ನಿರಂತರ 8 ಪಂದ್ಯಗಳನ್ನು ಗೆದ್ದು ಬೀಗಿದ ಭಾರತ – ವರ್ಲ್ಡ್‌ಕಪ್ ಕ್ಲೀನ್‌ಸ್ವೀಪ್ ಮಾಡುತ್ತಾ ಟೀಮ್ ಇಂಡಿಯಾ?
ಟೀಂ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರೆದಿದೆ. ರಾಬಿನ್ ರೌಂಡ್ಸ್ ಸ್ಟೇಜ್ನಲ್ಲಿ ಆಡಿರುವ ಎಲ್ಲಾ 8 ಮ್ಯಾಚ್ಗಳನ್ನ ಕೂಡ ಭಾರತ ಗೆದ್ದುಕೊಂಡಿದೆ. ಇನ್ನು ಬಾಕಿ ಉಳಿದಿರುವುದು ನೆದರ್ಲ್ಯಾಂಡ್ ವಿರುದ್ಧದ ಮ್ಯಾಚ್. ಅದನ್ನು ಕೂಡ ಗೆಲ್ಲುವುದು ಗ್ಯಾರಂಟಿ. ಕೇವಲ ಪಂದ್ಯಗಳನ್ನ ಗೆಲ್ಲೋದು ಮಾತ್ರ ಮುಖ್ಯವಲ್ಲ. ಯಾವ ರೀತಿ ಗೆಲ್ಲುತ್ತಿದ್ದೇವೆ ಅನ್ನೋದು ಕೂಡಾ ಇಲ್ಲಿ ಮುಖ್ಯವಾಗುತ್ತದೆ.
ಇದನ್ನೂ ಓದಿ: ಭಾರತದ ಹುಲಿಗಳ ಅಬ್ಬರಕ್ಕೆ ಸೋತು ಸುಣ್ಣವಾದ ಹರಿಣಗಳು – ಟೀಮ್ ಇಂಡಿಯಾ ಪವರ್‌ಗೆ ಸೌತ್ಆಫ್ರಿಕಾ ಸುಸ್ತು
ಈ ಬಾರಿ ವರ್ಲ್ಡ್ಕಪ್ ಗೆಲ್ಲೋದು ಭಾರತವೇ.. ವರ್ಲ್ಡ್ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ನಿರಂತರವಾಗಿ 8 ಮ್ಯಾಚ್ಗಳನ್ನ ಗೆದ್ದಿದೆ. ಈಗಿನ ಟೀಂ ಇಂಡಿಯಾ ಹೈವೇನಲ್ಲಿ ಹೈಸ್ಪೀಡ್ ಆಗಿ ಹೋಗುತ್ತಿರುವ ಟ್ರಕ್ನಂತೆ ಕಾಣ್ತಿದೆ. ಯಾರಿಂದಲೂ ತಡೆಯೋಕೆ ಸಾಧ್ಯವೇ ಇಲ್ಲ. ಸೌತ್ ಆಫ್ರಿಕಾ ಕೋಚ್ ರಾಬ್ ವಾಲ್ಟರ್ಸ್ ಟೀಂ ಇಂಡಿಯಾದ ಬಗ್ಗೆ ಕೆಲ ವಿಚಾರ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮ್ಯಾಚ್ ಬಳಿಕ ಪ್ರೆಸ್ಮೀಟ್ನಲ್ಲಿ ಟೀಂ ಇಂಡಿಯಾದ ಬಗ್ಗೆ ಕೇಳಿದಾಗ, What should I say? All I can say is that this is a hell of a team. Hell of a team. ಇದು ಸೌತ್ ಆಫ್ರಿಕಾ ಕೋಚ್ ರಾಬ್ ವಾಲ್ಟರ್ಸ್ ಆಡಿರೋ ಮಾತು. ಇಷ್ಟೇ ಅಲ್ಲ, ಕೊಲ್ಕತ್ತಾ ಪಿಚ್ ಸ್ಪಿನ್ನರ್ಸ್ಗಳಿಗೆ ಹೆಚ್ಚು ಫೇವರ್ ಆಗಿದ್ದಿದ್ದು ನಿಮ್ಮ ಟೀಂ ಸರ್ಪ್ರೈಸ್ ಆಗಿಸ್ತಾ ಅಂತಾ ಕೇಳಿದಾಗ, ಸ್ಕೋರ್ ಬೋರ್ಡೇ ಎಲ್ಲಾ ಹೇಳುತ್ತೆ. ಮಾತನಾಡುವಂಥದ್ದು ಏನೂ ಇಲ್ಲ ಅಂದಿದ್ದಾರೆ. ಅಂದರೆ, ಟೀಂ ಇಂಡಿಯಾ ಇದೇ ಪಿಚ್ನಲ್ಲಿ 300+ ಸ್ಕೋರ್ ಮಾಡಿದೆ ಅನ್ನೋದು. ದಕ್ಷಿಣ ಆಫ್ರಿಕಾ ಕೋಚ್ ಪಾಕಿಸ್ತಾನಿಗಳಂತೆ, ಭಾರತದ ಬೌಲರ್ಸ್ಗಳಿಗೆ ಸ್ಪೆಷಲ್ ಬಾಲ್ ನೀಡಲಾಗ್ತಿದೆ. ಐಸಿಸಿ, ಬಿಸಿಸಿಐ ಟೀಂ ಇಂಡಿಯಾ ನೀಡುವ ಬೌಲ್ನೊಳಗೆ ಏನೋ ಇದೆ ಅಂತೆಲ್ಲಾ ನಾನ್ಸೆನ್ಸ್ ಸ್ಟೇಟ್ಮೆಂಟ್ನ್ನ ಕೊಟ್ಟಿಲ್ಲ. ಭಾರತೀಯ ತಂಡ ಆ ಲೆವೆಲ್ನಲ್ಲಿ ಆಲ್ರೌಂಡ್ ಪರ್ಫಾಮೆನ್ಸ್ ಕೊಡ್ತಿದೆ ಅನ್ನೋದನ್ನ ದಕ್ಷಿಣ ಆಫ್ರಿಕಾ ಕೋಚ್ ಕೂಡ ಒಪ್ಪಿಕೊಂಡಿದ್ದಾರೆ. ಇದುವೇ ರಿಯಾಲಿಟಿ.
ಟೀಂ ಇಂಡಿಯಾದ ಈಗಿನ ಗೆಲುವಿನ ನಗಾರಿ ನೋಡಿದರೆ ಸೆಮಿಫೈನಲ್ ಆಗಲಿ, ಫೈನಲ್ ಇರಲಿ ಯಾರಿಗೂ ಸೋಲಿಸಲು ಸಾಧ್ಯವೇ ಇಲ್ಲ. ಈ ವರ್ಲ್ಡ್ಕಪ್ನಲ್ಲಂತೂ ಟೀಂ ವನ್ ವೇ ರೋಡ್ನಲ್ಲಿ ಹೋಗ್ತಾ ಇರುವಂತೆ ಕಾಣ್ತಿದೆ. ಹಿಂದೆಯೂ ಯಾರೂ ಕಾಣ್ತಿಲ್ಲ.. ಮುಂದೆ ಅಂತೂ ಇಲ್ವೇ ಇಲ್ಲ.. ಈ ವರ್ಲ್ಡ್ಕಪ್ ಟೂರ್ನಿ ಆರಂಭವಾಗುವಾಗ ಟೀಂ ಇಂಡಿಯಾ ಪ್ಲೇಯರ್ಸ್ಗಳು ಈ ರೀತಿ ಆಡ್ತಾರೆ ಅಂತಾ ಯಾರು ಕೂಡ ಅಂದುಕೊಂಡಿರಲಿಲ್ಲ. ಈ ವರ್ಲ್ಡ್ಕಪ್ ಅಷ್ಟೊಂದು ಸುಲಭ ಇಲ್ಲ. ತಂಡ ಕಂಪ್ಲೀಟ್ ಸೆಟ್ ಆಗಿದ್ಯಾ? ಇಲ್ವಾ? ಈ ರೀತಿ ಸಾಕಷ್ಟು ಅನುಮಾನಗಳಿದ್ವು.. ಪ್ರಶ್ನೆಗಳಿದ್ವು.. ಕೆಲ ಇಂಡಿವಿಜ್ಯುವಲ್ ಪ್ಲೇಯರ್ಸ್ಗಳ ಬಗ್ಗೆ ಚರ್ಚೆಯಾಗುತ್ತಲೇ ಇತ್ತು. ಆದ್ರೀಗ ಇವೆಲ್ಲದಕ್ಕೂ ಟೀಂ ಇಂಡಿಯಾ ಆಟಗಾರರೇ ಪುಲ್‌ಸ್ಟಾಪ್ ಇಟ್ಟಿದ್ದಾರೆ.
ಜಗತ್ತಿನ ಎಲ್ಲಾ ಕ್ರಿಕೆಟ್ ಎಕ್ಸ್ಪರ್ಟ್ಗಳು.. ಮಾಜಿ ಕ್ರಿಕೆಟರ್ಸ್ಗಳು.. ಈವನ್ ಪ್ರಧಾನಿ ಮೋದಿ ಕೂಡ ಪಂದ್ಯ ಗೆದ್ದಾಗ ಟ್ವೀಟ್ ಮೂಲಕ ಈ ತಂಡವನ್ನ ಡಿಫೈನ್ ಮಾಡಿರೋದು ಒಂದೇ ವರ್ಡ್ ಮೂಲಕ.. ಅನ್ಸ್ಟಾಪೆಬಲ್..
ಕೇವಲ ಭಾರತೀಯರಿಗಷ್ಟೇ ಅಲ್ಲ, ವರ್ಲ್ಡ್ಕಪ್ ನೋಡ್ತಿರೋ ಎಲ್ಲರಿಗೂ ಅನ್ನಿಸ್ತಿರೋದು.. ಈ ಬಾರಿ ಟೀಂ ಇಂಡಿಯಾವನ್ನ ಕಟ್ಟಿ ಹಾಕೋದು ಸಾಧ್ಯವೇ ಇಲ್ಲ.. ವರ್ಲ್ಡ್ಕಪ್ ಗೆಲ್ಲೋದು ಭಾರತವೇ ಅನ್ನೋ ಭಾವನೆ ಫಿಕ್ಸ್ ಆಗಿಬಿಟ್ಟಿದೆ. ಮ್ಯಾಚ್ಗಳನ್ನ ಗೆಲ್ಲೋದಷ್ಟೇ ಅಲ್ಲ..ಎದುರಾಳಿ ಟೀಂಗಳನ್ನ ಅಕ್ಷರಶ: ಡೆಮಾಲಿಷ್ ಮಾಡ್ತಾ ಇದ್ದಾರೆ. ಎಲ್ಲಾ ಡಿಪಾರ್ಟ್ಮೆಂಟ್ನಲ್ಲೂ ಹೈಕ್ಲಾಸ್ ಪರ್ಫಾಮೆನ್ಸ್.. ಇದು ಹೇಗಾಗಿದೆ ಅಂದ್ರೆ, ಇಂಡಿಯಾದ ಮ್ಯಾಚ್ ಇದ್ದಾಗ, ಹೇ ನೋಡೋಕೇನಿದೆ ಗೆಲ್ತಾರೆ ಬಿಡು.. ಬರೀ ವನ್ ಸೈಡೆಡ್ ಗೇಮ್.. ಮ್ಯಾಚ್ ಇಂಟ್ರೆಸ್ಟಿಂಗೇ ಇರೋದಿಲ್ಲ.. ರೋಹಿತ್ ಶರ್ಮಾ ಸಿಕ್ಸರ್ ಹೊಡೀತಾರೆ.. ವಿರಾಟ್ ಕೊಹ್ಲಿ ಸೆಂಚೂರಿ ಹೊಡೀತಾರೆ.. ಶಮಿ..ಸಿರಾಜ್ ಕ್ಲೀನ್ ಬೌಲ್ಡ್ ಮಾಡ್ತಾರೆ.. ಬುಮ್ರಾ ಬೌನ್ಸರ್, ಯಾರ್ಕರ್ ಹಾಕ್ತಾರೆ.. ಜಡೇಜಾ, ಕುಲ್ದೀಪ್ ಸೇರಿ ಆಲೌಟ್ ಮಾಡ್ತಾರೆ.. ಇಷ್ಟೇ ನಡೀತಾ ಇರೋದು. ಆದ್ರೆ ಟೀಂ ಇಂಡಿಯಾ ಆಡ್ತಿರುವ ಯಾವ ಮ್ಯಾಚ್ ಕೂಡ ಥ್ರಿಲ್ಲಿಂಗ್ ಅನ್ನಿಸ್ತಾನೆ ಇಲ್ಲ. ಯಾಕಂದ್ರೆ ಎದುರಾಳಿ ಟೀಂಗಳಿಗೆ ಕಾಂಪಿಟೀಷನ್ನೇ ಕೊಡೋಕೆ ಆಗ್ತಿಲ್ಲ. ನಮ್ಮವರ ಬ್ಯಾಟಿಂಗ್.. ನಮ್ಮವರ ಬೌಲಿಂಗ್ ನೋಡೋದ್ರಲ್ಲೇ ಮಜಾ ಸಿಗ್ತಾ ಇದೆ. ಎನಿವೇ.. ಡಾಮಿನೇಟ್ ಬೇಕಾದ್ರೂ ಮಾಡಲಿ.. ಏನು ಬೇಕಿದ್ರೂ ಮಾಡಲಿ.. ಈ ಬಾರಿ ಮತ್ತೊಮ್ಮೆ ಟೀಂ ಇಂಡಿಯಾ ವರ್ಲ್ಡ್ಕಪ್ ಗೆದ್ದರೆ ಅಷ್ಟೇ ಸಾಕು.