ಪಾಯಿಂಟ್ಸ್ ಟೇಬಲ್‌ನಲ್ಲಿ ಟೀಮ್ ಇಂಡಿಯಾ ನಂಬರ್-1 – ಗೆದ್ದರೂ ಸಂತಸಪಟ್ಟಿಲ್ಲ ಕ್ಯಾಪ್ಟನ್ ರೋಹಿತ್ ಶರ್ಮಾ..!

ಪಾಯಿಂಟ್ಸ್ ಟೇಬಲ್‌ನಲ್ಲಿ ಟೀಮ್ ಇಂಡಿಯಾ ನಂಬರ್-1 – ಗೆದ್ದರೂ ಸಂತಸಪಟ್ಟಿಲ್ಲ ಕ್ಯಾಪ್ಟನ್ ರೋಹಿತ್ ಶರ್ಮಾ..!

ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಇದೇ ಮೊದಲ ಬಾರಿಗೆ ಫಸ್ಟ್ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಪಂದ್ಯ ಗೆದ್ದಿದೆ. ಇಂಗ್ಲೆಂಡ್​ ವಿರುದ್ಧದ ಗೆಲುವಿನ ಕ್ರೆಡಿಟ್ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೇಗಿ ಮೊಹಮ್ಮದ್ ಶಮಿಗೆ ಸಲ್ಲಬೇಕು. ಆದರೆ, ಗೆದ್ದರೂ ರೋಹಿತ್ ಶರ್ಮಾ ಸಂಭ್ರಮಪಟ್ಟಿಲ್ಲ. ಈ ಬಗ್ಗೆ ಕೆಲವೊಂದು ವಿಚಾರವನ್ನು ಸ್ವತಃ ರೋಹಿತ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಬಗ್ಗೆ ಧೋನಿ ಭವಿಷ್ಯ ನಿಜವಾಗುತ್ತಾ? – ಟೀಮ್ ಇಂಡಿಯಾ ಈ ಬಾರಿ ಚಾಂಪಿಯನ್ ಗ್ಯಾರಂಟಿನಾ?  

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಕ್ರಿಕೆಟ್ ತಂಡದ ಜಯದ ನಾಗಾಲೋಟ ಮುಂದುವರೆದಿದೆ. ಭಾನುವಾರ ಲಖನೌದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 100 ರನ್​ಗಳ ಅಮೋಘ ಗೆಲುವು ಕಂಡಿತು. ಹೇಳಿ ಕೇಳಿ ಲಕ್ನೋ ಪಿಚ್​​ ಬ್ಯಾಟ್ಸ್​​ಮನ್​ಗಳಿಗೆ ಫೇವರ್ ಆಗಿರಲಿಲ್ಲ. ರೋಹಿತ್​ ಶರ್ಮಾ ಎದುರಿಸಿದ ಫಸ್ಟ್ ಓವರ್​ ಮೇಡನ್ ಆಗಿತ್ತು. ಹೀಗಾಗಿ ಪಿಚ್ ಏನು ಅನ್ನೋದು ರೋಹಿತ್​​ಗೆ ಆರಂಭದಲ್ಲೇ ಅರ್ಥವಾಗಿತ್ತು. ಹೀಗಾಗಿ ಕ್ಯಾಪ್ಟನ್​ ಎಲ್ಲೂ ಅವಸರ ಮಾಡೋಕೆ ಹೋಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಲಕ್ನೋ ಪಿಚ್​​ನಲ್ಲಿ ರೋಹಿತ್​ ಶರ್ಮಾ ಹೊಡೆದ 87 ರನ್ ಆ್ಯಕ್ಚುವಲಿ 187 ರನ್​ಗೆ ಸಮ. ರೋಹಿತ್ ಶರ್ಮಾ ನಿಜಕ್ಕೂ ಪಿಚ್ ಕಂಡೀಷನ್​​ ಮತ್ತು ಸ್ವಿಚ್ಯುವೇಷನ್​​ಗೆ ತಕ್ಕಂತೆ ಬ್ಯಾಟಿಂಗ್ ಮಾಡಿದ್ರು. ಅದ್ರಲ್ಲೂ ಕ್ರೀಸ್​​​ನಿಂದ ಸ್ಪೆಪ್ ಔಟ್​ ಆಗಿ ಹೊಡೆದ ಸಿಕ್ಸರ್​​ಗಳಂತೂ ಟಾಪ್ ಕ್ಲಾಸ್. ಇದು ಲಕ್ನೋ ಪಿಚ್​​ನಲ್ಲಿ, ಇಂಗ್ಲೆಂಡ್​ ಬೌಲರ್ಸ್​​ಗಳಿಗೆ ರೋಹಿತ್​ ಶರ್ಮಾ ಕಂಡುಕೊಂಡ ಸೊಲ್ಯೂಷನ್. ಸ್ಪೆಪ್ಔಟ್ ಆಗಿ ರೋಹಿತ್ ಮೇಲಿಂದ ಮೇಲೆ ಸಿಕ್ಸರ್​ಗಳನ್ನ ಹೊಡೆದ್ರೆ. ವಿರಾಟ್ ಕೊಹ್ಲಿ ಕೂಡ ರೋಹಿತ್​ ಶರ್ಮಾರಂತೆ ಕ್ರೀಸ್​​ನಿಂದ ಸ್ಪೆಪ್ಔಟ್ ಹೊಡೆಯೋಕೆ ಯತ್ನಿಸಿದ್ರು. ಆದ್ರೆ ಕ್ಯಾಚ್ ಕೊಟ್ಟು ಔಟಾದ್ರು. ಬಳಿಕ ಕೆಎಲ್ ರಾಹುಲ್ ಕೂಡ ಅಷ್ಟೇ, ಸ್ಪೆಪ್ ಔಟ್ ಆಗಿ ಸಿಕ್ಸರ್​ ಹೊಡೆಯೋಕೆ ಹೋಗಿ ಕ್ಯಾಚ್​ ಕೊಟ್ರು. ಆದ್ರೆ ರೋಹಿತ್ ಶರ್ಮಾ ಮಾತ್ರ ಈ ಶಾಟ್​ ಹೊಡಿಯುವಲ್ಲಿ ಸಕ್ಸಸ್ ಆದ್ರು.

ಮ್ಯಾನ್​ ಆಫ್ ದಿ ಮ್ಯಾಚ್ ಬಳಿಕ ಮಾತನಾಡುವಾಗಲೂ ಅಷ್ಟೇ, ನಾನು ಇಷ್ಟು ವರ್ಷ ಎಕ್ಸ್​ಪೀರಿಯನ್ಸ್​ ಹೊಂದಿರುವಾಗ ಇಂಥಾ ಸ್ವಿಚ್ಯುವೇಷನ್​ನಲ್ಲಿ ನನ್ನ ಅನುಭವವನ್ನ ಬಳಸಿಕೊಳ್ಳಬೇಕು. ತಂಡಕ್ಕೆ ಏನು ಅಗತ್ಯ ಇದ್ಯೋ ಅದನ್ನೇ ಮಾಡಬೇಕು ಅಂತಾ ರೋಹಿತ್ ಹೇಳಿದರು. ಇಂಗ್ಲೆಂಡ್​ ವಿರುದ್ಧದ ಮ್ಯಾಚ್​​ನಲ್ಲಿ ರೋಹಿತ್​ ಶರ್ಮಾ ಲಕ್ನೋ ಪಿಚ್​​ನ್ನ ತುಂಬಾ ಚೆನ್ನಾಗಿಯೇ ರೀಡ್ ಮಾಡಿದ್ರು. ಅದು ಬ್ಯಾಟಿಂಗ್ ಮಾಡುವಾಗಲೇ ಆಗಲಿ, ಬೌಲಿಂಗ್ ಮಾಡುವಾಗಲೆ ಆಗಲಿ. ಈ ಪಿಚ್ ಏನು.. ಇಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕು.. ಯಾರಿಗೆ ಯಾವಾಗ ಬೌಲಿಂಗ್ ಕೊಡಬೇಕು ಅನ್ನೋದು ರೋಹಿತ್​​ಗೆ ಚೆನ್ನಾಗಿಯೇ ಅರ್ಥವಾಗಿತ್ತು. ಫಸ್ಟ್ ಬ್ಯಾಟಿಂಗ್​ಗೆ ಇಳಿದಾಗ ರೋಹಿತ್​ ಶರ್ಮಾ ಟೋಟಲ್ ಟೀಂ ಸ್ಕೋರ್ ಟಾರ್ಗೆಟ್ ಇಟ್ಟುಕೊಂಡಿದ್ದೇ 250 ರನ್ಸ್. ಮ್ಯಾಚ್​ ಬಳಿಕ ಮಾತನಾಡುವಾಗ ರೋಹಿತ್ ಅದನ್ನೇ ಹೇಳಿದ್ರು. ನಾವೊಂದು 30 ರನ್ಸ್ ಶಾರ್ಟೇಜ್​ ಆದ್ವಿ ಅಂತಾ. ಆದ್ರೆ, ಇಂಗ್ಲೆಂಡ್​​ ಬ್ಯಾಟ್ಸ್​​ಮನ್​ಗಳಿಗೆ ಕ್ರೀಸ್​​ಗೆ ಇಳಿದಾಗಲೆ ಗೊತ್ತಾಗಿದ್ದು, ಲಕ್ನೋ ಪಿಚ್​ನ ಕಥೆಯೇನು ಅನ್ನೋದು.

Sulekha