ಪವರ್ ಪ್ಲೇನಲ್ಲೇ ಪವರ್ ಶೋ – ಮ್ಯಾಚ್ ಗೆದ್ದ INDಗೆ ಅಡ್ವಾಂಟೇಜ್
IND Vs SA T-20I ಸರಣಿ ನಮ್ದೇ?

ಪವರ್ ಪ್ಲೇನಲ್ಲೇ ಪವರ್ ಶೋ – ಮ್ಯಾಚ್ ಗೆದ್ದ INDಗೆ ಅಡ್ವಾಂಟೇಜ್IND Vs SA T-20I ಸರಣಿ ನಮ್ದೇ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಮ್ಯಾಚಲ್ಲಿ ಕೊನೆಗೂ ಟೀಂ ಇಂಡಿಯಾ ಕಂ ಬ್ಯಾಕ್ ಮಾಡಿದೆ. ಸೆಕೆಂಡ್ ಮ್ಯಾಚ್ ಸೋತ್ರೂ ಮೂರನೇ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಲೀಡ್ ಸಾಧಿಸಿದೆ. ಟಾಸ್ ಗೆದ್ದ ಭಾರತ ಫಸ್ಟ್ ಓವರ್​ನಿಂದಲೇ ಕಂಪ್ಲೀಟ್ ಡಾಮಿನೇಟ್ ಮಾಡಿ ಗೆಲ್ತು. ಈ ಮೂರೂ ಪಂದ್ಯಗಳಲ್ಲೂ ಸೇಮ್ ಸಿಮಿಲಾರಿಟಿಸ್ ಇದೆ.

ಐದು ಪಂದ್ಯಗಳ ಟಿ-20ಐ ಸರಣಿಯ ಮೂರನೇ ಪಂದ್ಯ ಭಾನುವಾರ ಧರ್ಮಶಾಲಾದಲ್ಲಿ ನಡೀತು. ಇನ್ನು ಈ ಪಂದ್ಯಕ್ಕೆ ಭಾರತ ಪ್ಲೇಯಿಂಗ್ 11 ನಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ಹೊರಗಿಟ್ಟು ಕುಲ್ದೀಪ್ ಮತ್ತು ಹರ್ಷಿತ್ ರಾಣಾನ ಆಡಿಸಲಾಗಿತ್ತು. ಉಳಿದಂತೆ ಬ್ಯಾಟಿಂಗ್​ನಲ್ಲಿ ಯಾವುದೇ ಬದಲಾವಣೆ ಇರ್ಲಿಲ್ಲ. ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬೌಲಿಂಗ್ ಚೂಸ್ ಮಾಡಿಕೊಂಡ್ರು. ಈ ಪ್ಲ್ಯಾನ್ ಚೆನ್ನಾಗೇ ವರ್ಕೌಟ್ ಆಯ್ತು. ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿ ಭಾರತ 2-1 ಮುನ್ನಡೆ ಸಾಧಿಸಿತು. ಌಕ್ಚುಲಿ ಈ ಮ್ಯಾಚ್​ನ ಕಂಪ್ಲೀಟ್ ಕ್ರೆಡಿಟ್ ಬೌಲರ್​ಗಳಿಗೇ ಸಲ್ಲಬೇಕು.

ಇದನ್ನೂ ಓದಿ : ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪೊಲೀಸರು! – ಖಾಕಿಗೆ ಹೆದರಿ ಬಾಲ್ಕನಿಯಿಂದ ಹಾರಿದ ಯುವತಿ!

ದಕ್ಷಿಣ ಆಫ್ರಿಕಾ ಪರ ಮಾರ್ಕ್ರಂ ಏಕಾಂಗಿ ಹೋರಾಟ!

ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಮತ್ತು ರೀಜಾ ಹೆಂಡ್ರಿಕ್ಸ್ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ ಫಸ್ಟ್ ಓವರ್​ನಲ್ಲೇ ಅರ್ಶದೀಪ್ ಬಿಗ್ ಬ್ರೇಕ್ ಥ್ರ್ಯೂ ತಂದುಕೊಟ್ರು. ಹೆಂಡ್ರಿಕ್ಸ್ ರನ್ನ ಡಕ್ ಔಟ್ ಮಾಡಿದ್ರು. ಸೆಕೆಂಡ್ ಓವರ್​ನಲ್ಲಿ ಡಿಕಾಕ್​ಗೆ ರಾಣಾ ಪೆವಿಲಿಯನ್ ದಾರಿ ತೋರಿಸಿದ್ರು. ಪವರ್ ಪ್ಲೇನಲ್ಲೇ 25 ರನ್​ಗಳಿಗೆ ಸೌತ್ ಆಫ್ರಿಕಾ 3 ವಿಕೆಟ್ ಕಳ್ಕೊಂಡಿತ್ತು. ಅಲ್ಲಿಂದ ಆಚೆಗೆ ಮೇಲೆ ಏಳಲೇಇಲ್ಲ. ನಾಯಕ ಏಡಂ ಮಾರ್ಕ್ರಂ ಮಾತ್ರವೇ ಏಕಾಂಗಿ ಹೋರಾಟ ನಡೆಸಿದ್ರು. 61 ರನ್ ಗಳಿಸಿದ್ರು. ಉಳಿದಂತೆ ಫೆರೆರಾ ಮತ್ತು ನಾರ್ಟ್ಜೆ ಬಿಟ್ರೆ ಉಳಿದವರ್ಯಾರು ಡಬಲ್ ಡಿಜಿಟ್​ ಕೂಡ ಸ್ಕೋರ್ ಮಾಡ್ಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 117 ರನ್ ಗಳಿಸಿ ಆಲೌಟ್ ಆದ್ರು. ಭಾರತದ ಎಲ್ಲಾ ಬೌಲರ್‌ಗಳು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.

ಸಿಕ್ಸ್ ಮೂಲಕ ಖಾತೆ ತೆರೆದ ಅಭಿಷೇಕ್ ಆರ್ಭಟ!

ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಮತ್ತು ಗಿಲ್ ಇನ್ನಿಂಗ್ಸ ್ಆರಂಭಿಸಿದ್ರು. ಅಭಿಷೇಕ್ ಅಂತೂ ಫಸ್ಟ್ ಬಾಲಲ್ಲೇ ಸಿಕ್ಸ್ ಬಾರಿಸಿ ಬೌಲರ್​ಗೆ ಶಾಕ್ ಕೊಟ್ರು. ಇನ್ನು ಗಿಲ್ ಮತ್ತೊಂದು ಡಕ್​ಔಟ್ ಆಗೋದನ್ನ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ್ರು. ಒಂದ್ಕಡೆ ಗಿಲ್ ಕ್ರೀಸ್​ನಲ್ಲಿದ್ರೆ ಅತ್ತ ಗ್ಯಾಲರಿಯಲ್ಲಿ ಗಿಲ್ ಸಹೋದರಿ ಪ್ರಾರ್ಥನೆ ಮಾಡ್ತಿದ್ರು. ಈ ವೇಳೆ ಅಭಿಷೇಕ್ 35 ರನ್ ಗಳಿಸಿ ಔಟ್ ಆದ್ರು. ಗಿಲ್ ಕಾನ್ಫಿಡೆಂಟಾಗಿ ಕಂಡ್ರೂ ಕೂಡ ಅಭಿಷೇಕ್ ಔಟ್ ಆದ್ಮೇಲೆ ಮತ್ತೆ ಸ್ಟ್ರಗಲ್ ಕಾಣ್ತಿತ್ತು. ಅಂತಿಮವಾಗಿ 28 ರನ್ ಗಳಿಸಿ ಔಟಾದ್ರು. ಇನ್ನು ಸೂರ್ಯ 12 ರನ್​ಗಳಿಗೆ ಮತ್ತೆ ಪೆವಿಲಿಯನ್ ಸೇರಿದ್ರು. ಅಂತಿಮವಾಗಿ ದುಬೆ ಮತ್ತು ತಿಲಕ್ ವರ್ಮಾ ಮ್ಯಾಚ್ ಫಿನಿಶ್ ಮಾಡಿದ್ರು. ಭಾರತ 15.5 ಓವರ್‌ಗಳಲ್ಲಿ 120 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ಹಾಗೇ ಲೀಡ್ ಸಾಧಿಸಿದೆ. ಸದ್ಯ ಸರಣಿಯಲ್ಲಿ ಎರಡು ಪಂದ್ಯ ಬಾಕಿ ಇದ್ದು ನಾಲ್ಕನೇ ಪಂದ್ಯ ಡಿಸೆಂಬರ್ 17ಕ್ಕೆ ಲಕ್ನೋದಲ್ಲಿ ನಡೆಯಲಿದೆ. ಆ ನಂತ್ರ ಡಿಸೆಂಬರ್ 19ಕ್ಕೆ ಸರಣಿಯ ಕೊನೇ ಪಂದ್ಯ ನಡೆಯಲಿದೆ. ಸದ್ಯ ಭಾರತ ಮೂರನೇ ಮ್ಯಾಚ್ ಗೆದ್ದಿರೋದು ಬಿಗ್ ಅಡ್ವಾಂಟೇಜ್ ಇದೆ. ಉಳಿದ ಎರಡು ಪಂದ್ಯಗಳಲ್ಲಿ 1 ಮ್ಯಾಚ್ ಗೆದ್ರೂ ಸರಣಿ ಕೈವಶವಾಗುತ್ತೆ.

Shantha Kumari