಿರ್ಲಿಲ್ಲ. ಟೂರ್ನಿಯ 7 ಪಂದ್ಯಗಳಲ್ಲಿ ಅಭಿಷೇಕ್ ಜೊತೆ ಓಪನರ್ ಆಗಿ ಕಣಕ್ಕಿಳಿದಿದ್ದ ಗಿಲ್ ಕಲೆ ಹಾಕಿದ್ದು 127 ರನ್ಸ್.. ಹೀಗಾಗಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅಂದ್ರೆ ಏಕದಿನ ಮತ್ತು ಟಿ20ಯಲ್ಲಿ ಗಿಲ್ ಸದ್ಯಕ್ಕೆ ಫಾರ್ಮ್‌ನಲ್ಲಿಲ್ಲ. ಹೀಗಿರುವಾಗ, ಅವರನ್ನು ಟಿ20 ಯಲ್ಲೂ ಓಪನರ್ ಆಗಿ ಕಳುಹಿಸೋದು ಹೇಗೆ ಅನ್ನೋ ಟೆನ್ಷನ್ ಶುರುವಾಗಿದೆ. ಉಳಿದಂತೆ ಏಷ್ಯಾಕಪ್​ನಲ್ಲಿದ್ದ ಪ್ಲೇಯಿಂಗ್ 11ನ ಟ್ರಿಕ್ಸ್​ನೇ ಕಂಟಿನ್ಯೂ ಮಾಡ್ಬೋದು. ಬಟ್ ಆಸ್ಟ್ರೇಲಿಯಾದ ಪ್ಲೇಯಿಂಗ್ 11 ಫಾರ್ಮೆಟ್​ ಬೇರೆ ಥರಾನೇ ಇದೆ.

ಪಂದ್ಯದಿಂದ ಪಂದ್ಯಕ್ಕೆ ಪ್ಲೇಯಿಂಗ್ 11 ಚೇಂಜ್!

ಇಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಆಟಗಾರರ ಇನ್ , ಔಟ್ ಗೇಮ್ ನಡೆದಿದೆ. ಒಂದಷ್ಟು ಆಟಗಾರರು ಎಲ್ಲಾ ಪಂದ್ಯಗಳಿಗೂ ಲಭ್ಯ ಇರೋದಿಲ್ಲ. ಶಾನ್ ಅಬಾಟ್ (ಮೊದಲ ಮೂರು ಪಂದ್ಯಗಳಿಗೆ ಮಾತ್ರ) ಇರ್ತಾರೆ. ಮಹ್ಲಿ ಬಿಯರ್ಡ್‌ಮನ್ (ಕೊನೆಯ 3 ಪಂದ್ಯಗಳಿಗೆ ಮಾತ್ರ), ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್ (ಕೊನೆಯ ಎರಡು ಪಂದ್ಯಗಳಿಗೆ), ನಾಥನ್ ಎಲ್ಲಿಸ್, ಜೋಶ್ ಹೇಝಲ್​ವುಡ್ (ಮೊದಲೆರಡು ಪಂದ್ಯಗಳಿಗೆ ಮಾತ್ರ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್ (ಕೊನೆಯ ಮೂರು ಪಂದ್ಯಗಳಿಗೆ ಮಾತ್ರ), ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ತನ್ವೀರ್ ಸಂಘ, ಆ್ಯಡಂ ಝಂಪಾ (ಮೊದಲ ಪಂದ್ಯಕ್ಕೆ ಇರೋದಿಲ್ಲ) ಹೀಗಾಗಿ ಆಸ್ಟ್ರೇಲಿಯಾ ಪರ ಒಂದೇ ಥರ ಪ್ಲೇಯಿಂಗ್ 11 ಇರುತ್ತೆ ಅನ್ನೋದನ್ನ ಜಡ್ಜ್ ಮಾಡೋಕೆ ಆಗಲ್ಲ.

ಟಿ-20ಐ ಫಾರ್ಮೆಟ್ ನಲ್ಲಿ ಭಾರತವೇ ಸೂಪರ್ ಹೀರೋ!

ಫೈನಲ್ಲಾಗಿ ಹೇಳೋದಾದ್ರೆ ಟಿ-20 ಫಾರ್ಮೆಟ್​ನಲ್ಲಿ ಆಸೀಸ್​ಗಿಂತ ಭಾರತವೇ ಸ್ಟ್ರಾಂಗ್ ಆಗಿದೆ. ಉಭಯ ತಂಡಗಳು ನಡುವಿನ ಮೊದಲ ಪಂದ್ಯ 2007ರಲ್ಲಿ ಡರ್ಬನ್‌ನಲ್ಲಿ ನಡೆದಿತ್ತು. ಟೀಮ್ ಇಂಡಿಯಾ ಈ ಪಂದ್ಯವನ್ನು 15 ರನ್‌ಗಳಿಂದ ಗೆದ್ದುಕೊಂಡಿತು. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು 32 ಪಂದ್ಯಗಳು ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ 20 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದ್ದರೇ ಆಸ್ಟ್ರೇಲಿಯಾ 11 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಇನ್ನು ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಹಾಗೇ ಭಾರತ  ಟಿ-20 ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನೇಕ ಐತಿಹಾಸಿಕ ದಾಖಲೆಗಳನ್ನು ಬರೆದಿದೆ. ಆಸೀಸ್​ ವಿರುದ್ಧ ಟಿ20 ಸ್ವರೂಪದಲ್ಲಿ ದೊಡ್ಡ ಸ್ಕೋರ್ (235-4) ಕಲೆಹಾಕಿದ ತಂಡವಾಗಿದೆ. ಜೊತೆಗೆ ಅತಿದೊಡ್ಡ ಗೆಲುವು (73 ರನ್‌) ಸಹ ದಾಖಲಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಈ ಹಿಂದಿನ 3 ಸರಣಿಯಲ್ಲಿ ಟೀಮ್​ ಇಂಡಿಯಾ ಗೆಲುವು ಸಾಧಿಸಿದೆ. ಎರಡೂ ತಂಡಗಳು 2023 – 24ರಲ್ಲಿ ಕೊನೆಯ ಬಾರಿಗೆ ಟಿ20 ಸರಣಿಯನ್ನು ಆಡಿದ್ದವು. ಇದರಲ್ಲಿ ಭಾರತ ಗೆದ್ದು ಸರಣಿ ವಶಪಡಿಸಿಕೊಂಡಿತ್ತು. ಅಂದ್ರೆ ಚುಟುಕು ಸಮರದಲ್ಲಿ ಭಾರತವೇ ಡಾಮಿನೇಟ್ ಮಾಡ್ತಿದೆ. ಹೀಗಾಗಿ ಈ ಸರಣಿಯಲ್ಲೂ ಗೆಲ್ಲೋ ಚಾನ್ಸಸ್ ಜಾಸ್ತಿ ಇದೆ.

Shantha Kumari