ಪಾಕ್ ವಿರುದ್ಧ ಹೀನಾಯವಾಗಿ ಸೋತ ಯಂಗ್ ಟೀಮ್ ಇಂಡಿಯಾ – ಪದಕ ಪಡೆಯದೇ ಬಂದ ಭಾರತದ ಯುವ ಪಡೆ

ಪಾಕ್ ವಿರುದ್ಧ ಹೀನಾಯವಾಗಿ ಸೋತ ಯಂಗ್ ಟೀಮ್ ಇಂಡಿಯಾ – ಪದಕ ಪಡೆಯದೇ ಬಂದ ಭಾರತದ ಯುವ ಪಡೆ
ಪಾಕ್ ವಿರುದ್ಧ ಹೀನಾಯವಾಗಿ ಸೋತ ಯಂಗ್ ಟೀಮ್ ಇಂಡಿಯಾ – ಪದಕ ಪಡೆಯದೇ ಬಂದ ಭಾರತದ ಯುವ ಪಡೆ

ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಯುವಪಡೆ ಹೀನಾಯವಾಗಿ ಸೋತಿದೆ. ಈ ಬಾರಿ ಭಾರತ ಚಾಂಪಿಯನ್ ಆಗುತ್ತೆ ಎಂದು ಭಾವಿಸಲಾಗಿತ್ತು. ಆದರೆ, ಪಾಕ್ ವಿರುದ್ಧವೇ ಟೀಮ್ ಇಂಡಿಯಾ ಸೋತು ಮಂಡಿಯೂರಿದೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್‌ಗಳ ಜಯ – ಮತ್ತೆ ಮಿಂಚಿದ ಜೆಮಿಮಾ ರೋಡ್ರಿಗಸ್‌

ಅಂಡರ್-19 ಏಷ್ಯಾ ಕಪ್ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಮೊದಲು ಪಾಕಿಸ್ತಾನ ಟೀಮ್ ಬ್ಯಾಟಿಂಗ್ ಮಾಡಿದೆ. 348ರನ್‌ಗಳ ಬೃಹತ್ ಸ್ಕೋರ್ ದಾಖಲಿಸುವಲ್ಲಿ ಪಾಕ್ ಟೀಮ್ ಸಕ್ಸಸ್ ಆಗಿತ್ತು. ಭಾರತದ ಕಳಪೆ ಫೀಲ್ಡಿಂಗ್ ಕೂಡಾ ಪಾಕ್ ಬ್ಯಾಟರ್ಸ್‌ಗೆ ಸಹಾಯ ಮಾಡಿದ್ದಂತೂ ಸುಳ್ಳಲ್ಲ. ಜೊತೆಗೆ ಟೀಮ್ ಇಂಡಿಯಾ ಬೌಲರ್ಸ್ ಕೂಡಾ ಸ್ವಲ್ಪ ಧಾರಾಳಿಯಾಗಿಯೇ ರನ್ ಬಿಟ್ಟುಕೊಟ್ಟಿದ್ದರು. ನಂತರ 347 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ನಿರಾಶೆ ಕಾದಿತ್ತು. ಯಂಗ್ ಇಂಡಿಯಾ ಟೈಗರ್ಸ್ ಅಬ್ಬರಿಸಲೇ ಇಲ್ಲ. ಪೆವಿಲಿಯನ್ ಪರೇಡ್ ಮೂಲಕ ಭಾರತೀಯರನ್ನು ನಿರಾಶೆಗೊಳಿಸಿದರು. ಕೇವಲ 26ನೇ ಓವರ್‌ನಲ್ಲಿ ಭಾರತ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 156 ರನ್‌ಗಳ ಮೂಲಕ ಪಾಕಿಸ್ತಾನದ ಎದುರು ಸೋತು ಶರಣಾಗಿದೆ.

ಏಷ್ಯಾ ಕಪ್ ಆರಂಭದಿಂದಲೂ ಗೆಲುವಿನೊಂದಿಗೆ ಘರ್ಜಿಸುತ್ತಿರುವ ಯುವ ಭಾರತ ತಂಡವು ಫೈನಲ್ ಹಂತದಲ್ಲಿ ಮಕಾಡೆ ಮಲಗಿತು. ಇದರೊಂದಿಗೆ ಭಾರತವು ದಾಖಲೆಯ ಒಂಬತ್ತನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು. ಕೊನೆಯ ಬಾರಿಗೆ ಭಾರತ ತಂಡ 2021 ರಲ್ಲಿ ಚಾಂಪಿಯನ್ ಆಗಿತ್ತು.

ಫೈನಲ್ ಪಂದ್ಯದ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ ಮೈದಾನಕ್ಕೆ ಬಂದು ವಿಜೇತ ತಂಡಕ್ಕೆ ಟ್ರೋಫಿಯನ್ನು ಪ್ರದಾನ ಮಾಡಿದರು. ಪಾಕಿಸ್ತಾನ ಆಟಗಾರರಿಗೆ ವೈಯಕ್ತಿಕವಾಗಿ ಪದಕಗಳು ಮತ್ತು ಟ್ರೋಫಿಯನ್ನು ನೀಡಿ ಗೌರವಿಸಿದರು. ಆದರೆ, ಭಾರತ ಅಂಡರ್-19 ತಂಡವು ರನ್ನರ್-ಅಪ್ ಟ್ರೋಫಿ ಮತ್ತು ಪದಕಗಳನ್ನು ಸ್ವೀಕರಿಸಲು ನಿರಾಕರಿಸಿತು. ಪಂದ್ಯದ ನಂತರದ ಪ್ರದಾನ ಸಮಾರಂಭದಲ್ಲಿ ಭಾರತ ಆಟಗಾರರು ಭಾಗವಹಿಸಲಿಲ್ಲ. 2025ರ ಏಷ್ಯಾ ಕಪ್ ಗೆದ್ದ ನಂತರ ಭಾರತ ಸೀನಿಯರ್ ತಂಡವು ನಖ್ವಿ ಅವರಿಂದ ವಿಜೇತ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಈಗ ಜೂನಿಯರ್ ತಂಡವು ಅದನ್ನು ಅನುಸರಿಸಿತು.

ಫೈನಲ್‌ನಲ್ಲಿ ಸೋತ ನಂತರ ಭಾರತದ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ ಬೇಸರದಲ್ಲೇ ಮಾತನಾಡಿದರು. ಇದು ನಮಗೆ ಕೆಟ್ಟ ದಿನವಾಗಿತ್ತು ಮತ್ತು ಪಾಕಿಸ್ತಾನವು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿತು. ಫೈನಲ್‌ನಲ್ಲಿ ಭಾರತ ತಂಡದ ಕ್ಷೇತ್ರರಕ್ಷಣೆಯೂ ಕಳಪೆಯಾಗಿತ್ತು. ಆದರೆ ಪಂದ್ಯಗಳಲ್ಲಿ ಅದು ಸಂಭವಿಸುತ್ತದೆ. ನಮ್ಮ ಯೋಜನೆ ಸ್ಪಷ್ಟವಾಗಿತ್ತು. 50 ಓವರ್‌ಗಳಿಗೆ ಬ್ಯಾಟಿಂಗ್ ಮಾಡುವುದು, ಆದರೆ ಅದು ಆಗಲಿಲ್ಲ. ಆದಾಗ್ಯೂ, ಫೈನಲ್ ಹೊರತುಪಡಿಸಿ ಈ ಟೂರ್ನಮೆಂಟ್‌ನ ಪ್ರತಿಯೊಂದು ಪಂದ್ಯದಲ್ಲೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ ಎಂದು ತಮ್ಮ ಟೀಮ್‌ನ ತಪ್ಪನ್ನು ತಾವೇ ಸಮರ್ಥಿಸಿಕೊಂಡರು.

Sulekha