T-20 ವಿಶ್ವಕಪ್ ಭಾರತಕ್ಕೆ ಸವಾಲ್ – ಅಭಿಷೇಕ್ ಇದ್ರಷ್ಟೇ ಬ್ಯಾಟಿಂಗ್ ಬಲ
ಬುಮ್ರಾಗಿಲ್ಲ ಬ್ಯಾಕಪ್.. ಏನೆಲ್ಲಾ ವೀಕ್?

ಒಂದೇ ಟರ್ನ್.. ಭಾರತಕ್ಕೆ ಇರೋದು ಇನ್ನೊಂದೇ ಟರ್ನ್.. 2026ರ ಟಿ-20 ವಿಶ್ವಕಪ್ಗೆ ಅಜೇಯವಾಗಿ ಲಗ್ಗೆ ಇಡೋಕೆ ಭಾರತಕ್ಕೆ ಉಳಿದಿರೋದು ಇನ್ನೊಂದೇ ತಿರುವು. ನ್ಯೂಜಿಲೆಂಡ್ ವಿರುದ್ಧದ ಸಿರೀಸ್ ಗೆದ್ರೆ ಡೈರೆಕ್ಟ್ ವಿಶ್ವಕಪ್. ಟಿ-20 ಫಾರ್ಮೆಟ್ನಲ್ಲಿ ಜಗತ್ತಿನ ನಂಬರ್ 1 ಟೀಂ ಆಗಿರೋ ಟೀಂ ಇಂಡಿಯಾಗೆ ಟ್ರೋಫಿ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಅದೂ ಕೂಡ ತವರಿನಲ್ಲೇ ಟೂರ್ನಿ ನಡೆಯೋದು ಬಿಗ್ ಅಡ್ವಾಂಟೇಜ್ ಇದೆ. ಆದ್ರೆ ಚಾಂಪಿಯನ್ಶಿಪ್ನ ಉಳಿಸಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಒಂದಷ್ಟು ವೀಕ್ನೆಸ್ಗಳೂ ಇವೆ.
ಇದನ್ನೂ ಓದಿ : T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!
ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 10ನೇ ಆವೃತ್ತಿಯ ಟಿ-20 ವಿಶ್ವಕಪ್ ಫೆಬ್ರವರಿ 7ರಿಂದ ಆರಂಭವಾಗಲಿದೆ. 20 ತಂಡಗಳು ನಡುವೆ ಫೈಟ್ ನಡೆಯಲಿದ್ದು ಟೂರ್ನಿಯ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಌಂಡ್ ಈ ಟೂರ್ನಿಗೆ ರೋಹಿತ್ ಶರ್ಮಾ ಬ್ರ್ಯಾಂಡ್ ಅಂಬಾಸೆಡರ್ ಆಗಿರ್ತಾರೆ. ಕಳೆದ ಆವೃತ್ತಿಯಲ್ಲಿ ರೋಹಿತ್ ನಾಯಕತ್ವದಲ್ಲಿ ಚಾಂಪಿಯನ್ ಆಗಿರೋ ಭಾರತ ಈ ಬಾರಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಯುಎಇ ವಿರುದ್ಧದ ಪಂದ್ಯದ ಮೂಲಕ ತನ್ನ ಅಭಿಯಾನವನ್ನ ಆರಂಭಿಸಲಿದೆ. ಸೂರ್ಯನ ಸಾರಥ್ಯದಲ್ಲಿ ಟೀಂ ಸ್ಟ್ರಾಂಗ್ ಆಗಿ ಕಾಣ್ತಿದ್ರೂ ಕೆಲವು ಹಂತಗಳಲ್ಲಿ ಇಂಪ್ರೂವ್ ಆಗ್ಲೇಬೇಕಿದೆ. ಏನೆಲ್ಲಾ ಅಂತಾ ನೋಡೋದಾದ್ರೆ..
ಕ್ಯಾಪ್ಟನ್ ಸೂರ್ಯ ಕಳಪೆ ಫಾರ್ಮ್ ದೊಡ್ಡ ಟೆನ್ಷನ್!
2024ರ ಟಿ-20 ವಿಶ್ವಕಪ್ವರೆಗೂ ಟಿ-20 ಫಾರ್ಮೆಟ್ನ ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದ ಸೂರ್ಯ ನಾಯಕ ಆದ್ಮೇಲೆ ಮಂಕಾಗಿದ್ದಾರೆ. ಅದ್ರಲ್ಲೂ 2025ರಲ್ಲಿ ಸೂರ್ಯ ಮೈದಾನದಲ್ಲಿ ಆಡಿದ್ದಕ್ಕಿಂತ ಪೆವಿಲಿಯನ್ನಲ್ಲಿ ಕೂತು ಚ್ಯುಯಿಂಗ್ಗಮ್ ಜಗಿದಿದ್ದೇ ಜಾಸ್ತಿ. ಇಡೀ ವರ್ಷ ಒಂದೇ ಒಂದು ಅರ್ಧಶತಕವೂ ಬರಲಿಲ್ಲ.2025ರಲ್ಲಿ ಒಟ್ಟು 21 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಬಟ್ ಸೂರ್ಯನ ಬ್ಯಾಟಿಂದ ಬಂದಿರೋದು ಕೇವಲ 218 ರನ್‌ಗಳು ಮಾತ್ರ. ಬ್ಯಾಟಿಂಗ್ ಆವರೇಜ್ 13.62 ಇದ್ರೆ ಸ್ಟ್ರೈಕ್ ರೇಟ್ 123.16 ಇದೆ. ಈಗ 2026ರಲ್ಲಿ ಸೂರ್ಯ ಮತ್ತೆ ಪ್ರಜ್ವಲಿಸಬೇಕಿದೆ. ಜನವರಿ ಎಂಡ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿ ನಡೆಯಲಿದ್ದು ಅಲ್ಲಿ ಕಳಪೆ ಫಾರ್ಮ್ನಿಂದ ಹೊರ ಬರಬೇಕು. ಹಾಗೇ ಟಿ-20 ವಿಶ್ವಕಪ್ನಲ್ಲಿ ತಾನೂ ಕೂಡ ಬೆಸ್ಟ್ ಪರ್ಫಾಮೆನ್ಸ್ ನೀಡಿ ಕಪ್ ಗೆಲ್ಲಿಸೋ ಜವಾಬ್ದಾರಿ ಇದೆ.
ಅಭಿಷೇಕ್ ಮೇಲೇ ಡಿಪೆಂಡ್ ಆಗಿದ್ಯಾ ಟಾಪ್ ಆರ್ಡರ್?
ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಅಭಿಷೇಕ್ ಮೇಲೆಯೇ ಡಿಕೆಂಡ್ ಆದಂತಿದೆ. ಅಭಿಷೇಕ್ ಕ್ರೀಸ್ನಲ್ಲಿ ಇರೋವರೆಗೂ ಟಾಪ್ 4 ಬ್ಯಾಟರ್ಗಳು 150 ಕ್ಕಿಂತ ಹೆಚ್ಚಿನ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಆದ್ರೆ ಅಭಿಷೇಕ್ ವಿಕೆಟ್ ಬಿತ್ತು ಅಂದ್ರೆ ನೆಕ್ಸ್ಟ್ ಅಗ್ರ-ಕ್ರಮಾಂಕದ ಬ್ಯಾಟರ್ಗಳ ಸ್ಟ್ರೈಕ್ರೇಟ್ 124ಕ್ಕೆ ಕುಸಿದಿದೆ. ಹಾಗೇ ನಂಬರ್ 3ನಲ್ಲಿ ಕಳೆದ ಆರು ತಿಂಗಳಲ್ಲೇ 6 ಬ್ಯಾಟರ್ಸ್ ಚೇಂಜ್ ಆದ್ರೂ ಯಾರೊಬ್ರಿಂದಲೂ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಸೋ ಅಭಿಷೇಕ್ ಮೇಲೆಯೇ ಒತ್ತಡ ಹೇರೋದು ಬಿಟ್ಟು ಉಳಿದ ಬ್ಯಾಟರ್ಗಳೂ ಉತ್ತಮ ಪ್ರದರ್ಶನ ನೀಡುವ ಸವಾಲಿದೆ.
ಸಂಜು ವರ್ಸಸ್ ಕಿಶನ್.. ವಿಕೆಟ್ ಕೀಪರ್ ಬ್ಯಾಟರ್ ಯಾರು?
ಟಿ-20 ವಿಶ್ವಕಪ್ ತಂಡದಲ್ಲಿ ಜಿತೇಶ್ ಶರ್ಮಾರನ್ನ ಕೈಬಿಟ್ಟು ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ರನ್ನ ನೇಮಕ ಮಾಡಿದ್ದಾರೆ. ಹೀಗಿದ್ರೂ ಪ್ಲೇಯಿಂಗ್ 11ನಲ್ಲಿ ಯಾರನ್ನ ಆಡಿಸ್ತಾರೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ಸೌತ್ ಆಫ್ರಿಕಾ ವಿರುದ್ಧದ ಐದನೇ ಮ್ಯಾಚಲ್ಲಿ ಸಂಜು ಸ್ಯಾಮ್ಸನ್ 37 ರನ್ ಗಳಿಸುವ ಮೂಲಕ ಕಂ ಬ್ಯಾಕ್ ಮಾಡಿದ್ರು. ಇನ್ನು ಇಶಾನ್ ಕಿಶನ್ ಇತ್ತೀಚೆಗೆ ಹರಿಯಾಣ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 101 ರನ್ ಗಳಿಸುವ ಮೂಲಕ ತಮ್ಮ ರಾಜ್ಯವನ್ನು ಚೊಚ್ಚಲ ಟೂರ್ನಮೆಂಟ್ ಪ್ರಶಸ್ತಿಗೆ ಕೊಂಡೊಯ್ದಿದ್ರು. ಹಾಗೇ ವಿಜಯ್ ಹಜಾರೆ ಟೂರ್ನಿಯಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ. ಇಬ್ಬರೂ ಕೂಡ ಅದ್ಭುತ ಫಾರ್ಮ್ನಲ್ಲಿದ್ದು ಯಾರನ್ನೇ ಡ್ರಾಪ್ ಮಾಡಿದ್ರೂ ನಷ್ಟವೇ. ಹೀಗಾಗಿ ಇಬ್ಬರಿಗೂ ಚಾನ್ಸ್ ನೀಡ್ತಾರಾ ಅನ್ನೋ ಕುತೂಹಲವೂ ಇದೆ.
ಜಸ್ಪ್ರೀತ್ ಬುಮ್ರಾಗೆ ಸಾಥ್ ನೀಡೋರು ಯಾರು?
ಭಾರತ ಬೌಲಿಂಗ್ ದಾಳಿಯನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಆದ್ರೆ ಅನುಭವಿ ಮೊಹಮ್ಮದ್ ಸಿರಾಜ್ ಬದಲಿಗೆ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿರೋದು ಚರ್ಚೆಗೆ ಕಾರಣವಾಗಿದೆ. ಐಪಿಎಲ್ ಪರ್ಫಾಮೆನ್ಸ್ ಕನ್ಸಿಡರ್ ಮಾಡಿದ್ರೆ ವಿಶ್ವಕಪ್ನಂಥ ಬಿಗ್ ಈವೆಂಟ್ಗಳಲ್ಲಿ ಸವಾಲಾಗಬಹುದು. ಹಾಗೇ ಅರ್ಶ್‌ದೀಪ್ ಸಿಂಗ್ ಮತ್ತು ರಾಣಾ ಇಬ್ಬರೂ ಅಂತಿಮ ಓವರ್‌ಗಳಲ್ಲಿ ಬುಮ್ರಾಗೆ ಸಮರ್ಥವಾಗಿ ಸಾಥ್ ಕೊಡ್ತಾರೆ ಅನ್ನೋದು ಪ್ರಶ್ನೆ ಇದೆ. ಯಾಕಂದ್ರೆ ಇಬ್ಬರೂ ದುಬಾರಿಯಾಗೋ ಸಾಧ್ಯತೆಗಳೂ ಇವೆ. ಬುಮ್ರಾಗೆ ಆಫ್ ಡೇ ಇದ್ದರಂತೂ ವೀಕ್ ಆಗಿ ಕಾಣುತ್ತೆ. ಅರ್ಶ್ದೀಪ್ ಸಿಂಗ್ ಒಬ್ಬ ಸಮರ್ಥ ವೇಗಿ ಆಗಿದ್ರೂ ಕೆಲವೊಮ್ಮೆ ಬ್ಯಾಲೆನ್ಸ್ ಕಳ್ಕೊಳ್ತಾರೆ. ಹರ್ಷಿತ್ ರಾಣಾಗೆ ದೊಡ್ಡ ಪಂದ್ಯಗಳಲ್ಲಿ ಅನುಭವದ ಕೊರತೆ ಇದೆ. ಬುಮ್ರಾ ಆಡಿಲ್ಲ ಅಂದ್ರೆ ಭಾರತಕ್ಕೆ ಅದು ಬ್ಯಾಡ್ ಡೇ ಆಗ್ಬೋದು.
ಆಲ್ ರೌಂಡರ್ ಕೋಟಾ ನಿರ್ಧಾರವೂ ಗೊಂದಲವಾಗುತ್ತಾ?
ಸದ್ಯ ಟಿ-20 ವಿಶ್ವಕಪ್ಗೆ ಅಕ್ಷರ್ ಪಟೇಲ್ರನ್ನ ವೈಸ್ ಕ್ಯಾಪ್ಟನ್ ಆಗಿ ನೇಮಿಸಿದ್ದಾರೆ. ಹೀಗಾಗಿ ಆಲ್ರೌಂಡರ್ ಕೋಟಾದಲ್ಲಿ ಯಾರನ್ನೆಲ್ಲಾ ಪ್ಲೇಯಿಂಗ್ 11ಗೆ ಆಯ್ಕೆ ಮಾಡ್ತಾರೆ ಅನ್ನೋ ಗೊಂದಲವೂ ಇದೆ. ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಪೈಕಿ ಪಾಂಡ್ಯ ಅಂತೂ ಮಸ್ಟ್ ಌಂಡ್ ಶುಡ್ ಆಡ್ಬೇಕಾಗುತ್ತೆ. ಹಾಗೇ ಆಲ್‌ರೌಂಡರ್‌ಗಳ ಜೊತೆಗೆ ತಜ್ಞ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಯವ್ರ ಉಪಸ್ಥಿತಿಯೂ ಬೇಕು. ಇಂಥಾ ಟೈಮಲ್ಲಿ ಹೆಚ್ಚುವರಿ ಬ್ಯಾಟರ್ ಆಯ್ಕೆ ಬಗ್ಗೆ ನಿರ್ಧಾರ ಮಾಡೋದು ಕಷ್ಟ ಆಗ್ಬೋದು. ಹೀಗೆ ಟಿ-20 ವಿಶ್ವಕಪ್ಗೂ ಮುನ್ನ ಒಂದಷ್ಟು ಗೊಂದಲಗಳಿವೆ. ಬಟ್ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಸರಣಿ ಇರೋದ್ರಿಂದ ಅಲ್ಲಿ ತಿದ್ದಿಕೊಳ್ಳೋಕೆ ಅವಕಾಶವಂತೂ ಇದೆ.

ನೋಡಿರಿ

