ENGನಲ್ಲೂ ಬೆಂಕಿ ಚೆಂಡು ರಘು ಸದ್ದು – ಬ್ಯಾಟಿಂಗ್ ಹಿಂದಿನ ಶಕ್ತಿಯೇ ಕನ್ನಡಿಗ
ಥ್ರೋಡೌನ್ ಸ್ಪೆಷಲಿಸ್ಟ್.. ಸ್ಟ್ರೆಂಥ್ ಎಷ್ಟು?

ವಿಶ್ವಕ್ರಿಕೆಟ್ನ ದೊಡ್ಡಣ್ಣನಾಗಿರೋ ಬಿಸಿಸಿಐ ಇಷ್ಟೊಂದು ಸ್ಟ್ರಾಂಗ್ ಆಗೋಕೆ ಕಾರಣವೇ ಆಟಗಾರರ ಅದ್ಭುತ ಪ್ರದರ್ಶನ. ಅದ್ರಲ್ಲೂ ಬ್ಯಾಟಿಂಗ್ನಲ್ಲಿ ಸಿಡಿಲಮರಿಗಳೇ ಇದ್ದಾರೆ. ಬರೀ ಟೆಸ್ಟ್ ಅಂತಾನೇ ಅಲ್ಲ ಟಿ-20ಐ, ಏಕದಿನದಲ್ಲೂ ಭಾರತ ಬ್ಯಾಟಿಂಗ್ ಪರಾಕ್ರಮ ನೆಕ್ಸ್ಟ್ ಲೆವೆಲ್ನಲ್ಲಿದೆ. ಮೈದಾನದಲ್ಲಿ ಸಿಕ್ಸ್, ಫೋರ್ಗಳಲ್ಲೇ ಅಬ್ಬರಿಸೋ ಬ್ಯಾಟರ್ಗಳನ್ನ ನೆಟ್ಸ್ನಲ್ಲಿ ಬೆವರಿಳಿಸಿದ ಪಂದ್ಯಕ್ಕೆ ರೆಡಿ ಮಾಡಿ ಕಳ್ಸೋ ಜವಾಬ್ದಾರಿ ರಾಘವೇಂದ್ರ ದಿವಗಿ ಮೇಲಿದೆ. ಅಂದ್ರೆ ರಘು ಟೀಂ ಇಂಡಿಯಾದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದಾರೆ. ಅವ್ರು ಎಸೆಯೋ ಒಂದೊಂದು ಬಾಲ್ಗಳು ಬ್ಯಾಟರ್ಗಳ ಕಾನ್ಫಿಡೆನ್ಸ್ ಹೆಚ್ಚಿಸುತ್ತೆ.
ಇದನ್ನೂ ಓದಿ : IND ಟೀಂನಿಂದ ಐವರು ಔಟ್? ಕರುಣ್, ಕಾಂಬೋಜ್ಗೆ ಕೈ ತಪ್ಪಿದ ಚಾನ್ಸ್?
ಹಣೆಯ ಮೇಲೆ ಕುಂಕುಮ.. ಮುಖದಲ್ಲಿ ಮಂದಹಾಸ.. ನೋಡೋಕೆ ತೀರಾ ಸಿಂಪಲ್.. ಡೌನ್ ಟು ಅರ್ಥ್ ಅಂತಾರಲ್ಲ ಹಾಗೇ. ಕೆಲಸದ ವಿಚಾರ ಅಂತಾ ಬಂದ್ರೆ ಅಪಾರ ಶಿಸ್ತು, ಶ್ರದ್ಧೆ. ಇದೇ ಸರಳತೆ, ಪ್ರಾಮಾಣಿಕತೆ ಇಂದು ಭಾರತ ತಂಡದಲ್ಲಿ ರಾಘವೇಂದ್ರ ದಿವಗಿ ಅವ್ರನ್ನ ತುಂಬಾನೇ ಎತ್ತರದ ಸ್ಥಾನದಲ್ಲಿ ಇರಿಸಿದೆ. ಟೀಂ ಇಂಡಿಯಾ ಆಟಗಾರರು ಕೂಡ ಕೂಜೋಡಿಸಿ ಮುಗಿಯುತ್ತಾರೆ. ಇಂಗ್ಲೆಂಡ್ ವಿರುದ್ಧ ಭಾರತ ಸರಣಿ ಸಮಬಲಗೊಳಿಸಿದ ಬಳಿಕ ರಾಘವೇಂದ್ರ ದಿವಗಿ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಯಾಕಂದ್ರೆ ಭಾರತದ ಬ್ಯಾಟರ್ಗಳು ದಾಖಲೆಯ ರನ್ಸ್ ಕಲೆ ಹಾಕಿದ್ದಾರೆ. ಐದು ಪಂದ್ಯಗಳಿಂದ ಒಟ್ಟಾರೆಯಾಗಿ ಸರಣಿಯಲ್ಲಿ 7187 ರನ್ಸ್ ಬಂದಿದೆ. ಇದ್ರಲ್ಲಿ 21 ಶತಕಗಳೂ ಸೇರಿವೆ. ಟೋಟಲ್ ರನ್ಸ್ ಪೈಕಿ ಭಾರತ ಕಡೆಯಿಂದ 3800ಕ್ಕೂ ಹೆಚ್ಚು ರನ್ಸ್ ಬಂದಿದೆ. ಹಾಗೇ 21 ಶತಕಗಳ ಪೈಕಿ ಭಾರತದ ಪರವಾಗಿ 12 ಶತಕಗಳನ್ನು ಗಳಿಸಿದ್ದಾರೆ. ಈ ಬ್ಯಾಟಿಂಗ್ಗೆ ಶಕ್ತಿಯಾಗಿ ಇರೋದೇ ರಘು ಅನ್ನೋ ಕಾರಣಕ್ಕೆ ಮತ್ತೊಮ್ಮೆ ಸದ್ದು ಮಾಡ್ತಿದ್ದಾರೆ. 2024ರಲ್ಲಿ ಭಾರತ ಟಿ-20 ವಿಶ್ವಕಪ್ ಗೆದ್ದಾಗಲೂ ರಘು ಹೆಸರು ಹಲ್ಚಲ್ ಎಬ್ಬಿಸಿತ್ತು.
ಕಳೆದ 14 ವರ್ಷಗಳಿಂದ ಟೀಂ ಇಂಡಿಯಾದ ಪ್ರಮುಖ ಶಕ್ತಿಯಾಗಿರೋ ರಘು ತುಂಬಾ ನಾಚಿಕೆ ಸ್ವಭಾವದ ವ್ಯಕ್ತಿ. ಆದ್ರೆ ನೆಟ್ಸ್ನಲ್ಲಿ ಪ್ರಾಕ್ಟೀಸ್ ಸೆಷನ್ ವೇಳೆ ಮಾತ್ರ ಅಕ್ಷರಶ: ಬೆಂಕಿ ಚೆಂಡು. ಇವರ ರಟ್ಟೆಯಲ್ಲಿರುವ ಬಲದಿಂದಲೇ ಟೀಮ್ ಇಂಡಿಯಾ ಮತ್ತಷ್ಟು ಗಟ್ಟಿಯಾಗ್ತಾನೇ ಹೋಗ್ತಿದೆ. ನೆಟ್ ಪ್ರಾಕ್ಟೀಸ್ ವೇಳೆ ಫಸ್ಟ್ ಫೀಲ್ಡಿಗೆ ಬರೋ ರಘು ನಂತ್ರ ಕೊನೆಯಲ್ಲಿ ಅಲ್ಲಿಂದ ತೆರಳೋದು ಕೂಡ ಇವ್ರೇ. ಕೆಲಸದಲ್ಲಿ ಅಷ್ಟೊಂದು ಶ್ರದ್ಧೆ ಇವರಿಗೆ.
ಬೆಂಕಿ ಚೆಂಡು ರಘು!
ರಾಘವೇಂದ್ರ ದ್ವಿವೇದಿ 2011ರಿಂದಲೂ ಥ್ರೋ ಡೌನ್ ಸ್ಪೆಷಲಿಸ್ಟ್
ನೆಟ್ ಪ್ರ್ಯಾಕ್ಟೀಸ್ ವೇಳೆ ಬ್ಯಾಟರ್ ಗಳಿಗೆ ವೇಗವಾಗಿ ಚೆಂಡೆಸೆಯುವುದು
ಗಂಟೆಗೆ 145ರಿಂದ 150 ಕಿಲೋ ಮೀಟರ್ ಸ್ಪೀಡ್ನಲ್ಲಿ ಚೆಂಡು ಎಸೀತಾರೆ
ಗಂಟೆಗೆ 155ರಿಂದ 160 ಕಿಲೋ ಮೀಟರ್ ವೇಗದಲ್ಲಿ ಚೆಂಡೆಸೆಯೋ ಸಾಮರ್ಥ್ಯ
ಸ್ಟ್ರೆಂತ್, ಫೂಟ್ ವರ್ಕ್, ಸ್ಟ್ರೋಕ್ ಹೊಡೆಯುವ ಸ್ಟೈಲ್, ಬೌಲಿಂಗ್ ಸಾಮರ್ಥ್ಯ
ಪಂದ್ಯ ಅಥವಾ ಸರಣಿಯ ಅಗತ್ಯಕ್ಕೆ ತಕ್ಕಂತೆ ಬ್ಯಾಟರ್ ಗಳಲ್ಲಿ ಕಾನ್ಫಿಡೆನ್ಸ್
ಸಮರ್ಥ ಥ್ರೋ ಡೌನ್ ಸ್ಪೆಷಲಿಸ್ಟ್ ವಿಶ್ವದ ಯಾವ ತಂಡದ ಬಳಿ ಇಲ್ಲ
ರಾಘವೇಂದ್ರ ಮೂಲತ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಎಲ್ಲಿಲ್ಲದ ಆಸಕ್ತಿ. NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸಿ NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಬಾಲ್ ಎಸೆಯುತ್ತಾ ನೆಚ್ಚಿನ ಹುಡುಗನಾಗಿದ್ರು. ರಾಘವೇಂದ್ರನ ಪ್ರತಿಭೆ ಗುರುತಿಸಿದ ಸಚಿನ್ ತೆಂಡೂಲ್ಕರ್ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾರೆ. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ಲೆಜೆಂಡರಿ ಪ್ಲೇಯರ್ಗಳೇ ಬಂದು ರಿಟೈರ್ ಆಗಿ ಹೋದ್ರೂ ರಾಘವೇಂದ್ರ ಇನ್ನೂ ತಮ್ಮ ಕೈಚಳಕದಿಂದೇ ಯಂಗ್ಸ್ಟರ್ಸ್ಗೂ ಫೇವರೆಟ್ ಆಗಿದ್ದಾರೆ.

ನೋಡಿರಿ

