ಭಾರತಕ್ಕೆ SLOT ಚೇಂಜ್ ಗುಮ್ಮ – ನಂ.3 ದುಬೆ.. ಟಾಪ್ ಆರ್ಡರ್ ಕಥೆ?
ಗಂಭೀರ್ ಪ್ರಯೋಗ ಕೈ ಕೊಡುತ್ತಾ?

ಭಾರತಕ್ಕೆ SLOT ಚೇಂಜ್ ಗುಮ್ಮ – ನಂ.3 ದುಬೆ.. ಟಾಪ್ ಆರ್ಡರ್ ಕಥೆ?ಗಂಭೀರ್ ಪ್ರಯೋಗ ಕೈ ಕೊಡುತ್ತಾ?

ಟೀಂ ಇಂಡಿಯಾದಲ್ಲಿ ಪ್ಲೇಯಿಂಗ್ 11 ಹೀಗೇ ಇರ್ಬೋದು ಅನ್ನೋದನ್ನ ಎಕ್ಸ್​ಪೆಕ್ಟ್ ಮಾಡಿಬಿಡ್ಬೋದು. ಬಟ್ ಒನ್ಸ್ ಬ್ಯಾಟಿಂಗ್ ಶುರು ಆದ್ಮೇಲೆ ಯಾವ ಬ್ಯಾಟರ್ ಕ್ರೀಸ್​ಗೆ ಬರ್ತಾರೆ ಅನ್ನೋದನ್ನ ಇಮ್ಯಾಜಿನ್ ಮಾಡೋಕೂ ಆಗಲ್ಲ. ಈಗೆಲ್ಲಾ ಟಾಪ್ ಆರ್ಡರ್ ಬ್ಯಾಟರ್ಸ್ ಜಸ್ಟ್ ನಾಮಕಾವಸ್ಥೆಗೆ ಅನ್ನೋ ಹಂಗಾಗಿದೆ. ನಿನ್ನೆ ಮ್ಯಾಚಲ್ಲಂತೂ ಶಿವಂ ದುಬೆ ನಂಬರ್ 3 ಸ್ಲಾಟ್​ನಲ್ಲಿ ಬ್ಯಾಟಿಂಗ್​ಗೆ ಎಂಟ್ರಿ ಕೊಡ್ತಿದ್ದಂತೆ ಎಲ್ರಿಗೂ ಫುಲ್ ಶಾಕ್. ಈವನ್ ಕಾಮೆಂಟೇಟರ್ಸ್​ಗೂ ಕೂಡ ಅರ್ಥ ಆಗ್ತಿಲ್ಲ ಏನಾಗ್ತಿದೆ ಅಂತಾ. ಌಕ್ಚುಲಿ ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಈ ಸ್ಲಾಟ್ ವೇರಿಯೇಷನ್ ಎಕ್ಸ್​ಪೆರಿಮೆಂಟ್ ನಡೀತಿರೋದು.

ಇದನ್ನೂ ಓದಿ : ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ – ಡಿಸಿಎಂ ಡಿ.ಕೆ. ಶಿವಕುಮಾರ್

ಈಗೆಲ್ಲಾ ಕ್ರಿಕೆಟ್ ಅಂದ್ರೆ ಬ್ಯಾಟರ್​ಗಳ ಆಟ ಅನ್ನೋ ಹಂಗಾಗಿದೆ. ಬೌಲರ್​ಗಳಿಗಂತೂ ಬೆಲೆನೇ ಇಲ್ಲ. ಬಟ್ ಬ್ಯಾಟರ್​ಗಳೂ ಕೂಡ ಕ್ಲಿಕ್ ಆಗ್ಬೇಕು, ಬಿಗ್ ಹಿಟ್ಸ್ ಬರ್ಬೇಕು ಅಂದ್ರೆ ಅವ್ರಿಗೆ ಸ್ಲಾಟ್ ಕೂಡ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಯಾವ ಆರ್ಡರ್​ನಲ್ಲಿ ಬ್ಯಾಟ್ ಬೀಸ್ತಾರೆ ಅನ್ನೋದು ಮ್ಯಾಟ್ರ್​ ಆಗುತ್ತೆ. ಈಗ  ರೋಹಿತ್ ಶರ್ಮಾನೇ ತಗೊಳ್ಳಿ. ಅವ್ರನ್ನ ಹಿಟ್​ಮ್ಯಾನ್ ಅಂತಾ ಕರೆಯೋದೇ ಅವ್ರ ಪವರ್​ಹಿಟ್ಟಿಂಗ್ ಇನ್ನಿಂಗ್ಸ್​ಗಳ ಮೂಲಕ. ಅದ್ರಲ್ಲೂ ರೋಹಿತ್ ಓಪನರ್​ ಆಗಿಯೇ ಕಂಪ್ಲೀಟ್ ಡಾಮಿನೇಟ್ ಮಾಡ್ದೋರು. ಇನ್ನು ವಿರಾಟ್ ಕೊಹ್ಲಿ ಅಂದ್ರೆ ಥಟ್ ಅಂತಾ ನೆನಪಾಗೋದೇ ನಂಬರ್ 3 ಸ್ಲಾಟ್. ಇನ್ನು ಟೆಸ್ಟ್​​ ಫಾರ್ಮೆಟ್​ನಲ್ಲಿ ನಂಬರ್ 4ನಲ್ಲಿ ಸಚಿನ್ ತೆಂಡೂಲ್ಕರ್ ಯಾವುದೇ ಬ್ಯಾಟರ್​ಗಿಂತ ಅತೀ ಹೆಚ್ಚು ರನ್ಸ್ ಸ್ಕೋರ್ ಮಾಡಿದ್ದಾರೆ. ಆದ್ರೆ ಗಂಭೀರ್ ಕೋಚ್ ಆದ್ಮೇಲೆ ಸ್ಲಾಟ್​ ಎಲ್ಲಾ ಲೆಕ್ಕನೇ ಇಲ್ಲದಂತಾಗಿದೆ.

ಟೆಸ್ಟ್, ಏಕದಿನ & ಟಿ-20ಯಲ್ಲೂ ಸ್ಲಾಟ್ ಬದಲಾವಣೆ!

ಮೊದ್ಲೆಲ್ಲಾ ಓಪನರ್ ಔಟ್ ಆದ್ರೆ ನೆಕ್ಸ್​ಟ್ ಯಾರು ಬ್ಯಾಟಿಂಗ್​ಗೆ ಬರ್ತಾರೆ, 4 & 5ನಲ್ಲಿ ಯಾರ್ ಆಡ್ತಾರೆ. ಮಿಡಲ್ ಆರ್ಡರ್ ಹೇಗಿರುತ್ತೆ ಅನ್ನೋದು ಕ್ಲಿಯರ್ ಇರ್ತಿತ್ತು. ಯಾಕಂದ್ರೆ ಇಂತಿಂಥಾ ಆಟಗಾರರು ಅಂತಾನೇ ಫಿಕ್ಸ್ ಇರ್ತಿತ್ತು. ಬಟ್ ಗಂಭೀರ್ ಕೋಚ್ ಆದ್ಮೇಲೆ ಪ್ರಯೋಗ ನಿಂತೇ ಇಲ್ಲ. ಓಪನರ್ಸ್ ಇಂದ ಹಿಡ್ದು ನಂಬರ್ 10 ಬ್ಯಾಟಿರ್​​ವರೆಗೂ ಬದಲಾವಣೆ ಇದ್ದೇ ಇರುತ್ತೆ. ಟೆಸ್ಟ್​ನಲ್ಲಿ ಮಿಡಲ್ ಆರ್ಡರ್​ನಲ್ಲಿ ಚೇಂಜಸ್ ಇರುತ್ತೆ. ಌಂಡ್ ಓಡಿಐನಲ್ಲಿ ಕೆಎಲ್ ರಾಹುಲ್​ ಈಗ್ಲೂ ಒನ್ ಡೌನ್ ಆಡ್ತಿದ್ದಾರೆ. ಅಕ್ಷರ್ ಪಟೇಲ್​ಗೆ ಬಡ್ತಿ ಸಿಗ್ತಿದೆ. ಇನ್ನು ಟಿ-20ಐನಲ್ಲಂತೂ ಅಂದಾಜೂ ಮಾಡೋಕೆ ಆಗ್ತಿಲ್ಲ. ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಎರಡನೇ ಮ್ಯಾಚಲ್ಲಿ ಸಂಜು ಸ್ಯಾಮ್ಸನ್​ನ 3ನೇ ಸ್ಲಾಟ್​ನಲ್ಲಿ ಕಳಿಸ್ತಾರೆ. ಅದಕ್ಕಿಂತ ಮುಂಚೆ ಅವ್ರಯ 5ನೇ ಸ್ಲಾಟ್​ನಲ್ಲಿದ್ರು. ಬಟ್ ಆ ಪಂದ್ಯದಲ್ಲಿ ಸಂಜು 2 ರನ್​ಗಳಿಗೆ ಎಲ್​ಬಿಡಬ್ಲ್ಯೂ ಬಲೆಗೆ ಬೀಳ್ತಾರೆ. ನೆಕ್ಸ್​​ಟ್ ಸೂರ್ಯ, ತಿಲಕ್ ಸ್ಲಾಟ್ ವೇರಿಯೇಷನ್ ಆಗುತ್ತೆ. ಇನ್ನು ಇದೇ ಮ್ಯಾಚಲ್ಲಿ ಶಿವಂ ದುಬೆಗಿಂತ ಮೊದ್ಲು ರಾಣಾ ಬ್ಯಾಟಿಂಗ್ ಬರ್ತಾರೆ. ಇನ್ನು ಮೂರನೇ ಮ್ಯಾಚಲ್ಲಿ ಅಂಥಾ ದೊಡ್ಡ ವೇರಿಯೇಷನ್ಸ್ ಇಲ್ದಿದ್ರೂ ನಾಲ್ಕನೇ ಪಂದ್ಯದಲ್ಲಿ ಅಭಿಷೇಕ್ ಔಟ್ ಆಗ್ತಿದ್ದಂತೆ ಶಿವಂ ದುಬೆ ನಂಬರ್ 3 ಬ್ಯಾಟಿಂಗ್​ಗೆ ಬರ್ತಾರೆ. ಬಹುಶಃ ದುಬೆ ಕೂಡ ತಮ್ಮ ಕರಿಯರ್​ನಲ್ಲಿ ನಂಬರ್ 3ನಲ್ಲಿ ಬ್ಯಾಟಿಂಗ್ ಮಾಡ್ತೀನಿ ಅಂತಾ ಇಮ್ಯಾಜಿನ್ ಕೂಡ ಮಾಡಿರ್ಲಿಲ್ವೋ ಏನೋ. 18 ಎಸೆತಗಳಲ್ಲಿ 22 ರನ್ಸ್ ಹೊಡೆದ್ರು. ಇದ್ರಿಂದ ನೆಕ್ಸ್​ಟ್ ಬರೋ ಬ್ಯಾಟರ್​ಗಳ ಸ್ಲಾಟ್ ಕೂಡ ಚೇಂಜ್ ಆಯ್ತು. ಕೊನೆಗೆ ಮ್ಯಾಚ್ ವಿನ್ ಆದ್ರೂ ಅನ್ನೋದೇನೋ ಸರಿ. ಬಟ್ ಸ್ಲಾಟ್​ ಚೇಂಜ್ ಎಫೆಕ್ಟ್ ಏನೆಲ್ಲಾ ಆಗುತ್ತೆ ಗೊತ್ತಾ.

ಬೋನಸ್ ರನ್ ಟಾರ್ಗೆಟ್ ಉಲ್ಟಾ ಹೊಡೆಯಿತಾ?

ಸ್ಲಾಟ್ ಯಾಕೆ ಚೇಂಜ್ ಮಾಡ್ತಾರೆ ಅಂದ್ರೆ ಬೋನಸ್ ರನ್ಸ್ ಟಾರ್ಗೆಟ್​ನಲ್ಲಿ. ಅಂದ್ರೆ ಆಲ್ ರೌಂಡರ್ ಶಿವಂ ದುಬೆ 3ನೇ ಕ್ರಮಾಂಕದಲ್ಲಿ ಬಂದ್ರೆ ಅವ್ರ ವಿಕೆಟ್​​ ಮ್ಯಾಟ್ರ್ ಆಗಲ್ಲ. ಎಷ್ಟು ರನ್ಸ್ ಹೊಡೆದ್ರು ಅನ್ನೋದಷ್ಟೇ ಇಂಪಾರ್ಟೆಂಟ್. ಇವ್ರು ಡಿಫೆನ್ಸಿವ್ ಮೋಡ್​ನಲ್ಲಿ ಬ್ಯಾಟ್ ಬೀಸಂಗಿಲ್ಲ. ಫುಲ್ ಅಗ್ರೆಸ್ಸಿವ್ ಌಟಿಟ್ಯೂಡ್ ನಲ್ಲಿ ಆಡ್ಬೇಕು. ಬಿಗ್ ಹಿಟ್​ಗಳ ಮೂಲಕ ರನ್ಸ್ ಬಾರಿಸ್ಬೇಕು. ಇರೋವಷ್ಟು ಹೊತ್ತೂ ಕೂಡ ಸಿಕ್ಸ್, ಫೋರ್​ಗಳ ಕಡೆ ಫೋಕಸ್ ಮಾಡ್ಬೇಕು ಅಂತಾನೇ ಕಳ್ಸೋದು. ಬಟ್ ಹೀಗೆ ಬರೋ ಬ್ಯಾಟರ್​ಗಳು ಯಾರೂ ಕ್ಲಿಕ್ ಆಗ್ತಿಲ್ಲ ಅದೇ ಈಗ ಸಮಸ್ಯೆ ಆಗ್ತಿರೋದು. ಇನ್ನು ಸ್ಲಾಟ್ ವೇರಿಯೇಷನ್ಸ್ ನಿಂದ ತಂಡದ ಮೇಲೆ ಆಗೋ ಎಫೆಕ್ಟ್ ಏನೂ ಅನ್ನೋದನ್ನೂ ಹೇಳ್ತಾ ಹೋಗ್ತೇನೆ ನೋಡಿ.

ಸ್ಲಾಟ್ ಬದಲಾವಣೆ ಪರಿಣಾಮ!

ಸ್ಲಾಟ್ ಚೇಂಜ್ ಆದಾಗ ಸೆಟ್ ಆಗೋದು ಕಷ್ಟ

ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡೋದು ಅಸಾಧ್ಯ

ಕೆಎಲ್ ರಾಹುಲ್ & ಸಂಜು ಸ್ಯಾಮ್ಸನ್ ಫೇಲ್ಯೂರ್

ಉಳಿದ ಬ್ಯಾಟರ್ ಗಳ ಸ್ಲಾಟ್ ಕೂಡ ಚೇಂಜ್

ಪವರ್ ಪ್ಲೇನಲ್ಲಿ & ಡೆತ್ ಓವರ್ ನಲ್ಲಿ ಎಫೆಕ್ಟ್

ಆಲ್ ರೌಂಡರ್ಸ್ ಸ್ಪಿನ್ನರ್ ವಿರುದ್ಧ ಬೆಸ್ಟ್ ಇನ್ನಿಂಗ್ಸ್

ಹೀಗೆ ಒಬ್ಬರ ಸ್ಲಾಟ್ ಬದಲಾವಣೆ ಇಡೀ ತಂಡದ ಮೇಲೆ ಪರಿಣಾಮ ಬೀರುತ್ತೆ. ಈಗ ಅಭಿಷೇಕ್ ಶರ್ಮಾ ಓಪನರ್ ಆಗಿ ಕಂಟಿನ್ಯೂಯುಸ್ ಆಡಿಸ್ತಾ ಇರೋದ್ರಿಂದಲೇ ಅವ್ರಿಂದ ಒಳ್ಳೆ ಸ್ಕೋರ್ ಬರ್ತಿದೆ. ಒನ್ಸ್ ಬದಲಾವಣೆ ಮಾಡಿದ್ರೆ ಅವ್ರ ಮೇಲೂ ಎಫೆಕ್ಟ್ ಆಗುತ್ತೆ. ನಿನ್ನೆ ಮ್ಯಾಚಲ್ಲಿ ಭಾರತ ವಿನ್ ಆಯ್ತು ನಿಜ. ಬಟ್ ಇದು ಪ್ಯೂರ್ಲಿ ಬೌಲರ್​ಗಳ ಪರಿಶ್ರಮದಿಂದ ಅನ್ನೋದನ್ನ ಮರೆಯೋಕಾಗಲ್ಲ.

Shantha Kumari