ಕುಲ್ದೀಪ್ ಔಟ್.. ಸರಾಂಶ್ ಗೆ ಚಾನ್ಸ್ – ಬ್ಯಾಟಿಂಗ್ ನಲ್ಲಿ ಬದಲಾವಣೆ ಬೇಕಿತ್ತಾ?
ಲಂಕಾ ಸ್ವೀಪ್ ಗೆ ಹೀಗಿದೆ ಪ್ಲೇಯಿಂಗ್ 11

ಕುಲ್ದೀಪ್ ಔಟ್.. ಸರಾಂಶ್ ಗೆ ಚಾನ್ಸ್ – ಬ್ಯಾಟಿಂಗ್ ನಲ್ಲಿ ಬದಲಾವಣೆ ಬೇಕಿತ್ತಾ?ಲಂಕಾ ಸ್ವೀಪ್ ಗೆ ಹೀಗಿದೆ ಪ್ಲೇಯಿಂಗ್ 11

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಮ್ಯಾಚ್ ಗೆದ್ದಿರೋ ಭಾರತ ಎರಡನೇ ಪಂದ್ಯಕ್ಕೆ ಸಿದ್ಧವಾಗ್ತಿದೆ. ಭಾನುವಾರ ಕೊಲೊಂಬೊ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯವನ್ನೂ ಗೆದ್ದು ಕ್ಲೀನ್ ಸ್ವೀಪ್ ಟಾರ್ಗೆಟ್​ನಲ್ಲಿರೋ ಭಾರತ ಪ್ಲೇಯಿಂಗ್ 11ನಲ್ಲಿ ಒಂದು ಬದಲಾವಣೆ ಮಾಡೋ ಚಾನ್ಸಸ್ ಇದೆ.

ಇದನ್ನೂ ಓದಿ : HITಮ್ಯಾನ್ ಸಮರಾಭ್ಯಾಸ ಶುರು – ವಿಶ್ವಕಪ್ ನಲ್ಲಿ ಓಪನರ್ ಸ್ಲಾಟ್ ಫಿಕ್ಸ್

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಭಾನುವಾರದಿಂದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈಗಾಗ್ಲೇ ಎರಡು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಲೀಡ್​ನಲ್ಲಿದೆ. WTC 2025-27 ಸೈಕಲ್​ನಲ್ಲಿ ಮತ್ತಷ್ಟು ಮುಂದೆ ಹೋಗ್ಬೇಕು ಅಂದ್ರೆ ಭಾರತ ಮಸ್ಟ್ ಌಂಡ್ ಶುಡ್ ಇಲ್ಲಿ ಗೆಲ್ಲಲೇಬೇಕು. ಹೀಗಾಗಿ ಈ ಪಂದ್ಯಕ್ಕೂ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಬೇಕು. ಬಟ್ ಮೊದಲ ಪಂದ್ಯಕ್ಕೆ ಕಂಪೇರ್ ಮಾಡಿದ್ರೆ ಈ ಪಂದ್ಯಕ್ಕೆ 1 ಬದಲಾವಣೆ ಮಾಡೋ ನಿರೀಕ್ಷೆ ಇದೆ.

ಮೂವರು ವಿಕೆಟ್ ಕೀಪರ್ ಬ್ಯಾಟರ್ಸ್ ಜೊತೆ ಮತ್ತೆ ಪ್ಲೇಯಿಂಗ್ 11!

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕೂಡ ಅತ್ಯುತ್ತಮವಾಗಿತ್ತು. ದೇವದತ್ ಪಡಿಕ್ಕಲ್ ಮೊದಲ ಇನ್ನಿಂಗ್ಸ್‌ನಲ್ಲಿ 167 ರನ್ ಗಳಿಸಿದ್ರೆ ಕೆಎಲ್ ರಾಹುಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ವಿಭಾಗದಲ್ಲಿ ಪರ್ಫಾಮೆನ್ಸ್ ಚೆನ್ನಾಗಿತ್ತು. ಸ್ಪಿನ್ನರ್‌ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ಅಂತೂ ಎಕ್ಸ್​ಟ್ರಾರ್ಡಿನರಿ ಪ್ರದರ್ಶನ ನೀಡಿದ್ರು. ಸುತಾರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್‌ಗಳನ್ನು ಪಡೆದ್ರು. ಆದ್ರೆ ಕುಲದೀಪ್ ಯಾದವ್ ಮೊದಲ ಇನ್ನಿಂಗ್ಸ್‌ನಲ್ಲಿ 14 ಓವರ್‌ಗಳಲ್ಲಿ 65 ರನ್‌ಗಳಿಗೆ 1 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 11 ಓವರ್‌ಗಳನ್ನ ಬೌಲ್ ಮಾಡಿದ್ರೂ ಯಾವುದೇ ವಿಕೆಟ್ ಪಡೆಯೋಕೆ ಆಗ್ಲಿಲ್ಲ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬದಲಿಗೆ ಸರಾಂಶ್ ಜೈನ್ ಗೆ ಅವಕಾಶ ನೀಡಬಹುದು. ಶ್ರೀಲಂಕಾ ತಂಡದಲ್ಲಿ ಆಫ್-ಸ್ಪಿನ್ ಬೌಲರ್ ಗಳ ಎದುರಲ್ಲಿ ಸ್ಟ್ರಗಲ್ ಪಡಬಹುದಾದ ಸಾಕಷ್ಟು ಎಡಗೈ ಬ್ಯಾಟ್ಸ್ ಮನ್ಸ್ ಇದ್ದಾರೆ. ಹೀಗಾಗಿ ಸರಾಂಶ್ ಜೈನ್ ಅವರನ್ನು ಭಾರತದ ಆಡುವ XI ತಂಡದಲ್ಲಿ ಸೇರಿಸಿಕೊಳ್ಳಬಹುದು. ಸರಾಂಶ್ ಚೆನ್ನಾಗಿ ಬ್ಯಾಟಿಂಗ್ ಕೂಡ ಮಾಡಬಹುದು. ಇನ್ನು ಸರಾಂಶ್ ಜೈನ್ 54 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, 85 ಇನ್ನಿಂಗ್ಸ್‌ಗಳಲ್ಲಿ 2223 ರನ್ ಗಳಿಸಿದ್ದಾರೆ ಮತ್ತು 97 ಇನ್ನಿಂಗ್ಸ್‌ಗಳಲ್ಲಿ 188 ವಿಕೆಟ್‌ಗಳನ್ನು ಪಡೆದಿದ್ದಾರೆ.

ಭಾರತದ ಸಂಭಾವ್ಯ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ದೇವದತ್ ಪಡಿಕ್ಕಲ್

ಶುಭಮನ್ ಗಿಲ್

ರಿಷಭ್ ಪಂತ್

ಧ್ರುವ್ ಜುರೆಲ್

ರವೀಂದ್ರ ಜಡೇಜಾ

ಮಾನವ್ ಸುತಾರ್

ಸರಾಂಶ್ ಜೈನ್

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

ಹೀಗೆ ಅಳೆದುತೂಗಿ ಒಂದು ಬದಲಾವಣೆಯೊಂದಿಗೆ ಹಳೇ ಟೀಂ ಫೈನಲ್ ಮಾಡಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಚೇಂಜಸ್ ಇಲ್ಲದಿದ್ರೂ ಬೌಲಿಂಗ್​ನಲ್ಲಿ 1 ಬದಲಾವಣೆ ಸಾಧ್ಯತೆಗಳಿವೆ. ಇನ್ನು ಕೊಲೊಂಬೊದ ಸಿಂಹಳೀಸ್ ಸ್ಪೋರ್ಟ್ ಕ್ಲಬ್ ಮೈದಾನ ಫಾಸ್ಟ್ ಬೌಲರ್ಸ್ ಮತ್ತು ಸ್ಪಿನ್ ಬೌಲರ್ಸ್ ಇಬ್ಬರಿಗೂ ಸಪೋರ್ಟಿವ್ ಆಗಿದೆ. ಪಂದ್ಯ ಆರಂಭದ ದಿನಗಳಲ್ಲಿ ಅಂದ್ರೆ ಫಸ್ಟ್ ಮತ್ತು ಸೆಕೆಂಡ್ ಇಲ್ಲಿ ಫಾಸ್ಟ್ ಬೌಲರ್​ಗಳಿಗೆ ಹೆಚ್ಚಿನ ಸಕ್ಸಸ್ ಸಿಗುತ್ತೆ. ಆ ನಂತ್ರ ಕೊನೆಯ ದಿನಗಳಲ್ಲಿ ಸ್ಪಿನ್ ಬೌಲರ್​ಗಳು ಮೇಲುಗೈ ಸಾಧಿಸುತ್ತಾರೆ. ಇನ್ನು ಬ್ಯಾಟಿಂಗ್​ಗೂ ಕೂಡ ಒಳ್ಳೆಯ ಸ್ಕೋರ್ ನಿರೀಕ್ಷೆ ಮಾಡ್ಬೋದು. ಟಾಸ್ ಗೆಲ್ಲುವ ನಾಯಕರು ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡಲು ಇಷ್ಟಪಡುತ್ತಾರೆ. ಮೊದಲ 2 ದಿನಗಳಲ್ಲಿ ಪಿಚ್ ಬ್ಯಾಟಿಂಗ್‌ಗೆ ಅತ್ಯುತ್ತಮವಾಗಿರುತ್ತದೆ. ಪಂದ್ಯದ ಕೊನೆಯ ದಿನಗಳಲ್ಲಿ ಪಿಚ್ Slow track ಆಗೋದ್ರಿಂದ 4ನೇ ಇನ್ನಿಂಗ್ಸ್​ನಲ್ಲಿ ಚೇಸಿಂಗ್ ಕಷ್ಟವಾಗುತ್ತೆ. ಹೀಗಾಗಿ ಟಾಸ್ ಗೆದ್ದವ್ರು ಫಸ್ಟ್ ಬ್ಯಾಟಿಂಗ್​ನೇ ಚೂಸ್ ಮಾಡಿಕೊಳ್ತಾರೆ.

Shantha Kumari

Leave a Reply

Your email address will not be published. Required fields are marked *