ಹೊಸ ಜೆರ್ಸಿಯಲ್ಲಿ ಯುವ ಪಡೆ ಮಿರಮಿರ ಮಿಂಚಿಂಗ್ – ಟೀಮ್ ಇಂಡಿಯಾ ಕ್ರಿಕೆಟಿಗರಿಂದ ಫೋಟೋಗೆ ಪೋಸ್

ಹೊಸ ಜೆರ್ಸಿಯಲ್ಲಿ ಯುವ ಪಡೆ ಮಿರಮಿರ ಮಿಂಚಿಂಗ್ – ಟೀಮ್ ಇಂಡಿಯಾ ಕ್ರಿಕೆಟಿಗರಿಂದ ಫೋಟೋಗೆ ಪೋಸ್

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಮ್ ಇಂಡಿಯಾ ಈಗ ಏಕದಿನ ಸರಣಿಗೆ ಸಜ್ಜಾಗಿದೆ. ಜುಲೈ 27ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿ ಪಂದ್ಯಗಳನ್ನಾಡಲಿದೆ. ಈ ನಡುವೆ ಟೀಮ್ ಇಂಡಿಯಾ ಯುವ ಪಡೆ ಹೊಸ ಡ್ರೀಮ್ ಇಲೆವೆನ್ ಏಕದಿನ ಜೆರ್ಸಿಯನ್ನು ತೊಟ್ಟು ಕ್ಯಾಮೆರಗಳಿಗೆ ಪೋಸ್ ನೀಡಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ಹೀರೋ ಆಗಲು ಕ್ಯಾಪ್ಟನ್ ಕೂಲ್ ರೆಡಿ -‘ಆ್ಯಕ್ಷನ್’ ಸಿನಿಮಾ ಓಕೆ ಎಂದ ಧೋನಿ ಪತ್ನಿ ಸಾಕ್ಷಿ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಜುಲೈ 27 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲ್ಲಿದೆ. ವೇಳಾಪಟ್ಟಿಯ ಪ್ರಕಾರ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನ ತನ್ನ ತಂಡದ ಹೊಸ ಏಕದಿನ ಜೆರ್ಸಿಯನ್ನು ಬಿಸಿಸಿಐ  ಅನಾವರಣಗೊಳಿಸಿದೆ. ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ, ಶುಭ್‌ಮನ್ ಗಿಲ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಮುಂತಾದ ಆಟಗಾರರು ಹೊಸ ಡ್ರೀಮ್ ಇಲೆವೆನ್ ಏಕದಿನ ಜೆರ್ಸಿಯನ್ನು ತೊಟ್ಟು ಕ್ಯಾಮೆರಗಳಿಗೆ ಪೋಸ್ ನೀಡಿದ್ದಾರೆ. ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 1 ನಿಮಿಷ 18 ಸೆಕೆಂಡ್‌ಗಳ ವೀಡಿಯೊವನ್ನು ಹಂಚಿಕೊಂಡಿದೆ. ವಾಸ್ತವವಾಗಿ ಯಾವುದೇ ಜೆರ್ಸಿಯಾಗಲಿ ಅಥವಾ ಕಿಟ್ ಆಗಲಿ, ಅದರ ಮೊದಲ ಪ್ರಚಾರದ ವೀಡಿಯೋಗಳಲ್ಲಿ ಸಾಮಾನ್ಯವಾಗಿ ಕೊಹ್ಲಿ ಮತ್ತು ರೋಹಿತ್ ಹೆಚ್ಚು ಗಮನ ಸೆಳೆಯುತ್ತಾರೆ. ಆದರೆ ಬಿಸಿಸಿಐ ಈಗ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಹಾಗೂ ರೋಹಿತ್ ಕಾಣಿಸಿಕೊಂಡಿಲ್ಲ. ಈ ಬಾರಿ ಅನುಭವದ ಜೋಡಿಗಿಂತ ಯುವಕರಿಗೆ ಆದ್ಯತೆ ನೀಡಲಾಗಿದ್ದು, ಗಿಲ್, ಸ್ಯಾಮ್ಸನ್ ಮತ್ತು ಕಿಶನ್ ಅವರಲ್ಲದೆ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಚಹಾಲ್ ಮತ್ತು ಉನದ್ಕಟ್ ಕೂಡ ಕಾಣಿಸಿಕೊಂಡಿದ್ದಾರೆ.

ಬಿಸಿಸಿಐ ಕಿಟ್ ಪ್ರಾಯೋಜಕತ್ವವನ್ನು ಮುಂದಿನ 5 ವರ್ಷಗಳವರೆಗೆ ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ಈ ಒಪ್ಪಂದವು ಮಾರ್ಚ್ 2028 ರವರೆಗೆ ಇರಲ್ಲಿದ್ದು, ಈ ಅವಧಿಯಲ್ಲಿ ಟೀಂ ಇಂಡಿಯಾ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲಿಯೂ ಅಡಿಡಾಸ್ ಕಂಪನಿಯ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಪುರುಷರ, ಮಹಿಳಾ ಮತ್ತು ಯುವ ತಂಡಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಪಂದ್ಯಗಳು, ತರಬೇತಿ ಮತ್ತು ಪ್ರಯಾಣದ ಉಡುಗೆಗಳನ್ನು ಸಹ ಅಡಿಡಾಸ್ ಪೂರೈಸಲಿದೆ. ಈ ಹಿಂದೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾ ಅಡಿಡಾಸ್ ಪಾಯೋಜಕತ್ವದ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು.

suddiyaana