ಮೈದಾನದಲ್ಲೇ ಪ್ಯಾಂಟ್ ಬಿಚ್ಚಿದ ಆಕಾಶ್ ದೀಪ್ – ಆಂಗ್ಲರಿಗೆ ಅಪ್ಪನಂತೆ ಉತ್ತರಿಸ್ತಾರಾ ಪಂತ್?
ಕೂಲ್ ರಾಹುಲ್ ಮೇಲಿರೋ ಭಾರವೆಷ್ಟು?

ಮೂರನೇ ಟೆಸ್ಟ್‌ನ ನಾಲ್ಕನೇ ದಿನ ಟೀಮ್ ಇಂಡಿಯಾದ ಗೇಮ್ ಪ್ಲ್ಯಾನ್ ಪ್ರಕಾರ ಎಲ್ಲವೂ ಸರಾಗವಾಗಿಯೇ ಸಾಗಿತ್ತು. ಬ್ರಿಟಿಷ್ ಪಡೆಯ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದಿತ್ತು ನಮ್ಮ ಯಂಗ್ ಇಂಡಿಯಾ. ಇಂಗ್ಲೆಂಡ್‌ನ ಯಾವೊಬ್ಬ ಬ್ಯಾಟರ್ ಗೂ ಹಾಫ್ ಸೆಂಚುರಿ ಮಾಡೋಕೆ ಬಿಡದೇ ಪೆವಿಲಿಯನ್ ಪರೇಡ್ ಮಾಡ್ಸಿದ್ರು. ಆದ್ರೆ, ಲಾರ್ಡ್ಸ್‌ನ ಪಿಚ್ ಟೀಂ ಇಂಡಿಯಾದ ರೀತಿಯಲ್ಲಿ ಇಂಗ್ಲೆಂಡ್ ಟೀಂಗೂ ಚೆನ್ನಾಗಿಯೇ ಅರ್ಥವಾಗಿದೆ.. ಟಾರ್ಗೆಟ್ ಇನ್ನೂರಕ್ಕಿಂತ ಕಮ್ಮಿಯಿದ್ದರೂ ಸ್ಟೋಕ್ಸ್ ಪಡೆಯ ಉತ್ಸಾಹ ಕುಗ್ಗಿಲ್ಲ.. ಇಂಡಿಯಾ ಬ್ಯಾಟಿಂಗ್ ಬರ್ತಿದ್ದಂತೆ ಮೈಂಡ್ ಗೇಮ್ ಆಡೋಕೆ ಶುರು ಮಾಡಿದ್ದಾರೆ. ಆಂಗ್ಲರ ಆಟ್ಯಾಕ್ ಹೇಗಿತ್ತು?. ಟೀಮ್ ಇಂಡಿಯಾ ಸ್ಟ್ರಾಟರ್ಜಿ ಹೇಗಿತ್ತು?, ನೈಟ್ ವಾಚಮನ್ ಆಕಾಶ್ ದೀಪ್ ಕೊಟ್ಟ ಕೆಲಸ ನಿರ್ವಹಿಸಿದ್ರಾ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 3ನೇ TEST ಗೆಲ್ಲುತ್ತಾ ಗಿಲ್ ಪಡೆ? – 19 ಪಂದ್ಯ.. ಭಾರತ ಗೆದ್ದಿದ್ದೇ 3 ಸಲ!
ಲಾರ್ಡ್ಸ್ ಮೈದಾನದಲ್ಲಿ ಗೆಲುವಿನ ನಗಾರಿ ಭಾರಿಸಿ, ಇಂಗ್ಲಿಷರ ಕೊಬ್ಬಿಳಿಸಬೇಕು ಎಂಬ ಲೆಕ್ಕಾಚಾರದಲ್ಲೇನೋ ಶುಭ್‌ಮನ್ ಗಿಲ್ ಪಡೆ ಸಜ್ಜಾಗಿದೆ.. ಕೋಚ್ ಗೌತಮ್ ಗಂಭೀರ್ ಭರ್ಜರಿ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ.. ಆದ್ರೆ ಈಗ ಟೀಂ ಇಂಡಿಯಾದ ಗೆಲುವಿನ ಭಾರ ಕನ್ನಡಿಗ ಕೆ.ಎಲ್‌ರಾಹುಲ್ ಹೆಗಲೇರಿದೆ.. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಸೆಂಚುರಿ ಭಾರಿಸಿದ್ದ ಕೆಎಲ್‌ಗೆ ಈಗಾಗ್ಲೇ ಲಾರ್ಡ್ಸ್ ಪಿಚ್ ಸಂಪೂರ್ಣವಾಗಿ ಒಲಿದಿದೆ.. ಚೆಂಡು ಸಡನ್ನಾಗಿ ತೆಗೆದುಕೊಳ್ಳುವ ತಿರುವು, ಸ್ಲೋ ಮೂವ್‌ಮೆಂಟ್, ಪುಟಿದು ಬರುವ ರೀತಿ, ಬ್ಯಾಟ್ಸ್‌ಮನ್‌ಅನ್ನು ವಂಚಿಸುವ ಶೈಲಿ.. ಇವೆಲ್ಲದಕ್ಕೂ ಕೆ.ಎಲ್.ರಾಹುಲ್.. ಕಾದು ನೋಡಿ ಹೊಡಿ ಎಂಬ ತಂತ್ರವನ್ನು ಅನುಸರಿಸುತ್ತಿದ್ದಾರೆ.. ಬಾಲ್ ಸಂಪೂರ್ಣವಾಗಿ ಬ್ಯಾಕ್‌ಫೂಟ್‌ಗೆ ಬರೋವರೆಗೂ ವೈಯ್ಟ್ ಮಾಡಿಯೇ ಭಾರಿಸುತ್ತಿದ್ದಾರೆ.. ಆದ್ರೆ ಇದೇ ಶೈಲಿಯಲ್ಲಿ ಆಡುವ ಛಾತಿ ಹೊಂದಿದ್ದ ಇನ್ನೋರ್ವ ಕನ್ನಡಿಗ ಕರುಣ್ ನಾಯರ್ ಅವರನ್ನು ಬ್ರೈಡನ್ ಕಾರ್ಸೆಯ ಎಸೆತ ಸಂಪೂರ್ಣವಾಗಿ ವಂಚಿಸಿತ್ತು.. ಆಫ್‌ಸ್ಟಂಪ್‌ನಿಂದ ಹೊರಗೆ ಹೋಗುತ್ತೆ ಎಂದು ಲೀವ್ ಮಾಡಲು ಹೋಗಿದ್ದ ಎಸೆತ ನೇರವಾಗಿ ಬಂದು ಮಿಡ್ಲ್‌ಸ್ಪಂಪ್‌ಗೆ ಗುರಿಯಾಗಿಸಿ ಪ್ಯಾಡ್‌ಗೆ ಬಡಿದಿತ್ತು.. ಆಫ್‌ಸ್ಟಂಪ್ ಹೊರಗೆ ಪಿಚ್ ಆದ್ರೂ ಬಾಲ್ ಸಡನ್ ಇನ್‌ಸ್ವಿಂಗ್ ಮೂಲಕ, ಬ್ಯಾಟ್ಸ್‌ಮನ್ ಅನ್ನು ಸಂಪೂರ್ಣವಾಗಿ ದಿಕ್ಕುತಪ್ಪಿಸಿತ್ತು.. ಯಾವುದೇ ಪರಿಣಿತ ಬ್ಯಾಟ್ಸ್‌ಮನ್ ಕೂಡ ಅಂತಹ ಬಾಲ್‌ಗಳನ್ನು ಲೀವ್ ಮಾಡುವುದು ಸಹಜ.. ಆದ್ರೆ ಕರುಣ್‌ನನ್ನು ಇನ್‌ಸ್ವಿಂಗ್ ಬಲೆಯಲ್ಲಿ ಕೆಡವಿ ಪೆವಿಲಿಯನ್‌ಗೆ ಅಟ್ಟಿದ್ದರು ಕಾರ್ಸೆ..
ಇದಕ್ಕೂ ಮುಂಚಿತವಾಗಿ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ಬೆದರಿ ಬೆಂಡಾಗಿತ್ತು. ಇನ್ನಿಂಗ್ಸ್‌ನಲ್ಲಿ ಆಂಗ್ಲರ ಕಡೆಯಿಂದ ಜೋ ರೂಟ್ ಒಬ್ಬ 40 ರನ್ ಹೊಡೆದಿದ್ದು ಬಿಟ್ಟರೆ ಬೇರೆ ಯಾವೊಬ್ಬ ಬ್ಯಾಟರ್ ಕೂಡ 40 ರನ್ಗಳವೆರಗೂ ತಲುಪಲೇ ಇಲ್ಲ.. 192 ರನ್ಗೆ ಇಂಗ್ಲೆಂಡ್ ಪಡೆಯನ್ನ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಸಕ್ಸಸ್ ಆಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಸ್ಕೋರ್ ಸಮವಾಗಿದ್ದರಿಂದ ಭಾರತಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿನ ಟಾರ್ಗೆಟ್ ಕೇವಲ 193 ರನ್ ನಿಗದಿಯಾಗಿದೆ.. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ವಿನ್ ನಾವೇ ಅನ್ನೋ ರೀತಿ ಭಾರತೀಯರಲ್ಲೂ ವಿಶ್ವಾಸ, ಮೂಡಿತ್ತು. ಆದರೆ. ಟೀಮ್ ಇಂಡಿಯಾ ಬ್ಯಾಟಿಂಗ್ ಗೆ ಬಂದಾಗಲೇ ಶುರುವಾಗಿತ್ತು ಸೈಕಲಾಜಿಕಲ್ ಗೇಮ್. ಟೀಂ ಇಂಡಿಯಾ ಆಟಗಾರರು, ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ಅವರು ಬ್ಯಾಟಿಂಗ್ ಮಾಡುವಾಗ ಚೆನ್ನಾಗಿಯೇ ಆಟ ಆಡಿಸಿದ್ದರು.. ಸೇರಿಗೆ ಸವ್ವಾ ಸೇರು ಎಂಬಂತೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಮೈದಾನದಲ್ಲೇ ಮೈಂಡ್ ಗೇಮ್ ಮೂಲಕ ಕಟ್ಟಿಹಾಕುವ ಕೆಲಸದಲ್ಲಿ ಇಂಗ್ಲೀಷರು ನಿರತರಾಗಿದ್ದಾರೆ.. ಓವರ್ ಸ್ಟಾರ್ಟ್ ಮಾಡುವಾಗ್ಲೇ ಆಂಗ್ಲ ಪಡೆ ಮೈಂಡ್ ಗೇಮ್ ಆಡ್ಲೇ ಬೇಕು ಅನ್ನೋ ತರಾನೇ ಅಗ್ರೆಸ್ಸಿವ್ ಆಗಿಯೇ ಬೌಲಿಂಗ್ ಮಾಡಿದ್ರು. ಇದ್ರಿಂದಾಗಿಯೇ ಎರಡನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ಎಸೆದ ಶಾರ್ಟ್ ಬಾಲ್ ಅನ್ನು ಯಶಸ್ವಿ ಜೈಸ್ವಾಲ್ ಪುಲ್ ಮಾಡಲು ಹೊದಾಗ, ಬಾಲ್ ಟಾಪ್ ಎಡ್ಜ್ ಆಗಿ ಗಗನಕ್ಕೆ ಚಿಮ್ಮಿ ನಂತರ ಕೀಪರ್ ಕ್ಯಾಚ್ ಆಯ್ತು.. ಅಲ್ಲಿಂದ ನಂತರ ಇಂಗ್ಲೆಂಡ್ ಫೀಲ್ಡರ್ಸ್ ಕೂಡಾ ಒಂದೊಂದು ಬಾಲ್‌ಗೂ ಆಡ್ತಿದ್ದ ಡ್ರಾಮ ನೋಡಿದ್ರೆ ನಮ್ಮ ಕನ್ನಡಿಗ ಕೆ.ಎಲ್ ಕೂಲ್ ಕೂಲ್ ಆಗಿದ್ದಕ್ಕೆ ಸರಿಹೋಯ್ತು. ನಡುವೆ ಚಪ್ಪಾಳೆ ತಟ್ಟುತ್ತಿದ್ದ ಇಂಗ್ಲೆಂಡ್ ಕ್ಯಾಪ್ಟನ್ ಸ್ಟೋಕ್ಸ್ ಬಳಿಗೆ ಹೋಗಿ, ರಾಹುಲ್ ಒಂದಿಷ್ಟು ಮಾತಾಡಿದ್ರೂ, ಬ್ಯಾಟಿಂಗ್ ವಿಚಾರದಲ್ಲಿ ಮಾತ್ರ ತಮ್ಮ ತಾಳ್ಮೆಯನ್ನು ಕಳೆದುಕೊಂಡಿಲ್ಲ.. ರಾಹುಲ್ ಮತ್ತು ಕರುಣ್ ಒಳ್ಳೆಯ ಜೊತೆಯಾಟ ಸಾಗುತ್ತಿದ್ದಾಗಲೇ ಕಾರ್ಸೆ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರು.. ನಂತರ ಬ್ಯಾಟಿಂಗ್‌ಗೆ ಬಂದ ಟೀಂ ಇಂಡಿಯಾದ ಯಂಗ್ ಕ್ಯಾಪ್ಟನ್‌ಗಂತೂ ಇಂಗ್ಲೆಂಡ್ ಆಟಗಾರರು ಕೊಡಬಾರದ ಕಾಟ ಕೊಟ್ಟಿದ್ದಾರೆ.. ಕೂಲಾಗಿದ್ದ ಪ್ರಿನ್ಸ್ ಅನ್ನು ಕೆಣಕಿದ್ದಾರೆ.. ಪ್ರಿನ್ಸ್ ಒಮ್ಮೆ ಕ್ರೀಸ್‌ನಲ್ಲಿ ಸೆಟ್ಲ್ ಆದ್ರೂ ಅಂದ್ರೆ ಬಿಗ್ ಸ್ಕೋರ್ ಮಾಡೋದ್ರಲ್ಲಿ ಬ್ರಿಟಿಷ್ ಬೌಲರ್ಸ್‌ಗೆ ಯಾವುದೇ ಅನುಮಾನ ಇರಲೇ ಇಲ್ಲ.. ಹೀಗಾಗಿ ಏನೇ ಆದ್ರೂ ಗಿಲ್ ಎರಡಂಕಿ ತಲುಪಬಾರದು ಎಂಬ ಒಂದೇ ಒಂದು ಗುರಿ ಅವರಲ್ಲಿ ಇದ್ದಂತೆ ಕಾಣ್ತಿತ್ತು.. ಇಂಗ್ಲೆಂಡ್ ಟೀಂ ಆಟಗಾರರು ಕಿರಿಕಿರಿ ಜಾಸ್ತಿ ಮಾಡಿದಾಗ, ಭರ್ಜರಿ ಬೌಂಡರಿ ಮೂಲಕ ಉತ್ತರ ಕೊಟ್ಟಿದ್ದ ಗಿಲ್‌ಗೆ ಅಂಪೈರ್ ಕೊಟ್ಟ ಅನವಶ್ಯಕ ಔಟ್ ಕೂಡ, ತಾಳ್ಮೆ ಕೆಡುವಂತೆ ಮಾಡಿತ್ತು.. ಅಂಪೈರ್ ನೀಡಿದ್ದ ಔಟ್ ಡಿಆರ್‌ಎಸ್‌ನಲ್ಲಿ ನಾಟೌಟ್ ಆದ್ರೂ ನಂತರ ಕ್ರೀಸ್‌ನಲ್ಲಿ ಸೆಟ್ಲ್ ಆಗೋದಿಕ್ಕೆ ಗಿಲ್‌ಗೆ ಸಾಧ್ಯವಾಗಲಿಲ್ಲ.. ಬ್ರೈಡನ್ ಕಾರ್ಸೆಯ ಎಸೆತವನ್ನು ಲೆಗ್‌ಸೈಡ್‌ಗೆ ಆಡಲು ಮುಂದಾದ್ರೂ, ಬಾಲ್‌ನ ಲೈನ್ ಅಂದಾಜಿಸುವಲ್ಲಿ ವಿಫಲರಾದ್ರು.. ಬ್ಯಾಟನ್ನು ವಂಚಿಸಿದ ಬಾಲ್, ನೇರವಾಗಿ ಪ್ಯಾಡ್‌ಗೆ ಬಡಿದಿತ್ತು.. ಗಿಲ್ ರಿವೀವ್ ಕೇಳಿದ್ರೂ, ಮಿಡ್ಲ್ ಸ್ಟಂಪ್ ಮೇಲೆಯೇ ಬಾಲ್ ಇದ್ದಿದ್ದರಿಂದ, ಡಿಆರ್‌ಎಸ್ ಕೂಡ ವೇಸ್ಟ್ ಆಯ್ತು.. ಇದಾದ ನಂತರ ನೈಟ್ ವಾಚ್‌ಮನ್ ಆಗಿ ಆಕಾಶ್‌ದೀಪ್ ಅವರನ್ನು ಕೋಚ್ ಗಂಭೀರ್ ಕಳಿಸಿದ್ರು.. ಆಕಾಶ್ ದೀಪ್ ಸಾಧ್ಯವಾದಷ್ಟು ಟೈಂ ವೇಸ್ಟ್ ಮಾಡಲು ಪ್ರಯತ್ನಿಸಿದ್ದರು.. ರಾಹುಲ್‌ಗೆ ಬ್ಯಾಟಿಂಗ್ ಜಾಸ್ತಿ ಕೊಡದೇ ತಾನೇ ಆಟವಾಡಲು ಮುಂದಾದ್ರು.. ಆದ್ರೆ ಇಂಗ್ಲೆಂಡ್ ಆಟಗಾರರು ವಿಪರೀತ ಕಾಟ ಕೊಡುತ್ತಾ ಹೋಗಿದ್ದು ಮಾತ್ರವಲ್ಲದೆ, ಪ್ರೇಕ್ಷಕರು ಕೂಡ ಜೋರಾಗಿ ಚಪ್ಪಾಳೆ ತಟ್ಟುವಂತೆ ಕೈಸನ್ನೆ ಮಾಡ್ತಿದ್ದರು.. ಈ ನಡುವೆ ಬಾಲ್ ಆಕಾಶ್ ದೀಪ್ ಅವರ ತೊಡೆಗೆ ಬಡಿದಾಗ, ವೈದ್ಯರನ್ನು ಕರೆಸಿಕೊಂಡು, ಮೈದಾನದಲ್ಲೇ ಪ್ಯಾಂಟ್ ಬಿಚ್ಚಿ ನೋವಿಗೆ ಸ್ಪ್ರೇ ಹಾಕಿಸಿಕೊಂಡ್ರು.. ಇಷ್ಟೆಲ್ಲದರ ನಡುವೆ, ಇಂಗ್ಲೆಂಡ್ ಆಟಗಾರರು ಮಾತ್ರ ಕೊಡಬಾರದ ಕಾಟ ಕೊಡ್ತಾನೇ ಇದ್ದಾರೆ.. ಅವರ ಮೈಂಡ್ ಗೇಮ್‌ನಿಂದಲೋ ಏನೋ, ನಾಲ್ಕನೇ ದಿನದ ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಆಕಾಶ್ ದೀಪ್ ಅಂದಾಜಿಸಲು ಸಾಧ್ಯವಾಗದ ರೀತಿಯಲ್ಲಿ ಬೆನ್ ಸ್ಟೋಕ್ಸ್ ಕ್ಲೀನ್ ಬೌಲ್ಡ್ ಮಾಡಿದ್ದಾರೆ.. ಇದರೊಂದಿಗೆ ನಾಲ್ಕನೇ ದಿನದಾಟ ಮುಗಿದಾಗ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿದೆ..
ಟೀಂ ಇಂಡಿಯಾದ ಗೆಲುವಿನ ಸೂತ್ರ ಈಗ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರನ್ನು ಬಲವಾಗಿ ಅವಲಂಬಿಸಿದೆ.. ರಾಹುಲ್ ಕೂಲ್ ಆಗಿಯೇ ಇಂಗ್ಲೆಂಡ್ ಆಟಗಾರರ ರಣತಂತ್ರವನ್ನು ಎದುರಿಸುತ್ತಿದ್ದಾರೆ.. ರಿಷಬ್ ಪಂತ್‌ನನ್ನು ಕೆಣಕೋದಿಕ್ಕೆ ಹೋದ್ರೆ ಅವರ ಅಪ್ಪನಂತೆ ಉತ್ತರ ಕೊಡೋದಿಕ್ಕೆ ಸಮರ್ಥರಿದ್ದಾರೆ.. ಬಾಯಿ ಮಾತಿನ ಮೂಲಕ ರಿಷಬ್ ಪಂತ್‌ರನ್ನು ಕಟ್ಟಿಹಾಕೋದು ಇಂಗ್ಲೆಂಡ್ ಆಟಗಾರರಿಗೆ ಜನ್ಮದಲ್ಲಿ ಸಾಧ್ಯವಿಲ್ಲ.. ಹೀಗಾಗಿ ಪಂತ್ ಮತ್ತು ರಾಹುಲ್ ಜೋಡಿ ಟೀಂ ಇಂಡಿಯಾದವನ್ನು ಗೆಲುವಿನ ದಡ ಸೇರಿಸುತ್ತೆ ಎಂಬ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು.

ನೋಡಿರಿ

