ಬ್ಯಾಟಿಂಗ್ ಬಲ ಕಳ್ಕೊಂಡ ಭಾರತ – ಕ್ಯಾಪ್ಟನ್, ಕೋಚ್ ಗೆ ತಲೆ ಇಲ್ವಾ?
ವೈಸ್ ಕ್ಯಾಪ್ಟನ್ ಡ್ರಾಪ್ ಮಾಡಿದ್ದು ಸರಿನಾ?

ಬ್ಯಾಟಿಂಗ್ ಬಲ ಕಳ್ಕೊಂಡ ಭಾರತ – ಕ್ಯಾಪ್ಟನ್, ಕೋಚ್ ಗೆ ತಲೆ ಇಲ್ವಾ?ವೈಸ್ ಕ್ಯಾಪ್ಟನ್ ಡ್ರಾಪ್ ಮಾಡಿದ್ದು ಸರಿನಾ?

ಟೀಂ ಇಂಡಿಯಾ ಇದ್ದಿದ್ದ ಫಾರ್ಮ್ ನೋಡಿದ್ರೆ ಸೌತ್ ಆಫ್ರಿಕಾ ನೀಡಿದ ಟಾರ್ಗೆಟ್ ಟಾರ್ಗೆಟ್ಟೇ ಅಲ್ಲ ಅನ್ನಿಸ್ತಿತ್ತು. ಆದ್ರೆ ಭಾರತದ ಬ್ಯಾಟಿಂಗ್ ಆರಂಭವಾದ್ಮೇಲೆ ಇವ್ರು ಜಗತ್ತಿನ ನಂಬರ್ 1 ಟಿ-20ಐ ಟೀಂ ಆಟಗಾರರ ಅಂತಾ ಕನ್ಫ್ಯೂಸ್ ಆಗೋ ಮಟ್ಟಿಗೆ ಪರ್ಫಾಮ್ ಮಾಡಿದ್ರು. 20 ಓವರ್ಗಳನ್ನೂ ಕಂಪ್ಲೀಟ್ ಮಾಡ್ಲಿಲ್ಲ. ವಿಕೆಟ್​ನೂ ಉಳಿಸಿಕೊಳ್ಳಿಲ್ಲ.. ಕ್ಲೋಸ್​ ಗೇಮ್​ನೂ ಮಾಡ್ಕೊಳ್ಳಿಲ್ಲ. ಕಂಪ್ಲೀಟ್ ಸರೆಂಡರ್ ಆಗೋ ಥರ ಸೋಲೊಪ್ಪಿಕೊಂಡ್ರು. ಭಾರತೀಯರು ಬ್ಯಾಟಿಂಗ್ ಮಾಡುವಾಗ್ಲೇ ಅಭಿಮಾನಿಗಳೆಲ್ಲಾ ಗ್ಯಾಲರಿಯಿಂದ ಎದ್ದು ಹೋಗ್ತಾರೆ ಅಂದ್ರೆ ಅದೆಷ್ಟು ಹರ್ಟ್ ಆಗಿರಬೇಕು ಹೇಳಿ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು! – 76 ರನ್‌ಗಳಿಂದ ಗೆದ್ದ ಸೌತ್ ಆಫ್ರಿಕಾ!

ಸೌತ್ ಆಫ್ರಿಕಾ ವಿರುದ್ಧದ ಸೋಲು ಭಾರತಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ. 2024ರ ಟಿ-20 ವಿಶ್ವಕಪ್​ನಲ್ಲಿ 8 ಪಂದ್ಯಗಳನ್ನೂ ಗೆದ್ದು ಚಾಂಪಿಯನ್ ಆಗಿದ್ದ ಭಾರತ 2026ರಲ್ಲಿ ಗ್ರೂಪ್​ ಸ್ಟೇಜ್​ನ ಎಲ್ಲಾ ಪಂದ್ಯಗಳನ್ನ ಗೆದ್ದು ಟೇಬಲ್ ಟಾಪರ್ ಆಗಿತ್ತು. ಸತತ 12 ಪಂದ್ಯಗಳನ್ನ ಗೆದ್ದು ದಾಖಲೆ ಬರೆದಿತ್ತು. ಆದ್ರೆ ಭಾರತದ ಅಜೇಯ ವಿಜಯಯಾತ್ರೆಗೆ ಹರಿಣಪಡೆ ಬ್ರೇಕ್ ಹಾಕಿದೆ. ಹಾಗೇ ಈ ಟೂರ್ನಿಯಲ್ಲಿ ಭಾರತದ ಮುಂದಿನ ಜರ್ನಿಗೂ ಕಂಟಕವಾಗಿದೆ. ಌಂಡ್ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಭಾರತಕ್ಕೆ ಬಿಗ್ ಅಲರ್ಟ್ ಮೆಸೇಜ್ ಕೂಡ ಸಿಕ್ಕಿದೆ. ಕೋಚ್ ಮತ್ತು ಕ್ಯಾಪ್ಟನ್ ಲೆಕ್ಕಾಚಾರಗಳು ಉಲ್ಟಾ ಹೊಡೆದಿರೋದೂ ಜಗಜ್ಜಾಹೀರಾಗಿದೆ. ಅದ್ರಲ್ಲೂ ಇವ್ರು ಮಾಡಿದ ಮೇಜರ್ ಬ್ಲಂಡರ್ ಅಂದ್ರೆ ವೈಸ್ ಕ್ಯಾಪ್ಟನ್​ನೇ ಹೊರಗಿಟ್ಟಿದ್ದು.

ಕ್ರೂಶಿಯಲ್ ಟೈಮಲ್ಲಿ ಅಕ್ಷರ್ ಪಟೇಲ್ ಹೊರಗಿಟ್ಟಿದ್ದು ಏಕೆ?

ಸೂಪರ್ 8 ಹಂತದ ಪಂದ್ಯಗಳು ಅಂದ್ರೆ ಮಸ್ಟ್ ವಿನ್ ಮ್ಯಾಚ್ ಗಳು. ಅದ್ರ ಸೀರಿಯಸ್​ನೆಸ್ ಎಷ್ಟಿದೆ ಅನ್ನೋದು ಎಲ್ರಿಗೂ ಗೊತ್ತು. ಬಟ್ ಇಂಥಾ ಟೈಮಲ್ಲೂ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಲೆ ಇಲ್ಲದವ್ರಂತೆ ಪ್ಲೇಯಿಂಗ್ 11 ಪಿಕ್ ಮಾಡಿದ್ದಾರೆ. ಅದೂ ಕೂಡ ಮ್ಯಾಚ್ ವಿನ್ನರ್ ಕಂ ವೈಸ್ ಕ್ಯಾಪ್ಟನ್ ಆಗಿದ್ದ ಅಕ್ಷರ್ ಪಟೇಲ್​ ಬಿಟ್ಟು ವಾಷಿಂಗ್ಟನ್ ಸುಂದರ್​​ರನ್ನ ಕಣಕ್ಕಳಿಸೋ ನೆಸಸಿಟಿ ಏನಿತ್ತು. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ಸುಂದರ್​ಗಿಂತ ಅಕ್ಷರ್ ಬೆಟರ್ ಇದ್ದಾರೆ. 2024ರ ಟಿ-20 ವಿಶ್ವಕಪ್ ಫೈನಲ್​ನಲ್ಲಿ ಇದೇ ಸೌತ್ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಜೊತೆ ಸೇರಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ರು. ಕ್ರೂಶಿಯಲ್ ಟೈಮಲ್ಲಿ 47 ರನ್ ಗಳಿಸಿ ರನ್ ಔಟ್ ಆಗಿದ್ರು. ಜೊತೆಗೆ ಒಂದು ವಿಕೆಟ್​​ ಕೂಡ ಪಡೆದಿದ್ರು. ನೆಕ್ಸ್​ಟ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಿಸಿದ್ರು. ಹೀಗಿದ್ರೂ ಅಕ್ಷರ್​ರನ್ನ ಕೂರಿಸಿ ಸುಂದರ್​ರನ್ನ ಇಳಿಸಿದ್ದೇ ಭಾರತಕ್ಕೆ ದೊಡ್ಡ ಸೆಟ್ ಬ್ಯಾಕ್ ಆಗಿದೆ. ಆರ್.ಅಶ್ವಿನ್ ಕೂಡ ಅಕ್ಷರ್ ಪಟೇಲ್​ರನ್ನ ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಫ್​ ಸ್ಪಿನ್​ ತಂತ್ರಕ್ಕೆ ಭಾರತೀಯ ಬ್ಯಾಟರ್ಸ್ ಸರೆಂಡರ್!

ಭಾರತೀಯ ಟಿ-20ಐ ಟೀಮ್​ನ ಅತೀದೊಡ್ಡ ವೀಕ್​ನೆಸ್ ಅಂದ್ರೆ ಇದೇ ನೋಡಿ. ಈ ಟೂರ್ನಿಯಲ್ಲಿ ಆಫ್-ಸ್ಪಿನ್ ವಿರುದ್ಧ ಭಾರತದ ಸರಾಸರಿ ರನ್ ಗಳಿಕೆ ಜಸ್ಟ್ 6.23 ರನ್ಸ್. ಅಂದರೆ ಆಫ್ ಸ್ಪಿನ್ನರ್​ಗಳ ವಿರುದ್ಧ 1 ಓವರ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಕೇವಲ 6.23 ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಭಾರತ ಕಳೆದುಕೊಂಡ 41 ವಿಕೆಟ್‌ಗಳಲ್ಲಿ 12 ವಿಕೆಟ್‌ಗಳನ್ನು ಆಫ್-ಸ್ಪಿನ್ನರ್‌ಗಳೇ ಪಡೆದಿದ್ದಾರೆ. ಇನ್ನೊಂದು ಇಂಟ್ರೆಸ್ಟಿಂಗ್ ಫ್ಯಾಕ್ಟ್ ಅಂದ್ರೆ ಐಡೆನ್ ಮಾರ್ಕ್ರಾಮ್ ಮತ್ತು ಸಲ್ಮಾನ್ ಅಲಿ ಅಘಾರಂಥ ಪಾರ್ಟ್-ಟೈಮ್ ಬೌಲರ್‌ಗಳೇ ಭಾರತದ ಬ್ಯಾಟರ್‌ಗಳ ವಿಕೆಟ್ ಪಡೆದಿದ್ದಾರೆ. ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾರಂಥ ಲೆಫ್ಟ್ ಹ್ಯಾಂಡ್ ಬ್ಯಾಟರ್​ಗಳನ್ನ ಆಫ್ ಸ್ಪಿನ್ನರ್​ಗಳನ್ನ ಬಳಸಿಯೇ ಬೇಟೆಯಾಡ್ತಿದ್ದಾರೆ. ಇಷ್ಟೆ ಅಲ್ಲದೆ ಈ ಪಂದ್ಯದ ಮೂಲಕ ಭಾರತದ ವೀಕ್​ನೆಸ್​ಗಳೂ ರಿವೀಲ್ ಆಗಿವೆ.

ತನ್ನದೇ ತಪ್ಪಿಗೆ ಬೆಲೆ ತೆತ್ತ ಭಾರತ!

  1. ವಿಶ್ವಕಪ್ ಟೂರ್ನಿಯಲ್ಲೂ ಕ್ಲಿಕ್ ಆಗ್ತಿಲ್ಲ ಓಪನರ್ ಜೋಡಿ
  2. ಟಿ-20 ಫಾರ್ಮೆಟ್ ಅನ್ನೋದನ್ನೇ ಮರೆತ ತಿಲಕ್ ವರ್ಮಾ
  3. ಟಾಪ್ ಆರ್ಡರ್ ಬ್ಯಾಟರ್ ಗಳ ಕಡೆಯಿಂದ ಸಿಗದ ಸಪೋರ್ಟ್
  4. ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್ ನಂಬಿದ್ದು ಎದುರಾಳಿಗಳಿಗೆ ಪ್ಲಸ್
  5. ಬ್ಯಾಟಿಂಗ್ ಆರ್ಡರ್ ಚೇಂಜ್ ಮಾಡಿ ಪ್ರೆಶರ್ ಹೆಚ್ಚಿದ್ದು
  6. ಕ್ಯಾಪ್ಟನ್ ಆಗಿ ಬೌಲಿಂಗ್ ವೇರಿಯೇಷನ್ ನಲ್ಲಿ ಸೂರ್ಯನ ನಿರ್ಲಕ್ಷ್ಯ
  7. ಮಿಸ್ ಫೀಲ್ಡ್, ಮಿಸ್ ಕ್ಯಾಚ್ ಗಳಿಂದ ಹೆಚ್ಚಿನ ರನ್ ಸ್ಕೋರ್

ಇದೆಲ್ಲಾ ಮಿಸ್ಟೇಕ್​ಗಳಿಂದಲೇ ಭಾರತ ಸೌತ್ ಆಫ್ರಿಕಾ ವಿರುದ್ಧ ಸೋತಿದೆ. ಌಕ್ಚುಲಿ ಭಾರತ ಗ್ರೂಪ್ ಸ್ಟೇಜ್​ನಲ್ಲೇ ಅಲರ್ಟ್ ಆಗ್ಬೇಕಿತ್ತು. ಯಾಕಂದ್ರೆ ಅಮೆರಿಕ ಮತ್ತು ನೆದರ್ ಲ್ಯಾಂಡ್ ತಂಡಗಳು ಭಾರತಕ್ಕೆ ಸರಿಯಾಗೇ ಬಿಸಿ ಮುಟ್ಟಿಸಿದ್ವು. ಆದ್ರೆ ಸತತ ಸರಣಿಗಳ ಗೆಲುವು ಭಾರತಕ್ಕೆ ಓವರ್ ಕಾನ್ಫಿಡೆನ್ಸ್ ತಂದಿಟ್ಟಿತ್ತು. ಹೆಂಗ್ ಆಡಿದ್ರೂ ಗೆಲ್ತೀವಿ ಅನ್ನೋ ಮೈಂಡ್​ಸೆಟ್​ನಲ್ಲಿದ್ರು. ಅದಕ್ಕೆ ಈಗ ದುಬಾರಿ ಬೆಲೆಯನ್ನೇ ತೆತ್ತಿದ್ದಾರೆ. ಇನ್ನು ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮ್ಯಾಚ್​ಗೂ ಮುನ್ನ ಸೌತ್ ಆಫ್ರಿಕಾ ಹೆಡ್ ಕೋಚ್ ಶುಕ್ರಿ ಕಾನ್ರಾಡ್ ಒಂದು ಮಾತು ಹೇಳಿದ್ರು. ಟೀಂ ಇಂಡಿಯಾ ಪ್ರೆಶೆರ್​ನಲ್ಲಿದೆ. ನಾವೇ ಗೆಲ್ಲೋದು. ಮೋದಿ ಸ್ಟೇಡಿಯಂನಲ್ಲಿ 1 ಲಕ್ಷ ಭಾರತೀಯರನ್ನ ನಾವು ಸೈಲೆಂಟ್ ಮಾಡ್ತೀವಿ ಅಂದಿದ್ರು. ಆರಂಭದಲ್ಲಿ ಕಾನ್ರಾಡ್​ ಮಾತುಗಳು ಟ್ರೋಲ್ ಆಗಿದ್ವು. ಬಟ್ ಈಗ ಅದೇ ಸತ್ಯವಾಗಿದೆ. ಸ್ಟೇಡಿಯಂನಲ್ಲಿ ಫ್ಯಾನ್ಸ್ ಸೈಲೆಂಟ್ ಆಗೋದಿರ್ಲಿ ಪಂದ್ಯಕ್ಕೂ ಮುನ್ನ ಜಾಗ ಖಾಲಿ ಮಾಡಿದ್ರು. ಭಾರತದ ಬ್ಯಾಟಿಂಗ್ ವೇಳೆ 14ನೇ ಓವರ್ ವೇಳೆಗೆಲ್ಲಾ ಕ್ರೀಡಾಂಗಣದಿಂದ ಹೊರ ನಡೆದಿದ್ರು. ಈ ದೃಶ್ಯಗಳೇ ಕೋಟ್ಯಂತರ ಭಾರತೀಯರನ್ನ ಹರ್ಟ್ ಮಾಡಿದೆ. ಒಟ್ನಲ್ಲಿ ಭಾರತ ಈಗ ದೊಡ್ಡ ಪಾಠ ಕಲೀಬೇಕಿದೆ. ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನ ತಿದ್ದಿಕೊಳ್ಬೇಕು. ಯಾಕಂದ್ರೆ ಮುಂದಿನ ಚಾಲೆಂಜ್ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ. ಈ ಇಬ್ಬರೂ ಡೇಂಜರಸ್ ಆಗಿದ್ದು ಇವ್ರನ್ನ ಗೆದ್ರೂ ಕೂಡ ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗ್ಬೇಕು. ಌಂಡ್ ಪ್ಯೂರ್ಲಿ ಲಕ್ ಕೂಡ ಮ್ಯಾಟ್ರ್ ಆಗುತ್ತೆ.

Shantha Kumari