ಒಂದೇ ದಿನ ಭಾರತ HAT-TRICK – ಬೌಲಿಂಗ್ ALL-OUT ಅಸ್ತ್ರ ಸೂಪರ್
ವಿಶ್ವಕಪ್ ನಲ್ಲೂ ಸಿಂಹಿಣಿಯರ ಗರ್ಜನೆ!

ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದೆ. ಅದ್ರಲ್ಲೂ ನಿನ್ನೆ ಒಂದೇ ದಿನ ಹ್ಯಾಟ್ರಿಕ್ ಗೆಲುವು. ಮೋಸ್ಟ್ ಇಂಪಾರ್ಟೆಂಟ್ಲಿ ಎಲ್ಲವೂ ಕೂಡ ಒನ್ ಸೈಡ್ ವಿಕ್ಟರಿ. ಭಾರತ ಈಗ ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್ಗಳ ಮೂಲಕ ಬ್ಯುಸಿ ಇದೆ. ಒಂದ್ಕಡೆ ಎ ತಂಡಗಳ ನಡುವೆ ತ್ರಿಕೋನ ಏಕದಿನ ಸರಣಿ.. ಇನ್ನೊಂದ್ಕಡೆ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಏಕದಿನ ಸರಣಿ.. ಮತ್ತೊಂದು ಕಡೆ ಮಹಿಳಾ ಟಿ-20 ವಿಶ್ವಕಪ್. ಮೂರೂ ಪಂದ್ಯಗಳಲ್ಲೂ ಭಾರತ ನಿನ್ನೆ ಗೆದ್ದು ಬೀಗಿದೆ. ಅಂಡ್ ಮೂರೂ ವಿಕ್ಟರಿಗಳು ಬಿಗ್ ಇಂಪಾಕ್ಟ್ ಮಾಡಿದೆ.
ಇದನ್ನೂ ಓದಿ : ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ IND ಅಬ್ಬರ – ನೆದರ್‌ಲ್ಯಾಂಡ್‌ಗೆ ಮಣ್ಣು ಮುಕ್ಕಿಸಿ ಟೇಬಲ್ ಟಾಪ್‌ಗೆ ಹೋದ ಭಾರತ
ಅಫ್ಘನ್ ವಿರುದ್ದ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟ ಭಾರತ ಎ ಟೀಂ!
ಭಾರತ, ಶ್ರೀಲಂಕಾ ಹಾಗೂ ಅಫ್ಘನ್ ಎ ತಂಡಗಳ ನಡುವಿನ ತ್ರಿಕೋನ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನ ಸೋತಿದ್ದ ಭಾರತ ಫೈನಲ್ ನಿಂದಲೇ ಹೊರಬೀಳೋ ಆತಂಕದಲ್ಲಿತ್ತು. ಆದ್ರೆ ಅಫ್ಘನ್ ವಿರುದ್ಧದ ಮ್ಯಾಚ್ ನಲ್ಲಿ ಭರ್ಜರಿಯಾಗಿ ಗೆದ್ದು ಫೈನಲ್ ಗೆ ಅರ್ಹತೆ ಪಡೆದಿದೆ. ಫಸ್ಟ್ ಬ್ಯಾಟಿಂಗ್ ಮಾಡಿದ ಭಾರತ ಎ ಪರ ನಾಯಕ ತಿಲಕ್ ವರ್ಮಾ (59), ಪ್ರಿಯಾಂಶ್ ಆರ್ಯ (58) ಮತ್ತು ಕುಮಾರ್ ಕುಶಾಗ್ರ (58) ರನ್ಸ್ ಕಲೆ ಹಾಕಿದ್ರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 319 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಫ್ಘಾನಿಸ್ತಾನ್ ಎ ತಂಡವು 36.5 ಓವರ್ಗಳಲ್ಲಿ ಕೇವಲ 218 ರನ್ಗಳಿಸಿ ಆಲೌಟ್ ಆಯ್ತು. ಈ ಮೂಲಕ ಭಾರತ ಎ ತಂಡವು 101 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ನೆಟ್ ರನ್ ರೇಟ್ +0.797 ಕ್ಕೇರಿದ್ದು 4 ಅಂಕಗಳನ್ನು ಪಡೆದಿರುವ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಂಕಾ ಮತ್ತು ಆಫ್ಘನ್ ನಡುವಿನ ಮ್ಯಾಚ್ ನಲ್ಲಿ ಯಾರೇ ಗೆದ್ರೂ ಭಾರತ ಅಂತೂ ಫೈನಲ್ ಆಡೋದು ಪಕ್ಕಾ ಆಗಿದೆ. ಮತ್ತೊಂದೆಡೆ ಸೀನಿಯರ್ಸ್ ಟೀಂ ಕೂಡ ಅಬ್ಬರಿಸಿದೆ.
ಇನ್ನೂ ಒಂದು ಪಂದ್ಯ ಇದ್ದಂತೆಯೇ ಸರಣಿ ಗೆದ್ದ ಭಾರತ!
ಇನ್ನು ಭಾರತ ಮತ್ತು ಅಫ್ಘನಿಸ್ತಾನ ನಡುವಿನ ಮೂರೂ ಪಂದ್ಯಗಳ ಏಕದಿನ ಸರಣಿಯನ್ನ ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಭಾರತ ಕೈ ವಶ ಮಾಡಿಕೊಂಡಿದೆ. ಏಕನಾ ಸ್ಟೇಡಿಯಂ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತ ಭಾರತ ಬ್ಯಾಟಿಂಗ್ ನಲ್ಲಿ ಅದ್ಬುತ ಪ್ರದರ್ಶನ ನೀಡಿತ್ತು. ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಅವ್ರ ಅದ್ಭುತ ಜೊತೆಯಾಟ ಮತ್ತು ಇಬ್ಬರ ಸೆಂಚುರಿ ಗಳಿಂದಾಗಿ 402 ರನ್ಸ್ ಕಲೆ ಹಾಕಿತ್ತು. ಅಫ್ಘನ್ ತಂಡಕ್ಕೆ 403 ರನ್ಸ್ ಟಾರ್ಗೆಟ್ ನೀಡಿದ್ರು. ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ 44.3 ಓವರ್ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ 170 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇನ್ನೂ ಒಂದು ಪಂದ್ಯ ಬಾಕಿ ಇದ್ದಂತೆಯೇ ಸರಣಿ ಗೆದ್ದು ಬೀಗಿದೆ. ಇತ್ತ ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಸಿಂಹಿಣಿಯರು ಕೂಡ ಅಬ್ಬರಿಸಿದ್ದಾರೆ.
ನೆದರಲ್ಯಾಂಡ್ ವಿರುದ್ಧ ಕೌರ್ ಪಡೆಗೆ ಭರ್ಜರಿ ಜಯ!
ಹಾಗೆ ಮಹಿಳಾ ಟಿ 20 ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ದ ಗೆದ್ದು ಟೂರ್ನಿ ಶುಭಾರಂಭ ಮಾಡಿದ್ದ ಭಾರತ ನೆದರಲ್ಯಾಂಡ್ ವಿರುದ್ಧ ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದೆ. ಸ್ಮೃತಿ ಮಂದಾನ ಅವರ ಅದ್ಬುತ ಬ್ಯಾಟಿಂಗ್ ಮೂಲಕ ಬಿಗ್ ಸ್ಕೋರ್ ಸೆಟ್ ಮಾಡಿದ ಸಿಂಹಿಣಿಯರು ನೆದರಲ್ಯಾಂಡ್ ತಂಡವನ್ನು ಬೇಟೆಯಾಡಿದ್ದಾರೆ. ಫಸ್ಟ್ ಬ್ಯಾಟಿಂಗ್ ಮಾಡಿದ ಭಾರತ 209 ರನ್ ಗಳಿಸಿ, ನೆದರ್ಲ್ಯಾಂಡ್ಸ್ ತಂಡವನ್ನು 114 ರನ್‌ಗಳಿಗೆ ಆಲೌಟ್ ಮಾಡಿತು. ಈ ಮೂಲಕ 95 ರನ್‌ಗಳ ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ರನ್‌ಗಳ ವಿಷಯದಲ್ಲಿ ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ ಗೆಲುವಾಗಿದೆ. ಈ ಗೆಲುವಿನೊಂದಿಗೆ ಭಾರತ ಗ್ರೂಪ್ ಎ ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಟ್ನಲ್ಲಿ ಮೂರೂ ಪಂದ್ಯಗಳಲ್ಲೂ ಭರ್ಜರಿ ಬ್ಯಾಟಿಂಗ್ ಹಾಗೇ ಬೌಲಿಂಗ್ ನಲ್ಲೂ ಆರ್ಭಟ ನೀಡಿದ್ದಾರೆ. ಹಾಗೇ ಮೂರೂ ಪಂದ್ಯಗಳಲ್ಲೂ ಆಲೌಟ್ ಮಾಡಿ ಬೌಲಿಂಗ್ ಯುನಿಟ್ ಕೂಡ ಎಷ್ಟು ಸ್ಟ್ರಾಂಗ್ ಇದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ನೋಡಿರಿ

