ಭಾರತ ತಂಡಕ್ಕೆ ಪುಣೆ ಗ್ರೌಂಡ್ ಫೆವರೇಟ್ ಯಾಕೆ ? – ಬಾಂಗ್ಲಾ ಎದುರು ಹೆಚ್ಚು ಸ್ಕೋರ್ ಮಾಡುತ್ತಾ ಟೀಮ್ ಇಂಡಿಯಾ?

ಭಾರತ ತಂಡಕ್ಕೆ ಪುಣೆ ಗ್ರೌಂಡ್ ಫೆವರೇಟ್ ಯಾಕೆ ? – ಬಾಂಗ್ಲಾ ಎದುರು ಹೆಚ್ಚು ಸ್ಕೋರ್ ಮಾಡುತ್ತಾ ಟೀಮ್ ಇಂಡಿಯಾ?

ಆಸ್ಟ್ರೇಲಿಯಾ, ಪಾಕಿಸ್ತಾನ ವಿರುದ್ಧ ಆಡಿದಂತೆಯೇ ಟೀಂ ಇಂಡಿಯಾ ಬಾಂಗ್ಲಾವನ್ನ ಎದುರಿಸೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಿದ್ರೆ ಭಾರತ-ಬಾಂಗ್ಲಾ ಪಂದ್ಯ ನಡೆಯುತ್ತಿರುವ ಪುಣೆ ಸ್ಟೇಡಿಯಂನ ಪಿಚ್ ಹೇಗಿದೆ? ಯಾರಿಗೆ ಫೇವರ್ ಆಗಿದೆ? ಹಾಗೆಯೇ ಈ ಪಂದ್ಯ ಟೀಂ ಇಂಡಿಯಾಗೆ ತುಂಬಾ ಇಂಪಾರ್ಟೆಂಟ್ ಆಗಿರೋದ್ಯಾಕೆ?  ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ:  ಕ್ರಿಕೆಟ್‌ ಪ್ರೇಮಿಗಳಿಗೆ ಗುಡ್‌ ನ್ಯೂಸ್!‌ – ನಮ್ಮ ಮೆಟ್ರೋದಿಂದ ವಿಶೇಷ ಟಿಕೆಟ್‌ ವ್ಯವಸ್ಥೆ!

ಪುಣೆ ಗ್ರೌಂಡ್ ಬ್ಯಾಟ್ಸ್ಮನ್ಗಳ ಪಾಲಿನ ನೆಚ್ಚಿನ ಮೈದಾನ. ಮೊದಲು ಬ್ಯಾಟಿಂಗ್ ಮಾಡೋ ತಂಡ 300+ ಸ್ಕೋರ್ ಮಾಡಬಹುದು. ಇಲ್ಲಿ ಫಸ್ಟ್ ಇನ್ನಿಂಗ್ಸ್ನಲ್ಲಿ ಎವರೇಜ್ ಸ್ಕೋರ್ ಅಂದ್ರೆ 307 ರನ್. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಕಳೆದ 7 ಮ್ಯಾಚ್ಗಳ ಪೈಕಿ 5 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ 300+ ಸ್ಕೋರ್ ಮಾಡಿತ್ತು. ಈ ಪೈಕಿ ಎರಡು ಪಂದ್ಯಗಳಲ್ಲಿ ಮಾತ್ರ ಚೇಸ್ ಮಾಡಿದ ತಂಡ ಗೆದ್ದಿತ್ತು. 2017ರಲ್ಲಿ ಟೀಂ ಇಂಡಿಯಾ ಈ ಗ್ರೌಂಡ್ನಲ್ಲಿ 356/2 ರನ್ ಗಳಿಸಿತ್ತು. ಹೀಗಾಗಿ ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡದ ಓಪನಿಂಗ್ ಬ್ಯಾಟ್ಸ್ಮನ್ಗಳು ಉತ್ತಮ ಪಾಟ್ನರ್ಶಿಪ್ ನಲ್ಲಿ ಆಡಿದರೆ ದೊಡ್ಡ ಮೊತ್ತದ ಸ್ಕೋರ್ ಕಲೆ ಹಾಕೋದಂತೂ ಗ್ಯಾರಂಟಿ. ಇನ್ನು ಈ ಗ್ರೌಂಡ್ನಲ್ಲಿ ಚೇಸಿಂಗ್ ಮಾಡೋದೆ ದೊಡ್ಡ ಸವಾಲಾಗೋಕೆ ಇನ್ನೊಂದು ಪ್ರಮುಖ ಕಾರಣ ಕೂಡ ಇದೆ. ಪುಣೆಯದ್ದು ಕಂಪ್ಲೀಟ್ ಓಪನ್ ಗ್ರೌಂಡ್. ಅಂದರೆ, ಪ್ರೇಕ್ಷಕರು ಕುಳಿತುಕೊಳ್ಳುವ ಸ್ಟ್ಯಾಂಡ್ಗಳು ಹೆಚ್ಚು ಹೈಟ್ ಇಲ್ಲ. ಹೀಗಾಗಿ ಗ್ರೌಂಡ್ನಲ್ಲಿ ವೇಗವಾಗಿ ಗಾಳಿ ಬೀಸುತ್ತಲೇ ಇರುತ್ತೆ. ಹೀಗಾಗಿ ಬಾಲ್ ಕೂಡ ಗಾಳಿಯಲ್ಲೇ ಸ್ವಿಂಗ್ ಆಗುತ್ತೆ. ಅದ್ರಲ್ಲೂ ಸಂಜೆ, ರಾತ್ರಿ ಹೊತ್ತಿನಲ್ಲಂತೂ ಬಾಲ್ ಹೆಚ್ಚು ಸ್ವಿಂಗ್ ಆಗುತ್ತೆ. ಹೀಗಾಗಿ ಈ ಗ್ರೌಂಡ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡೋದು ಅಂದ್ರೆ ಚೇಸಿಂಗ್ ಅಷ್ಟು ಸುಲಭ ಅಲ್ಲ.

Sulekha