ಬುಮ್ರಾಗೆ ಸಿರಾಜ್.. ಸಿರಾಜ್ ಇಲ್ದಿದ್ರೆ – ಭಾರತದ ಬೌಲಿಂಗ್ ಬ್ಯಾಲೆನ್ಸ್ ಮಿಸ್?
NZ & AUS ಸರಣಿ ಗೆಲ್ಲಲ್ವಾ?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಭಾರತಕ್ಕೆ ಕಾಡ್ತಿರೋ ಅತಿದೊಡ್ಡ ಪ್ರಶ್ನೆ ಅಂದ್ರೆ ಬೌಲಿಂಗ್ ಯುನಿಟ್. ಗಾಲೆಯಲ್ಲಿ ಗೆದ್ರೂ ಕೂಡ ಕೊಲೊಂಬೊದಲ್ಲಿ ಕೊನೆಯ ದಿನದಾಟದಲ್ಲಿ ಕಂಡ ಸ್ಟ್ರಗಲ್ಸ್ ಹಲವು ಪ್ರಶ್ನೆಗಳನ್ನ ಮೂಡಿಸಿದೆ. ಇದೇ ಬೌಲಿಂಗ್ ಸ್ಕ್ವಾಡ್ ಇಟ್ಕೊಂಡು 2027ರ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳೋದು ಕಷ್ಟ ಅನ್ನೋ ವಾದ ಶುರುವಾಗಿದೆ.
ಇದನ್ನೂ ಓದಿ : ಗಂಭೀರ್-ಗಿಲ್ BIG ಮಿಸ್ಟೇಕ್! 2 ಪಂದ್ಯ 420 ರನ್ಸ್, ಸೋನಲ್ ಚರಿತ್ರೆ
ಕಳೆದ ಎರಡು ವರ್ಷಗಳಿಂದ ಭಾರತ ಟೆಸ್ಟ್ ಫಾರ್ಮೆಟ್ನಲ್ಲಿ ಸಾಕಷ್ಟು ಅವಮಾನಕರ ಸೋಲುಗಳನ್ನ ಕಂಡಿದೆ. ತವರಿನಲ್ಲೇ ಹಿಂದೆಂದೂ ಕಾಣದ ಬಿಗ್ ಲಾಸ್ಗಳಾಗಿದೆ. ಇದಕ್ಕೆ ಒನ್ ಆಫ್ ದಿ ಮೇನ್ ರೀಸನ್ ಬೌಲಿಂಗ್ ವಿಭಾಗ ಕಳಪೆಯಾಗ್ತಿದೆ ಅನ್ನೋದು. ಹಾಗೇ ಜಸ್ಪ್ರೀತ್ ಬುಮ್ರಾ ಮೇಲೆ ಕಂಪ್ಲೀಟ್ ಡಿಪೆಂಡೆನ್ಸಿ ಕೂಡ ಕಾಣ್ತಿದೆ. ಹಾಗೇ ಮುಂದೆ ಬರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಟೆನ್ಷನ್ ತಂದಿಟ್ಟಿದೆ.
ಯಂಗ್ ಸ್ಟರ್ಸ್ ನಿಂದಾಗಿ ತಂಡದ ಬ್ಯಾಲೆನ್ಸ್ ತಪ್ಪಿತಾ?
ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಅನುಭವಿಗಳನ್ನ ಬಿಟ್ಟು ಹೊಸಬರಿಗೆ ಹೆಚ್ಚಿನ ಅವಕಾಶ ಕೊಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಮೂರೂ ಮಾದರಿಯಲ್ಲೂ ಇದನ್ನ ನೋಡ್ತಿದ್ದೇವೆ. ಆದ್ರೆ ಟೆಸ್ ಕ್ರಿಕೆಟ್ಗೆ ಇದ್ರ ಎಫೆಕ್ಟ್ ಹೆಚ್ಚು ತಟ್ಟಿದೆ. ಇನ್ಎಕ್ಸ್ಪೀರಿಯನ್ಸ್ ಬೌಲರ್ಸ್ ನಿಂದಾಗಿ ಬ್ಯಾಲೆನ್ಸ್ ಇಲ್ಲ ಅನ್ನೋ ಆರೋಪಗಳಿವೆ. ಅಲ್ದೇ ಕೊಲಂಬೊ ಟೆಸ್ಟ್‌ನಲ್ಲಿ ಭಾರತ ಶ್ರೀಲಂಕಾವನ್ನು ಫಾಲೋಆನ್‌ಗೆ ತಳ್ಳಿದರೂ, ಕೊನೆಯ ದಿನ ಸೊನಲ್ ದಿನುಷಾ ನೇತೃತ್ವದಲ್ಲಿ ಶ್ರೀಲಂಕಾ ಪಂದ್ಯ ಉಳಿಸಿಕೊಂಡಿತು. ಅಂದರೆ ಸಮಸ್ಯೆ ಕೇವಲ ಬೌಲರ್‌ಗಳ ಗುಣಮಟ್ಟದಲ್ಲಿಲ್ಲ.. ಪ್ರೆಶರ್ ಹ್ಯಾಂಡಲ್ ಮಾಡ್ತಾ ಕೊನೆಯ 5–6 ವಿಕೆಟ್‌ಗಳನ್ನು ಬೇಗ ಪಡೆಯುವ ಸಾಮರ್ಥ್ಯ ಕೂಡ ಪ್ರಶ್ನೆಯಾಗುತ್ತಿದೆ. ಹಾಗೇ ಬೇರೆ ಬೇರೆ ವಿಚಾರಗಳಲ್ಲೂ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಬೌಲಿಂಗ್ ವೀಕ್ ಆಯ್ತಾ?
ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇಲ್ಲದಿದ್ರೆ ಲೀಡ್ ಮಾಡುವಲ್ಲಿ ಫೇಲ್ಯೂರ್
ರಿದಮ್ ಕಳೆದುಕೊಳ್ತಿರುವ ಸಿರಾಜ್.. ಜವಾಬ್ದಾರಿ ತೆಗೆದುಕೊಳ್ಳಲು ಕಷ್ಟ
ಬುಮ್ರಾ + ಸಿರಾಜ್ ಸೇರಿದ್ರಷ್ಟೇ ಸ್ಟ್ರಾಂಗ್.. ಬ್ಯಾಕಪ್ ಬೌಲರ್ ಅವಶ್ಯಕತೆ
ಬೌಲರ್ಸ್ ಇದ್ರೂ ವಿದೇಶಗಳಲ್ಲಿ ಟ್ರಸ್ಟ್ ಮಾಡಬಹುದಾದ ಬೌಲಿಂಗ್ ಡೆಪ್ತ್
ಕುಲ್ದೀಪ್ ಯಾದವ್ ರನ್ನು ಪದೇಪದೆ ತಂಡದಿಂದ ಕೈಬಿಡ್ತಿರೋದು
ಹೊಸ ಆಟಗಾರರಿಗೆ ಅವಕಾಶಗಳು ಸಿಕ್ರೂ ರನ್ಸ್ ಕಂಟ್ರೋಲ್ ಕಷ್ಟ
ಇಲ್ಲಿ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇಲ್ಲದಾಗ ಸಿರಾಜ್ ಮೇಲೆ ಎಷ್ಟು ಡಿಪೆಂಡ್ ಆಗಬೇಕು. ಹಾಗೇ ಸಿರಾಜ್‌ಗೆ ಇಂಜುರಿಯಾದ್ರೆ ಪಂದ್ಯ ಗೆಲ್ಲಿಸುವ ಬೌಲರ್ ಯಾರು?.. ನೆಕ್ಸ್ಟ್ ನ್ಯೂಜಿಲೆಂಡ್‌ನಲ್ಲಿ ಇಬ್ಬರು ಸ್ಟಾರ್ ಪೇಸರ್‌ಗಳಿಗೆ ಬೆಂಬಲ ನೀಡುವ ಮೂರನೇ ಬೌಲರ್ ಯಾರು? ಇದೇ ಭಾರತದ ದೊಡ್ಡ ಪ್ರಶ್ನೆ. ಭಾರತದ ಮುಂದಿನ WTC ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಇವೆ. WTC ಫೈನಲ್ ತಲುಪಲು ಭಾರತ ಉಳಿದ 7 ಟೆಸ್ಟ್‌ಗಳಲ್ಲಿ ಕನಿಷ್ಠ 6 ಗೆಲ್ಲಬೇಕಾದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಬೌಲಿಂಗ್ ಡೆಪ್ತ್ ಬಹಳ ನಿರ್ಣಾಯಕವಾಗುತ್ತೆ. ಈ ಸಮಸ್ಯೆಯನ್ನ ಗಂಭೀರ್ & ಟೀಂ ಹೇಗೆ ಮ್ಯಾನೇಜ್ ಮಾಡುತ್ತೋ ಕಾದು ನೋಡ್ಬೇಕು.

ನೋಡಿರಿ

