ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್‌ಗೆ ದಂಡ – ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಶಾಕ್ ಕೊಟ್ಟ ಐಸಿಸಿ!

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್‌ಗೆ ದಂಡ – ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಶಾಕ್ ಕೊಟ್ಟ ಐಸಿಸಿ!

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಪಂದ್ಯ ಹೈವೋಲ್ಟೇಜ್ ನಲ್ಲಿ ಇರುತ್ತೆ. ಈ ಬಾರಿ ಇದಕ್ಕೂ ಒಂದು ಕೈ ಮೇಲೆ ಎಂಬಂತೆ ಪಂದ್ಯಗಳು ನಡೆದಿದ್ದವು. ಇದೀಗ ಸೂಪರ್ 4 ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರರು ಆಕ್ಷೇಪಾರ್ಹ ಪದ ಹಾಗೂ ಸನ್ನೆಗಳನ್ನ ಬಳಸಿದ್ದಕ್ಕೆ ದಂಡ ವಿಧಿಸಲಾಗಿದೆ. ಜೊತೆಗೆ ಕ್ರಿಕೆಟ್ ಆಟದಲ್ಲಿ ರಾಜಕೀಯ ತಂದಿದ್ದಕ್ಕೆ ಭಾರತ ತಂಡದ ನಾಯಕ ಸೂರ್ಯಕುಮಾರ್​ ಯಾದವ್​ಗೆ ಐಸಿಸಿ ದಂಡವನ್ನ ವಿಧಿಸಿದೆ.

ಇದನ್ನೂ ಓದಿ:ICC ವಾರ್ನ್ ಮಾಡಿದ್ರೂ ಶೇಕ್ ಹ್ಯಾಂಡ್ ಇಲ್ಲ? – ಪಾಕಿಗಳ ಮೇಲೆ ಕ್ರಮ ಇಲ್ವಾ?

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್  ಅವರಿಗೆ ರಾಜಕೀಯ ಸಂಬಂಧಿತ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದೆ. ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನಡೆಸಿದ ವಿಚಾರಣೆಯಲ್ಲಿ ಸೂರ್ಯಕುಮಾರ್ ರಾಜಕೀಯ ಹೇಳಿಕೆ ನೀಡಿರುವುದು ನಿಜ ಎಂದು ಸಾಬೀತಾಗಿದೆ. ಅವರ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಆರೋಪ ನಿಜವಾಗಿದೆ. ಪಾಕಿಸ್ತಾನದ ವಿರುದ್ಧದ ಪಂದ್ಯದ ನಂತರ ವಿಜಯವನ್ನು ಭಯೋತ್ಪಾದಕ ದಾಳಿ ಸಂತ್ರಸ್ತರಿಗೆ ಅರ್ಪಿಸಿದ್ದ ಸೂರ್ಯಕುಮಾರ್ ಹೇಳಿಕೆ ರಾಜಕೀಯ ಪ್ರೇರಿತ ಎಂದು ಪಾಕಿಸ್ತಾನ ಮಂಡಳಿ ದೂರು ನೀಡಿತ್ತು.

ಹೀಗಾಗಿ, ವಿಚಾರಣೆಯ ನಂತರ ಭಾರತದ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡವಾಗಿ ವಿಧಿಸಲಾಗಿದೆ. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್​ಗೂ ಕೂಡ ಶೇ.30 ರಷ್ಟು ದಂಡವನ್ನ ವಿಧಿಲಾಗಿದೆ. ಆದರೆ ಫರ್ಹಾನ್ ದಂಡದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಅವರಿಗೆ ಆ ರೀತಿಯ ಸಂಭ್ರಮಾಚರಣೆಯನ್ನ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ. ಬಿಸಿಸಿಐ, ಪಾಕ್ ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಫರ್ಹಾನ್ ವಿರುದ್ಧವೂ ದುರ್ವರ್ತನೆ ದೂರು ದಾಖಲಿಸಿತ್ತು.

ದುಬೈಯಲ್ಲಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನಡೆಸಿದ ವಿಚಾರಣೆಯಲ್ಲಿ ಸೂರ್ಯಕುಮಾರ್ ಯಾದವ್ ಹಾಜರಾದರು. ಬಿಸಿಸಿಐ ಸಿಇಒ ಹೇಮಂಗ್ ಅಮಿನ್ ಮತ್ತು ಕ್ರಿಕೆಟ್ ಆಪರೇಷನ್ಸ್ ಮ್ಯಾನೇಜರ್ ಸುಮೀತ್ ಮಲ್ಲಪುರ್ಕರ್ ಸಹ ಜೊತೆಗಿದ್ದರು. ವಿಚಾರಣೆ ವೇಳೆ ಸೂರ್ಯಕುಮಾರ್‌ ತಾವೂ ತಪ್ಪಿತಸ್ಥರಲ್ಲ ಎಂದು ವಾದಿಸಿದರು. ಅವರ ಹೇಳಿಕೆಗಳು ಒಗ್ಗಟ್ಟು ಮತ್ತು ಸಹಾನುಭೂತಿಯ ಸಂದೇಶವಾಗಿದ್ದವು, ರಾಜಕೀಯವಲ್ಲ ಎಂದು ಹೇಳಿದ್ದರು. ಆದರೆ ಐಸಿಸಿ ಇದನ್ನು ಲೆವೆಲ್ 1 ಉಲ್ಲಂಘನೆ ಎಂದು ಕರೆದು, ಸೂರ್ಯಕುಮಾರ್ ಅವರಿಗೆ ಔಪಚಾರಿಕ ಎಚ್ಚರಿಕೆ ನೀಡಿ, ಪಂದ್ಯದ ಸಂಭಾವನೆಯ ಶೇ. 30 ರಷ್ಟು ದಂಡವಾಗಿ ವಿಧಿಸಲಾಗಿದೆ.

ಭಾರತ ಕ್ರಿಕೆಟ್ ಮಂಡಳಿ ಕೂಡ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಹಾಗೂ ರೌಫ್​ ವಿರುದ್ಧ ದೂರು ದಾಖಲಿಸಿತ್ತು. ಅರ್ಧಶತಕ ತಲುಪಿದ ನಂತರ ಫರ್ಹಾನ್ AK-47 ರೈಫಲ್ ಫೈರಿಂಗ್ ಸಂಭ್ರಮಾಚರಣೆ ಮಾಡಿದರು. ಇದು ಭಾರತೀಯ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಯಿತು. ಹ್ಯಾರಿಸ್ ರೌಫ್ ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಕೂಗಿದಾಗ, ವಿಮಾನ ಬೀಳುವಂತೆ ಸನ್ನೆ ಮಾಡಿದರು (ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದಂತೆ). ಬಿಸಿಸಿಐ ಇದನ್ನು “ಭಾರತೀಯ ಸೇನೆಯನ್ನು ನಿಂದಿಸುವುದು” ಎಂದು ಕರೆದು ದೂರು ದಾಖಲಿಸಿತ್ತು. ರೌಫ್​ಗೂ ದಂಡ ಇವರಬ್ಬರನ್ನೂ ವಿಚಾರಣೆ ನಡೆಸಿದ ಮ್ಯಾಚ್ ರೆಫ್ರಿ, ರೌಫ್​ಗೆ ಪಂದ್ಯ ಸಂಭಾವನೆಯ ಶೇ.30 ರಷ್ಟು ದಂಡವನ್ನ ವಿಧಿಸಿ, ಮತ್ತೊಮ್ಮೆ ಈ ರೀತಿಯ ವರ್ತನೆ ಮಾಡದಿರಲು ಸೂಚಿಸಿದೆ.

Sulekha