ನೇಪಾಳ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಟೀಂ ಇಂಡಿಯಾ – ಪದಕ ತೊಡಿಸಿದ ವಿರಾಟ್ ಕೊಹ್ಲಿ!

ನೇಪಾಳ ಕ್ರಿಕೆಟ್ ತಂಡವನ್ನು ಅಭಿನಂದಿಸಿದ ಟೀಂ ಇಂಡಿಯಾ – ಪದಕ ತೊಡಿಸಿದ ವಿರಾಟ್ ಕೊಹ್ಲಿ!

ಏಷ್ಯಾಕಪ್​​ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ನೇಪಾಳ ಬ್ಯಾಟ್ಸ್​ಮನ್​ಗಳು ಯಾವ ರೀತಿ ಆಡಿದ್ರು ಅನ್ನೋದನ್ನ ನೀವು ಕೂಡ ನೋಡಿದ್ರಿ. ಟೀಂ ಇಂಡಿಯಾದ ಬೌಲರ್​ಗಳನ್ನ ದಿಟ್ಟವಾಗಿ ಎದುರಿಸಿ ನೇಪಾಳ 230ರನ್ ಪೇರಿಸಿತ್ತು. ನೇಪಾಳ ಆಟಗಾರರ ಪ್ರದರ್ಶನವನ್ನ ಇಡೀ ಜಗತ್ತೇ ಕೊಂಡಾಡಿತ್ತು. ಮ್ಯಾಚ್​ ಬಳಿಕ ಟೀಂ ಇಂಡಿಯಾ ಸದಸ್ಯರು ಕೂಡ ನೇಪಾಳಿ ಕ್ರಿಕೆಟಿಗರನ್ನ ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ –ರೆಡಿಯಾಯ್ತು ಬಲಿಷ್ಠ 15 ಸದಸ್ಯರ ಟೀಮ್

ಪಂದ್ಯ ಮುಕ್ತಾಯದ ಬಳಿಕ ಭಾರತ ಎದುರು ಮೊದಲ ಪಂದ್ಯವನ್ನಾಡಿ ದಿಟ್ಟ ಪ್ರದರ್ಶನ ತೋರಿದ ನೇಪಾಳಿ ಕ್ರಿಕೆಟಿಗರ ಆಟವನ್ನು ಭಾರತೀಯ ಕ್ರಿಕೆಟಿಗರು ಶ್ಲಾಘಿಸಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಭಾರತ ಎದುರು ದಿಟ್ಟ ಅರ್ಧಶತಕ ಸಿಡಿಸಿದ ಆಸಿಫ್ ಶೇಖ್ ಅವರ ಪ್ರದರ್ಶನವನ್ನು ಕೊಂಡಾಡಿದರು. ಜತೆಗೆ ಆಸಿಫ್ ಶೇಖ್‌ಗೆ ಪದಕ ಕೊರಳಿಗೆ ಹಾಕಿ ಗೌರವಿಸಿದರು. ಈ ಮೂಲಕ ಯುವ ಕ್ರಿಕೆಟ್ ತಂಡವನ್ನ ಹುರಿದುಂಬಿಸುವ ಕೆಲಸ ಮಾಡಿದ್ದಾರೆ. ಈ ವಿಡಿಯೋ ಈಗ ಫುಲ್ ವೈರಲ್ ಆಗ್ತಿದೆ.

suddiyaana