ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ರೆಡಿ – ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್‌ಗೆ ಅವಕಾಶ

ಮೂರನೇ ಟೆಸ್ಟ್‌ಗೆ ಟೀಮ್ ಇಂಡಿಯಾ ರೆಡಿ – ಹರ್ಷಿತ್ ರಾಣಾ ಬದಲಿಗೆ ಆಕಾಶ್ ದೀಪ್‌ಗೆ ಅವಕಾಶ

ಗಾಬಾ ಮೈದಾನದಲ್ಲಿ ಶನಿವಾರದಿಂದ ಮೂರನೇ ಟೆಸ್ಟ್ ಶುರುವಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ. 3ನೇ ಟೆಸ್ಟ್‌ ಬ್ರಿಸ್ಟೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆಯಲಿದೆ.  ಪಿಚ್ ಹೆಚ್ಚಿನ ವೇಗ ಹಾಗೂ ಬೌನ್ಸ್ ಹೊಂದಿದ್ದು, ವೇಗಿಗಳಿಗೆ ನೆರವಾಗಲಿದೆ. 3ನೇ ಟೆಸ್ಟ್‌ಗೆ ಮಳೆ ಅಡ್ಡಿ ಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:KL Vs ROHIT.. ಓಪನರ್ ಯಾರು? – ಆಸಿಸ್ ವಿರುದ್ಧ 3ನೇ ಫೈಟ್ ಸವಾಲೇನು?

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ನಿಂದ ಭಾರತದ ಯುವ ವೇಗಿ ಹರ್ಷಿತ್ ರಾಣಾ ಹೊರಗುಳಿಯುವ ಸಾಧ್ಯತೆಗಳಿವೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಷಿತ್ ರಾಣಾ ಪಿಂಕ್ ಬಾಲ್‌ ಟೆಸ್ಟ್‌ನಲ್ಲಿ ನೀರಸ ಪ್ರದರ್ಶನ ತೋರಿದ್ರು. ಇದಕ್ಕಾಗಿ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಹರ್ಷಿತ್ ರಾಣಾ ಬದಲಿಗೆ ಆಕಾಶ್​ ದೀಪ್​ಗೆ ಅವಕಾಶ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಕೊಹ್ಲಿ 2 ರನ್ ಹೊಡೆದರೂ ಸಾಕು ಅವರು ರಾಹುಲ್ ದ್ರಾವಿಡ್ ಅವರ ದಾಖಲೆಯನ್ನ ಬ್ರೇಕ್ ಮಾಡಲಿದ್ದಾರೆ. ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ 62 ಇನ್ನಿಂಗ್ಸ್ ಗಳಿಂದ 2,166 ರನ್ ಗಳನ್ನು ಕಲೆ ಹಾಕಿದ್ದಾರೆ. ಕೊಹ್ಲಿ ಅವರು 48 ಇನ್ನಿಂಗ್ಸ್ ಗಳಿಂದ 2165 ರನ್ ಗಳಿಸಿದ್ದಾರೆ. ದ್ರಾವಿಡ್ ಅವರನ್ನು ದಾಟಿ ಮುಂದೆ ಸಾಗಲು ಕೊಹ್ಲಿಗೆ ಬೇಕಿರುವುದು ಕೇವಲ 2 ರನ್ ಗಳಷ್ಟೇ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ದೊಡ್ಡ ಹೆಡ್‌ಏಕ್ ಆಗಿದ್ದಾರೆ. ಅಡಿಲೇಡ್‌ನಲ್ಲಿ ಶತಕ ಬಾರಿಸಿದ್ದ ಹೆಡ್, ಟೀಂ ಇಂಡಿಯಾ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಗಾಬಾ ಮೈದಾನದಲ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಹೆಡ್ ಶೂನ್ಯಕ್ಕೆ ಔಟಾಗಿರುವುದು ರೋಹಿತ್​ ಪಡೆಗೆ ಪ್ಲಸ್ ಆಗಲಿದೆ. ಹೆಡ್ ಹೆಡೆಮುರಿ ಕಟ್ಟಲು ಟೀಮ್ ಇಂಡಿಯಾ ಬೌಲರ್ಸ್ ರೆಡಿಯಾಗಿದ್ದಾರೆ.

suddiyaana

Leave a Reply

Your email address will not be published. Required fields are marked *