ದೀಪ್ತಿ, ಸ್ಮೃತಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ – ಪಾಕ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

ದೀಪ್ತಿ, ಸ್ಮೃತಿ ದಾಳಿಗೆ ಕಂಗೆಟ್ಟ ಪಾಕಿಸ್ತಾನ – ಪಾಕ್ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮಹಿಳಾ T20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ತಂಡವನ್ನು ಮಕಾಡೆ ಮಲಗಿಸಿದೆ. ಟೀಮ್ ಇಂಡಿಯಾ ವನಿತೆಯರು ಪಾಕ್ ವಿರುದ್ಧ 64 ರನ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಇದನ್ನೂ ಓದಿ:ಕೆ.ಎಲ್ ರಾಹುಲ್, ಗಿಲ್ ಭರ್ಜರಿ ಬ್ಯಾಟಿಂಗ್ – ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ಗೆಲುವು

ಭಾರತವು T20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ್ದು, ಪಾಕಿಸ್ತಾನದ ವಿರುದ್ಧ ಮೊದಲ ಗೆಲುವು ಸಾಧಿಸಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ಮಹಿಳಾ ತಂಡಗಳ ಪಂದ್ಯದಲ್ಲಿ ಭಾರತ ಸಿಂಹಿಣಿಯರು ಪಾರುಪತ್ಯ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 170 ರನ್ ಕಲೆಹಾಕಿತು. ಸ್ಮೃತಿ ಮಂದಾನಾ 68 ರನ್ ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ಕಾರಣವಾದರು. ಇದು ಪಾಕಿಸ್ತಾನ ವಿರುದ್ಧ ಮಂದಾನಾ ಅತ್ಯಧಿಕ ಸ್ಕೋರ್ ಕೂಡಾ ಹೌದು. ಇವರ ಜೊತೆಗೆ ರಿಚಾ ಘೋಷ್ ಕೂಡ ಸ್ಫೋಟಕ 34 ರನ್​ಗಳ ಇನ್ನಿಂಗ್ಸ್ ಆಡಿದರು

171 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ಸಿಂಹಿಣಿಯರು ಇನ್ನಿಲ್ಲದಂತೆ ಕಾಡಿದರು. ಅದರಲ್ಲೂ ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್ ಮುಂದೆ ಪಾಕಿಸ್ತಾನ ತಂಡದ ಮಹಿಳೆಯರಿಗೆ ಪೂರ್ತಿ 20 ಓವರ್​ಗಳನ್ನು ಕೂಡಾ ಆಡಲು ಸಾಧ್ಯವಾಗಿಲ್ಲ. 106 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳ ಹೀನಾಯ ಸೋಲು ಕಂಡಿತು. ಸ್ಪಿನ್ನರ್ ದೀಪ್ತಿ ಶರ್ಮಾ ದಾಳಿಗಿಳಿದ ಕೂಡಲೇ ಪಾಕಿಸ್ತಾನದ ಪೆವಿಲಿಯನ್‌ ಪರೇಡ್ ಶುರುವಾಯಿತು. ಇತ್ತ ಶ್ರೀ ಚರಣಿ ಮತ್ತು ಶಫಾಲಿ ವರ್ಮಾ ಕೂಡ ಪಾಕಿಸ್ತಾನಕ್ಕೆ ಹೊಡೆತ ನೀಡಿದರು, ಶಫಾಲಿ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಅತಿದೊಡ್ಡ ವಿಕೆಟ್ ಪಡೆದರು. ನಂತರ, 17 ನೇ ಓವರ್‌ನಲ್ಲಿ, ದೀಪ್ತಿ ಮೂರು ವಿಕೆಟ್‌ಗಳನ್ನು ಕಬಳಿಸಿ ಪಾಕಿಸ್ತಾನವನ್ನು 106 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ದೀಪ್ತಿ ಶರ್ಮಾ ಒಟ್ಟು 5 ವಿಕೆಟ್‌ಗಳ ಗೊಂಚಲು ಪಡೆದು ದಾಖಲೆ ನಿರ್ಮಿಸಿದರು.

Sulekha

Leave a Reply

Your email address will not be published. Required fields are marked *