ಟೀಂ ಇಂಡಿಯಾಗೆ TOSS ಟಾಸ್ಕ್ – T20I, ODI, TESTನಲ್ಲೂ ಫೇಲ್
ಗಿಲ್, ಸೂರ್ಯ, ರೋಹಿತ್ ಸೋತಿದ್ದೆಷ್ಟು?

ಟೀಂ ಇಂಡಿಯಾಗೆ TOSS ಟಾಸ್ಕ್ – T20I, ODI, TESTನಲ್ಲೂ ಫೇಲ್ಗಿಲ್, ಸೂರ್ಯ, ರೋಹಿತ್ ಸೋತಿದ್ದೆಷ್ಟು?

ಕ್ರಿಕೆಟ್ ಜಗತ್ತಿನಲ್ಲೀಗ ಟೀಂ ಇಂಡಿಯಾ ಡಾಮಿನೇಷನ್ ಸೂಪರ್ ಆಗಿದೆ. ಮೂರೂ ಮಾದರಿಯಲ್ಲೂ ಬೆಸ್ಟ್ ಪರ್ಫಾಮೆನ್ಸ್ ಬರ್ತಿದೆ. ಬಟ್ ಇಂಟ್ರೆಸ್ಟಿಂಗ್ ಅಂದ್ರೆ ಟಾಸ್ ಸೋಲು ಮಾತ್ರ ಬೆನ್ನಿಗಂಟಿದ ಬೇತಾಳದಂತೆ ಕಾಡ್ತಿದೆ. ಹಾಗಂತ ಇದೇನು ಒಂದು ಫಾರ್ಮೆಟ್​ನಲ್ಲಲ್ಲ. ಮೂರೂ ಮಾದರಿಯಲ್ಲೂ ಸೇಮ್ ರಿಸಲ್ಟ್.  ಕ್ರಿಕೆಟ್​ನಲ್ಲಿ ಟಾಸ್ ಸೋಲು ಮೊಸ್ಟ್ ಇಂಪಾರ್ಟೆಂಟ್ ಆಗುತ್ತೆ. ಪಂದ್ಯದ ರಿಸಲ್ಟ್ ಮೇಲೂ ಎಫೆಕ್ಟ್ ಆಗುತ್ತೆ. ಯಾವ್ ಪಿಚ್​ನಲ್ಲಿ ಆಡ್ತಿದ್ದೇವೆ. ಅಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ ಓಕೆನಾ ಅಥವಾ ಚೇಸಿಂಗ್ ಆಯ್ಕೆ ಮಾಡಿಕೊಂಡ್ರೆ ಬೆಟರಾ ಅನ್ನೋದನ್ನ ಡಿಸೈಡ್ ಮಾಡೋಕೆ ಚಾನ್ಸ್ ಸಿಗುತ್ತೆ. ಆದ್ರೆ ಅದ್ಯಾಕೋ ಏನೋ ಭಾರತದ ಟಾಸ್ ಸೋಲಿನ ಸರಣಿ ಮಾತ್ರ ನಿಲ್ತಾನೇ ಇಲ್ಲ. ಟೆಸ್ಟ್ ಕ್ಯಾಪ್ಟನ್ ಆಗಿರೋ ಶುಬ್​ಮನ್ ಗಿಲ್​ಗೂ ಅದೇ ಕಂಟಿನ್ಯೂ ಆಗ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಕಂಟಿನ್ಯೂ ಆಗಿದೆ.

ಇದನ್ನೂ ಓದಿ : ALL OUT ಟಾರ್ಗೆಟ್ ಸಕ್ಸಸ್ – ಮೊದಲ ದಿನವೇ ಹರಿಣಗಳು ಪಲ್ಟಿ

8 ಟೆಸ್ಟ್ ಮ್ಯಾಚ್ ಗಳಲ್ಲಿ ಒಂದ್ರಲ್ಲಷ್ಟೇ ಟಾಸ್ ಗೆದ್ದ ಗಿಲ್!

ರೋಹಿತ್ ಶರ್ಮಾ ನಿವೃತ್ತಿ ಬಳಿಕ ಶುಭ್​ಮನ್ ಗಿಲ್ ಭಾರತದ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಲ್ಲಿಂದ ಈಚೆಗೆ 8 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸಿದ್ದಾರೆ. ಅಟ್ ಪ್ರಸೆಂಟ್ ಸೌತ್ ಆಫ್ರಿಕಾ ವಿರುದ್ಧ ಕೊಲ್ಕತ್ತಾದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೀತಿದ್ದು, ಈ ಮ್ಯಾಚಲ್ಲೂ ಟಾಸ್ ಸೋತಿದೆ. ಇದಕ್ಕೂ ಮುನ್ನ ಶುಭ್​ಮನ್ ಗಿಲ್ 5 ಪಂದ್ಯಗಳ ಇಂಗ್ಲೆಂಡ್ ಸಿರೀಸ್ ಮೂಲಕ ನಾಯಕನಾಗಿ ಟೆಸ್ಟ್ ತಂಡಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ರು. ಆದ್ರೆ ಐದಕ್ಕೆ ಐದೂ ಪಂದ್ಯಗಳಲ್ಲೂ ಗಿಲ್ ಟಾಸ್ ಸೋತ್ರು. ಸೋ ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾ ಬೌಲಿಂಗ್ ಮಾಡ್ಬೇಕಾ ಅನ್ನೋದನ್ನ ಚೂಸ್ ಮಾಡಿಕೊಳ್ಳೋಕೆ ಅವಕಾಶನೇ ಸಿಗ್ಲಿಲ್ಲ. ಹೀಗಾಗಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್​ಗಳಲ್ಲಿ ಫಸ್ಟ್ ಬ್ಯಾಟಿಂಗ್ ಮಾಡ್ಬೇಕಾಯ್ತು. ಫೈನಲಿ ಸರಣಿ ಅಂತೂ ಡ್ರಾನಲ್ಲಿ ಕೊನೆಯಾಯ್ತು. ಆ ಬಳಿಕ ಭಾರತದಲ್ಲೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಮೊದಲ ಮ್ಯಾಚಲ್ಲಿ ಗಿಲ್ ಟಾಸ್ ಸೋತ್ರು. ದೆನ್ ಎರಡನೇ ಪಂದ್ಯದಲ್ಲಿ ಟಾಸ್ ಗೆಲ್ತಾರೆ. ಸೋ ಅಲ್ಲಿಗೆ ಸತತ 6 ಸಲ ಟಾಸ್ ಸೋತು 7ನೇ ಪಂದ್ಯಕ್ಕೆ ಟಾಸ್ ಗೆದ್ದಿದ್ರು. ಈಗ ಸೌತ್ ಆಫ್ರಿಕಾ ವಿರುದ್ಧ ಮತ್ತದೇ ಟಾಸ್ ಟಾಸ್ಕ್ ಕಂಟಿನ್ಯೂ ಆಗಿದೆ. ಮೊದಲ ಪಂದ್ಯದಲ್ಲೇ ಟಾಸ್ ಸೋಲ್ಬೇಕಾಯ್ತು. ಇನ್ನು ಟಾಸ್ ಸೋತ ಬಳಿಕ ಗಿಲ್ ವ್ಯಂಗ್ಯವಾಗೇ ಉತ್ತರಿಸಿದ್ರು. ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಸ್ ಸೋತ ನಾಯಕ ಗಿಲ್​ಗೆ ರವಿಶಾಸ್ತ್ರಿಯವರು ಪ್ರಶ್ನಿಸಿದ್ರು. ಈ ವೇಳೆ ಮುಗುಳ್ನಕ್ಕ ಗಿಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮಾತ್ರ ನಾನು ಟಾಸ್ ಗೆಲ್ಲುತ್ತೇನೆ ಎಂದು ಭಾವಿಸುತ್ತೇನೆ ಎಂದು ಉತ್ತರಿಸಿದ್ರು. ಹಾಗಂತ ಟೆಸ್ಟ್​ನಲ್ಲೇ ಬ್ಯಾಡ್​ಲಕ್ ಅನ್ಕೊಳ್ಬೇಡಿ. ಒನ್ ಡೇ ಇಂಟರ್​ನ್ಯಾಷನಲ್​ ಫಾರ್ಮೆಟ್​ನಲ್ಲಂತೂ ಟಾಸ್ ಸೋಲಿನಲ್ಲಿ ಇತಿಹಾಸವೇ ನಿರ್ಮಾಣವಾಗಿದೆ.

2023ರ ಏಕದಿನ ವಿಶ್ವಕಪ್ ಬಳಿಕ ಸತತ 18 ಪಂದ್ಯಗಳಲ್ಲಿ ಟಾಸ್ ಸೋಲು!

ಏಕದಿನ ಮಾದರಿಯಲ್ಲಿ ಭಾರತದ ಟಾಸ್ ಸೋಲಿನ ಸರಣಿಗೆ ಬ್ರೇಕ್ ಬಿದ್ದೇ ಇಲ್ಲ. ಅದೂ ಕೂಡ ಕಳೆದ 2 ವರ್ಷಗಳಿಂದ ಕಂಟಿನ್ಯೂಯಸ್ ಸೋಲು. ಏಕದಿನ ಪಂದ್ಯಗಳಲ್ಲಿ ಸತತವಾಗಿ 18ನೇ ಬಾರಿ ಟಾಸ್ ಸೋಲುವ ಮೂಲಕ ಭಾರತ ಬೇಡ ದಾಖಲೆ ಬರೆದಿದೆ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಸೋಲಿನಿಂದ ಶುರುವಾದ ಈ ಸರಣಿ ಕ್ಯಾಪ್ಟನ್ಸಿ ಬದಲಾದ್ರೂ ನಿಂತಿಲ್ಲ. ರೋಹಿತ್ ಶರ್ಮಾ ಅವರು 15 ಬಾರಿ ಟಾಸ್ ಸೋತರೆ, ಶುಭಮನ್ ಗಿಲ್ ಅವರು 3ನೇ ಬಾರಿಗೆ ಟಾಸ್ ಸೋತಿದ್ದಾರೆ. ಐಸಿಸಿ ಚಾಂಪಿಯನ್ ಟ್ರೋಫಿಯಲ್ಲಿ ಸಹ ಭಾರತ ತಂಡ ಯಾವ ಪಂದ್ಯದಲ್ಲೂ ಟಾಸ್ ಗೆಲ್ಲದೆ ಟ್ರೋಫಿ ಎತ್ತಿ ಹಿಡಿದಿತ್ತು. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಟಾಸ್ ಸೋತಿದ್ರು. ಬಟ್ ಒಂದು ಸಮಾಧಾನ ಅಂದ್ರೆ ಟಾಸ್ ಗೆಲ್ಲದಿದ್ರೂ ಭಾರತದ ಜರ್ನಿ ಚೆನ್ನಾಗೇ ಇದೆ.

ಸೂರ್ಯನಿಗೂ ಪದೇಪದೆ ಕೈಕೊಡ್ತಿದೆ ಟಾಸ್!

ಇನ್ನು ಟಿ-20ಐ ಕ್ಯಾಪ್ಟನ್ ಆಗಿರೋ ಸೂರ್ಯಕುಮಾರ್ ಯಾದವ್ ಗೂ ಟಾಸ್ ಕೈ ಕೊಡ್ತಿದೆ. ನಾಯಕನಾಗಿ ಭಾರತದ ಪರ ಒಂದೇ ಒಂದು ಟಿ-20ಐ ಸರಣಿನೂ ಸೋತಿಲ್ಲ. ಬಟ್ ಸೂರ್ಯನಿಗೂ ಟಾಸ್ ಸೋಲಿನ ಬೇತಾಳ ಬಿಟ್ಟಿಲ್ಲ. ಇತ್ತಿಚೆಗೆ ಆಸೀಸ್ ಸರಣಿಯಲ್ಲೂ ಕೂಡ ಐದು ಪಂದ್ಯಗಳ ಪೈಕಿ ಒಂದು ಮ್ಯಾಚ್​ನಲ್ಲಷ್ಟೇ ಟಾಸ್ ಕೈ ಹಿಡಿದಿತ್ತು. ನಾಲ್ಕು ಪಂದ್ಯಗಳಲ್ಲಿ ಟಾಸ್ ಸೋತಿದ್ರು. ಌಂಡ್ ಅಂತಿಮವಾಗಿ ಸರಣಿಯನ್ನ ಭಾರತವೇ ಗೆದ್ದಿತ್ತು. ಹೀಗೆ ಭಾರತ ಮೂರೂ ಮಾದರಿಯಲ್ಲೂ ಟಾಸ್ ಗೆಲ್ಲೋದ್ರಲ್ಲಿ ಫೇಲ್ಯೂರ್ ಆಗ್ತಿದೆ. ಬಟ್ ಸಮಾಧಾನ ಅಂದ್ರೆ ರಿಸಲ್ಟ್ ಮಾತ್ರ ಭಾರತದ ಪರ ಬರ್ತಿದೆ. ಭಾರತ ಗೆಲ್ತಿದೆ ಅಂದ್ರೂ ಕೂಡ ಟಾಸ್ ಗೆಲ್ಲೋದೂ ಕೂಡ ನಾಯಕರಿಗೆ ಕಾನ್ಫಿಡೆನ್ಸ್ ಬೂಸ್ಟ್ ಮಾಡುತ್ತೆ.

Shantha Kumari