ನ್ಯೂಜಿಲೆಂಡ್ ಗೆ ನೀರು ಕುಡಿಸಿದ್ದೇ ವರುಣ್ ಚಕ್ರವರ್ತಿ – 25 ವರ್ಷಗಳ ಸೇಡು ಕೊನೆಗೂ ತೀರಿತು!

ಚೇಸಿಂಗ್ನಲ್ಲಿ ಚಿಂದಿ ಚಿತ್ರಾನ್ನದಂತ ಪರ್ಫಾಮೆನ್ಸ್ ನೀಡಿ ಡಿಫೈನ್ನಲ್ಲೂ ಸೂಪರ್ ಡೂಪರ್ ಪರ್ಫಾಮೆನ್ಸ್ ಕೊಟ್ಟಿರೋ ಟೀಂ ಇಂಡಿಯಾ ಹ್ರಾಟ್ರಿಕ್ ಗೆಲುವು ಕಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ಯಾನ ಕಂಟಿನ್ಯೂ ಆಗಿದೆ. ಭಾರತಕ್ಕೆ ಚೋಕ್ ಕೊಡೋಕೆ ಹೊರಟಿದ್ದ ಬ್ಲ್ಯಾಕ್ ಕ್ಯಾಪ್ಸ್ ತಾವೇ ಬೆಪ್ಪಾಗಿದ್ದಾರೆ. ಸದ್ಯ ಚಾಂಪಿಯನ್ಸ್ ಟ್ರೋಫಿ ಕೊನೇ ಹಂತಕ್ಕೆ ಬಂದಿದ್ದು ಇನ್ನೇನಿದ್ರೂ ಸೆಮೀಸ್ ಮ್ಯಾಚ್ಗಳ ಕಾದಾಟ ನಡೆಯಲಿದೆ.
ಇದನ್ನೂ ಓದಿ : IND Vs NZ.. ಕೊಹ್ಲಿಯೇ ಟಾರ್ಗೆಟ್ – ವಿರಾಟ್ ಮೇಲೆ 3 ಬೌಲರ್ಸ್ ಕಣ್ಣು
ಭಾನುವಾರದ ಮ್ಯಾಚಲ್ಲಿ ಟೀಂ ಇಂಡಿಯಾಗೆ ಬೆನ್ನೆಲುಬಾಗಿದ್ದೇ ಶ್ರೇಯಸ್ ಮತ್ತು ಪಟೇಲ್. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಂಡಿದ್ದ ಭಾರತಕ್ಕೆ ನೆರವಾಗಿದ್ದೇ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್. 30 ರನ್ ಗಳಿಸುವಷ್ಟ್ರಲ್ಲೇ ಟಾಪ್ ಆರ್ಡರ್ ನ ರೋಹಿತ್, ಶುಬ್ಮನ್ ಮತ್ತು ವಿರಾಟ್ ಕೊಹ್ಲಿ ಮೂರು ವಿಕೆಟ್ ಉರುಳಿತ್ತು. ಈ ವೇಳೆ ರಕ್ಷಣಾತ್ಮಕ ಆಟವಾಡಿದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ತಂಡಕ್ಕೆ ಚೇತರಿಕೆ ನೀಡಿದ್ರು. ಇಬ್ಬರೂ ಕೂಡ 98 ರನ್ಗಳ ಜೊತೆಯಾಟ ಆಡಿದರು. 98 ಎಸೆತಗಳಲ್ಲಿ 79 ರನ್ ಗಳಿಸಿದರು. ಅರ್ಧಶತಕದ ಇನ್ನಿಂಗ್ಸ್ನಲ್ಲಿ 4 ಫೋರ್ ಹಾಗೂ 2 ಸಿಕ್ಸರ್ ಒಳಗೊಂಡಿತ್ತು. ಇನ್ನು ಶ್ರೇಯಸ್ ಅಯ್ಯರ್ ಅವ್ರ ಏಕದಿನ ವೃತ್ತಿಜೀವನದ ಅತ್ಯಂತ ನಿಧಾನಗತಿಯ ಅರ್ಧಶತಕ ಇದಾಗಿತ್ತು. ಅಲ್ದೇ ಈ ಪಂದ್ಯದಲ್ಲಿ ಶ್ರೇಯಸ್ ಬಳಸಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟ್ ಅನ್ನೋ ಸುದ್ದಿ ಹರಿದಾಡ್ತಿದೆ. ಅಯ್ಯರ್ ಕೈಯ್ಯಲ್ಲಿದ್ದ ಬ್ಯಾಟ್ನಲ್ಲಿದ್ದ ಸ್ಟಿಕ್ಕರ್ನಲ್ಲಿ ‘HITMAN’ ಎಂದು ಬರೆಯಲಾಗಿತ್ತು.
ಭಾನುವಾರದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಶ್ರೇಯಸ್ ಬ್ಯಾಟಿಂಗ್ನಲ್ಲಿ ಹೀರೋ ಆದ್ರೆ ವರುಣ್ ಬೌಲಿಂಗ್ ನಲ್ಲಿ ಸೂಪರ್ ಹೀರೋ ಆಗಿದ್ರು. ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನಾಡಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಕೀವಿಸ್ ಪಡೆಯನ್ನ ಚೆಂಡಾಡಿದ್ರು. ನ್ಯೂಜಿಲೆಂಡ್ ತಂಡದ ಐವರು ಆಟಗಾರರನ್ನು ವರುಣ್ ಚಕ್ರವರ್ತಿ ತಮ್ಮ ಮಾಂತ್ರಿಕ ಸ್ಪಿನ್ ಬೌಲಿಂಗ್ ಮೂಲಕ ಔಟ್ ಮಾಡಿದರು. ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್-11 ರಲ್ಲಿ ವೇಗಿ ಹರ್ಷಿತ್ ರಾಣಾ ಬದಲಿಗೆ ವರುಣ್ಗೆ ಅವಕಾಶ ಸಿಕ್ಕಿತು. ಸಿಕ್ಕಿರೋ ಚಾನ್ಸ್ನಲ್ಲೇ ಅಬ್ಬರಿಸಿ ವರುಣ್ ಚಕ್ರವರ್ತಿ ತಮ್ಮ 10 ಓವರ್ಗಳಲ್ಲಿ ಕೇವಲ 42 ರನ್ಗಳನ್ನು ನೀಡಿ 5 ವಿಕೆಟ್ ಪಡೆದರು. ನ್ಯೂಜಿಲೆಂಡ್ನ ವಿಲ್ ಯಂಗ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮ್ಯಾಟ್ ಹೆನ್ರಿ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿತ್ತು. ಈ ಪಂದ್ಯದ ಮೂಲಕ ವರುಣ್ ತಮ್ಮ ಏಕದಿನ ವೃತ್ತಿಜೀವನದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 5 ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದು ಅವರ ಎರಡನೇ ಏಕದಿನ ಪಂದ್ಯ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 3 ಪಂದ್ಯದಲ್ಲಿ ಗೆದ್ದೂ ಸೆಮಿಫೈನಲ್ ಪ್ರವೇಶಿಸಿದ ಏಕೈಕ ತಂಡ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿತ್ತು. ಇದೀಗ ನ್ಯೂಜಿಲೆಂಡ್ ಮಣಿಸಿದೆ. ಈ ಮೂಲಕ 6 ಅಂಕ ಸಂಪಾದಿಸಿದೆ. ಎ ಗುಂಪಿನಿಂದ ಭಾರತ ಹಾಗೂ ನ್ಯೂಜಿಲೆಂಡ್ ಸೆಮಿಫೈನಲ್ಗೆ ಅರ್ಹತೆ ಪಡೆದರೆ, ಬಿ ಗುಂಪಿನಿಂದ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಅರ್ಹತೆ ಪಡೆದಿದೆ. ಸೌತ್ ಆಫ್ರಿಕಾ 3 ಪಂದ್ಯದಲ್ಲಿ 2 ಪಂದ್ಯ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಇತ್ತ ಆಸ್ಟ್ರೇಲಿಯಾ 3 ಪಂದ್ಯದಲ್ಲಿ 2 ಪಂದ್ಯ ಮಳೆಗೆ ಆಹುತಿಯಾಗಿದೆ. ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯ್ತು. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯಿತು. ಇಲ್ಲಿ ದುಬೈ ಪಿಚ್ನಲ್ಲಿ 250 ಸ್ಕೋರ್ ಡಿಫೈನ್ ಮಾಡಿಕೊಳ್ಳೋಕೆ ಕಿವೀಸ್ ಪಡೆ ಎಡವಿದೆ. ಆದ್ರೆ ಮಾರ್ಚ್ 4ರಂದು ಅಂದ್ರೆ ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೆಮಿಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತಷ್ಟು ಜವಾಬ್ದಾರಿಯಿಂದ ಆಡ್ಬೇಕಿದೆ.