AUSನಲ್ಲಿ ಟೀಂ ಇಂಡಿಯಾ ಲಾಕ್ ಡೌನ್! – ಕ್ರೀಡಾಂಗಣ ಬಂದ್.. ಫೋನ್ ಬ್ಯಾನ್
ಬಾರ್ಡರ್ ಗವಾಸ್ಕರ್ ಸರಣಿಗೆ ಟಫ್ ರೂಲ್ಸ್
ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾ ಆಡ್ಬೇಕು ಅಂದ್ರೆ ಈ ಸಿರೀಸ್ ಗೆಲ್ಲಲೇಬೇಕು. ಬಟ್ ಸರಣಿ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಬಿಸಿಸಿಐ ಮ್ಯಾನೇಜ್ಮೆಂಟ್ ಲಾಕ್ಡೌನ್ ಅಸ್ತ್ರ ಪ್ರಯೋಗಿಸಿದೆ. ಆಟಗಾರರು ಪ್ರಾಕ್ಟೀಸ್ ಮೇಲೆ ಮಾತ್ರ ಫೋಕಸ್ ಮಾಡುವಂತೆ ಕಟ್ಟಾಜ್ಞೆ ಹೊರಡಿಸಿದೆ. ಭಾರತಕ್ಕೆ ಈ ಸರಣಿ ಎಷ್ಟು ಇಂಪಾರ್ಟೆಂಟ್..? ಆಟಗಾರರ ಅಭ್ಯಾಸ ಹೇಗಿದೆ? ಪ್ಲೇಯಿಂಗ್ 11ನಲ್ಲಿ ಯಾರೆಲ್ಲಾ ಚಾನ್ಸ್ ಪಡೀಬಹುದು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: IND Vs SA.. ಪ್ಲೇಯಿಂಗ್ 11 ಟ್ವಿಸ್ಟ್ – 107.. 0.. 0 ರನ್.. ಸಂಜು ಆಡಿಸ್ಬೇಕಾ?
ಆಸ್ಟ್ರೇಲಿಯಾದ ಪರ್ತ್ನ ವೆಸ್ಟ್ರನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಭಾರತ ತಂಡ ಕಸರತ್ತು ನಡೆಸ್ತಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಕನಿಷ್ಠ ನಾಲ್ಕು ಪಂದ್ಯಗಳನ್ನ ಗೆದ್ರಷ್ಟೇ ಮುಂದಿನ ವರ್ಷ ನಡೆಯಲಿರುವಂಥ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ಅರ್ಹತೆ ಪಡೆಯಬಹುದು. ಹೀಗಾಗಿ ಸರಣಿಯನ್ನ ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು ಆಟಗಾರರಿಗೆ ಒಂದಷ್ಟು ನಿರ್ಬಂಧಗಳನ್ನ ವಿಧಿಸಿದೆ.
ಟೀಂ ಇಂಡಿಯಾ ಸ್ಕ್ವಾಡ್!
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಸ್ಟೇಡಿಯಂ ಲಾಕ್ ಡೌನ್.. ಫೋನ್ ಬಳಕೆಗೂ ನಿಷೇಧ!
ಡಬ್ಲ್ಯುಟಿಸಿ ಫೈನಲ್ ರೇಸ್ನಲ್ಲಿ ಭಾರತ ಇರ್ಬೇಕು ಅಂದ್ರೆ ಈ ಸರಣಿ ತುಂಬಾನೇ ಮಹತ್ವದ್ದು. ಇದೇ ಕಾರಣಕ್ಕೆ ಬಿಸಿಸಿಐ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ತಿದೆ. ಸಾರ್ವಜನಿಕ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ. ಕ್ರೀಡಾಂಗಣ ಮುಚ್ಚಲಾಗಿದೆ. ಆಸೀಸ್ ವಿರುದ್ಧ ನವೆಂಬರ್ 22ರಂದು ಮೊದಲ ಟೆಸ್ಟ್ ಪ್ರಾರಂಭವಾಗಲಿದ್ದು, 2 ವಾರಗಳ ಮೊದಲೇ ಭಾರತೀಯ ಆಟಗಾರರು ಪರ್ತ್ ತಲುಪಿದ್ದಾರೆ. ಆಪ್ಟಸ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸ್ತಿದ್ದು, ಮೈದಾನವು ಲಾಕ್ಡೌನ್ ಆಗಿದೆ. ಸಿಬ್ಬಂದಿಗೂ ನಿರ್ಬಂಧ ವಿಧಿಸಲಾಗಿದೆ. ಲಾಕ್ಡೌನ್ ಮಾದರಿಯ ವಾತಾವರಣದಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಟೀಮ್ ಇಂಡಿಯಾ ಕಳೆದ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಸೀಸ್ ಬಂದಾಗ ಇದೇ ರೀತಿ ಪ್ರಾಕ್ಟೀಸ್ ನಡೆಸಿತ್ತು. ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಅಭ್ಯಾಸ ಮಾಡುವಾಗ ಅಭಿಮಾನಿಗಳು ಕೂಗುತ್ತಾರೆ, ಆಟೋಗ್ರಾಫ್ ಮತ್ತು ಫೋಟೋಗೆ ಕಾಯುತ್ತಾರೆ. ಇದು ಅಭ್ಯಾಸ ಮಾಡಲು ಕಿರಿ ಕಿರಿ ಉಂಟು ಮಾಡುತ್ತದೆ. ಹೀಗಾಗಿ ಈ ಮಹತ್ವದ ಸರಣಿ ಗೆಲ್ಲುವ ಕಾರಣದಿಂದ ಟೀಮ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಕಠಿಣ ಪರಿಶ್ರಮದೊಂದಿದೆ ಆಸೀಸ್ ನೆಲದಲ್ಲಿ ಹ್ಯಾಟ್ರಿಕ್ ಸರಣಿ ಗೆಲ್ಲಲು ಭಾರತ ಸಜ್ಜಾಗಿದೆ.
ಮೊದಲ ಪಂದ್ಯಕ್ಕೆ ಬುಮ್ರಾ ನಾಯಕ?
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಬಾರ್ಡರ್ ಗವಾಸ್ಕರ್ ಟ್ರೋಫಿ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಇದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸೋದು ಗ್ಯಾರಂಟಿ. ರೋಹಿತ್ ಆಬ್ಸೆನ್ಸ್ ಬಗ್ಗೆ ಗೌತಮ್ ಗಂಭೀರ್ ಸ್ಪಷ್ಟಪಡಿಸಿಲ್ಲ. ಬಟ್ ಬುಮ್ರಾ ಕ್ಯಾಪ್ಟನ್ ಆಗ್ತಾರೆ ಎಂದಿದ್ದಾರೆ. ಈಗಾಗ್ಲೇ ಟೀಂ ಇಂಡಿಯಾದ ಕೆಲ ಆಟಗಾರರು ಅಭ್ಯಾಸ ಆರಂಭಿಸಿದ್ರೂ ಕೂಡ ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿಲ್ಲ.
ಕಿಂಗ್ ಕೊಹ್ಲಿ ಭವಿಷ್ಯ ನಿರ್ಧರಿಸಲಿದೆ ಆಸಿಸ್ ಸರಣಿ!
ವಿರಾಟ್ ಕೊಹ್ಲಿ, ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ ಕ್ರಿಕೆಟರ್. ರನ್ ಹೊಡಿಲಿ, ಫ್ಲಾಪ್ ಆಗಲಿ, ಕೊಹ್ಲಿ ಕ್ರೇಜ್ ಮಾತ್ರ ಒಂಚೂರು ಕುಗ್ಗಿಲ್ಲ. ಬ್ಯಾಟಿಂಗ್ಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಕಿಂಗ್ ಕೊಹ್ಲಿ, ಸದ್ಯ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ರೆಡಿಯಾಗ್ತಿದ್ದಾರೆ. ಪರ್ತ್ಗೆ ಆಗಮಿಸಿದ್ದಂಥ ಕೊಹ್ಲಿಗೆ ಆಸೀಸ್ನ ಪತ್ರಿಕೆಗಳಲ್ಲಿ ಅದ್ಧೂರಿ ಸ್ವಾಗತವೂ ಸಿಕ್ಕಿದೆ. 3 ವರ್ಷಗಳ ಹಿಂದೆ ನಾಯಕತ್ವ ತ್ಯಜಿಸಿದ್ದರೂ ಕ್ರಿಕೆಟ್ನಲ್ಲಿ ಡಾಮಿನೇಟ್ ಮಾಡುತ್ತಿರುವ ವಿರಾಟ್ ಕ್ರೇಜ್ ಇನ್ನೂ ಕುಗ್ಗಿಲ್ಲ. ಬಟ್ ಈ ಸರಣಿ ವಿರಾಟ್ ಕೊಹ್ಲಿ ಪಾಲಿಗೆ ನಿರ್ಣಾಯಕವಾಗಿದೆ. ಇಲ್ಲಿ ಅಬ್ಬರಿಸಿದರೆ ಮಾತ್ರ ಟೆಸ್ಟ್ ಭವಿಷ್ಯ ನಿರ್ಧಾರವಾಗಲಿದೆ.
ಆಸಿಸ್ ನೆಲದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ ವಿರಾಟ್!
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಂಥ ಕೊಹ್ಲಿ, ತೀವ್ರ ಟೀಕೆಗೆ ಗುರಿಯಾದರು. ಮೂರು ಪಂದ್ಯಗಳಿಂದ 15.50 ಸರಾಸರಿಯಲ್ಲಿ 93 ರನ್ ಗಳಿಸಿದ್ದರು. ಇದು ಕಳೆದ 7 ವರ್ಷಗಳಲ್ಲಿ ತವರು ಸರಣಿಯಲ್ಲಿ ಕನಿಷ್ಠ ಸರಾಸರಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದರೆ ಮಾತ್ರ ಕೊಹ್ಲಿ ವೃತ್ತಿಜೀವನಕ್ಕೆ ಟ್ವಿಸ್ಟ್ ಸಿಗಲಿದೆ. ಆಸಿಸ್ ವಿರುದ್ಧ 25 ಟೆಸ್ಟ್ ಪಂದ್ಯಗಳಿಂದ 2,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆಸಿಸ್ ನೆಲದಲ್ಲಿ ಡಾಮಿನೇಟ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ ಫ್ಯಾನ್ಸ್.
ಭಾರತದ ಪ್ರಾಬಲ್ಯವೋ.. ಆಸ್ಟ್ರೇಲಿಯಾ ಪಾರುಪತ್ಯವೋ?
ಟೆಸ್ಟ್ ಕ್ರಿಕೆಟ್‌ನಲ್ಲೇ ಮಹತ್ವದ ಸರಣಿ ಎಂದೇ ಕರೆಯಲಾಗುವ ಸೀರೀಸ್‌ನಲ್ಲಿ ಎರಡು ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ಎದುರು ಬದುರಾಗಲಿವೆ. ಭಾರತ ತಂಡ ಕೊನೆಯ ನಾಲ್ಕು ಆವೃತ್ತಿಯ ಬಿಜಿಟಿ ಸರಣಿಯಲ್ಲಿ ಸೋತಿದ್ದೇ ಇಲ್ಲ. ಇದರಲ್ಲಿ ಎರಡು ಬಾರಿ ತವರು ಹಾಗೂ ಇನ್ನೆರಡು ಬಾರಿ ಆಸ್ಟ್ರೇಲಿಯಾ ನೆಲದಲ್ಲಿಯೂ ಸರಣಿ ವಶಪಡಿಸಿಕೊಂಡಿದೆ. ಅತ್ತ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ, ಕೊನೆಯದಾಗಿ 2014-15ರಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ತನ್ನದೇ ನೆಲದಲ್ಲಿ 2-0 ಅಂತರದಿಂದ ಭಾರತವನ್ನು ಬಗ್ಗುಬಡಿದಿತ್ತು. ಅದಾದ ನಂತರ ಭಾರತವನ್ನು ಸೋಲಿಸಲು ಕಾಂಗರೂಗಳಿಂದ ಸಾಧ್ಯವಾಗಿಲ್ಲ. ತವರಿನಲ್ಲೂ ಎರಡು ಬಾರಿ ಸರಣಿ ಸೋತು ಭಾರತದ ಪ್ರಾಬಲ್ಯಕ್ಕೆ ಮಂಡಿಯೂರಿತ್ತು. ಇದೀಗ ದಶಕದ ಬಳಿಕ ಮತ್ತೊಮ್ಮೆ ಗೆಲುವಿನ ಟ್ರ್ಯಾಕ್ಗೆ ಬರೋಕೆ ವರ್ಕೌಟ್ ಮಾಡ್ತಿದ್ದಾರೆ.
ಇನ್ನು ಈ ಸರಣಿಯನ್ನು ದೊಡ್ಡ ಅಂತರದಿಂದ ಗೆಲ್ಲುವ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳುತ್ತೆ. ಇದೇ ಕಾರಣಕ್ಕೆ ಟೀಂ ಇಂಡಿಯಾ ಆಟಗಾರರ ಅಭ್ಯಾಸಕ್ಕೆ ಕಟ್ಟುನಿಟ್ಟಿನ ರೂಲ್ಸ್ ಮಾಡಲಾಗಿದೆ. ನವೆಂಬರ್ 22ರಿಂದ 26ರವರೆಗೆ ಪರ್ತ್ನಲ್ಲಿ ಫಸ್ಟ್ ಮ್ಯಾಚ್ ನಡೆಯಲಿದ್ದು, ಎಲ್ಲರ ಚಿತ್ತ ಭಾರತ ವರ್ಸಸ್ ಆಸ್ಟ್ರೇಲಿಯಾ ಮ್ಯಾಚ್ನತ್ತ ನೆಟ್ಟಿದೆ. ನ್ಯೂಜಿಲೆಂಡ್ ಸರಣಿ ಕಳ್ಕೊಂಡಿರೋ ಭಾರತೀಯರಿಗೆ ಈ ಸರಣಿ ಗೆಲ್ಲಲೇಬೇಕಾದ ಅನಿವಾರ್ಯತೆಯೂ ಇದೆ.