ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಲಂಕಾ ಕದನ – ಏಳನೇ ಗೆಲುವನ್ನು ಸಂಭ್ರಮಿಸಿಲು ರೋಹಿತ್ ಶರ್ಮಾ ಟೀಮ್ ಕಾತರ

ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಲಂಕಾ ಕದನ – ಏಳನೇ ಗೆಲುವನ್ನು ಸಂಭ್ರಮಿಸಿಲು ರೋಹಿತ್ ಶರ್ಮಾ ಟೀಮ್ ಕಾತರ

2011ರ ವರ್ಲ್ಡ್​ಕಪ್​​ ಫೈನಲ್​ ಈಗ ನೆನಪಾಗಲೇಬೇಕು.. ಮುಂಬೈನ ವಾಂಖೆಡೆ ಸ್ಟೇಡಿಯಂ.. ಶ್ರೀಲಂಕಾ ವಿರುದ್ಧ ಫೈನಲ್​.. ಮಿಡ್ಲ್​ ಆರ್ಡರ್​​ನಲ್ಲಿ ಗೌತಮ್​ ಗಂಭೀರ್ ಬ್ಯಾಟಿಂಗ್.. ಕ್ಯಾಪ್ಟನ್ ಕೂಲ್ ಧೋನಿ ಸಿಕ್ಸ್.. ಧೋನಿ ಫಿನಿಶ್​ಡ್ ಇಟ್ ಆಫ್ ಇನ್ ಸ್ಟ್ಯೆಲ್ ಅನ್ನೋ ರವಿಶಾಸ್ತ್ರಿಯ ಕಾಮೆಂಟ್ರಿ.. ಕೋಟಿ ಕೋಟಿ ಭಾರತೀಯರ ಸಂಭ್ರಮ.. ಅದನ್ನ ಯಾರಿಗೂ ಮರೆಯೋಕೆ ಸಾಧ್ಯವಿಲ್ಲ. ಆ ಮ್ಯಾಚ್​ ಈಗ ಮತ್ತೆ ನೆನಪಾಗ್ತಿದೆ ಯಾಕಂದ್ರೆ, ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದ ಅದೇ ವಾಂಖೆಡೆ ಸ್ಟೇಡಿಯಂನಲ್ಲಿ ಮತ್ತೊಮ್ಮೆ ಶ್ರೀಲಂಕಾವನ್ನ ಎದುರಿಸುತ್ತಿದೆ.

ಇದನ್ನೂ ಓದಿ: ವಾಂಖೆಡೆ ಸ್ಟೇಡಿಯಂನಲ್ಲಿ ಲಂಕಾ – ಭಾರತ ಮುಖಾಮುಖಿ – ವಾಖೆಂಡೆ ಪಿಚ್ ಯಾರಿಗೆ ಫೇವರ್ ಆಗಿದೆ?

ಟೀಂ ಇಂಡಿಯಾ ಈಗಾಗಲೇ ​ ಸೆಮಿಫೈನಲ್ ಎಂಟ್ರಿಯಾಗಿ ಆಗಿದೆ. ಅತ್ತ ಶ್ರೀಲಂಕಾ ಮನೆಗೆ ಹೋಗೋದು ಕೂಡ ಖಚಿತವಾಗಿದೆ. ಹೇಳಿಕೊಳ್ಳುವಂತಾ ಹೈವೋಲ್ಟೇಜ್ ಮ್ಯಾಚ್ ಅಂತೂ ಅಲ್ವೇ ಅಲ್ಲ. ಆದ್ರೂ ವರ್ಲ್ಡ್​​ಕಪ್​ನಲ್ಲಿ ಎಲ್ಲಾ ಪಂದ್ಯಗಳು ಕೂಡ ಇಂಪಾರ್ಟೆಂಟ್. ಅದರಲ್ಲೂ ವಾಂಖೆಡೆ ಸ್ಟೇಡಿಯಂ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾರ ಹೋಮ್​​ ಗ್ರೌಂಡ್. ರೋಹಿತ್ ಶರ್ಮಾ ಕ್ರಿಕೆಟ್ ಕೆರಿಯರ್ ಆರಂಭವಾಗಿದ್ದೇ ಈ ಗ್ರೌಂಡ್​​ನಿಂದ. ಇದೇ ಗ್ರೌಂಡ್​​ನಲ್ಲಿ ನಿತ್ಯವೂ ಪ್ರಾಕ್ಟೀಸ್​ ಮಾಡುತ್ತಿದ್ದರು. ಹೀಗಾಗಿ ಈ ಗ್ರೌಂಡ್​ ಕಂಡೀಷನ್ ಬಗ್ಗೆ ರೋಹಿತ್​ಗಿಂತ ಚೆನ್ನಾಗಿ ಬಲ್ಲವರು ಇನ್ಯಾರೂ ಇಲ್ಲ. ವರ್ಲ್ಡ್​ಕಪ್​ನಲ್ಲಿ ಹೋಮ್​ ಗ್ರೌಂಡ್​​ನಲ್ಲಿ ಹೋಮ್ ಕ್ರೌಡ್ ಮುಂದೆ ರೋಹಿತ್​ ಶತಕಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ.

ಇನ್ನು ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ಸೆಂಚೂರಿ ಬಾರಿಸಿದ್ರೆ ಡಬ್ಬಲ್ ಸೆಲೆಬ್ರೇಷನ್ ಆಗುತ್ತೆ. ಶ್ರೀಲಂಕಾ ವಿರುದ್ಧದ ಮ್ಯಾಚ್​ ನೊಡೋಕೆ ಸಚಿನ್ ತೆಂಡೂಲ್ಕರ್​ ಗ್ರೌಂಡ್​ಗೆ ಬಂದೇ ಬರ್ತಾರೆ. ಸಚಿನ್ ಸಮ್ಮುಖದಲ್ಲಿ ವಿರಾಟ್ 49ನೇ ಶತಕ ಬಾರಿಸಿದ್ರೆ ಅದಕ್ಕಿರುವ ತೂಕವೇ ಬೇರೆ. ವಂಡೇ ಕ್ರಿಕೆಟ್​​ನಲ್ಲಿ ಸಚಿನ್ 49 ಶತಕ ಬಾರಿಸಿದ್ದು, ಸಚಿನ್ ಸೆಂಚೂರಿಗೆ ಸರಿಸಮಾನವಾಗೋಕೆ ಕೊಹ್ಲಿಗೆ ಈಗ ಮತ್ತೊಂದು ಗೋಲ್ಡನ್ ಅಪಾರ್ಚ್ಯುನಿಟಿ ಇದೆ.

ಶ್ರೀಲಂಕಾ ವಿರುದ್ಧದ ಮ್ಯಾಚ್​ನಲ್ಲೂ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಆಡೋದಿಲ್ಲ. ಕೇವಲ ಶ್ರೀಲಂಕಾ ಮಾತ್ರವಲ್ಲ ದಕ್ಷಿಣ ವಿರುದ್ಧದ ಮ್ಯಾಚ್​ನಲ್ಲೂ ಆಡಲ್ಲ ಅನ್ನೋ ಮಾಹಿತಿ ಸಿಕ್ಕಿದೆ. ಪಾಂಡ್ಯ ಇನ್ನೂ ಕೂಡ ಕಂಪ್ಲೀಟ್ ಆಗಿ ರಿಕವರಿ ಆಗಿಲ್ಲ. ಇಂಜ್ಯೂರಿಗೆ ಒಳಗಾಗಿ ಕಳೆದ ಎರಡು ಮ್ಯಾಚ್​ಗಳನ್ನ ಮಿಸ್ ಮಾಡಿಕೊಂಡಿದ್ದ ಪಾಂಡ್ಯ ಗ್ರೂಪ್ ಸ್ಟೇಜ್​ನ ಉಳಿದ ಎಲ್ಲಾ ಪಂದ್ಯಗಳನ್ನ ಕೂಡ ಆಡೋದು ಅನುಮಾನವೇ. ಹೀಗಾಗಿ ಶ್ರೇಯಸ್ ಅಯ್ಯರ್​ಗೆ ಮತ್ತೊಮ್ಮೆ ತಂಡದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಇದೆ. ಯಾಕಂದ್ರೆ ನೆಟ್​ ಪ್ರಾಕ್ಟೀಸ್ ವೇಳೆ ಎರಡು ದಿನಗಳ ಕಾಲ ಶ್ರೇಯಸ್ ಅಯ್ಯರ್ ಬರೀ ಶಾಟ್​ ಬಾಲ್​ಗಳನ್ನೇ ಫೇಸ್ ಮಾಡಿದ್ದಾರೆ. ಶಾಟ್​ ಬಾಲ್​​ಗೆ ಆಡೋಕೆ ಶ್ರೇಯಸ್ ಪರದಾಡ್ತಿದ್ದು, ಮೇಲಿಂದ ಮೇಲೆ ಶಾಟ್​ ಬಾಲ್​​ಗೆ ಹೊಡಿಯೋಕೆ ಹೋಗಿ ಕ್ಯಾಚ್ ಕೊಡ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಬ್ಯಾಟಿಂಗ್​ ಕೋಚ್​ ನೆಟ್ಸ್​ನಲ್ಲಿ ಶ್ರೇಯಸ್​​ ಅಯ್ಯರ್​​ಗೆ ಗಂಟೆಗಟ್ಟಲೆ ಶಾಟ್​ ಬಾಲ್​ಗೆ ಆಡೋಕೆ ಟ್ರೈನಿಂಗ್ ನೀಡಿದ್ದಾರೆ. ಹೀಗಾಗಿ ಶ್ರೇಯಸ್​ಗೆ ಇನ್ನೊಂದು ಅವಕಾಶ ನೀಡುವ ಆಲೋಚನೆ ದ್ರಾವಿಡ್ ಮತ್ತು ರೋಹಿತ್​ ಶರ್ಮಾ ಇರುವಂತೆ ಕಾಣ್ತಿದೆ.

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.

 

ಟೀಂ ಇಂಡಿಯಾ PLAYING-11?

ರೋಹಿತ್ ಶರ್ಮಾ

ಶುಬ್ಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ OR ಇಶಾನ್ ಕಿಶನ್

ಕೆ.ಎಲ್. ರಾಹುಲ್

ಸೂರ್ಯಕುಮಾರ್ ಯಾದವ್

ರವೀಂದ್ರ ಜಡೇಜ

ಕುಲ್​ದೀಪ್ ಯಾದವ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಜಸ್ಪ್ರಿತ್ ಬುಮ್ರಾ

 

 

Sulekha