ವೈಭವ್ ಜೋಡಿ ಸಂಜುನಾ.. ಅಭಿನಾ?  – ಭಾರತದ ಬೌಲಿಂಗ್ ನಲ್ಲಿ ಬೂಮ್ರಾಸ್ತ್ರ
AFG ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ವೈಭವ್ ಜೋಡಿ ಸಂಜುನಾ.. ಅಭಿನಾ?  – ಭಾರತದ ಬೌಲಿಂಗ್ ನಲ್ಲಿ ಬೂಮ್ರಾಸ್ತ್ರAFG ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಟಿ-20ಐ ಸರಣಿ ಭಾನುವಾರದಿಂದ ಸ್ಟಾರ್ಟ್ ಆಗ್ತಿದೆ. ಮೂರೂ ಪಂದ್ಯಗಳು ಕೂಡ ದೆಹಲಿಯ ಅರುಣ್ ಜೇಟ್ಲಿ  ಸ್ಟೇಡಿಯಮ್​ನಲ್ಲೇ ನಡೆಯಲಿವೆ. ಬಟ್ ಇಲ್ಲಿ ಮೊದಲ ಪಂದ್ಯಕ್ಕೆ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದೇ ಕ್ಯೂರಿಯಾಸಿಟಿ ಮೂಡಿಸಿದೆ. ಯಾಕಂದ್ರೆ ಓಪನಿಂಗ್ ಪೇರ್ ಚೇಂಜಸ್ ಆಗುತ್ತೆ.. ಬೌಲಿಂಗ್ ಯುನಿಟ್ ಬದಲಾಗಿದೆ. ಮಿಡಲ್ ಆರ್ಡರ್ ನಲ್ಲಿ ಆಪ್ಶನ್ಸ್ ಜಾಸ್ತಿಯಾಗಿದೆ.

ಇದನ್ನೂ ಓದಿ : ಬಾಂಗ್ಲಾ ಬೆಂಡೆತ್ತಲು ಭಾರತ ಸಿದ್ಧ – ಸೆಮೀಸ್ ಗೆದ್ರೆ PAK ವಿರುದ್ಧ ಫೈನಲ್?

ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಅನೌನ್ಸ್ ಮಾಡಿದ್ದ ತಂಡದಲ್ಲಿ ನಾಲ್ವರು ಪ್ಲೇಯರ್ಸ್ ಫಿಟ್​ನೆಸ್ ಕ್ಲಿಯರೆನ್ಸ್ ಪಡೆದಿರಲಿಲ್ಲ. ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ  ಹಾಗೇ ಹರ್ಷಿತ್ ರಾಣಾ. ಈ ಪೈಕಿ ಸುಂದರ್, ನಿತೀಶ್ ಹಾಗೂ ಬುಮ್ರಾಗೆ ಕ್ಲಿಯರೆನ್ಸ್ ಸಿಕ್ಕಿದ್ರೂ ರಾಣಾಗೆ ಸಿಕ್ಕಿಲ್ಲ. ಹೀಗಾಗಿ ರಾಣಾ ಬದಲಿಗೆ ಯಶ್ ಠಾಕೂರ್ ಸರಣಿಗೆ ಆಯ್ಕೆಯಾಗಿದ್ದಾರೆ. ಸೋ ಅಲ್ಲಿಗೆ ಕಂಪ್ಲೀಟ್ 15 ಜನರ ಟೀಂ ರೆಡಿಯಾಗಿದೆ. ಬಟ್ ಈ 15ರ ಪೈಕಿ ಯಾರೆಲ್ಲಾ ಪ್ಲೇಯಿಂ್ 11ನಲ್ಲಿ ಕಾಣಿಸಿಕೊಳ್ತಾರೆ ಅನ್ನೋದೇ ಇಲ್ಲಿರೋ ಪ್ರಶ್ನೆ.

ಸಂಜು ಸ್ಯಾಮ್ಸನ್ ವಾಪಸ್.. ಓಪನರ್ಸ್ ಯಾರು?

ಕಳೆದ ಬಾರಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್​ರನ್ನ ತಂಡಕ್ಕೆ ಸೆಲೆಕ್ಟ್ ಮಾಡಿರಲಿಲ್ಲ. ಹೀಗಾಗಿ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭ ಮಾಡಿದ್ರು. ಆದ್ರೆ ಆಫ್ಘನ್ ಸರಣಿಯಲ್ಲಿ ಈ ಮೂವರೂ ತಂಡದಲ್ಲಿದ್ದಾರೆ. ಹೀಗಾಗಿ ಓಪನರ್ಸ್ ಆಗಿ ಯಾರನ್ನ ಫೈನಲ್ ಮಾಡ್ತಾರೆ ಅನ್ನೋ ಪ್ರಶ್ನೆಗಳಿವೆ. ಅಭಿಷೇಕ್, ಸಂಜು ಅಥವಾ ಅಭಿಷೇಕ್ ವೈಭವ್ ಅಥವಾ ಸಂಜು, ವೈಭವ್ ಇನ್ನಿಂಗ್ಸ್ ಆರಂಭ ಮಾಡ್ತಾರೆ ಅನ್ನೋ ಗೊಂದಲಗಳಿವೆ. ಹಾಗೇ ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಕಂ ಬ್ಯಾಕ್ ಮಾಡಿರೋದ್ರಿಂದ ಬೌಲಿಂಗ್ ವಿಭಾಗ ಸ್ಟ್ರಾಂಗ್ ಆಗಲಿದೆ

 ಹೇಗಿರುತ್ತೆ ಭಾರತದ ಪ್ಲೇಯಿಂಗ್ 11?

ಅಭಿಷೇಕ್ ಶರ್ಮಾ

ವೈಭವ್ ಸೂರ್ಯವಂಶಿ

ಇಶಾನ್ ಕಿಶನ್

ಶ್ರೇಯಸ್ ಅಯ್ಯರ್

ತಿಲಕ್ ವರ್ಮಾ

ಶಿವಂ ದುಬೆ

ನಿತೀಶ್ ಕುಮಾರ್ ರೆಡ್ಡಿ

ಅಕ್ಷರ್ ಪಟೇಲ್

ವರುಣ್ ಚಕ್ರವರ್ತಿ

ಜಸ್ಪ್ರೀತ್ ಬುಮ್ರಾ

ಅರ್ಷದೀಪ್ ಸಿಂಗ್

ಅಲ್ಲಿಗೆ ಭಾರತದ ಬ್ಯಾಟಿಂಗ್, ಬೌಲಿಂಗ್, ಮಿಡಲ್ ಆರ್ಡರ್ ಹೀಗೆ ಎಲ್ಲವೂ ಸ್ಟ್ರಾಂಗ್ ಆಗೇ ಇದೆ. ಹೀಗಾಗಿ ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಕೂಡ ಆಗಿದೆ. ಹಾಗೇ ಅಫ್ಘಾನಿಸ್ತಾನ ಕೂಡ ಭಾರತವನ್ನ ಸೋಲಿಸೋ ಟಾರ್ಗೆಟ್​ನಲ್ಲಿದೆ. ಆಫ್ಘನ್ ತಂಡದ ಪ್ರಮುಖ ವೇಗದ ಬೌಲರ್ ನವೀನ್-ಉಲ್-ಹಕ್ 2 ವರ್ಷಗಳ ಬಳಿಕ ತಂಡಕ್ಕೆ ಕಂ ಬ್ಯಾಕ್ ಮಾಡಿರೋದು ಬಲ ಹೆಚ್ಚಿಸಿದೆ.  ನವೀನ್ ಸ್ಪೀಡ್, variation ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯದಿಂದ ಅಫ್ಘಾನ್ ಬೌಲಿಂಗ್ ಅಟ್ಯಾಕ್​ನ ಪ್ರಮುಖ ವೆಪನ್ ಆಗಲಿದ್ದಾರೆ.  ಅಫ್ಘಾನಿಸ್ತಾನದ ಬೌಲಿಂಗ್ ದಾಳಿಯಲ್ಲಿ ರಶೀದ್ ಖಾನ್ ಅವರ spin ಮತ್ತು ನವೀನ್ ಅವರ pace ಪ್ರಮುಖ ಕಾಂಬಿನೇಷನ್ ಆಗಬಹುದು. ಇನ್ನು ನವೀನ್ ಉಲ್ ಹಕ್ ಅಂದ್ರೆ ವಿರಾಟ್ ಕೊಹ್ಲಿ ಜೊತೆಗಿನ ಕಿರಿಕ್ ಕೂಡ ನೆನಪಾಗುತ್ತೆ. 2023ರ ಐಪಿಎಲ್​ನಲ್ಲಿ ಆರ್​ಸಿಬಿ ವರ್ಸಸ್ ಎಲ್​ಎಸ್​ಜಿ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಹ್ಯಾಂಡ್‌ಶೇಕ್ ವೇಳೆ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ಮಾಡಿದರು. ಆನಂತ್ರದಲ್ಲಿ ಆಗ ಲಕ್ನೋ ತಂಡದಲ್ಲಿ ಕೆಲಸ ಮಾಡ್ತಿದ್ದ ಗೌತಮ್ ಗಂಭೀರ್ ಕೂಡ ಕೊಹ್ಲಿ ಜೊತೆ ವಾಗ್ವಾದಕ್ಕೆ ಬಂದರು. ಮೈದಾನದಲ್ಲಿ ಕೈಕೈ ಮಿಲಾಯಿಸೋ ಮಟ್ಟಕ್ಕೆ ಜಗಳ ಆಗಿದೆ. ಇದ್ರಿಂದಾಗಿ ಕೊಹ್ಲಿಗೆ 100%, ಗಂಭೀರ್‌ಗೆ 100%, ಮತ್ತು ನವೀನ್‌ಗೆ 50% ಮ್ಯಾಚ್ ಫೀ ದಂಡ ವಿಧಿಸಲಾಗಿತ್ತು. ಇದೀಗ ಅದೇ ನವೀನ್ ಉಲ್ ಹಕ್ ಮತ್ತೊಮ್ಮೆ ಆಫ್ಘನ್ ತಂಡಕ್ಕೆ ಸೆಲೆಕ್ಟ್ ಆಗಿದ್ದು ಹೇಗೆ ಪರ್ಫಾಮ್ ಮಾಡ್ತಾರೆ ಅನ್ನೋದನ್ನ ನೋಡೋದಕ್ಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *