ವಿಕೆಟ್ ಉರುಳದೆ ಟೀಮ್ ಇಂಡಿಯಾ ಸುಸ್ತು, ಇಂಗ್ಲೆಂಡ್ ಗೆದ್ದೇ ಬಿಡ್ತು
ಆರಂಭಿಕರ ಫ್ಲಾಪ್ ಶೋ , ಗೆದ್ದು ಬೀಗಿದ ಇಂಗ್ಲೆಂಡ್

ವಿಕೆಟ್ ಉರುಳದೆ ಟೀಮ್ ಇಂಡಿಯಾ ಸುಸ್ತು, ಇಂಗ್ಲೆಂಡ್ ಗೆದ್ದೇ ಬಿಡ್ತುಆರಂಭಿಕರ ಫ್ಲಾಪ್ ಶೋ , ಗೆದ್ದು ಬೀಗಿದ ಇಂಗ್ಲೆಂಡ್

ಅಡಿಲೇಡ್ : ಕೋಟಿ ಕೋಟಿ ಹೃದಯಗಳ ಕೋರಿಕೆ ಕೊನೆಗೂ ಈಡೇರಲೇ ಇಲ್ಲ. ಭಾರತ ಟಿ20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡೇ ವಾಪಸ್ ಆಗುವುದು ಅನ್ನೋ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಸಿಕ್ಕಿದ್ದು ಬರೀ ನಿರಾಶೆ. ಸೆಮಿಫೈನಲ್‌ನಲ್ಲಿ ಭಾರತ ಅಭಿಮಾನಿಗಳಿಗೆ ಕೊಟ್ಟಿದ್ದು ಬರೀ ಹತಾಶೆ. ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಭಾರತ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಇಂಗ್ಲೆಂಡ್ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೆ.ಎಲ್ ರಾಹುಲ್‌ ಅವರನ್ನ ಆರಂಭದಲ್ಲೇ ಕಳೆದುಕೊಂಡಿತ್ತು. ಜಿಂಬಾಬ್ವೆ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಕೂಡಾ ಇವತ್ತು ನಿರಾಶೆ ಮೂಡಿಸಿದ್ದರು. ಆರಂಭಿಕರ ಫ್ಲಾಪ್ ಶೋ ನಿಂದ ಕುಸಿದ ಭಾರತಕ್ಕೆ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯರ ಅರ್ಧಶತಕ ಆಧಾರ ನೀಡಿತ್ತು. 169 ರನ್ ಗಳಿಸಿದ ಟೀಮ್ ಇಂಡಿಯಾ ಇಂಗ್ಲೆಂಡ್ ಗೆ ಸುಲಭದ ತುತ್ತಾಗುತ್ತೆ ಅಂತಾ ಅಭಿಮಾನಿಗಳು ಅಂದುಕೊಂಡಿರಲಿಲ್ಲ. 169 ರನ್ ಬೆನ್ನಟ್ಟಿದ ಇಂಗ್ಲೆಂಡ್ ಒಂದೂ ವಿಕೆಟ್ ನಷ್ಟವಿಲ್ಲದೇ ಗುರಿ ಮುಟ್ಟಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

suddiyaana