ಭಾರತಕ್ಕೆ ಇನ್ಮುಂದೆ REAL ಟಾಸ್ಕ್ – 3 ಎದುರಾಳಿಗಳೂ ಸೂಪರ್ ಸ್ಟ್ರಾಂಗ್!
ಸೋಲಿಲ್ಲದ ಸರದಾರರಲ್ಲಿ ಸೋಲೋದ್ಯಾರು?

ಭಾರತಕ್ಕೆ ಇನ್ಮುಂದೆ REAL ಟಾಸ್ಕ್ – 3 ಎದುರಾಳಿಗಳೂ ಸೂಪರ್ ಸ್ಟ್ರಾಂಗ್!ಸೋಲಿಲ್ಲದ ಸರದಾರರಲ್ಲಿ ಸೋಲೋದ್ಯಾರು?

ಟಿ-20 ವಿಶ್ವಕಪ್​ನ ಅಸಲಿ ಖದರ್ ಈಗ ಸ್ಟಾರ್ಟ್ ಆಗುತ್ತೆ. ಶನಿವಾರದಿಂದ ಸೂಪರ್ 8 ಸುತ್ತಿನ ಫೈಟ್ ನಡೆಯುತ್ತೆ. ಅದ್ರಲ್ಲೂ ಈ ಸಲ ಗ್ರೂಪ್​ 1ನಲ್ಲಿರೋ ತಂಡಗಳ ಕ್ಲ್ಯಾಶ್ ಅಂತೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಯಾಕಂದ್ರೆ ನಾಲ್ಕೂ ತಂಡಗಳು ಆಯಾ ಗ್ರೂಪ್​ನ ಟೇಬಲ್ ಟಾಪರ್​ಗಳೇ. ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಸೋಲನ್ನೇ ಕಾಣದೆ ಸೂಪರ್ 8ಗೆ ಲಗ್ಗೆ ಇಟ್ಟಿದ್ದಾರೆ. ಈಗ ಸೆಮೀಸ್ ಟಿಕೆಟ್​ಗಾಗಿ ಒಂದೇ ಟೀಮ್​ನಲ್ಲಿ ಫೈಟ್ ನಡೆಸಲಿದೆ. ಗ್ರೂಪ್ ಸ್ಟೇಜ್​ನಲ್ಲಿ ಅದ್ಭುತವಾಗಿ ಪರ್ಫಾಮ್ ಮಾಡಿರೋ ಭಾರತಕ್ಕೆ ಈಗ ರಿಯಲ್ ಟಾಸ್ಕ್ ಆರಂಭವಾಗುತ್ತೆ.

ಇದನ್ನೂ ಓದಿ : KAR VS J&K ರಣಜಿ ಫೈನಲ್ – ದೇವ್ ಕ್ಯಾಪ್ಟನ್ಸಿ.. KL ಇರೋದೇ ಪ್ಲಸ್!

ಟಿ-20 ವಿಶ್ವಕಪ್​ನ ಸೂಪರ್ 8 ಫೈಟ್​ನಲ್ಲಿ ಭಾರತ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಮತ್ತು ಜಿಂಬಾಬ್ವೆ ನಾಲ್ಕೂ ತಂಡಗಳು ಗ್ರೂಪ್ 1ನಲ್ಲಿದ್ದಾರೆ. ಇವ್ರೆಲ್ಲರೂ ಅನ್​ಬೀಟನ್ ಟೀಮ್ಸ್.. ನೆಕ್ಸ್​ಟ್ ಬಿ ಗ್ರೂಪ್​ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿವೆ. ಈ ನಾಲ್ಕು ತಂಡಗಳು ತಲಾ ಒಂದೊಂದು ಪಂದ್ಯವನ್ನ ಸೋತಿದ್ದಾರೆ. ಈಗ ಫಸ್ಟ್ ರ್ಯಾಂಕ್ ಪ್ಲೇಯರ್ಸ್ ಌಂಡ್ ಸೆಕೆಂಡ್ ರ್ಯಾಂಕ್ ಪ್ಲೇಯರ್​ಗಳ ನಡುವೆ ಸೆಮೀಸ್​ಗಾಗಿ ಸಮರ ನಡೆಯಲಿದೆ.

ಸೂಪರ್ 8 ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿದ್ದು ಫೆಬ್ರವರಿ 21ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಭಾರತದ ಪಂದ್ಯಗಳು ಫೆಬ್ರವರಿ 22ಕ್ಕೆ ಸೌತ್ ಆಫ್ರಿಕಾ, ಫೆಬ್ರವರಿ 26ಕ್ಕೆ ಜಿಂಬಾಬ್ವೆ ಹಾಗೇ ಮಾರ್ಚ್ 1ಕ್ಕೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಸೂಪರ್ 8 ಸುತ್ತಿನಲ್ಲಿ ಒಂದೊಂದು ಪಂದ್ಯವೂ ಮಸ್ಟ್ ವಿನ್ ಮ್ಯಾಚ್ ಆಗಿರೋದ್ರಿಂದ ಭಾರತ ಪ್ರತೀ ಪಂದ್ಯವನ್ನೂ ಗೆಲ್ಲಲೇಬೇಕು. ಹಾಗಂತ ಎದುರಾಳಿ ಟೀಮ್​ಗಳೇನು ಡಮ್ಮಿ ಅಲ್ಲ.

ಸೋಲಿನ ಸೇಡಿಗಾಗಿ ಕಾಯ್ತಿದೆ ಸೌತ್ ಆಫ್ರಿಕಾ!

ಫೆಬ್ರವರಿ 22ರಂದು ಸೌತ್ ಆಫ್ರಿಕಾ ವಿರುದ್ಧ ಭಾರತ ಮೊದಲ ಪಂದ್ಯ ಆಡಲಿದೆ. ಸೌತ್ ಆಫ್ರಿಕಾ ತಂಡ ಈ ಬಾರಿ ಗ್ರೂಪ್ ಡಿನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯ ಗೆದ್ದು ಬಂದಿದ್ದಾರೆ. ಅದೂ ಅಲ್ದೇ 2024ರ ಟಿ-20 ವಿಶ್ವಕಪ್​ನಲ್ಲಿ ರನ್ನರ್ ಅಪ್ ತಂಡ. ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯದಲ್ಲಿ ಭಾರತ 7 ರನ್​ಗಳಿಂದ ಪಂದ್ಯವನ್ನ ಗೆದ್ದಿತ್ತು. ಹೀಗಾಗಿ ಕೊನೇ ವರ್ಷದ ಸೋಲಿನ ಸೇಡಿಗೆ ಹರಿಣಪಡೆಯೂ ಕಾಯ್ತಿದೆ. ಇತ್ತ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಕೂಡ ಸೂಪರ್ ಸ್ಟ್ರಾಂಗ್ ಆಗಿದ್ದು ಈ ಸಲವೂ ಸೌತ್ ಆಫ್ರಿಕಾಗೆ ಸೋಲಿನ ರುಚಿ ತೋರಿಸೋಕೆ ಕಾಯ್ತಿದೆ. ಇನ್ನು ಉಭಯ ತಂಡಗಳ ಸ್ಟಾಟ್ಸ್ ನೋಡೋದಾದ್ರೆ ಉಭಯ ತಂಡಗಳು ಇದುವರೆಗೆ ಒಟ್ಟಾರೆಯಾಗಿ 35 ಟಿ-20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದ್ರಲ್ಲಿ ಭಾರತ 21 ಪಂದ್ಯ ಗೆದ್ರೆ ಸೌತ್ ಆಫ್ರಿಕಾ 1 ಪಂದ್ಯ ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲ. ಟಿ-20 ವಿಶ್ವಕಪ್ ಮಾದರಿಯಲ್ಲಿ 7 ಸಲ ಮುಖಾಮುಖಿ ಆಗಿದ್ದಾರೆ. ಭಾರತ 5 ಸಲ ಗೆದ್ರೆ ಸೌತ್ ಆಫ್ರಿಕಾ 2 ಸಲ ವಿನ್ ಆಗಿದೆ. ಇನ್ನು ಭಾರತದಲ್ಲಿ ಒಟ್ಟಾರೆಯಾಗಿ 16 ಸಲ ಮುಖಾಮುಖಿಯಾಗಿದ್ದು 8ರಲ್ಲಿ ಭಾರತ ಗೆದ್ರೆ 7ರಲ್ಲಿ ಹರಿಣಪಡೆ ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲ. ಸೋ ಈ ನಂಬರ್ಸ್ ನೋಡಿದಾಗ ಭಾರತದಲ್ಲಿ ಹರಿಣಪಡೆ ಆಲ್ಮೊಸ್ಟ್ ಈಕ್ವಲ್ ಫೈಟ್ ಕೊಟ್ಟಿದೆ.

ದಿಗ್ಗಜರನ್ನೇ ಸೋಲಿಸಿ ಬಂದಿದೆ ಜಿಂಬಾಬ್ವೆ!

ಇನ್ನು ಗ್ರೂಪ್ ಬಿನಲ್ಲಿ ದಿಗ್ಗಜ ತಂಡಗಳಿಗೇ ಸೋಲಿನ ಶಾಕ್ ನೀಡಿರೋ ಜಿಂಬಾಬ್ವೆ ಸೂಪರ್ 8ನಲ್ಲಿ ಭಾರತದ ವಿರುದ್ಧ ಫೆಬ್ರವರಿ 26ರಂದು ಕಣಕ್ಕಿಳಿಯಲಿದೆ. ಗ್ರೂಪ್ ಸ್ಟೇಜ್ ನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳಿಗೆ ನೀರು ಕುಡಿಸಿರೋ ಜಿಂಬಾಬ್ವೆ ಈ ಸಲ ಡೇಂಜರಸ್ ಆಗಿ ಕಾಣ್ತಿದ್ದಾರೆ. ಅದ್ರಲ್ಲೂ ಜಿಂಬಾಬ್ವೆಯ ಯುವ ಆರಂಭಿಕ ಬ್ಯಾಟರ್ ಬ್ರಿಯಾನ್ ಬೆನೆಟ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಌಂಡ್ ಬೆನೆಟ್ ಇದುವರೆಗಿನ ತನ್ನ ಮೂರು ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ವಿಕೆಟ್ ಕಳೆದುಕೊಂಡಿಲ್ಲ. ಅಂದ್ರೆ ಅಜೇಯವಾಗಿ ತಂಡವನ್ನ ಗೆಲ್ಲಿಸಿದ್ದಾರೆ. ಇನ್ನು ಭಾರತ ಮತ್ತು ಜಿಂಬಾಬ್ವೆ ಟಿ-20ಐ ಸ್ಟಾಟ್ಸ್ ನೋಡೋದಾದದ್ರೆ ಒಟ್ಟಾರೆಯಾಗಿ ಉಭಯ ತಂಡಗಳು 13 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದಾರೆ. 10 ಪಂದ್ಯಗಳಲ್ಲಿ ಭಾರತ ಗೆದ್ರೆ 3 ಪಂದ್ಯಗಳಲ್ಲಿ ಜಿಂಬಾಬ್ವೆ ಗೆದ್ದಿದೆ. ಇನ್ನು ಟಿ-20 ವಿಶ್ವಕಪ್ ಅಂತಾ ಬಂದಾಗ 1 ಸಲ ಮಾತ್ರ ಮುಖಾಮುಖಿ ಆಗಿದ್ದು ಅದ್ರಲ್ಲಿ ಭಾರತ ಗೆದ್ದಿದೆ. ಌಂಡ್ ಭಾರತದಲ್ಲಿ ಇದುವೆರಗೂ ಒಮ್ಮೆಯೂ ಮುಖಾಮುಖಿ ಆಗಿಲ್ಲ. ಬಟ್ ಈ ಸಲ ಹೈವೋಲ್ಟೇಜ್ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ.

ಟಿ-20 ವಿಶ್ವಕಪ್ ನಲ್ಲಿ ಭಾರತಕ್ಕೆ ಸವಾಲಾಗಿದ್ದಾರೆ ವಿಂಡೀಸ್ ದೈತ್ಯರು!

ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಕೂಡ ಈ ಸಲ ಡೇಂಜರಸ್ ಆಗಿದೆ. ಗ್ರೂಪ್ ಸಿನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನ ಗೆದ್ದು ಬಂದಿದ್ದಾರೆ. ಅದೆಲ್ಲಕ್ಕಿಂತ ಇಂಟ್ರೆಸ್ಟಿಂಗ್ ಏನಂದ್ರೆ ನಾಲ್ಕೂ ಪಂದ್ಯಗಳನ್ನೂ ಒನ್ ಸೈಡೆಡ್​ ಆಗಿ ಗೆದ್ದಿದ್ದಾರೆ. ಚೇಸಿಂಗ್ ಹಾಗೇ ಡಿಫೆನ್ಸಿಂಗ್ ಎರಡ್ರಲ್ಲೂ ಸಾಲಿಡ್ ಪರ್ಫಾಮೆನ್ಸ್ ಬಂದಿದೆ. ಹೀಗಾಗಿ ಭಾರತಕ್ಕೆ ವೆಸ್ಟ್ ಇಂಡೀಸ್ ಥ್ರೆಟ್ ಎದುರಾಗಿದೆ. ಮಾರ್ಚ್ 1ರಂದು ಭಾರತ ಮತ್ತು ವಿಂಡೀಸ್ ದೈತ್ಯರು ಮುಖಾಮುಖಿ ಆಗ್ತಾರೆ. ಇನ್ನು ಉಭಯ ತಂಡಗಳು ಟಿ-20ಐ ಸ್ಟಾಟ್ಸ್ ನೋಡೋದಾದ್ರೆ ಒಟ್ಟಾರೆಯಾಗಿ 30 ಟಿ-20 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದಾರೆ. ಇದ್ರಲ್ಲಿ ಭಾರತ 19 ಸಲ ಗೆದ್ರೆ ವಿಂಡೀಸ್ 10ರಲ್ಲಿ ವಿನ್ ಆಗಿದೆ. 1 ಪಂದ್ಯ ಫಲಿತಾಂಶವಿಲ್ಲ. ಇನ್ನು ಮೆನ್ಸ್ ಟಿ-20 ವಿಶ್ವಕಪ್​ನಲ್ಲಿ 4 ಸಲ ಫೇಸ್ ಮಾಡಿದ್ದು ಭಾರತ 1 ಸಲ ವಿನ್ ಆಗಿದ್ರೆ ಕೆರೆಬಿಯನ್ ದೈತ್ಯರು 3 ಸಲ ಸೋಲಿಸಿದ್ದಾರೆ. ಭಾರತದಲ್ಲಿ 10 ಪಂದ್ಯಗಳಲ್ಲಿ ಫೇಸ್ ಮಾಡಿದ್ದು ಭಾರತ 8ರಲ್ಲಿ ಗೆದ್ರೆ ವಿಂಡೀಸ್ 2 ಸಲ ಗೆದ್ದಿದೆ.

Shantha Kumari

Leave a Reply

Your email address will not be published. Required fields are marked *