ಗಂಭೀರ್ ಬಂದ್ಮೇಲೆ ಬೌಲಿಂಗ್ ವೀಕ್  – ಶಮಿ, ಸಿರಾಜ್ ಸೈಡ್ ಲೈನ್ ಯಾಕೆ?
ಎಕ್ಸ್​ಪೀರಿಯನ್ಸ್ ಇಲ್ಲದವ್ರು ಗೆಲ್ಲಿಸ್ತಾರಾ?

ಗಂಭೀರ್ ಬಂದ್ಮೇಲೆ ಬೌಲಿಂಗ್ ವೀಕ್  – ಶಮಿ, ಸಿರಾಜ್ ಸೈಡ್ ಲೈನ್ ಯಾಕೆ?ಎಕ್ಸ್​ಪೀರಿಯನ್ಸ್ ಇಲ್ಲದವ್ರು ಗೆಲ್ಲಿಸ್ತಾರಾ?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ತಂಡದಲ್ಲಿ ಸಾಕಷ್ಟು ಚೇಂಜಸ್ ಆಗ್ತಿದೆ. ಆದ್ರೆ ಗಂಭೀರ್ ಮಾಡ್ತಿರೋ ಅತಿದೊಡ್ಡ ಬ್ಲಂಡರ್ ಅಂದ್ರೆ ಬೌಲಿಂಗ್​ ಯುನಿಟ್ನ​​ ಕಂಪ್ಲೀಟ್ ಆಗಿ ವೀಕ್ ಮಾಡ್ತಿರೋದು. ರನ್ಸ್ ಬಂದ್ರೆ ಸಾಕು, ಆಲ್​ರೌಂಡರ್​ಗಳೇ ಮ್ಯಾಚ್ ಗೆಲ್ಲಿಸ್ತಾರೆ ಅನ್ನೋ ಅವ್ರ ಅಜೆಂಡಾ ತಂಡಕ್ಕೆ ರಿವರ್ಸ್ ಹೊಡೀತಿದೆ. ವರ್ತ್ ಇರೋ ಪ್ಲೇಯರ್ಸ್​ನ ಕೈಬಿಟ್ಟು ಇನ್​ಎಕ್ಸ್​ಪೀರಿಯನ್ಸ್ ಬೌಲರ್ಸ್​ನೇ ನಂಬ್ಕೊಂಡು ತಂಡವನ್ನ ಸೋಲಿಸ್ತಿದ್ದಾರೆ.

ಇದನ್ನೂ ಓದಿ : 99ನೇ ವಯಸ್ಸಿನಲ್ಲಿ ದೇವರಾದ ಡಾಕ್ಟರ್ ಅಜ್ಜಿ – ಆಸ್ಪತ್ರೆಗೆ 3.4 ಕೋಟಿ ರೂಪಾಯಿ ದಾನ

ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಗಿದ್ದ ಭಾರತ ಏಕದಿನ ಸರಣಿಯಲ್ಲಾದ್ರೂ ಗೆದ್ದು ರಿವೇಂಜ್ ತಗೊಳ್ಬೇಕು. ಬಟ್ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದವ್ರು ಎರಡನೇ ಪಂದ್ಯವನ್ನ ಕೈಚೆಲ್ಲಿದ್ರು. ಎರಡೂ ಪಂದ್ಯಗಳ ರಿಸಲ್ಟ್ ಬೇರೆ ಬೇರೆ ಇರ್ಬೋದು. ಆದ್ರೆ ಸಾಮ್ಯತೆ ಆಲ್ಮೋಸ್ಟ್ ಈಕ್ವಲ್ ಇದೆ. ಲಾಸ್ಟ್ ಓವರ್​ನಲ್ಲೇ ರಿಸಲ್ಟ್ ಬಂದಿದೆ. ರಾಂಚಿಯಲ್ಲಿ ನಡೆದ ಮೊದಲ ಪಂದ್ಯವನ್ನ ಭಾರತ ಗೆಲ್ತು. ಅದೂ ಕೂಡ ಕೊನೇ ನಾಲ್ಕು ಎಸೆತಗಳು ಬಾಕಿ ಇದ್ದಾಗ. ಈಗ ರಾಯ್​ಪುರದಲ್ಲೂ ಕೊನೇ ನಾಲ್ಕು ಬಾಲ್​ಗಳು ಬಾಕಿ ಇದ್ದಾಗ್ಲೇ ಸೌತ್ ಆಫ್ರಿಕಾ ಗೆದ್ದಿದೆ. ಬಟ್ ಭಾರತದ ಸೋಲಿಗೆ ಪ್ರಮುಖ ಕಾರಣನೇ ಬೌಲಿಂಗ್ ಸ್ಕ್ವಾಡ್.

ಹೊಸ ತಂಡದ ನೆಪ.. ಹಳಬರಿಲ್ಲದೆ ಗೆಲ್ತಾರಾ ಗಂಭೀರ್?

ಹೆಡ್​ಕೋಚ್ ಗೌತಮ್ ಗಂಭೀರ್ ಅವ್ರ ಪಾಲಿಸಿನೇ ಅಂಥಾದ್ದು. ನಮ್ಗೆ ಸೀನಿಯರ್ಸ್ ಯಾರೂ ಬೇಡ ಯಂಗ್​ಸ್ಟರ್ಸ್​ನ ಇಟ್ಕೊಂಡು ಟೀಂ ಕಟ್ತೀನಿ ಅನ್ನೋದು ಅವ್ರ ವಾದ. ಈಗ ಮಾಡ್ತಿರೋದೂ ಅದನ್ನೇ ಸೋಲ್ತಿರೋದೂ ಅದಕ್ಕೇನೇ. ಹಿಂದೆಲ್ಲಾ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಜಹೀರ್ ಝಾನ್ ರಂಥ ದಿಗ್ಗಜ ಆಟಗಾರರು ರಿಪ್ಲೇಸ್ ಆದಾಗ ಯಾವತ್ತೂ ಟೀಂ ವೀಕ್ ಅನ್ನಿಸ್ತಿರ್ಲಿಲ್ಲ. ಯಾಕಂದ್ರೆ ಅಷ್ಟೇ ವರ್ತ್ ಇರೋ ಪ್ಲೇಯರ್ಸ್​ ಟೀಂ ಸೇರಿಕೊಳ್ತಿದ್ರು. ಆದ್ರೆ ಗಂಭೀರ್ ರಿಪ್ಲೇಸ್​​ಮೆಂಟ್​​ನಲ್ಲಿ ಈಕ್ವಾಲಿಟಿ ಇಲ್ಲ. ಸೌತ್ ಆಫ್ರಿಕಾ ವಿರುದ್ಧ 350ಪ್ಲಸ್ ರನ್ಸ್ ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗ್ಲಿಲ್ಲ ಅಂದ್ರೆ ನಮ್ಮ ಬೌಲಿಂಗ್ ಬಗ್ಗೆ ಪ್ರಶ್ನೆ ಮಾಡ್ಲೇಬೇಕಾಗುತ್ತೆ. ತಂಡದಲ್ಲಿ ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಮಾತ್ರನೇ ಬ್ರೇಕ್ ಥ್ರ್ಯೂ ತಂದುಕೊಡೋ ಎಕ್ಸ್​ಪೀರಿಯನ್ಸ್​​ಡ್ ಬೌಲರ್ಸ್. ಆದ್ರೆ ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣಗೆ ಏಕದಿನ ಫಾರ್ಮೆಟ್​ನಲ್ಲಿ ಅನುಭವ ಕಡಿಮೆ. ಅಟ್​ಲೀಸ್ಟ್​ ಮೊಹಮ್ಮದ್ ಶಮಿಗೆ ಚಾನ್ಸ್ ಕೊಡ್ಬೋದಿತ್ತು. ಮೊಹಮ್ಮದ್ ಸಿರಾಜ್​ರನ್ನ ಕಂಟಿನ್ಯೂ ಮಾಡಿಸ್ಬೇಕಿತ್ತು. ಶಮಿ ಅಂತೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಧೂಳೆಬ್ಬಿಸ್ತಿದ್ದಾರೆ.

SMATನಲ್ಲಿ ಇವತ್ತೇ ನಾಲ್ಕು ವಿಕೆಟ್ ಎಗರಿಸಿದ ಶಮಿ!

ಭಾರತದ ಅನುಭವಿ ವೇಗಿ, 2023ರ ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಸದ್ಯ ದೇಶೀ ಕ್ರಿಕೆಟ್​ನಲ್ಲಿ ಆಡ್ತಿದ್ದಾರೆ. ಆದ್ರೆ ಫಿಟ್ನೆಸ್ ಕಾರಣ ನೀಡಿ ಬಿಸಿಸಿಐ ಶಮಿಯನ್ನ ಎಲ್ಲಾ ಮಾದರಿ ಪಂದ್ಯಗಳಿಂದ ದೂರ ಇಟ್ಟಿದೆ. ಆದ್ರೆ ನಾನು ಫಿಟ್ ಌಂಡ್ ಫೈನ್ ಅನ್ನೋದನ್ನ ಪ್ರೂವ್ ಮಾಡ್ತಾನೇ ಇದ್ದಾರೆ.  ಡಿಸೆಂಬರ್ 4 ರಂದು ಅಂದ್ರೆ ಇವತ್ತೇ ಬಂಗಾಳದ ವೇಗಿ ನಾಲ್ಕು ವಿಕೆಟ್‌ ಎಗರಿಸಿದ್ದಾರೆ. ಬೆಂಗಾಲ್ ವರ್ಸಸ್ ಸರ್ವಿಸಸ್ ನಡುವಿನ ಪಂದ್ಯದಲ್ಲಿ ಬಂಗಾಳ ಪರ 3.2 ಓವರ್​ಗಳನ್ನ ಬೌಲ್ ಮಾಡಿದ ಶಮಿ 13 ರನ್ಸ್ ಅಷ್ಟೇ ನೀಡಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪದೇಪದೇ ಸೈಡ್​ಲೈನ್ ಮಾಡ್ತಿರೋ ಬಿಸಿಸಿಐಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ರೆಸ್ಟ್ ನೆಪ ಹೇಳಿ ಸಿರಾಜ್ ಡ್ರಾಪ್ ಮಾಡಿದ್ರಾ?

ಇನ್ನು ಮೊಹಮ್ಮದ್ ಸಿರಾಜ್ ಕೂಡ ಈಗ ಭಾರತ ತಂಡದಲ್ಲಿ ಟೆಸ್ಟ್ ತಂಡದಲ್ಲಿ ಮಾತ್ರವೇ ಖಾಯಂ ಆಗಿ ಸೆಲೆಕ್ಟ್ ಆಗ್ತಿದ್ದಾರೆ. ವೈಟ್ ಬಾಲ್ ಫಾರ್ಮೆಟ್​ನಿಂದ ಅವ್ರನ್ನ ದೂರನೇ ಇಡಲಾಗಿದೆ. ಪ್ರಸ್ತುತ ಸೌತ್ ಆಫ್ರಕಾ ವಿರುದ್ಧದ ಏಕದಿನ ಸರಣಿಗೂ ಸೆಲೆಕ್ಟ್ ಮಾಡಿಲ್ಲ. ಟೆಸ್ಟ್ ಸಿರೀಸ್ ಬಳಿಕ ರೆಸ್ಟ್ ಕಾರಣ ನೀಡಿ ಬಿಸಿಸಿಐ ಅವ್ರನ್ನ ತಂಡದಿಂದ ಹೊರಗಿಟ್ಟಿತ್ತು. ಆದ್ರೆ ಸಿರಾಜ್ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಅಬ್ಬರಿಸ್ತಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡ್ತಿದ್ದಾರೆ. ಡಿಸೆಂಬರ್ 2ರಂದು ನಡೆದ ಪಂದ್ಯದಲ್ಲಿ ಹೈದ್ರಾಬಾದ್ ಪರ ಕಣಕ್ಕಿಳಿದ ಸಿರಾಜ್ ಉತ್ತರಪ್ರದೇಶದ ವಿರುದ್ಧ 4 ಓವರ್​ಗಳಲ್ಲಿ ನೀಡಿದ್ದು ಕೇವಲ 15 ರನ್​ಗಳನ್ನ ಮಾತ್ರ ನೀಡಿದ್ರು. ಅಲ್ಲದೆ ಒಂದು ವಿಕೆಟ್ ಕೂಡ ಕಬಳಿಸಿದ್ದಾರೆ. ಹೀಗಾಗಿ ಸಿರಾಜ್ ಅವರನ್ನು ಬೇಕಂತಲೇ ತಂಡದಿಂದ ಹೊರಗಿಡಲಾಗಿದೆಯಾ? ಎಂಬ ಅನುಮಾನಗಳು ಮೂಡಿವೆ.  ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಟ್ಟು ಸೌತ್ ಆಫ್ರಿಕಾ ಸರಣಿಗೆ   ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿರೋದೇ ಚರ್ಚೆಗೆ ಗ್ರಾಸವಾಗಿದೆ. ಒಟ್ನಲ್ಲಿ ಗಂಭೀರ್ ಬಂದ್ಮೇಲೆ ಆಲ್​ರೌಂಡರ್ಸ್​ಗೆ ಸಿಗ್ತಿರೋ ಪ್ರಿಪರೆನ್ಸ್ ಬೌಲರ್ಸ್ ಮತ್ತು ಬ್ಯಾಟರ್ಸ್​ಗೆ ಸಿಗ್ತಿಲ್ಲ.

Shantha Kumari