ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಕ್ವಾಲಿಫೈ ಆಗಲು ಟೀಮ್ ಇಂಡಿಯಾ ಮುಂದಿದೆ ಸವಾಲು..!

ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಕ್ವಾಲಿಫೈ ಆಗಲು ಟೀಮ್ ಇಂಡಿಯಾ ಮುಂದಿದೆ ಸವಾಲು..!

ಅದ್ಯಾಕೋ ಇಂಡಿಯನ್ ಕ್ರಿಕೆಟ್​​ ಟೀಮ್​ನ ಟೈಂ ಕೆಟ್ಟಂತೆ ಕಾಣ್ತಾ ಇದೆ. ವರ್ಲ್ಡ್​​ಕಪ್ ಫೈನಲ್ ಸೋತ್ರು.. ಈಗ ಸೌತ್​ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್​ ಮ್ಯಾಚ್​ನ್ನ ಕೂಡ ಹೀನಾಯವಾಗಿ ಸೋತಿದ್ದಾರೆ. ಇದ್ರ ಜೊತೆಗೆ ಟೀಂ ಇಂಡಿಯಾ ಮಾಡಿರೋ ಮತ್ತೊಂದು ಎಡವಟ್ಟಿನಿಂದಾಗಿ 2025ರಲ್ಲಿ ನಡೆಯೋ ವರ್ಲ್ಡ್​​ ಟೆಸ್ಟ್ ಚಾಂಪಿಯನ್​​ಶಿಪ್ ಕ್ವಾಲಿಫೈ ಆಗಲು ಭಾರತ ಸಮಸ್ಯೆ ಎದುರಿಸುವಂತಾಗಿದೆ.

ಇದನ್ನೂ ಓದಿ:ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು – ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎಡವಿದ್ದು ಎಲ್ಲಿ?

ದಕ್ಷಿಣ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ ಮ್ಯಾಚ್​​ನಲ್ಲಿ ಟೀಂ ಇಂಡಿಯಾ ಸೋಲುತ್ತಲೇ, ಮ್ಯಾಚ್​ ರಿಸಲ್ಟ್ ಹೊರ ಬರುತ್ತಲೇ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಂದು ಸ್ಟೇಟ್​ಮೆಂಟ್​​ನ್ನ ರಿಲೀಸ್ ಮಾಡಿತ್ತು. ವರ್ಲ್ಡ್​​ ಟೆಸ್ಟ್ ಚಾಂಪಿಯನ್​​ಶಿಪ್​ಗೆ ಸಂಬಂಧಿಸಿ ರೋಹಿತ್ ಶರ್ಮಾ ಸೈಡ್ ಎರಡು ಕ್ರೂಶಿಯಲ್ ಪಾಯಿಂಟ್​ಗಳನ್ನ ಕಳೆದುಕೊಂಡಿದೆ. ಸೌತ್​ ಆಫ್ರಿಕಾ ವಿರುದ್ಧದ ಫಸ್ಟ್​ ಟೆಸ್ಟ್ ಮ್ಯಾಚ್​​ನ ಲ್ಲಿ ಟೀಂ ಇಂಡಿಯಾ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದೆ. ಇದ್ರಿಂದಾಗಿ ಎರಡು ಓವರ್​ಗಳ ಶಾರ್ಟೇಜ್ ಆಗಿದೆ. ಹೀಗಾಗಿ ವರ್ಲ್ಡ್​​ ಟೆಸ್ಟ್​ ಕ್ರಿಕೆಟ್​​ ಚಾಂಪಿಯನ್​ಶಿಪ್​ಗೆ ಸಂಬಂಧಿಸಿ ಟೀಂ ಇಂಡಿಯಾ ಎರಡು ಪಾಯಿಂಟ್​ಗಳನ್ನ ಕಳೆದುಕೊಳ್ಳಬೇಕಾಗುತ್ತೆ ಅಂತಾ ಐಸಿಸಿ ಸ್ಟೇಟ್​ಮೆಂಟ್ ಕೊಟ್ಟಿತ್ತು. ಇದ್ರ ಜೊತೆಗೆ ಟೀಂ ಇಂಡಿಯಾದ ಪ್ಲೇಯರ್ಸ್​​ಗಳಿಗೆ 5 ಪರ್ಸೆಂಟ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮ್ಯಾಚ್​ ಫೀಸ್​ನ 10 ಪರ್ಸೆಂಟ್​​ನಷ್ಟು​​ ದಂಡ ವಿಧಿಸಲಾಗಿತ್ತು.

ಟೀಂ ಇಂಡಿಯಾ ಆಡುವ ಪ್ರತಿ ಟೆಸ್ಟ್ ಮ್ಯಾಚ್​ ಕೂಡ ವರ್ಲ್ಡ್​ ಟೆಸ್ಟ್ ಚಾಂಪಿಯನ್​​ಶಿಪ್ ಅಂಡರ್​​ನಲ್ಲೇ ಬರುತ್ತೆ. ಕೇವಲ ಟೀಂ ಇಂಡಿಯಾ ಅಂತೇನಲ್ಲಾ ಟೆಸ್ಟ್​ ಆಡುವ ಎಲ್ಲಾ ಟೀಂಗಳು ಕೂಡ 2025ರ ವರ್ಲ್ಡ್​ ಟೆಸ್ಟ್​​ ಚಾಂಪಿಯನ್​​ಶಿಪ್ ರೇಸ್​​ನಲ್ಲೇ ಇವೆ. ಸದ್ಯ ಟೀಂ ಇಂಡಿಯಾ ಮೂರು ಮ್ಯಾಚ್​ಗಳಲ್ಲಿ ಅಂದ್ರೆ, ಈ ಹಿಂದೆ ಆಡಿದ ಟೆಸ್ಟ್​ ಪಂದ್ಯಗಳನ್ನ ಕೂಡ ಸೇರಿಸಿ ಒಟ್ಟು 16 ಪಾಯಿಂಟ್ಸ್​​ಗಳನ್ನ ಗಳಿಸಿತ್ತು. ಪಾಯಿಂಟ್ಸ್​ ಪರ್ಸೆಂಟೇಜ್ 44.44ರಷ್ಟಿತ್ತು. ಹಾಗೆಯೇ WTC ಟೇಬಲ್​ನಲ್ಲಿ ಭಾರತ 5ನೇ ಪೊಸೀಶನ್​ನಲ್ಲಿತ್ತು. ಆದ್ರೆ ಸೌತ್​ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್​ನಲ್ಲಿ ಸ್ಲೋ ಬೌಲಿಂಗ್​​​ನಿಂದಾಗಿ ಎರಡು WTC ಪಾಯಿಂಟ್ಸ್​​ಗಳನ್ನ ಕಳೆದುಕೊಂಡಿದೆ. ಹೀಗಾಗಿ 16 ಇದ್ದ ಪಾಯಿಂಟ್ಸ್​ 14ಕ್ಕೆ ಇಳಿದಿದೆ. ಪಾಯಿಂಟ್ಸ್​ ಪರ್ಸೆಂಟೇಜ್ ಕೂಡ 44.44 ರಿಂದ 38.89ಗೆ ಡೌನ್ ಆಗಿದೆ. ಇನ್ನು ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ ಟೇಬಲ್​ನಲ್ಲಿ 5ರಿಂದ 6ನೇ ಸ್ಥಾನಕ್ಕೆ ಕುಸಿದಿದೆ.

ಸೌತ್​ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಸ್ಲೋ ಬೌಲಿಂಗ್ ಮಾಡಿದ್ರಿಂದ ಈಗ WTC ಪಾಯಿಂಟ್ಸ್​ನ್ನೇ ಕಳೆದುಕೊಂಡಿದೆ. ಒಂದು ವೇಳೆ ಕೇಪ್​​ಟೌನ್​ನಲ್ಲಿ ನಡೆಯೋ ಸೆಕೆಂಡ್ ಟೆಸ್ಟ್​ ಮ್ಯಾಚ್​​ನ್ನ ಕೂಡ ಸೋತ್ರೆ WTC ಕ್ವಾಲಿಫಿಕೇಶನ್​ಗೆ ಸಂಬಂಧಿಸಿ ಟೀಂ ಇಂಡಿಯಾದ ಸ್ವಿಚ್ಯುವೇಶನ್ ಇನ್ನಷ್ಟು ಸೀರಿಯಸ್ ಆಗುತ್ತೆ.

ಸೌತ್​ ಆಫ್ರಿಕಾ ಆದ್ಮೇಲೆ ಇಂಗ್ಲೆಂಡ್​ ಜೊತೆ 5 ಟೆಸ್ಟ್ ಮ್ಯಾಚ್​ಗಳಿರುತ್ತೆ. ನಂತರ ಆಸ್ಟ್ರೇಲಿಯಾದಲ್ಲಿ ಪುನ: 5 ಟೆಸ್ಟ್​​ ಮ್ಯಾಚ್​ಗಳನ್ನ ರೋಹಿತ್ ಟೀಂ ಆಡಲಿದೆ.

ಸದ್ಯ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್ ಪಾಯಿಂಟ್ಸ್ ಟೇಬಲ್ ಹೇಗಿದೆ ಅನ್ನೋದನ್ನ ಈ ಕೆಳಗಿದೆ.

  • ದಕ್ಷಿಣ ಆಫ್ರಿಕಾ – 100
  • ಪಾಕಿಸ್ತಾನ – 61.11
  • ನ್ಯೂಜಿಲ್ಯಾಂಡ್ – 50.00
  • ಬಾಂಗ್ಲಾದೇಶ  –  50.00
  • ಆಸ್ಟ್ರೇಲಿಯಾ – 41.67
  • ಭಾರತ    –  38.89

2025ರ ಜೂನ್​ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ನಡೆಯುತ್ತೆ. ಸದ್ಯದ ಪಾಯಿಂಟ್ಸ್​ ಟೇಬಲ್​ ನೋಡಿದ್ರೆ ಸೌತ್​ ಆಫ್ರಿಕಾ ಕ್ವಾಲಿಫೈ ಆಗೋ ಚಾನ್ಸ್ ಹೆಚ್ಚಿದೆ. ಯಾಕಂದ್ರೆ, ನೆಕ್ಸ್ಟ್ ಶ್ರೀಲಂಕಾ ಮತ್ತು ಪಾಕಿಸ್ತಾನದ ಜೊತೆಗೆ ಸೌತ್​​ ಆಫ್ರಿಕಾದಲ್ಲೇ ಟೆಸ್ಟ್ ಸೀರಿಸ್ ನಡೆಯುತ್ತೆ. ಹೋಮ್​ ಗ್ರೌಂನಲ್ಲಿ ಹರಿಣಗಳನ್ನ ಹೊಡೆಯೋರು ಸದ್ಯಕ್ಕಂತೂ ಯಾರೂ ಇಲ್ಲ. ಬಳಿಕ ನ್ಯೂಜಿಲ್ಯಾಂಡ್, ವೆಸ್ಟ್​ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಹೋಗಿ ಆಡ್ತಾರೆ.

ಇನ್ನು ಟೀಂ ಇಂಡಿಯಾದ ವಿಚಾರಕ್ಕೆ ಬರೋದಾದ್ರೆ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತದಲ್ಲೇ ಟೆಸ್ಟ್​ ಸೀರಿಸ್ ನಡೆಯುತ್ತೆ. ಬಳಿಕ ಆಸ್ಟ್ರೇಲಿಯಾಗೆ ಹೋಗಿ ನಮ್ಮವರು 5 ಮ್ಯಾಚ್​ಗಳನ್ನ ಆಡ್ತಾರೆ.  ಹೀಗಾಗಿ 2025ರ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ಗೆ ಕ್ವಾಲಿಫೈ ಆಗೋದು ಟೀಂ ಇಂಡಿಯಾಗೆ ಅಷ್ಟೊಂದು ಸುಲಭ ಇಲ್ಲ. ನಮ್ಮ ಜೊತೆ ಬಿಗ್ ರೇಸ್​​ನಲ್ಲಿರೋದು ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ. ಕಳೆದ 2 ಬಾರಿ ಕೂಡ ಟೀಂ ಇಂಡಿಯಾ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ನಲ್ಲಿ ಸೋತಿತ್ತು. ಈ ಬಾರಿ ರೋಹಿತ್ ಶರ್ಮಾ ಟೀಂ ಕ್ವಾಲಿಫೈ ಆಗುತ್ತಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.

Sulekha