ಭಾರತಕ್ಕೆ WTC ಫೈನಲ್ ಮಿಸ್ – 5ನೇ ಸ್ಥಾನ.. ಟಾಪ್-2ಗಿದ್ಯಾ ಚಾನ್ಸ್?
9 ಮ್ಯಾಚ್.. ಮಸ್ಟ್ ವಿನ್ ಗೇಮ್ ಗಳೆಷ್ಟು?

ಭಾರತಕ್ಕೆ WTC ಫೈನಲ್ ಮಿಸ್ – 5ನೇ ಸ್ಥಾನ.. ಟಾಪ್-2ಗಿದ್ಯಾ ಚಾನ್ಸ್?9 ಮ್ಯಾಚ್.. ಮಸ್ಟ್ ವಿನ್ ಗೇಮ್ ಗಳೆಷ್ಟು?

ಸೌತ್ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನ ಸೋತಿರೋ ಟೀಂ ಇಂಡಿಯಾ ಅತಿದೊಡ್ಡ ಬೆಲೆ ತೆರಬೇಕಾಗಿದೆ. ಒಂದ್ಕಡೆ ಸೋಲಿನ ಮುಖಭಂಗ, ಇನ್ನೊಂದ್ಕಡೆ ಟೀಕೆ, ಮತ್ತೊಂದ್ಕಡೆ ಹೀನಾಯ ದಾಖಲೆ. ಆದ್ರೆ ಅದೆಲ್ಲಕ್ಕಿಂತ ಮುಖ್ಯವಾಗಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ ರೇಸ್​ನಿಂದಲೇ ಹೊರಬೀಳೋ ಆತಂಕ ಎದುರಾಗಿದೆ. ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಾರಿದೆ.

ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್​ನಲ್ಲಿ ಅದ್ರಲ್ಲೂ ತವರಿನಲ್ಲಿ ಅದ್ಭುತ ರೆಕಾರ್ಡ್ಸ್ ಹೊಂದಿದೆ. ಆದ್ರೆ ಕಳೆದೊಂದು ವರ್ಷದಿಂದ ಪಾತಾಳಕ್ಕೆ ಕುಸೀತಿದೆ. ಆದ್ರೆ ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಮಾತ್ರ ಯಾರಿಂದಲೂ ಸಾಧ್ಯವಾಗದ ವಿಶ್ವದಾಖಲೆ ನಿರ್ಮಿಸಿದ್ದಾರೆ.  ಟೆಂಬಾ ಬವುಮಾ ನಾಯಕತ್ವದಲ್ಲಿ ಸೌತ್ ಆಫ್ರಿಕಾ ತಂಡ ಈವರೆಗೆ ಒಂದೇ ಒಂದು ಟೆಸ್ಟ್ ಪಂದ್ಯ ಸೋತಿಲ್ಲ. ಅಲ್ದೇ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಟಾಪ್ 2ನಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಗಂಭೀರ್ ಕ್ಲೀನ್ ಸ್ವೀಪ್ ಸ್ಪೆಷಲಿಸ್ಟ್ – ಪ್ರಯೋಗವೋ? ಹುಚ್ಚಾಟವೋ?

ಅಂಕಪಟ್ಟಿಯಲ್ಲಿ ಪ್ರಸ್ತುತ ಆಸ್ಟ್ರೇಲಿಯಾ ನಂಬರ್ 1 ಸ್ಥಾನದಲ್ಲಿದೆ. 2025-27ರ ಸೈಕಲ್​ನಲ್ಲಿ ಈವರೆಗೆ ನಾಲ್ಕು ಪಂದ್ಯಗಳನ್ನ ಆಡಿದ್ದು ನಾಲ್ಕರಲ್ಲೂ ಗೆದ್ದಿದೆ. ಸೋ 100 ಪರ್ಸೆಂಟ್ ವಿನ್ನಿಂಗ್ ರಿಸಲ್ಟ್​ನೊಂದಿಗೆ ಫಸ್ಟ್ ಪ್ಲೇಸ್​ನಲ್ಲಿದೆ. ಇನ್ನು ಸೆಕೆಂಡ್ ಪ್ಲೇಸ್​ನಲ್ಲಿ ಹಾಲಿ ಚಾಂಪಿಯನ್ ಸೌತ್ ಆಫ್ರಿಕಾ ತಂಡ ಇದೆ. 4 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು 1ರಲ್ಲಿ ಸೋಲು ಕಂಡಿದ್ದಾರೆ. 75ಪರ್ಸೆಂಟ್ ಗೆಲುವು ಹೊಂದಿದೆ. ಇನ್ನು ಶ್ರೀಲಂಕಾ ತಂಡ ಮೂರನೇ ಸ್ಥಾನದಲ್ಲಿದ್ದು 2 ಪಂದ್ಯಗಳಲ್ಲಿ ಒಂದ್ರಲ್ಲಿ ಗೆದ್ದು ಒಂದ್ರಲ್ಲಿ ಸೋತಿದೆ. 66.67 ವಿನ್ನಿಂಗ್ ಪರ್ಸೆಂಟೇಜ್ ಇದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನ ಇದ್ದು 2 ಪಂದ್ಯಗಳ ಪೈಕಿ ಒಂದ್ರಲ್ಲಿ ಗೆಲುವು ಒಂದ್ರಲ್ಲಿ ಸೋಲು ಕಂಡಿದೆ. 50 ರಷ್ಟು ಗೆಲುವಿನ ಶೇಖಡಾವಾರು ಹೊಂದಿದೆ. ಇನ್ನು ಟೀಂ ಇಂಡಿಯಾ ಐದನೇ ಸ್ಥಾನಕ್ಕೆ ಜಾರಿದೆ. ಆಲ್ರೆಡಿ 9 ಪಂದ್ಯಗಳನ್ನ ಆಡಿರೋ ಭಾರತ ನಾಲ್ಕರಲ್ಲಿ ಗೆದ್ದು ನಾಲ್ಕರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ. 48.15 ವಿನ್ನಿಂಗ್ ಪರ್ಸೆಂಟೇಜ್ ಇದೆ.

ಸೋ ಈ ನಂಬರ್ಸ್ ನೋಡ್ದಾಗ ಭಾರತ ಟಾಪ್ 2ಗೆ ಹೋಗೋದು ಸುಲಭ ಇಲ್ಲ. ಯಾಕಂದ್ರೆ ಇಲ್ಲಿ ಗೆದ್ದಿದ್ದಕ್ಕಿಂತ ಜಾಸ್ತಿ ಕಳ್ಕೊಂಡಿದ್ದೇ ಇದೆ.  ಹಾಗಂತ ಫೈನಲ್​ಗೆ ಅರ್ಹತೆ ಪಡೆಯೋಕೆ ಸಾಧ್ಯನೇ ಇಲ್ಲ ಅಂತಾ ಹೇಳೋಕಾಗಲ್ಲ. ಬಟ್ ಮುಂದಿನ ಪಂದ್ಯಗಳಲ್ಲಿ ಮಸ್ಟ್ ವಿನ್ ಮ್ಯಾಚ್ ಪರ್ಫಾಮೆನ್ಸ್ ಬರಬೇಕು. ಹಾಗಾದ್ರೆ 2027ರ ವಿಶ್ವಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪಂದ್ಯದವರೆಗೆ ಭಾರತ ಎಷ್ಟು ಟೆಸ್ಟ್ ಮ್ಯಾಚ್​ಗಳನ್ನ ಆಡುತ್ತೆ. ಎಷ್ಟರಲ್ಲಿ ಗೆಲುವು ಸಾಧಿಸಿದ್ರೆ ಫೈನಲ್ ಟಿಕೆಟ್ ಅನ್ನೋದನ್ನ ಹೇಳ್ತೇನೆ ಅದಕ್ಕೂ ಮುನ್ನ ಯಾವ್ಯಾವ ಸರಣಿಗಳು ಅನ್ನೋದನ್ನ ನೋಡೋಣ.

ಭಾರತದ ಮುಂದಿನ ಟೆಸ್ಟ್ ಪಂದ್ಯಗಳು!

ರಾಷ್ಟ್ರಗಳು                           ಸ್ಥಳ            ಪಂದ್ಯಗಳು              ದಿನಾಂಕ

ಭಾರತ Vs ಶ್ರೀಲಂಕಾ              ಶ್ರೀಲಂಕಾ           2                   ಆಗಸ್ಟ್ 2026

ಭಾರತ Vs ನ್ಯೂಜಿಲೆಂಡ್         ನ್ಯೂಜಿಲೆಂಡ್         2                   ಅ.- ಡಿ. 2026

ಭಾರತ Vs ಆಸ್ಟ್ರೇಲಿಯಾ            ಭಾರತ              5                   ಜ. – ಫೆ. 2027

ಆಲ್ರೆಡಿ 9 ಪಂದ್ಯಗಳನ್ನ ಆಡಿರೋ ಭಾರತಕ್ಕೆ ನೆಕ್ಸ್​​ಟ್ ಡಬ್ಲ್ಯೂಟಿಸಿ ಫೈನಲ್​ ವೇಳೆಗೆ ಇನ್ನೂ 9 ಮ್ಯಾಚ್​ಗಳನ್ನ ಆಡ್ಬೇಕು. ಬಟ್ ಇರೋ ಚಾಲೆಂಜ್​ ಅಂದ್ರೆ ಪಂದ್ಯಗಳನ್ನ ಗೆಲ್ಲೋದು. ಈಗ ಭಾರತಕ್ಕಿರುವಂಥ ಚಾಲೆಂಜ್ ಇದೇ. 2025-27ನೇ ಸೈಕಲ್​ನಲ್ಲಿ ಭಾರತಕ್ಕೆ ಇನ್ನೂ 9 ಪಂದ್ಯಗಳು ಬಾಕಿ ಇವೆ. ಇದ್ರಲ್ಲಿ ಒಂಬತ್ತಕ್ಕೆ ಒಂಭತ್ತೂ ಪಂದ್ಯಗಳನ್ನ ಗೆದ್ರೆ  74.1ರಷ್ಟು ಗೆಲುವಿನ ಪರ್ಸೆಂಟ್​ ಹೊಂದಬಹುದು. ಅಥವಾ 7ರಲ್ಲಿ ಗೆದ್ದು 1 ಡ್ರಾ ಹಾಗೇ 1 ಸೋಲು ಕಂಡ್ರೆ 64.8 ಪರ್ಸೆಂಟ್ ತಲುಪಬಹುದು. ಅಥವಾ 6 ಗೆಲುವುಗಳು, ಎರಡು ಡ್ರಾ ಮತ್ತು ಒಂದು ಸೋಲು ಕಂಡ್ರೆ 61.1 ಪರ್ಸೆಂಟ್ ಆಗುತ್ತೆ. ಅಥವಾ ಆರು ಗೆಲುವುಗಳು, ಒಂದು ಡ್ರಾ ಮತ್ತು ಎರಡು ಸೋಲು ಕಂಡ್ರೆ 59.3 ಪರ್ಸೆಂಟ್ ಆಗುತ್ತೆ. ಹೀಗೆ WTC ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಬೇಕು ಅಂದ್ರೆ ಕನಿಷ್ಠ 6 ಪಂದ್ಯಗಳನ್ನಂತೂ ಗೆಲ್ಲಲೇಬೇಕು. ಇನ್ನು ನೆಕ್ಸ್​ಟ್ 2026ರ ಆಗಸ್ಟ್​ನಲ್ಲಿ ಟೆಸ್ಟ್ ಸಿರೀಸ್ ಇರೋದು. ಅಲ್ಲೀವರೆಗೂ ಭಾರತ ವೈಟ್ ಬಾಲ್ ಸಿರೀಸ್​ನಲ್ಲಿ ಬ್ಯುಸಿಯಾಗುತ್ತೆ. ಆದ್ರೆ ಒಂದಂತು ಸತ್ಯ ಟೀಂ ಇಂಡಿಯಾದಲ್ಲಿ ಈಗಿನಂತೆಯೇ ಪ್ಲೇಯರ್ಸ್, ಕೋಚ್, ಪ್ರಯೋಗ ನಡೀತಾ ಇದ್ರೆ ಮುಂದಿನ ಡಬ್ಲ್ಯೂಟಿಸಿ ಫೈನಲ್ ಕನಸು ಬಿಟ್ಟುಬಿಡಬೇಕು ಅಷ್ಟೇ.

Shantha Kumari