ಹೊಸ ವರ್ಷ.. ಹೊಸ ಟಾಸ್ಕ್ – ಈ ವರ್ಷ 3 ICC ವಿಶ್ವಕಪ್
2026ರಲ್ಲಿ ಭಾರತ ಫುಲ್ ಬ್ಯುಸಿ

ಹೊಸ ವರ್ಷಕ್ಕೆ ಕಾಲಿಟ್ಟಾಯ್ತು. ಜೊತೆ ಜೊತೆಗೆ ಹೊಸ ಟಾಸ್ಕ್ಗಳೂ ಶುರುವಾಗ್ತಿದೆ. ನ್ಯೂಜಿಲೆಂಡ್ ಸಿರೀಸ್ನೊಂದಿಗೆ ಈ ವರ್ಷದ ಜರ್ನಿ ಸ್ಟಾರ್ಟ್ ಮಾಡಲಿರೋ ಟೀಂ ಇಂಡಿಯಾ ಇಡೀ ವರ್ಷ ಫುಲ್ ಬ್ಯುಸಿ ಆಗಲಿದೆ. 2025ರಲ್ಲಿ ಭಾರತ ವೈಟ್ ಬಾಲ್ ಕ್ರಿಕೆಟ್ನಲ್ಲಿ ಡಾಮಿನೇಷನ್ ಮಾಡಿದ್ರೂ ರೆಡ್ ಬಾಲ್ ಫಾರ್ಮೆಟ್ನಲ್ಲಿ ಕಂಪ್ಲೀಟ್ ವೀಕ್ ಆಗಿದೆ. ಈ ವರ್ಷ ಮತ್ತೆ ಟೆಸ್ಟ್ ಕ್ರಿಕೆಟ್ನಲ್ಲಿ ಕಂ ಬ್ಯಾಕ್ ಮಾಡಲೇಬೇಕು. ಜನವರಿ ಸೆಕೆಂಡ್ ವೀಕ್ನಿಂದ ಭಾರತದ ಯಾತ್ರೆ ಶುರುವಾಗಲಿದೆ. ಸಾಲು ಸಾಲು ಸರಣಿಗಳಿದ್ದು ಅದ್ರಲ್ಲೂ 3 ವಿಶ್ವಕಪ್ ಅಂತೂ ಗೆಲ್ಲಲೇಬೇಕಿದೆ.
ಇದನ್ನೂ ಓದಿ : ಮಯಾಂಕ್ & ದೇವದತ್ ಪಡಿಕ್ಕಲ್ ಶತಕ – ಕರ್ನಾಟಕದ ಪರ ಸಿಡಿಲಬ್ಬರದ ಆಟ
2026ರ ದೊಡ್ಡ ಪಂದ್ಯಾವಳಿಗಳು!
WPL – ಜನವರಿ 9 ರಿಂದ ಫೆಬ್ರವರಿ 5
U19 ಪುರುಷರ ವಿಶ್ವಕಪ್ – ಜನವರಿ 15 ರಿಂದ ಫೆಬ್ರವರಿ 6
ICC ಪುರುಷರ T20 ವಿಶ್ವಕಪ್ – ಫೆಬ್ರವರಿ 7 ರಿಂದ ಮಾರ್ಚ್ 8
IPL – ಮಾರ್ಚ್ 26 ರಿಂದ ಮೇ 31
ICC ಮಹಿಳಾ T20 ವಿಶ್ವಕಪ್ – ಜೂನ್ 12 ರಿಂದ ಜುಲೈ 5
2026ರಲ್ಲಿ ಭಾರತ ಕಂಪ್ಲೀಟ್ ಬ್ಯುಸಿ!
ತಿಂಗಳು ಎದುರಾಳಿ ಪಂದ್ಯಗಳು
ಜನವರಿ ನ್ಯೂಜಿಲೆಂಡ್ 3 ಏಕದಿನ, 5 ಟಿ-20ಐ
ಜೂನ್ ಅಫ್ಘಾನಿಸ್ತಾನ 1 ಟೆಸ್ಟ್, 3 ಏಕದಿನ
ಜುಲೈ ಇಂಗ್ಲೆಂಡ್ 5 ಟಿ-20ಐ, 3 ಏಕದಿನ
ಆಗಸ್ಟ್ ಶ್ರೀಲಂಕಾ 2 ಟೆಸ್ಟ್
ಸೆಪ್ಟೆಂಬರ್ ಬಾಂಗ್ಲಾದೇಶ 3 ಏಕದಿನ, 3 ಟಿ-20ಐ
ಸೆಪ್ಟೆಂಬರ್ & ಅಕ್ಟೋಬರ್ ಅಫ್ಘಾನಿಸ್ತಾನ 3 ಟಿ20ಐ
ಅಕ್ಟೋಬರ್ ವೆಸ್ಟ್ ಇಂಡೀಸ್ 3 ಏಕದಿನ, 5 ಟಿ-20ಐ
ಅಕ್ಟೋಬರ್, ನವೆಂಬರ್ ನ್ಯೂಜಿಲೆಂಡ್ 2 ಟೆಸ್ಟ್, 3 ಏಕದಿನ, 5ಟಿ-20ಐ
ಡಿಸೆಂಬರ್ ಶ್ರೀಲಂಕಾ 3 ಏಕದಿನ, 3 ಟಿ-20ಐ

ನೋಡಿರಿ

