ಶ್ರೇಯಸ್ ಕ್ಯಾಪ್ಟನ್ ಆದ್ಮೇಲೆ ಬೌಲಿಂಗ್ ದುಬಾರಿ – ಬುಮ್ರಾ & ಪಾಂಡ್ಯ ಇಲ್ಲದ್ದೇ ಹೊರೆಯಾಯ್ತಾ?

ವೆಸ್ಟ್ ಇಂಡೀಸ್ ವಿರುದ್ಧದ ಟಿ-20ಐ ಸರಣಿಯಲ್ಲೇ ಟೀಂ ಇಂಡಿಯಾ ಬೌಲಿಂಗ್ ಮಾನ ಹರಾಜಾಗಿತ್ತು. 250 ರನ್ಗಳ ಟಾರ್ಗೆಟ್ನೂ ಡಿಫೆನ್ಸ್ ಮಾಡಿಕೊಂಡಿರಲಿಲ್ಲ. ಸರಣಿ ಭಾರತದಲ್ಲೇ ನಡೆದಿದ್ರಿಂದ ಐಪಿಎಲ್ ಪಿಚ್ಗಳಲ್ವಾ ಸೋ ಬ್ಯಾಟರ್ ಫ್ರೆಂಡ್ಲಿ ಇರುತ್ತೆ. ಅದಕ್ಕೇ ಎಕ್ಸ್ಪೆನ್ಸಿವ್ ಆಗ್ತಿದ್ದಾರೆ ಅನ್ನೋದು ಕೆಲವರ ವಾದ. ಆದ್ರೆ ನ್ಯೂಜಿಲೆಂಡ್ನಲ್ಲೂ ಕೂಡ ಭಾರತದ ಬೌಲಿಂಗ್ನಲ್ಲಿ ಸುಧಾರಣೆ ಕಂಡಿಲ್ಲ. ಮೊದಲ ಮ್ಯಾಚಲ್ಲೇ 225 ರನ್ಸ್ ಕೊಟ್ಟಿದ್ರು. ಈಗ ಎರಡನೇ ಕೂಡ ಇದೇ ಪಿಚ್ನಲ್ಲಿ ನಡೆಯೋದ್ರಿಂದ ಇಲ್ಲಿ ಇನ್ನೆಷ್ಟು ರನ್ಸ್ ಕೊಡ್ತಾರೋ ಅನ್ನೋ ಆತಂಕ ಶುರುವಾಗಿದೆ. ಶ್ರೇಯಸ್ ಅಯ್ಯರ್ ಭಾರತದ ಕ್ಯಾಪ್ಟನ್ ಆದ್ಮೇಲೆ ಬೌಲಿಂಗ್ನಲ್ಲಿ ಭಾರತ ತುಂಬಾನೇ ದುಬಾರಿ ಆಗಿದೆ.
ಇದನ್ನೂ ಓದಿ : ಇಶಾನ್ ಔಟ್.. ವೈಭವ್ ಓಪನರ್ – ಭುವಿ ಬೌಲಿಂಗ್ ಮೇಲೆ BCCI ಕಣ್ಣು
2026ರ ಜೂನ್ನಲ್ಲಿ ಶ್ರೇಯಸ್ ಅಯ್ಯರ್ ಭಾರತ ಟಿ-20ಐ ತಂಡದ ಕ್ಯಾಪ್ಟನ್ ಆಗಿ ಜವಾಬ್ದಾರಿ ತಗೊಳ್ತಾರೆ. ಅಲ್ಲಿಂದ ಈಚೆಗೆ ಭಾರತ ಟಿ-20ಐ ಮಾದರಿಯಲ್ಲಿ ಸಾಕಷ್ಟು ಅಪ್ಸ್ ಌಂಡ್ ಡೌನ್ಸ್ ಕಂಡಿದೆ. ಆರಂಭದಲ್ಲೇ 2 ಸರಣಿಗಳಲ್ಲಿ ಕ್ಲೀನ್ ಸ್ವೀಪ್.. ತವರಿನ ನೆಲದಲ್ಲೂ ಸ್ಟ್ರಗಲ್ ಕಂಡಿದ್ದಾರೆ. ಭಾರತದ ಈ ಸೋಲುಗಳಿಗೆ ಒನ್ ಆಫ್ ದಿ ಮೇನ್ ರೀಸನ್ ಜಸ್ಪ್ರಿತ್ ಬುಮ್ರಾಗೆ ರೆಸ್ಟ್ ನೀಡ್ತಿರೋದು ಌಂಡ್ ಹಾರ್ದಿಕ್ ಪಾಂಡ್ಯ ಇಂಜುರಿ.. ಯುವ ಬೌಲರ್‌ಗಳಿಗೆ ಮ್ಯಾನೇಜ್‌ಮೆಂಟ್ ಹೆಚ್ಚಿನ ಅವಕಾಶಗಳನ್ನ ನೀಡ್ತಿರೋದು. ಇದೆಲ್ಲದ್ರ ನಡುವೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ಮೊದಲ ಮ್ಯಾಚಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಿರಲಿಲ್ಲ. 4 ಓವರ್ಗಳಲ್ಲಿ 49 ರನ್ಸ್ ನೀಡಿ ಯಾವುದೇ ವಿಕೆಟ್ ಪಡೆಯೋಕೆ ಆಗಿರಲಿಲ್ಲ. ಹೀಗಾಗಿ ಇವತ್ತಿನ ಪಂದ್ಯದಲ್ಲಿ ಇನ್ನೆಷ್ಟು ರನ್ಸ್ ಕೊಡ್ತಾರೋ ಅನ್ನೋ ಕುತೂಹಲ ಮೂಡಿದೆ.
225 ಹೊಡೆದ್ರೂ ಸೇಫ್ ಇಲ್ಲ.. ಇನ್ನೆಷ್ಟು ಟಾರ್ಗೆಟ್?
ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ನಡೆದ ಮೊದಲ ಮ್ಯಾಚಲ್ಲಿ ನ್ಯೂಜಿಲೆಂಡ್ ತಂಡ ಫಸ್ಟ್ ಬ್ಯಾಟಿಂಗ್ ಮಾಡಿ 225 ರನ್ಗಳನ್ನ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂದು ಎಸೆತ ಬಾಕಿ ಇದ್ದಂತೆಯೇ ಗೆದ್ದು ಸರಣಿಯಲ್ಲಿ ಲೀಡ್ ಸಾಧಿಸಿತ್ತು. ಹೀಗಾಗಿ ಇವತ್ತಿನ ಪಂದ್ಯದಲ್ಲೂ ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚಿನ ರನ್ಸ್ ನಿರೀಕ್ಷೆ ಮಾಡಲಾಗಿದೆ. ಒಂದ್ಕಡೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯ ಭಾರತ ತಂಡ 2ನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶಕ್ಕೆ ಹತ್ತಿರವಾಗಲು ನೋಡ್ತಾ ಇದ್ರೆ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ 2ನೇ ಪಂದ್ಯ ಗೆದ್ದು ಸರಣಿ ಸಮಬಲಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದೂ ಅಲ್ದೇ ಭಾರತದ ಬೌಲಿಂಗ್ ಕೂಡ ಕಳಪೆಯಾಗಿ ಕಾಣ್ತಿದ್ದು ನ್ಯೂಜಿಲೆಂಡ್ ಕೊನೆಯ 30 ಎಸೆತಗಳಲ್ಲಿ 67 ರನ್ ಗಳಿಸಿತ್ತು.. ಗ್ಲೆನ್ ಫಿಲಿಪ್ಸ್ ಮತ್ತು ಫಿನ್ ಅಲೆನ್ ಅವರಿಗೆ ಈ ಮೈದಾನದಲ್ಲಿ ಬ್ಯಾಟಿಂಗ್ ಚೆನ್ನಾಗಿರೋದ್ರಿಂದ ಈ ಪಂದ್ಯದಲ್ಲೂ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಟಿ-20ಐ ಮಾದರಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಕಳೆದ 10 ಪಂದ್ಯಗಳನ್ನ ಕಂಪೇರ್ ಮಾಡಿದ್ರೆ ಕಂಪ್ಲೀಟ್ ಡಾಮಿನೇಟ್ ಮಾಡಿದೆ. 2023ರ ಜನವರಿಯಿಂದ ಈಚೆಗೆ ಟಿ-20ಐ ಮಾದರಿಯಲ್ಲಿ ಉಭಯ ತಂಡಗಳು ಒಟ್ಟು 10 ಸಲ ಮುಖಾಮುಖಿ ಆಗಿದ್ದು ಇದ್ರಲ್ಲಿ ಭಾರತ 8 ಸಲ ಪಂದ್ಯಗಳನ್ನ ಗೆದ್ರೆ ನ್ಯೂಜಿಲೆಂಡ್ ಕೇವಲ 2 ಸಲ ಮಾತ್ರವೇ ವಿನ್ ಆಗಿದೆ. ಆದ್ರೆ ಇವತ್ತಿನ ಮ್ಯಾಚಲ್ಲಂತೂ ನೆಕ್ ಟು ನೆಕ್ ಫೈಟ್ ಅಂತೂ ಪಕ್ಕಾ ಇರಲಿದೆ.

ನೋಡಿರಿ

