ಇಂಗ್ಲೆಂಡ್ ಮೋಸದಾಟ ಕಂಟಿನ್ಯೂ! – ಕುಲ್ ದೀಪ್ ಬ್ಲಾಕ್..RO ಶಾಕ್?
ಬೆನ್ ಸ್ಟೋಕ್ಸ್.. ಒಬ್ಬ ಗ್ರೇಟ್ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ವನ್ ಆಫ್ ದಿ ಬೆಸ್ಟ್ ಆಲ್ರೌಂಡರ್..ಅದ್ರಲ್ಲೂ ಅನುಮಾನವೇ ಇಲ್ಲ.. ಇಂಗ್ಲೆಂಡ್ ಕ್ರಿಕೆಟ್ನ ದಿಕ್ಕೇ ಬದಲಿಸಿದ ಪ್ಲೇಯರ್ ಅನ್ನೋ ಬಗ್ಗೆಯೂ ಪ್ರಶ್ನೆ ಮಾಡೋದಿಲ್ಲ. ವರ್ಲ್ಡ್ ಕ್ರಿಕೆಟ್ನ ಅಸೆಟ್..ಖಂಡಿತಾ ಹೌದು.. ಬಟ್.. ಎಥಿಕ್ಸ್ ವಿಚಾರಕ್ಕೆ ಬಂದ್ರೆ, ಪ್ರಾಮಾಣಿಕತೆ, ಸ್ಪಿರಿಟ್ ಆಫ್ ದಿ ಗೇಮ್, ಫ್ಯಾರ್ಪ್ಲೇ ಈ ಎಲ್ಲಾ ಪದಗಳು ಬೆನ್ಸ್ಟೋಕ್ಸ್ಗೆ ಸೂಟ್ ಆಗೋದೆ ಇಲ್ಲ. ಇದ್ಯಾವುದ್ರ ಬಗ್ಗೆಯೂ ಬೆನ್ಸ್ಟೋಕ್ಸ್ ತಲೆಕೆಡಿಸಿಕೊಳ್ಳೋದಿಲ್ಲ.. ಹೇಗಾದ್ರೂ ಮಾಡಿ ಮ್ಯಾಚ್ ಗೆಲ್ಬೇಕು ಅಷ್ಟೇ..ಅಂದು 2019ರ ವರ್ಲ್ಡ್ಕಪ್ ಫೈನಲ್ನಲ್ಲೇ ತಾವೇನು ಅನ್ನೋದನ್ನ ಬೆನ್ ಸ್ಟೋಕ್ಸ್ ಜಗತ್ತಿಗೇ ಬಯಲು ಮಾಡಿದ್ರು. ಅವರ ಚೀಟಿಂಗ್ ಚಾಳಿ ಈಗ ಭಾರತದ ವಿರುದ್ಧದ ಸೀರಿಸ್ನವರೆಗೂ ಹಾಗೆಯೇ ಕಂಟಿನ್ಯೂ ಆಗ್ತಾನೆ ಬಂದಿದೆ. ಔಟ್ ಆದ್ರೂ ನಾಟೌಟ್ ಅಂತಾರೆ.. ನಾಟೌಟ್ ಆದ್ರೆ ಔಟ್ ಅಂತಾ ವಾದ ಮಾಡ್ತಾರೆ. ಇದ್ರ ಮೇಲಿಂದ ಪಿಚ್ ಸರಿ ಇಲ್ಲ.. ಇಂಥಾ ಪಿಚ್ ನೋಡಿಯೇ ಇಲ್ಲ ಅಂತಾ ಕಾಮೆಂಟ್ಸ್ ಬೇರೆ. 4ನೇ ಟೆಸ್ಟ್ನ ಡೇ-2 ಅಂತೂ ಬೆನ್ಸ್ಟೋಕ್ಸ್ ಮಾತ್ರವಲ್ಲ ಇಡೀ ಇಂಗ್ಲೆಂಡ್ ಟೀಮ್ ಎಕ್ಸ್ಪೋಸ್ ಆಗಿದೆ. ಹಾಗೆಯೇ ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಕೊಲ್ಯಾಪ್ಸ್ ಆಗಿರೋ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಬಡತನದಲ್ಲಿ ಬದುಕಿ ಕ್ರಿಕೆಟ್ ಜಗತ್ತು ಬೆಳಗಲು ಬಂದ ಆಕಾಶದೀಪ – ಚೊಚ್ಚಲ ಪಂದ್ಯದಲ್ಲೇ ಸ್ಟಾರ್ ಆದ ಆಕಾಶ್ದೀಪ್
ಫಸ್ಟ್ ಬೆನ್ಸ್ಟೋಕ್ಸ್ರನ್ನ ರೋಸ್ಟ್ ಮಾಡೋಣ.. 4ನೇ ಟೆಸ್ಟ್ನ ಎರಡನೇ ದಿನ ಇಂಗ್ಲೆಂಡ್ 353 ರನ್ಗೆ ಆಲೌಟ್ ಆಗುತ್ತೆ. ಭಾರತ ಬ್ಯಾಟಿಂಗ್ ಶುರು ಮಾಡುತ್ತೆ. ಈ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ಗೆ ಬಿಸಿ ಮುಟ್ಟಿಸಿದ್ದು ಅಂದ್ರೆ ಅದು ಯಶಸ್ವಿ ಜೈಸ್ವಾಲ್. ಆರಂಭದಿಂದಲೇ ಜೈಸ್ವಾಲ್ ತುಂಬಾ ಚೆನ್ನಾಗಿ ಆಡ್ತಿದ್ರು. ಆದ್ರೆ ಮ್ಯಾಚ್ನ 20ನೇ ಓವರ್ ವೇಳೆ ಆಲಿ ರಾಬಿನ್ಸನ್ ಬಾಲ್ ಎಸೀತಾರೆ. ಯಶಸ್ವಿ ಜೈಸ್ವಾಲ್ ಕವರ್ ಡ್ರೈವ್ ಹೊಡಿಯೋಕೆ ಮುಂದಾಗ್ತಾರೆ. ಬಟ್ ಬಾಲ್ ಬ್ಯಾಟ್ನ ಎಡ್ಜಿಗೆ ಜಸ್ಟ್ ಟಿಪ್ ಆಗಿ ಕೀಪರ್ ಕೈ ಸೇರುತ್ತೆ. ಡಿಸೀಶನ್ ಥರ್ಡ್ ಅಂಪೈರ್ಗೆ ಹೋಗುತ್ತೆ. ಆಗ ರಿಪ್ಲೈ ನೋಡುತ್ತಲೇ ಥರ್ಡ್ ಅಂಪೈರ್ ಫೈನಲ್ ಡಿಸೀಶನ್ ಕೊಡೋ ಮುನ್ನವೇ ಬೆನ್ ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ಪ್ಲೇಯರ್ಸ್ ಸೆಲೆಬ್ರೇಟ್ ಮಾಡ್ತಾರೆ. ಅಂದ್ರೆ ಬಾಲ್ ಬ್ಯಾಟ್ಗೆ ಟಿಪ್ ಆಗಿ ಕೀಪರ್ ಕ್ಯಾಚ್ ಆಗಿದೆ. ಡೇಂಜರಸ್ ಜೈಸ್ವಾಲ್ ಗಾನ್ ಅಂತಾ ಫುಲ್ ಖುಷಿಯಾಗ್ತಾರೆ. ಅದ್ರೆ ಥರ್ಡ್ ಅಂಪೈರ್ ಮಾತ್ರ ಕೂಡಲೇ ಡಿಸೀಶನ್ ಕೊಟ್ಟಿಲ್ಲ. ಬಾಲ್ ಬ್ಯಾಟ್ಗೆ ಟಿಪ್ ಆಗಿದ್ದೇನೋ ನಿಜ. ಆದ್ರೆ ಇಂಗ್ಲೆಂಡ್ ಕೀಪರ್ ಅಲ್ಲಿ ಕ್ಯಾಚ್ ಹಿಡಿದೇ ಇಲ್ಲ. ಕೀಪರ್ ಗ್ಲೌಸ್ ಸೇರೋ ಮುನ್ನವೇ ಬಾಲ್ ಪಿಚ್ ಆಗಿತ್ತು. ರಿಪ್ಲೇನಲ್ಲಿ ಕ್ಲೀಯರ್ ಆಗಿ ಕಾಣಿಸ್ತಿತ್ತು. ಕೀಪರ್ ಗ್ಲೌಸ್ ಬುಡದಲ್ಲೇ ಬಾಲ್ ನೆಲಕ್ಕೆ ಪಿಚ್ ಆಗಿ ಬಳಿಕ ಕ್ಯಾಚ್ ಮಾಡಿದ್ದಾರೆ. ಕ್ರಿಕೆಟ್ ರೂಲ್ಸ್ ಗೊತ್ತಿರೋರು ಯಾರು ಬೇಕಾದ್ರೂ ಅದು ನಾಟೌಟ್ ಅಂತಾರೆ. ಅಫ್ಕೋಸ್ ಥರ್ಡ್ ಅಂಪೈರ್ ಕೂಡ ನಾಟೌಟ್ ಡಿಸೀಶನ್ ಕೊಡ್ತಾರೆ. ಆದ್ರೆ ಬೆನ್ಸ್ಟೋಕ್ಸ್ ಸೇರಿದಂತೆ ಇಂಗ್ಲೆಂಡ್ ಪ್ಲೇಯರ್ಸ್ ಮಾತ್ರ ಫುಲ್ ಶಾಕ್ ಆಗಿ ಎಕ್ಸ್ಪ್ರೆಸ್ ಮಾಡ್ತಾರೆ. ಏನಿದು ಡಿಸೀಶನ್ ಔಟ್ ಆಗಿದ್ದನ್ನ ನಾಟೌಟ್ ಅಂತಾ ಕೊಟ್ರಲ್ಲಾ ಎಂಬಂತೆ ಎಕ್ಸ್ಪ್ರೆಶನ್ ಕೊಡ್ತಾರೆ, ಬೈದಾಡ್ತಾರೆ. ಥರ್ಡ್ ಅಂಪೈರ್ ಫೈನಲ್ ಡಿಶೀಷನ್ ಕೊಡೋ ಮೊದಲೇ ಔಟ್ ಅಂತಾ ಸೆಲೆಬ್ರೇಟ್ ಮಾಡಿದ್ರಲ್ಲಾ. ಆದ್ರೆ ಅಂಪೈರ್ ನಾಟೌಟ್ ಕೊಟ್ಮೇಲೆ ಔಟ್ ಎಂಬಂತೆಯೇ ಒಂದಷ್ಟು ಪೋಸ್ ಕೊಡ್ಬೇಕಲ್ಲ. ಯಾಕಂದ್ರೆ ಇಂಗ್ಲೆಂಡ್ ಪ್ಲೇಯರ್ಸ್ಗಳು ರಿಪ್ಲೇನಲ್ಲಿ ಬ್ಯಾಟ್ಗೆ ಬಾಲ್ ಟಿಪ್ ಆಗಿರೋದನ್ನ ನೋಡಿಯೇ ಫುಲ್ ಸೆಲೆಬ್ರೇಟ್ ಮಾಡಿದ್ರು. ಹೀಗಾಗಿ ಕ್ಯಾಚ್ ಹಿಡಿಯೋ ಮುನ್ನ ಬಾಲ್ ಬೌನ್ಸ್ ಆಗಿದ್ರೂ ಅದನ್ನ ಒಪ್ಪಿಕೊಳ್ಳೋಕೆ ಅವರಿಗೆ ಕಷ್ಟ ಆಗಿದೆ ಅಷ್ಟೇ.
ಆ್ಯಕ್ಚುವಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಪೋಕ್ಸ್ಗೆ ಕ್ಯಾಚ್ ಅಲ್ಲ ಅಂತಾ ಗೊತ್ತಿದ್ರೂ ಅವರು ಔಟ್ಗೆ ಅಪೀಲ್ ಮಾಡಿದ್ರು. ಟೋಟಲಿ ಇಡೀ ಇಂಗ್ಲೆಂಡ್ ಟೀಮ್ ಸ್ಪಿರಿಟ್ ಆಫ್ ಕ್ರಿಕೆಟ್ನ್ನ ಡಸ್ಟ್ಬಿನ್ಗೆ ಎಸೆದೇ ಗ್ರೌಂಡ್ಗೆ ಎಂಟ್ರಿಯಾಗಿದ್ದಾರೆ. ಆದ್ರೆ ನಮ್ಮ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಸ್ಲಿಪ್ನಲ್ಲಿ ಇಂಥದ್ದೇ ಕ್ಲೋಸ್ ಕ್ಯಾಚ್ ಹಿಡಿದಿದ್ರು. ಆದ್ರೆ ಕ್ಯಾಚ್ ಮಾಡೋ ಮುನ್ನವೇ ಬಾಲ್ ನೆಲಕ್ಕೆ ಬೌನ್ಸ್ ಆಗಿತ್ತು. ಹೀಗಾಗಿ ರೋಹಿತ್ ಶರ್ಮಾರೇ ನಾಟೌಟ್ ಎಂಬಂತೆ ಎಕ್ಸ್ಪ್ರೆಶನ್ ಕೊಡ್ತಾರೆ. ಇದನ್ನೇ ನೋಡಿ ಸ್ಪಿರಿಟ್ ಆಫ್ ಕ್ರಿಕೆಟ್ ಅನ್ನೋದು. ಹೀಗಾಗಿ ಇಂಗ್ಲೆಂಡ್ ಪ್ಲೇಯರ್ಸ್ಗಳ ಬಿಹೇವಿಯರ್ನ್ನ ಇಂಡಿಯನ್ ಫ್ಯಾನ್ಸ್ ಫುಲ್ ಟ್ರೋಲ್ ಮಾಡಿದ್ದಾರೆ.
ಈಗ ಫಸ್ಟ್ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಚಾರಕ್ಕೆ ಬರೋದಾದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತೆ ಜೇಮ್ಸ್ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಫಸ್ಟ್ ಇನ್ನಿಂಗ್ಸ್ನಲ್ಲಿ ಕೇವಲ ಎರಡು ರನ್ಗೆ ಔಟಾದ್ರು. ಬಟ್ ಎರಡನೇ ವಿಕೆಟ್ ಯಶಸ್ವಿ ಜೈಸ್ವಾಲ್ ಮತ್ತು ಶುಬ್ಮನ್ ಗಿಲ್ ನಡುವೆ ಒಳ್ಳೆಯ ಪಾರ್ಟ್ನರ್ಶಿಪ್ ಬಂತು. ಅದ್ರಲ್ಲೂ ಯಶಸ್ವಿ ಜೈಸ್ವಾಲ್ ಅಂತೂ ಇಂಗ್ಲೆಂಡ್ ಬೌಲರ್ಸ್ಗಳ ಮೇಲಿನ ಸವಾರಿ ಮುಂದುವರಿಸಿದ್ದಾರೆ. ಈ ಸರಣಿಯಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಜೈಸ್ವಾಲ್ಗೆ ಸಿಗಬಹುದು ಅನ್ಸುತ್ತೆ. 4ನೇ ಮ್ಯಾಚ್ನ ಫಸ್ಟ್ ಇನ್ನಿಂಗ್ಸ್ನಲ್ಲಿ 117 ಬಾಲ್ಗಳಲ್ಲಿ 73 ರನ್ ಹೊಡೆದ್ರು. ಎಂಟು ಬೌಂಡರಿ, ಒಂದು ಸಿಕ್ಸರ್. ಕಳೆದ ಮೂರು ಮ್ಯಾಚ್ಗಳಲ್ಲಿ ಜೈಸ್ವಾಲ್ ಬ್ಯಾಟಿಂಗ್ಗೆ ಕಂಪೇರ್ ಮಾಡಿದ್ರೆ ಈ ಮ್ಯಾಚ್ನಲ್ಲಿ ಅವರು ಮೋಡ್ ಸ್ವಲ್ಪ ಚೇಂಜ್ ಮಾಡಿದ್ದಾರೆ. ಅಫ್ಕೋಸ್ ರೋಹಿತ್ ಶರ್ಮಾ ಬೇರೆ ಬೇಗನೆ ಔಟಾಗಿದ್ರೂ. ಆದ್ರೂ ಎಂದಿನಂತೆ ತುಂಬಾ ಆಗ್ರೆಸಿವ್ ಆಗಿ ಆಡೋಕೆ ಹೋಗಿರಲಿಲ್ಲ. ಕಳೆದ ಮ್ಯಾಚ್ಗಳಲ್ಲೆಲ್ಲಾ ಮೇಲಿಂದ ಮೇಲೆ ಸಿಕ್ಸರ್ ಹೊಡೆದಿದ್ರು. ಆದ್ರೆ ಈ ಬೌಂಡರಿ, ರನ್ನಿಂಗ್ ಬಿಟ್ವೀನ್ ದಿ ವಿಕೆಟ್ನಲ್ಲೇ ಡೀಲ್ ಮಾಡಿದ್ರು. ಈ ನಡುವೆ ಶುಬ್ಮನ್ ಗಿಲ್ 38 ರನ್ಗೆ ಔಟಾಗ್ತಾರೆ. ಎಲ್ಬಿಡ್ಬ್ಲು.. ಅಂಪೈರ್ಸ್ ಕಾಲ್ನಿಂದಾಗಿ ಡಿಆರ್ಎಸ್ ಇಂಗ್ಲೆಂಡ್ ಫೇವರ್ ಆಗುತ್ತೆ. ಆ್ಯಕ್ಚುವಲಿ ಫಸ್ಟ್ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡೋವಾಗ, ಈ ಹಿಂದಿನ ಮ್ಯಾಚ್ಗಳಲ್ಲೂ ಆಗಿತ್ತು. ಇದೇ ಡಿಆರ್ಎಸ್ ಟೀಂ ಭಾರತದ ಫೇವರ್ ಆಗಿ ಬಂದಾಗ ಬೆನ್ ಸ್ಟೋಕ್ಸ್ ಅಂಪೈರ್ಸ್ ಕಾಲ್ ಸಿಸ್ಟಮ್ ಸರಿ ಇಲ್ಲ. ನಾಟೌಟ್ ಆದ್ರೂ ಅಂಪೈರ್ಸ್ ಕಾಲ್ನಿಂದಾಗಿ ನಮ್ಮ ಬ್ಯಾಟ್ಸ್ಮನ್ಗಳು ಔಟಾಗಿದ್ದಾರೆ ಅಂತೆಲ್ಲಾ ಕಾಮೆಂಟ್ ಮಾಡಿದ್ರು. ಆದ್ರೀಗ ಶುಬ್ಮನ್ ಗಿಲ್ ವಿಚಾರದಲ್ಲಿ ಇದೇ ಅಂಪೈರ್ಸ್ ಕಾಲ್ ರೂಲ್ಸ್ನಿಂದಾಗಿ ಡಿಸೀಶನ್ ಇಂಗ್ಲೆಂಡ್ ಫೇವರ್ ಆಗಿದೆ. ಈಗ ಅಂಪೈರ್ಸ್ ಕಾಲ್ ಬಗ್ಗೆ ಬೆನ್ಸ್ಟೋಕ್ಸ್ ಏನಂತಾರೆ ಹಾಗಿದ್ರೆ? ಬೆನ್ ಸ್ಟೋಕ್ಸ್ಗೆ ಇಲ್ಲಿ ಇನ್ನೊಂದು ಕ್ವಶ್ಚನ್ ಕೂಡ ಇದೆ. NEXT ಆ ಬಗ್ಗೆಯೂ ಹೇಳ್ತೀನಿ. ಅದಕ್ಕೂ ಮುನ್ನ ಟೀಂ ಇಂಡಿಯಾದ ವಿಕೆಟ್ಗಳು ಇದ್ದಕ್ಕಿದ್ದಂತೆ ಕೊಲ್ಯಾಪ್ಸ್ ಆಗಿರೋ ವಿಚಾರ ಇದೆ. ಗಿಲ್ ಔಟಾದ ಬಳಿಕ ನಮ್ಮ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ಗಳು ಪರೇಡ್ ಮಾಡಿದ್ರು. ರಜತ್ ಪಾಟೀದಾರ್, ರವೀಂದ್ರ ಜಡೇಜ, ಸರ್ಫರಾಜ್ ಖಾನ್ ನಂತರ ಆರ್.ಅಶ್ವಿನ್ ಎಲ್ಲಾ ಹಾಗೆ ಬಂದು ಹೀಗೆ ಹೋದ್ರು. ಇಲ್ಲಿ ರಜತ್ ಪಾಟೀದಾರ್ ನೋಡಿ, ಮೇಲಿಂದ ಮೇಲೆ ಅವಕಾಶ ಕೊಟ್ರೂ ಫ್ಲಾಪ್ ಶೋ ಕಂಟಿನ್ಯೂ ಮಾಡಿದ್ದಾರೆ. ಇಂಗ್ಲೆಂಡ್ ಸೀರಿಸ್ನಲ್ಲಿ ಅವರ ಎವರೇಜ್ 12.60. ಕುಲ್ದೀಪ್ ಯಾದವ್ ಮತ್ತು ಆರ್. ಅಶ್ವಿನ್ ಬ್ಯಾಟಿಂಗ್ ಎವರೇಜ್ ಕೂಡ ಇದಕ್ಕಿಂತ ಹೆಚ್ಚಿದೆ. ಈ ಸೀರಿಸ್ನಲ್ಲಿ ರಜತ್ ಸ್ಕೋರ್ 9, 32, 0, 5, 17. ಸರ್ಫರಾಜ್ ಖಾನ್ಗಿಂತಲೂ ಮೊದಲೇ ಡೆಬ್ಯೂ ಆದ್ರೂ ಈ ಸೀರಿಸ್ನಲ್ಲಿ ಒಂದು ಹಾಫ್ ಸೆಂಚೂರಿ ಕೂಡ ಹೊಡೆದಿಲ್ಲ. NEXT ಮ್ಯಾಚ್ಗೆ ರಜತ್ ಪಾಟೀದಾರ್ರನ್ನ ಡ್ರಾಪ್ ಮಾಡಿದ್ರೂ ಆಶ್ಚರ್ಯ ಇಲ್ಲ. ಇನ್ನೊಂದು ವಿಚಾರ ಏನಂದ್ರೆ ರಜತ್ ಈ ಬಾರಿಯೂ ಆರ್ಸಿಬಿಯಲ್ಲಿ ಆಡ್ತಾ ಇದ್ದಾರೆ. ಸೋ ಅವರ ಫಾರ್ಮ್ ಬಗ್ಗೆ ಆರ್ಸಿಬಿ ಕೂಡ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ನಿಮಗೆ ಗೊತ್ತಿರೋ ಹಾಗೆ ಆರ್ಸಿಬಿ ಬ್ಯಾಟಿಂಗ್ ಲೈನ್ಅಪ್ನಲ್ಲಿ ರಜತ್ ಪಾಟೀದಾರ್ ಕೂಡ ಮೇನ್ ರೋಲ್ನಲ್ಲಿದ್ದಾರೆ. ಓಕೆ ಏಳು ವಿಕೆಟ್ ಕಳೆದುಕೊಂಡು ಟ್ರಬಲ್ನಲ್ಲಿರೋ ಟೀಂ ಇಂಡಿಯಾಗೆ ವಿಕೆಟ್ ಕೀಪರ್ ಧ್ರುವ್ ಜ್ಯುರೆಲ್ ಮತ್ತು ಕುಲ್ದೀಪ್ ಯಾದವ್ ಸ್ವಲ್ಪ ನೆರವಾಗಿದ್ದಾರೆ. ಅದ್ರಲ್ಲೂ ಕುಲ್ದೀಪ್ ಯಾದವ್ ಬ್ಯಾಟಿಂಗ್ ಮಾಡಿದ ರೀತಿ ನಿಜಕ್ಕೂ ಇಂಪ್ರೆಸಿವ್. ಡೇ-1 ತುಂಬಾ ಸೀರಿಯಸ್ ಆಗಿ, ಪ್ರೊಫೆಷನಲ್ ಬ್ಯಾಟ್ಸ್ಮನ್ ರೀತಿಯೇ ಬ್ಯಾಟಿಂಗ್ ಮಾಡಿದ್ದಾರೆ. 72 ಬಾಲ್ ಫೇಸ್ ಮಾಡಿ 17 ರನ್ ನಾಟೌಟ್. ರೀಯಲಿ ಗುಡ್ ಬ್ಯಾಟಿಂಗ್. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಕುಲ್ದೀಪ್ ಯಾದವ್ ಕೆಲವು ಹಾಫ್ ಸೆಂಚೂರಿ, ಒಂದು ಸೆಂಚೂರಿ ಎಲ್ಲಾ ಹೊಡೆದಿದ್ದಾರೆ. ಹೀಗಾಗಿ ಅವರಿಗೆ ಬ್ಯಾಟಿಂಗ್ ಟಚ್ ಇಲ್ಲ ಅಂತೇನಲ್ಲ. ಆದ್ರೆ ಅವರ ಡಿಫೆನ್ಸ್ ಶಾಟ್ಗಳೆಲ್ಲಾ ಪರ್ಫೆಕ್ಟ್ ಆಗಿತ್ತು. ಡಿಫೆನ್ಸ್ ಮಾಡಿ ಬಳಿಕ ಫಾಲೋ ಥ್ರೂ ಇವೆಲ್ಲವೂ ಸಾಲಿಡ್ ಆಗಿತ್ತು. ಕುಲ್ದೀಪ್ ಡಿಫೆನ್ಸ್ ನೋಡಿ ಈವನ್ ಪೆವಿಲಿಯನ್ನಲ್ಲಿ ರೋಹಿತ್, ಶುಬ್ಮನ್ ಗಿಲ್, ಜೈಸ್ವಾಲ್ ಆಶ್ಚರ್ಯದಿಂದ ನೋಡ್ತಾ ಇದ್ರು. 72 ಬಾಲ್ಗಳಲ್ಲಿ 17 ರನ್.. ಕುಲ್ದೀಪ್ ದಿ ಬ್ಲಾಕರ್. ಕುಲ್ದೀಪ್ ಬ್ಯಾಟಿಂಗ್ ಮಾಸ್ಟರ್ ಕ್ಲಾಸ್.. ಡೇ-3 ಕೂಡ ಕುಲ್ದೀಪ್ ಮತ್ತು ಜ್ಯುರೆಲ್ ಮಧ್ಯೆ ಒಂದಷ್ಟು ಪಾಟ್ನರ್ಶಿಪ್ ಬಿಲ್ಡ್ ಆದ್ರೆ ಚೆನ್ನಾಗಿರುತ್ತೆ. ಇಲ್ಲಾಂದ್ರೆ ಟೀಂ ಇಂಡಿಯಾ ಫಸ್ಟ್ ಇನ್ನಿಂಗ್ಸ್ ಹಿನ್ನಡೆ ಅನುಭವಿಸಬೇಕಾಗುತ್ತೆ. ಸದ್ಯ ನಾವು ಇಂಗ್ಲೆಂಡ್ ಸ್ಕೋರ್ಗಿಂತ 134 ರನ್ ಹಿಂದೆ ಇದ್ದೇವೆ. 219/7. ಮೂರನೇ ದಿನ ನಮ್ಮ ಬೌಲರ್ಸ್ ಮೇಲೆ ಹೆಚ್ಚು ರೆಸ್ಪಾನ್ಸಿಬಿಲಿಟಿ ಇದೆ. ಅಗ್ರೆಸ್ಸಿವ್ ಆಗಿ ಬೌಲ್ ಮಾಡಲೇಬೇಕು. ಸೆಕೆಂಡ್ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ನ್ನ ಆಲೌಟ್ ಮಾಡಲೇಬೇಕು. ಇಂಥಾ ಪಿಚ್ನ್ನ ನಾನ್ಯಾವತ್ತೂ ನೋಡಿಯೇ ಇಲ್ಲ ಎಂದಿದ್ದ ಅದೇ ಬೆನ್ ಸ್ಟೋಕ್ಸ್ ಟೀಮ್ ಫಸ್ಟ್ ಇನ್ನಿಂಗ್ಸ್ನಲ್ಲಿ ನಮ್ಮ ಬ್ಯಾಟ್ಸ್ಮನ್ಗಳ ಪಿಕ್ಚರ್ ಬಿಡಿಸಿದ್ದಾರೆ. ಈ ಪಿಚ್ನಲ್ಲಿ ಇಂಗ್ಲೆಂಡ್ ಬೌಲರ್ಸ್ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಈಗ ಪಿಚ್ ಬಗ್ಗೆ ಬೆನ್ಸ್ಟೋಕ್ಸ್ ಏನಂತಾರಂತೆ. ಈಗ ಪಿಚ್ ಸರಿ ಇದ್ಯಾ ಅವರಿಗೆ? ಬಟ್ ಕೆಲ ಬಾಲ್ಗಳು ಸಡನ್ ಆಗಿ ತುಂಬಾ ಲೋ ಬರ್ತಿದೆ. ಕೆಲವೊಂದು ಬಾಲ್ ಭಾರಿ ಬೌನ್ಸ್ ಆಗ್ತಿದೆ. ಹೀಗಾಗಿ ಬ್ಯಾಟ್ಸ್ಮನ್ಗಳು ತುಂಬಾ ಕೇರ್ಫುಲ್ ಆಗಿಯೇ ಬ್ಯಾಟಿಂಗ್ ಮಾಡಬೇಕಾಗುತ್ತೆ ಈ ಪಿಚ್ನಲ್ಲಿ.