ಟಾರ್ಗೆಟ್ ಸೆಟ್‌ನಲ್ಲೂ ವೀರರು – ಸ್ಯಾಮ್ಸನ್ ಭವಿಷ್ಯ ಅತಂತ್ರ?
ಸೆಂಚುರಿ ಸ್ಟಾರ್ ಇಶಾನ್

ಟೀಂ ಇಂಡಿಯಾ ಚೇಸಿಂಗ್ ಮಾಡೋದ್ರಲ್ಲಿ ಸೂಪರ್ ಡೂಪರ್ ಅನ್ನೋದು ಎಲ್ಲರಿಗೂ ಗೊತ್ತು.. ಯಾಕಂದ್ರೆ ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ಅತೀ ವೇಗದ ಚೇಸಿಂಗ್ ಮಾಡಿ ದಾಖಲೆ ಬರೆದಿತ್ತು. ಇದು ವಿಶ್ವಕಪ್ ದೃಷ್ಟಿಯಿಂದ ಅಭಿಮಾನಿಗಳ ಖುಷಿ ಹೆಚ್ಚು ಮಾಡಿತ್ತು. ಆದ್ರೆ ಟೀಂ ಇಂಡಿಯಾ ಫ್ಯಾನ್ಸ್‌ಗೆ ಒಂದು ಡೌಟ್ ಇತ್ತು.. ಟೀಂ ಇಂಡಿಯಾ ಚೇಸಿಂಗ್ ಮಾಡುತ್ತೆ ಓಕೆ. ಆದ್ರೆ ಮೊದ್ಲು ಬ್ಯಾಟಿಂಗ್ ಮಾಡಿ ಟಾರ್ಗೆಟ್ ಸೆಟ್ ಮಾಡೋಕೆ ಆಗುತ್ತೆ ಅನ್ನೋದು. ನಮ್ ಟಿ20 ಹುಡುಗರು ನಾವು ಜಸ್ಟ್ ಚೇಸಿಂಗ್‌ಗೆ ಮಾತ್ರವಲ್ಲ, ಮೊದ್ಲು ಬ್ಯಾಟಿಂಗ್ ಮಾಡಿ ಟಾರ್ಗೆಟ್ ಸೆಟ್ ಮಾಡಿ ಎದುರಾಳಿಯನ್ನ ಕಟ್ಟಿ ಹಾಕುತ್ತೇವೆ ಅನ್ನೋದ್ದನ್ನ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ತೋರಿಸಿದ್ದಾರೆ.
ಇದನ್ನೂ ಓದಿ: ಇಶಾನ್ ಕಿಶನ್ ಸ್ಪೋಟಕ ಶತಕ – ನ್ಯೂಜಿಲೆಂಡ್ ವಿರುದ್ಧ 5ನೇ T20I ಗೆದ್ದ ಟೀಂ IND
ಹೌದು.. ಭರವಸೆಯ ಬ್ಯಾಟರ್ ಇಶಾನ್ ಕಿಶನ್ ಬಾರಿಸಿದ ಶತಕ ಹಾಗೂ ಅರ್ಷದೀಪ್ ಸಿಂಗ್ ಪಡೆದ ಐದು ವಿಕೆಟ್‌ಗಳ ಸಹಾಯದಿಂದ ಟೀಮ್ ಇಂಡಿಯಾ ಐದನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 46 ರನ್‌ಗಳಿಂದ ಮಣ್ಣು ಮುಕ್ಕಿಸಿದೆ. ಈ ಮೂಲಕ ಭಾರತ 5 ಪಂದ್ಯಗಳ ಟಿ20 ಸರಣಿಯನ್ನು 4-1 ರಿಂದ ಗೆದ್ದು ಬೀಗಿದೆ. ಟೀಂ ಇಂಡಿಯಾ ಮೊದ್ಲು ಬ್ಯಾಟಿಂಗ್ ಮಾಡಿ 271 ರನ್ ಕಲೆ ಹಾಕಿತ್ತು. ಅಂದ್ರೆ ಬಿಗ್ ಟಾರ್ಗೆಟ್ ಸೆಟ್ ಮಾಡಿತ್ತು. ಆದ್ರೆ ಕಿವೀಸ್ 19.4 ಓವರ್‌ಗಳಿಗೆ 225 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಮೂಲಕ ಟಿ20 ವಿಶ್ವಕಪ್‌ಗೆ ನಾವು ರೆಡಿ, ಡಮಲ್ ಡಿಮಿಲ್ ಡಕ್ಕ, ವಿಶ್ವಕಪ್ ನಾವೇ ಗೆಲ್ಲುದು ಪಕ್ಕಾ ಅನ್ನೋ ಬಿಗ್ ಮ್ಯಾಸೇಜ್‌ನ್ನ ಸೂರ್ಯ ಕುಮಾರ್ ಪಡೆ ಕೊಟ್ಟಿದೆ.
ಇಶಾನ್ ಕಿಶನ್ ಸಿಡಿಲಬ್ಬರದ ಶತಕ
ನಮ್ಗೆ ಈ ಪಂದ್ಯದಲ್ಲಿ ಶಾಕಿಂಗ್ ನೀಡಿದ್ದು ಇಶಾನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಈ ಪಂದ್ಯದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಕಿಶನ್ ತಮ್ಮ ಬ್ಯಾಟಿಂಗ್ ಕಿವಿಸ್ ಬೌಲರ್‌ಗಳನ್ನ ಚಚ್ಚಿ ಬಿಸಾಡಿದ್ರು.. ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ಕಿಶನ್ ಸರಣಿಯ ಅಂತಿಮ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳು ಬೆಂಡೆತ್ತಿ ಬ್ರೇಕ್ ಹಾಕಿದ್ರು. ಸಂಜು ಔಟ್ ಆದ ನಂತರ ಬಹುಬೇಗನೇ ಬ್ಯಾಟಿಂಗ್ಗೆ ಬಂದ ಕಿಶನ್ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಮೊದಲ ಶತಕ ಸಿಡಿಸಿ ಮಿಂಚಿದರು. ಈ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕ ಬಾರಿಸಿದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ಇಶಾನ್ ಕಿಶನ್ ಕೇವಲ 42 ಎಸೆತಗಳಲ್ಲಿ ಶತಕ ಪೂರೈಸಿದರು. ಅಂದ್ರೆ ಆಮೇಲೆ ಕೇವಲ 14 ಎಸೆತಗಳಲ್ಲಿ 50 ರನ್ ಗಳಿಸಿ ಸೆಂಚುರಿ ಬಾರಿಸಿದ್ದಾರೆ. ಇದು ನ್ಯೂಜಿಲೆಂಡ್ ವಿರುದ್ಧದ ಟಿ20ಪಂದ್ಯದಲ್ಲಿ ಅತಿ ವೇಗದ ಶತಕದ ದಾಖಲೆಯಾಗಿದೆ. ಈ ಮೂಲಕ ವಿಶ್ವಕಪ್‌ಗೆ ನಾನೂ ಆಡ ಬಲ್ಲೇ, ಯಾರಾದ್ರೂ ಕೈ ಕೊಟ್ರೆ ನಾನು ಪಂದ್ಯವನ್ನ ಗೆಲ್ಲಿಸಬಲ್ಲೇ ಅನ್ನೋದ್ದನ್ನ ಇಶಾನ್ ಕಿಶನ್ ತೋರಿಸಿಕೊಟ್ಟಿದ್ದಾರೆ.
ಸಂಜು ಭವಿಷ್ಯ ಅತಂತ್ರ!
ಆದ್ರೆ 5ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಒಟ್ಟು ನಾಲ್ಕುಮ್ಯಾಚ್‌ನಲ್ಲಿ ಫೇಲ್ ಆಗಿದ್ದ ಸಂಜು 5ನೇ ಮ್ಯಾಚ್‌ನಲ್ಲಿ ಖದರ್ ತೋಸ್ತಾರೆ ಅಂತ ಎಲ್ಲ ಅಂದ್ಕೊಂಡಿದ್ರು. ಯಾಕಂದ್ರೆ ಈ ಪಂದ್ಯವು ಸಂಜು ಸ್ಯಾಮ್ಸನ್‌ಗೆ ವಿಶೇಷವಾಗಿತ್ತು, ಏಕೆಂದರೆ ಇದು ಅವರ ತವರು ನೆಲದಲ್ಲಿ ಮೊದಲ ಅಂತರರಾಷ್ಟ್ರೀಯ ಪಂದ್ಯವಾಗಿತ್ತು. ಹೀಗಾಗಿ ಕೇರಳ ಅಭಿಮಾನಿಗಳು ಕೂಡ ಲೋಕಲ್ ಹುಡುಗನ ಆಟವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದರು. ಆದರೆ ಸಂಜು ತವರಲು ನೆಲದಲ್ಲು ಆಡಲಿಲ್ಲ. ಈ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರ ಬ್ಯಾಟ್ ಫುಲ್ ಸೈಲೆಂಟ್ ಆಗಿತ್ತು. ಆರಂಭಿಕ ಮತ್ತು ವಿಕೆಟ್ ಕೀಪರ್ ಆಗಿ ಆಡಿದ ಸಂಜು ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ ಗಳಿಸಿದ್ದು 46 ರನ್ ಅಷ್ಟೇ.. ಈ ಸರಣಿಯಲ್ಲಿ ಸಂಜು ಮೊದಲ ಪಂದ್ಯದಲ್ಲಿ ಗಳಿಸಿದ್ದು 10 ರನ್ ಆಮೇಲೆ 6 3ನೇ ಪಂದ್ಯದಲ್ಲಿ ಸೊನ್ನೆ 4ನೇ ಪಂದ್ಯದಲ್ಲಿ 24, ಮತ್ತು ತವರ ನೆಲದಲ್ಲಿ ನಡೆದ 5ನೇ ಪಂದ್ಯ 6 ರನ್ ಗಳಿಸಿದರು. ಸಂಜು ಅವರ ಈ ಪ್ರದರ್ಶನವು 2026 ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಟೀಂ ಇಂಡಿಯಾಕ್ಕೆ ಭಯ ಹುಟ್ಟಿಸಿದೆ. ಇವರ ಮೇಲೆ ಅನುಮಾನ ಶುರುವಾಗಿದೆ. ಇವರನ್ನ ಆಡಸಬೇಕಾ ಬೇಡ್ವಾ ಅನ್ನೋ ಡೌಟ್ ಹೆಚ್ಚಾಗಿದೆ. ವಿಶ್ವಕಪ್‌ಗೆ ಸಂಜುನ ಆಡಿಸೋದು ಡೌಟ್ ಅನ್ಸುತ್ತೆ. ಯಾಕಂದ್ರೆ 2026 ರ ಟಿ20 ವಿಶ್ವಕಪ್‌ಗೆ ಇಶಾನ್ ಕಿಶನ್ ಅವರನ್ನು ಬ್ಯಾಕಪ್ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಸಂಜು ಸ್ಯಾಮ್ಸನ್ ಅವರನ್ನು ಮೊದಲ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿತ್ತು. ಆದರೆ ಸಂಜು ಅವರ ಪ್ರಸ್ತುತ ಕಳಪೆ ಫಾರ್ಮ್ನಿಂದಾಗಿ ಕಿಶನ್ಗೆ ಅವಕಾಶ ಸಿಗುತ್ತಿದೆ. ಹಾಗೇ ಟಿ20 ವಿಶ್ವಕಪ್ ಕಪ್‌ನಲ್ಲಿ ತಿಲರ್ ವರ್ಮಾ ಆಡೋದು ಡೌಟ್ ಅಂತ ಹೇಳಲಾಗಿತ್ತು. ಬಟ್ ಈಗ ತಿಲಕ್ ವರ್ಮಾ ಫಿಟ್ ಆಗಿದ್ದಾರೆ. ಕಿಬ್ಬೊಟ್ಟೆ ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ತಿಲಕ್ ವರ್ಮಾ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಹಾಗೇ ಇವರಿಗೆ ಬಿಸಿಸಿಐ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದೆ ಎನ್ನಲಾಗಿದೆ. ಹೀಗಾಗಿ ತಿಲಕ್ ವರ್ಮಾ ಫಿಟ್ ಆಗಿದ್ರಿಂದ ಸಂಜುನ ಡ್ರಾಪ್ ಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಂಜು ಸ್ಯಾಮ್ಸನ್ ತಮ್ಮ ಕೈಯಾರೆ ಅವಕಾಶವನ್ನ ಕಳೆದುಕೊಂಡಿದ್ದಾರೆ ಅಂತಾನೆ ಹೇಳಬಹುದು.

ನೋಡಿರಿ

